ಅಬ್ದುಲ್​ ಕಲಾಂ ಸ್ಪೂರ್ತಿಯಿಂದ ಹುಟ್ಟಿದ ರಾಮೇಶ್ವರಂ ಕೆಫೆಯಿಂದಲೇ ಅಂಬಾನಿ ಮಗನ ಮದ್ವೆಗೆ ಊಟ

ಅಬ್ದುಲ್​ ಕಲಾಂ ಅವರ ಸ್ಪೂರ್ತಿಯಿಂದ ತೆರೆಯಲಾದ ರಾಮೇಶ್ವರಂ ಕೆಫೆ ಶುರುವಾದ ಕೆಲವೇ ವರ್ಷಗಳಲ್ಲಿ ಭಾರತದಾದ್ಯಂತ ಬ್ರಾಂಚ್​ಗಳನ್ನ ತೆರೆದು ಜನರ ಮನೆ ಮಾತಾಗಿದೆ. ರಿಲಾಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಖೇಶ್ ಅಂಬನಿಯ ಕಿರಿಯ ಪುತ್ರ ಅನಂತ್ ಅಂಬಾನಿಯ ಮದುವೆ ಸಂಭ್ರಮ‌ದಲ್ಲೂ ರಾಮೇಶ್ವರಂ ಕೆಫೆ ಭಾಗಿಯಾಗುತ್ತಿದ್ದು ದಕ್ಷಿಣ ಭಾರತದ ಟೆಸ್ಟ್ ಅನ್ನ ಉಣಬಡಿಸಲಿದೆ.

ಅಬ್ದುಲ್​ ಕಲಾಂ ಸ್ಪೂರ್ತಿಯಿಂದ ಹುಟ್ಟಿದ ರಾಮೇಶ್ವರಂ ಕೆಫೆಯಿಂದಲೇ ಅಂಬಾನಿ ಮಗನ ಮದ್ವೆಗೆ ಊಟ
ಸಂಗ್ರಹ ಚಿತ್ರ
Follow us
Poornima Agali Nagaraj
| Updated By: ಆಯೇಷಾ ಬಾನು

Updated on: Mar 02, 2024 | 10:05 AM

ಬೆಂಗಳೂರು, ಮಾರ್ಚ್. 01: ತುಪ್ಪದ ದೋಸೆ, ತುಪ್ಪದ ಮಸಾಲೆ ದೋಸೆ, ಇಡ್ಲಿ, ಪುಡಿ ಇಡ್ಲಿ, ಘೀ ಪುಡಿ ಇಡ್ಲಿ, ಗುಂಗ್ರಾ ರೈಸ್, ಕೇರಳ ಪರೋಟಾ ಇವೆಲ್ಲದಕ್ಕೂ ರಾಮೇಶ್ವರಂ ಕೆಫೆ (Rameshwaram Cafe) ಫೇಮಸ್. ಇಲ್ಲಿ ಎಲ್ಲದ್ದಕ್ಕೂ ತುಪ್ಪದ ಟಚ್​​ ಇರಲೇಬೇಕು. ಹೀಗಾಗಿ ಸ್ಟಾರ್ಟ್ ಆದ ಕೆಲವೇ ತಿಂಗಳಲ್ಲಿ ರಾಮೇಶ್ವರಂ ಕೆಫೆ ಆಹಾರ ಪ್ರಿಯರ ಮನಸ್ಸು ಎದ್ದಿತ್ತು. ಭಾರತಾದ್ಯಂತ ತನ್ನ ಬ್ಯಾಂಚ್​ಗಳನ್ನು ವಿಸ್ತರಿಸಿತ್ತು. ಆದರೆ ಯಾರ ಕಣ್ಣು ಬಿತ್ತೋ ಕಾಣೆ ಮಾರ್ಚ್ 01ರ ಮಟ ಮಟ ಮಧ್ಯಾಹ್ನ ಬಾಂಬ್ ಬ್ಲಾಸ್ಟ್ ಆಗಿದೆ. 9 ಜನರಿಗೆ ಗಾಯಗಳಾಗಿವೆ.

ರಾಮೇಶ್ವರಂ ಕೆಫೆ.. ಅಬ್ದುಲ್​ ಕಲಾಂ ಅವರ ಸ್ಪೂರ್ತಿಯಿಂದ ತೆರೆದಂತಹ ಹೋಟೆಲ್​​. ಭಾರತದಾದ್ಯಂತ ಬ್ರಾಂಚ್​ಗಳನ್ನ ಹೊಂದಿರೋ ರಾಮೇಶ್ವರಂ ಕೆಫೆ ದೇಗುಲದ ಕಾನ್ಸೆಪ್ಟ್​ನಲ್ಲಿ ನಿರ್ಮಾಣವಾಗಿದೆ. ಬೆಂಗಳೂರಿನಲ್ಲೂ ಹಲವು ಬ್ರಾಂಚ್​ಗಳಿದ್ದು, ಜನ ಸಾಮಾನ್ಯರ ಜೊತೆಗೆ ಐಟಿ ಸಿಬ್ಬಂದಿಯ ಹಾಟ್​ ಫೇವರೆಟ್ ಕೂಡ ಆಗಿದೆ.

ರಾಘವೇಂದ್ರ ರಾವ್​ ಮತ್ತು ದಿವ್ಯಾ ರಾಘವೇಂದ್ರ ದಂಪತಿ ಸೇರಿ 8 ಜನರ ತಂಡದಿಂದ 2021 ರಲ್ಲಿ ರಾಮೇಶ್ವರ ಕೆಫೆ ಸ್ಥಾಪನೆ ಆಯ್ತು. ಬೆಳಗ್ಗೆ 6 ಗಂಟೆಯಿಂದ ಮಧ್ಯರಾತ್ರಿ 1 ಗಂಟೆವರೆಗೂ ಸದಾ ಬ್ಯುಸಿಯಾಗಿರುತ್ತೆ. ಆರಂಭದಲ್ಲಿ ಕೇವಲ 2 ಔಟ್​ಲೆಟ್​ಗಳಿಂದ ಆರಂಭಗೊಂಡ ರಾಮೇಶ್ವರಂ ಕೆಫೆ, ಅತಿ ಕಡಿಮೆ ಸಮಯದಲ್ಲೇ ದೇಶಾದ್ಯಂತ ಖ್ಯಾತಿ ಪಡೀತು. ಹೋಟೆಲ್​ನ ಸಂಸ್ಥಾಪಕಿ ದಿವ್ಯಾ ಅವರು, ಸೋಶಿಯಲ್ ಮೀಡಿಯಾ ಮೂಲಕವೂ ತಮ್ಮ ಹೋಟೆಲ್​​​​​​​ ಅನ್ನು ಜನರು ಗುರುತಿಸುವಂತೆ ಮಾಡಿದ್ರು.

ಅಂಬಾನಿ ಮಗನ ಮದ್ವೆಯಲ್ಲಿ ‘ರಾಮೇಶ್ವರಂ’ ರುಚಿ!

ಇನ್ನು ಗುಜರಾತ್​ನ ಜಾಮ್​​ನಗರದಲ್ಲಿ ಮುಖೇಶ ಅಂಬಾನಿ ಮಗನ, ವೈಭವದ ಮದ್ವೆಗೆ ಸಿದ್ಧತೆ ನಡೀತಿದೆ. ಈ ಮದ್ವೆ ಊಟದ ತಯಾರಿಕೆಗೆ ರಾಮೇಶ್ವರಂ ಕೆಫೆಯೂ ಆಯ್ಕೆಯಾಗಿದೆ. 5 ದಿನದ ಹಿಂದೆಯೇ ರಾಮೇಶ್ವರಂ ಕೆಫೆಯ 50 ಜನರ ತಂಡ, ಜಾಮ್​ನಗರಕ್ಕೆ ತೆರಳಿದೆ. ಮುಖೇಶ್ ಅಂಬನಿಯ ಪುತ್ರನ ಮದುವೆಗೆ ದೇಶ- ವಿದೇಶಗಳಿಂದ ಬಾಣಸಿಗರನ್ನ ಕರೆಸಿದ್ದು, ನಮ್ಮ‌ ರಾಜ್ಯದಿಂದ ರಾಮೇಶ್ವರಂ ಕೆಫೆ ಆಯ್ಕೆಯಾಗಿದೆ.‌ ಸಧ್ಯ ಊಟದ ಗುಣಮಟ್ಟ, ಜನಪ್ರಿಯತೆ, ರುಚಿ, ವೆರೈಟಿ ಊಟದ ಬಗ್ಗೆ ಮನೆಯ ಮಾತಾಗಿರುವ ರಾಮೇಶ್ವರಂ ಕೆಫೆ,‌ ಮುಖೇಶ್ ಅಂಬಾನಿಯ ಮಗನ ಮದುವೆಯಲ್ಲಿಯೂ ತಮ್ಮ ರುಚಿಯ ಕಮಾಲ್‌ ಅನ್ನ ಮಾಡಲಿದೆ.‌

ಇದನ್ನೂ ಓದಿ: ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಫೋಟ; ನಾಲ್ವರು ಶಂಕಿತರನ್ನು ವಶಕ್ಕೆ ಪಡೆದ ಪೊಲೀಸರು

ಇನ್ನು ಕೆಲವು ದಿನಗಳ‌‌ ಹಿಂದೆ ಸೌತ್ ಇಂಡಿಯನ್ ಪುಡ್ ಬೆಂಗಳೂರಿನಲ್ಲಿ ಎಲ್ಲಿಲ್ಲಿ ತಾಯಾರಿಸಲಾಗುತ್ತದೆ ಎಂದು ಹೋಟೆಲ್‌ ಅಸೋಸಿಯನ್ ಕೇಳಿದಾಗ ಹೋಟೆಲ್ ಅಸೋಸಿಯೇಷನ್ ರಾಮೇಶ್ವರಂ ಕೆಫೆಯ ಹೆಸರನ್ನ ಸೂಚಿಸಿತ್ತಂತೆ.‌ ಅದರಂತೆ ರಾಮೇಶ್ವರಂ‌ ಕೆಫೆಯು ಆಯ್ಕೆಯಾಗಿ ಸಧ್ಯ ಐದು ದಿನದ ಹಿಂದೆ 50 ಜನರ ಸ್ಪೇಷಲ್ ತಂಡ ಈಗಾಗಲೇ‌‌ ಮುಖೇಶ್ ಅಂಬಾನಿ ಮಗನ ಮದುವೆಗೆ ತೆರಳಿದ್ದು, ಬಗೆ ಬಗೆಯ ದೋಸೆ, ಕಾಫಿ, ಇಡ್ಲಿ, ರೊಟ್ಟಿ, ಚಿಟ್ನಿ‌ಪೌಡರ್ ತಯಾರಿಸಿ ದಕ್ಷಿಣ ಭಾರತದ ಟೆಸ್ಟ್ ಅನ್ನ ಮದುವೆ ಮನೆಯಲ್ಲಿ‌ ಈಗಾಗಲೇ‌ ಮಾಡುತ್ತಿದ್ದು, ದೇಶ – ವಿದೇಶಿಗರ ಹೋಟೆಲ್ ಗಳ ಪೈಕಿ ಬೆಂಗಳೂರಿನ ರಾಮೇಶ್ವರ ಕೆಫೆ ಆಯ್ಕೆ ಆಗಿರುವ ಬಗ್ಗೆ ಹೋಟೆಲ್‌ ಅಸೋಸಿಯೇಷನ್ ಅಧ್ಯಕ್ಷ ಪಿ ಸಿ ರಾವ್ ಸಂತೋಷ ವ್ಯಕ್ತಪಡಿಸಿದ್ರು. ಈ ರೀತಿ ಖುಷಿಯಲ್ಲಿ ಇರುವಾಗಲೇ ದುರಂತವೊಂದು ಸಂಭವಿಸಿದೆ.

ಏನೇ ಹೇಳಿ, ಅತ್ಯಂತ ಕಡಿಮೆ ಅವಧಿಯಲ್ಲಿ ರಾಮೇಶ್ವರಂ ಕೆಫೆ ಜನಮನ್ನಣೆ ಗಳಿಸಿತ್ತು. ಆದ್ರೀಗ ಹೋಟೆಲ್​​ನ ಸ್ಫೋಟದಿಂದ ಸಿಬ್ಬಂದಿಯಲ್ಲೂ ಆತಂಕ ಸೃಷ್ಟಿಯಾಗಿದೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ