ಟೋಯಿಂಗ್ ನೀತಿ ಪುನರ್​ ಪರಿಶೀಲನೆ ಬಗ್ಗೆ ಚರ್ಚೆ; ರಾಂಗ್​ ಪಾರ್ಕಿಂಗ್​ಗೆ ಬೇರೆ ರೀತಿಯಲ್ಲಿ ಕ್ರಮ: ಕಮಲ್ ಪಂತ್ ಹೇಳಿಕೆ

| Updated By: ganapathi bhat

Updated on: Jan 31, 2022 | 9:03 PM

ಕೆಲವು ಬದಲಾವಣೆಗಳನ್ನು ತರಲು ಚಿಂತನೆ ನಡೆಸಲಿದ್ದೇವೆ ಎಂದು ಟೋಯಿಂಗ್ ನೀತಿ ಪರಿಷ್ಕರಣೆ ಸಂಬಂಧ ಸಿಎಂ ಸಭೆ ವಿಚಾರವಾಗಿ ಡಾ.ಬಿ.ಆರ್. ರವಿಕಾಂತೇಗೌಡ ಹೇಳಿಕೆ ನೀಡಿದ್ದಾರೆ.

ಟೋಯಿಂಗ್ ನೀತಿ ಪುನರ್​ ಪರಿಶೀಲನೆ ಬಗ್ಗೆ ಚರ್ಚೆ; ರಾಂಗ್​ ಪಾರ್ಕಿಂಗ್​ಗೆ ಬೇರೆ ರೀತಿಯಲ್ಲಿ ಕ್ರಮ: ಕಮಲ್ ಪಂತ್ ಹೇಳಿಕೆ
ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್
Follow us on

ಬೆಂಗಳೂರು: ಟೋಯಿಂಗ್ ನೀತಿ ಪರಿಷ್ಕರಣೆ ಬಗ್ಗೆ ಸುದೀರ್ಘ ಚರ್ಚೆಯಾಗಿದೆ. ಟೋಯಿಂಗ್ ನೀತಿ ಪುನರ್​ ಪರಿಶೀಲನೆ ಬಗ್ಗೆ ಚರ್ಚೆಯಾಗಿದೆ. ರಾಂಗ್​ ಪಾರ್ಕಿಂಗ್​ಗೆ ಬೇರೆ ರೀತಿಯಲ್ಲಿ ಕ್ರಮ ಕೈಗೊಳ್ಳುತ್ತೇವೆ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಸೋಮವಾರ ಹೇಳಿಕೆ ನೀಡಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಸಭೆ ನಂತರ ಆಯುಕ್ತರು ತಿಳಿಸಿದ್ದಾರೆ.

ಟೋಯಿಂಗ್ ವೆಹಿಕಲ್ ನಿಯಂತ್ರಣಕ್ಕೆ ಸಿಎಂ ಸೂಚಿಸಿದ್ದಾರೆ. ಪಾರದರ್ಶಕ ದೃಷ್ಟಿಯಿಂದ ಸಿಎಂ ಕೆಲ ಸೂಚನೆ ಕೊಟ್ಟಿದ್ದಾರೆ. ಕೆಲವು ಬದಲಾವಣೆಗಳನ್ನು ತರಲು ಚಿಂತನೆ ನಡೆಸಲಿದ್ದೇವೆ ಎಂದು ಟೋಯಿಂಗ್ ನೀತಿ ಪರಿಷ್ಕರಣೆ ಸಂಬಂಧ ಸಿಎಂ ಸಭೆ ವಿಚಾರವಾಗಿ ಡಾ.ಬಿ.ಆರ್. ರವಿಕಾಂತೇಗೌಡ ಹೇಳಿಕೆ ನೀಡಿದ್ದಾರೆ.

ಟೋಯಿಂಗ್ ನೀತಿ ಪರಿಷ್ಕರಣೆ ಸಂಬಂಧ ಸಭೆ ಮುಕ್ತಾಯವಾಗಿದೆ. ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ನಡೆದ ಸಭೆ ಅಂತ್ಯವಾಗಿದೆ. ಬೆಂಗಳೂರಿನ ಶಕ್ತಿಸೌಧದಲ್ಲಿ ಸಿಎಂ ನೇತೃತ್ವದಲ್ಲಿ ಸಭೆ ನಡೆದಿತ್ತು. ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಸಭೆ ನಡೆಸಿದ್ದರು. ಪಶ್ಚಿಮ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್, ಸಂಚಾರ ವಿಭಾಗದ ಜಂಟಿ ಆಯುಕ್ತ ಡಾ. ರವಿಕಾಂತೇಗೌಡ ಸಭೆಯಲ್ಲಿ ಭಾಗಿಯಾಗಿದ್ದರು.

ಟೋಯಿಂಗ್ ವೇಳೆ ವಾಹನ ಮಾಲೀಕರಿಗೆ ಕಿರುಕುಳ ವಿಚಾರ; ಡಾ.ಬಿ.ಆರ್. ರವಿಕಾಂತೇಗೌಡ ಸ್ಪಷ್ಟನೆ

ಸಭೆಗೂ ಮುನ್ನ, ಟೋಯಿಂಗ್ ವೇಳೆ ವಾಹನ ಮಾಲೀಕರಿಗೆ ಕಿರುಕುಳ ವಿಚಾರವಾಗಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ವಿಡಿಯೋ ಬಗ್ಗೆ ಬೆಂಗಳೂರಿನಲ್ಲಿ ಸಂಚಾರ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಡಾ.ಬಿ.ಆರ್. ರವಿಕಾಂತೇಗೌಡ ಸ್ಪಷ್ಟನೆ ನೀಡಿದ್ದರು. ಟೋಯಿಂಗ್ ಮಾಡುವ ವೇಳೆ ವ್ಯಕ್ತಿ ವಾಹನದ ಹಿಂದೆ ಹೋಗಿದ್ದ. ಟೋಯಿಂಗ್ ವೇಳೆ ನಿಯಮ ಪಾಲಿಸಿಲ್ಲ ಎಂಬ ಆರೋಪವಿದೆ. ಆದರೆ ವಿಡಿಯೋ ಎಡಿಟ್ ಮಾಡಿ ಬಿಡುಗಡೆ ಮಾಡಲಾಗಿದೆ. ಜೆ.ಬಿ. ನಗರದಲ್ಲಿ ವ್ಯಕ್ತಿಯ ದ್ವಿಚಕ್ರ ವಾಹನ ಬಿಟ್ಟು ಕಳಿಸಲಾಗಿದೆ. 15 ಮೀಟರ್ ದೂರ ಹೋದ ಬಳಿಕ ಬೈಕ್ ಬಿಟ್ಟು ಕಳಿಸಿದ್ದಾರೆ. ದ್ವಿಚಕ್ರ ವಾಹನದ ಮಾಲೀಕನಿಗೆ ದಂಡವನ್ನು ಕೂಡ ವಿಧಿಸಿಲ್ಲ ಎಂದು ಬೆಂಗಳೂರಿನಲ್ಲಿ ಆಯುಕ್ತ ಡಾ.ಬಿ.ಆರ್. ರವಿಕಾಂತೇಗೌಡ ಹೇಳಿದ್ದರು.

ಟೋಯಿಂಗ್ ವೇಳೆ ವಾಹನಗಳ ಮಾಲೀಕರಿಗೆ ಕಿರುಕುಳ ವಿಚಾರವಾಗಿ ರವಿಕಾಂತೇಗೌಡ ಮಾಹಿತಿ ನೀಡಿದ್ದರು. ಬೆಂಗಳೂರಿನ ಎಸ್.ಜೆ.ಪಾರ್ಕ್ ಬಳಿ ನಡೆದ ಘಟನೆ ಬಗ್ಗೆ ಸ್ಪಷ್ಟನೆ ಕೊಟ್ಟಿದ್ದಾರೆ. ವಾಹನ ಟೋಯಿಂಗ್ ಮಾಡುವಾಗ ಮಹಿಳೆ ಕಲ್ಲು ತೂರಿದ್ದಾರೆ. ಪ್ರಕರಣ ದಾಖಲಿಸಿ, ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ. ಮಹಿಳೆ 2 ಬಾರಿ ಹಲ್ಲೆ ಮಾಡಿರುವುದಾಗಿ ಕೇಸ್ ದಾಖಲಾಗಿದೆ. ಮಹಿಳಾ ಸಿಬ್ಬಂದಿ ಮೇಲೆ ಕಲ್ಲು ತೂರಿರುವ ಆರೋಪವೂ ಇದೆ. ವೈರಲ್ ಆದ ವಿಡಿಯೋದಲ್ಲಿ ಎಎಸ್‌ಐ ಹಲ್ಲೆ ನಡೆಸಿದ್ದಾರೆ. ಮಹಿಳೆ ಮೇಲೆ ASI ಅಮಾನವೀಯವಾಗಿ ಹಲ್ಲೆ ನಡೆಸಿದ್ದಾರೆ. ಹೀಗಾಗಿ ಎಎಸ್‌ಐರನ್ನು ಕೂಡಲೇ ಅಮಾನತು ಮಾಡಲಾಗಿದೆ ಎಂದು ಹೇಳಿದ್ದರು.

ಇದನ್ನೂ ಓದಿ: ಟೋಯಿಂಗ್ ವೇಳೆ ವಾಹನ ಮಾಲೀಕರಿಗೆ ಕಿರುಕುಳ ವಿಚಾರ: ಸ್ಪಷ್ಟನೆ ನೀಡಿದ ಬಿಆರ್ ರವಿಕಾಂತೇಗೌಡ

ಇದನ್ನೂ ಓದಿ: ಅಂಗಲಾಚಿದ್ದರೂ ಬೈಕ್ ಟೋಯಿಂಗ್ ಮಾಡಿದ್ದ ಪ್ರಕರಣದ ತನಿಖೆಗೆ ಆದೇಶ, 4 ಲಕ್ಷ ಮೌಲ್ಯದ ಮದ್ಯ ನಾಶಪಡಿಸಿದ ಅಬಕಾರಿ ಇಲಾಖೆ

Published On - 9:01 pm, Mon, 31 January 22