ಹೊಯ್ಸಳರ ಬೇಲೂರು, ಹಳೆಬೀಡು, ಸೋಮನಾಥಪುರ ದೇಗುಲಗಳನ್ನು ವಿಶ್ವ ಪಾರಂಪರಿಕ ಕೇಂದ್ರವೆಂದು ಪರಿಗಣಿಸಲು ನಾಮನಿರ್ದೇಶನ

UNESCO ಗೆ ಭಾರತದ ಖಾಯಂ ಪ್ರತಿನಿಧಿಯಾದ ವಿಶಾಲ್ ವಿ ಶರ್ಮಾ ಅವರು ಔಪಚಾರಿಕವಾಗಿ ನಾಮನಿರ್ದೇಶನವನ್ನು UNESCO, ವಿಶ್ವ ಪರಂಪರೆಯ ನಿರ್ದೇಶಕ ಲಾಜ್​ ಎಲುಂಡೊಗೆ ಸಲ್ಲಿಸಿದ್ದಾರೆ.

ಹೊಯ್ಸಳರ ಬೇಲೂರು, ಹಳೆಬೀಡು, ಸೋಮನಾಥಪುರ ದೇಗುಲಗಳನ್ನು ವಿಶ್ವ ಪಾರಂಪರಿಕ ಕೇಂದ್ರವೆಂದು ಪರಿಗಣಿಸಲು ನಾಮನಿರ್ದೇಶನ
Follow us
TV9 Web
| Updated By: ganapathi bhat

Updated on:Jan 31, 2022 | 10:28 PM

ಬೆಂಗಳೂರು: ಕರ್ನಾಟಕದ ಬೇಲೂರು, ಹಳೇಬೀಡು ಮತ್ತು ಸೋಮನಾಥಪುರದ ಹೊಯ್ಸಳ ದೇವಾಲಯಗಳನ್ನು 2022-2023ರ ವರ್ಷಕ್ಕೆ ವಿಶ್ವ ಪರಂಪರೆಯ ಪಟ್ಟಿಯಲ್ಲಿ ಪರಿಗಣಿಸಲು ಭಾರತದ ನಾಮನಿರ್ದೇಶನ ಅಂತಿಮಗೊಳಿಸಲಾಗಿದೆ. ‘ಹೊಯ್ಸಳ ಶಿಲ್ಪಕಲಾ ಶೈಲಿಯ ಸಂಯೋಜನೆ’ ಏಪ್ರಿಲ್ 15, 2014 ರಿಂದ ಯುನೆಸ್ಕೋದ ತಾತ್ಕಾಲಿಕ ಪಟ್ಟಿಯಲ್ಲಿದೆ. ಮತ್ತು ಇದು ಮನುಷ್ಯನ ಸೃಜನಶೀಲ ಪ್ರತಿಭೆಯ ಅತ್ಯುನ್ನತ ಸ್ವರೂಪವನ್ನು ಇದು ಪ್ರತಿನಿಧಿಸುತ್ತದೆ. ನಮ್ಮ ದೇಶದ ಶ್ರೀಮಂತ ಐತಿಹಾಸಿಕ ಮತ್ತು ಸಾಂಸ್ಕೃತಿಕ ಪರಂಪರೆಗೆ ಇವು ಸಾಕ್ಷಿಯಾಗಿವೆ ಎಂದು ಹೇಳಲಾಗಿದೆ.

ಈ ಕಾರ್ಯದಲ್ಲಿ ವಿಶ್ವ ಪರಂಪರೆಯ ಕೇಂದ್ರಕ್ಕೆ ದಾಖಲೆಯನ್ನು ಸಲ್ಲಿಸುವುದು, ಅವರು ಅದರ ತಾಂತ್ರಿಕ ಪರಿಶೀಲನೆಯನ್ನು ಮಾಡುವುದು ಮೊದಲ ಹಂತವಾಗಿದೆ. ಇಂದು, (31ನೇ ಜನವರಿ 2022), UNESCO ಗೆ ಭಾರತದ ಖಾಯಂ ಪ್ರತಿನಿಧಿಯಾದ ವಿಶಾಲ್ ವಿ ಶರ್ಮಾ ಅವರು ಔಪಚಾರಿಕವಾಗಿ ನಾಮನಿರ್ದೇಶನವನ್ನು UNESCO, ವಿಶ್ವ ಪರಂಪರೆಯ ನಿರ್ದೇಶಕ ಲಾಜ್​ ಎಲುಂಡೊಗೆ ಸಲ್ಲಿಸಿದ್ದಾರೆ.

ಹೊಯ್ಸಳರ ದೇವಾಲಯಗಳಲ್ಲಿನ ‘ಹೊಯ್ಸಳ ಶಿಲ್ಪಕಲಾ ಶೈಲಿಯ ಸಂಯೋಜನೆ’ಯು ವಿಶ್ವ ಪರಂಪರೆಯ ಪಟ್ಟಿಗೆ ನಾಮನಿರ್ದೇಶನ ಮಾಡಿರುವುದು ಭಾರತಕ್ಕೆ ಅತ್ಯಂತ ಸಂತಸದ ಕ್ಷಣವಾಗಿದೆ ಎಂದು ಸಂಸ್ಕೃತಿ, ಪ್ರವಾಸೋದ್ಯಮ ಅಭಿವೃದ್ಧಿ ಸಚಿವ ಜಿ ಕಿಶನ್ ರೆಡ್ಡಿ ಹೇಳಿದ್ದಾರೆ. ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಸರ್ಕಾರವು ವಿಕಾಸ್ ಮತ್ತು ವಿರಾಸತ್ ಎರಡಕ್ಕೂ ಬದ್ಧವಾಗಿದೆ. ದೇಶದ ವಿರಾಸತ್ ಅನ್ನು ರಕ್ಷಿಸುವಲ್ಲಿ ನಮ್ಮ ಪ್ರಯತ್ನಗಳು ಸರ್ಕಾರವು ಮಾಡುತ್ತಿರುವ ಕೆಲಸದಿಂದ ಸ್ಪಷ್ಟವಾಗಿದೆ. ಭಾರತದಿಂದ ಕದ್ದ ಅಥವಾ ಕಿತ್ತುಕೊಂಡಿರುವ ಸಾಂಸ್ಕೃತಿಕ ಪರಂಪರೆಯನ್ನು ಸ್ವದೇಶಕ್ಕೆ ಹಿಂದಿರುಗಿಸುವ ಕೆಲಸದಿಂದ ಇದೆಲ್ಲವೂ ಸ್ಪಷ್ಟವಾಗಿದೆ ಎಂದು ಸಚಿವರು ಹೇಳಿದ್ದಾರೆ.

ಈ ಎಲ್ಲಾ ಮೂರು ಹೊಯ್ಸಳ ದೇವಾಲಯಗಳು ಭಾರತೀಯ ಪುರಾತತ್ವ ಸರ್ವೇಕ್ಷಣೆಯ (ASI) ರಕ್ಷಿತ ಸ್ಮಾರಕಗಳಾಗಿವೆ. ಆದ್ದರಿಂದ ASI ಮೂಲಕ ದೇಗುಲಗಳನ್ನು ಸಂರಕ್ಷಣೆ ಮತ್ತು ನಿರ್ವಹಣೆಯನ್ನು ಮಾಡಲಾಗುವುದು. ಈ ಮೂರು ಸ್ಮಾರಕಗಳ ಸುತ್ತಲೂ ಇರುವ ರಾಜ್ಯ ಸಂರಕ್ಷಿತ ಸ್ಮಾರಕಗಳ ಸಂರಕ್ಷಣೆಯನ್ನು ರಾಜ್ಯ ಸರ್ಕಾರವು ನೋಡಿಕೊಳ್ಳುತ್ತದೆ. ರಾಜ್ಯ ಸರ್ಕಾರದ ಜಿಲ್ಲಾ ಮಹಾಯೋಜನೆಯು ಎಲ್ಲಾ ಸ್ಮಾರಕಗಳ ಬಫರ್‌ಗಳನ್ನು ಸಂಯೋಜಿಸುತ್ತದೆ. ಸಮಗ್ರ ನಿರ್ವಹಣಾ ಯೋಜನೆಯನ್ನು ನೋಡಿಕೊಳ್ಳುತ್ತದೆ. ವಿಶೇಷವಾಗಿ ಗೊತ್ತುಪಡಿಸಿದ ಆಸ್ತಿಯ ಸುತ್ತ ಟ್ರಾಫಿಕ್ ನಿರ್ವಹಣೆ ಕೆಲಸಳನ್ನು ರಾಜ್ಯ ಸರ್ಕಾರವು ನೋಡುತ್ತದೆ ಎಂದು ತಿಳಿಸಲಾಗಿದೆ.

ಒಮ್ಮೆ ಈ ನಾಮನಿರ್ದೇಶನ ಸಲ್ಲಿಸಿದ ನಂತರ, UNESCO ಮಾರ್ಚ್ ಆರಂಭದಲ್ಲಿ ಮತ್ತೆ ಈ ಬಗ್ಗೆ ಸಂವಹನ ನಡೆಸಲಿದೆ. ಅದರ ನಂತರ ಸೈಟ್ ಮೌಲ್ಯಮಾಪನವು ಸೆಪ್ಟೆಂಬರ್/ಅಕ್ಟೋಬರ್ 2022 ರಲ್ಲಿ ನಡೆಯುತ್ತದೆ ಮತ್ತು ದಸ್ತಾವೇಜನ್ನು ಜುಲೈ/ಆಗಸ್ಟ್ 2023 ರಲ್ಲಿ ಪರಿಗಣನೆಗೆ ತೆಗೆದುಕೊಳ್ಳಲಾಗುತ್ತದೆ ಎಂದು ಮಾಹಿತಿ ಲಭ್ಯವಾಗಿದೆ.

Belur Halebidu Hoysala

ಹೊಯ್ಸಳರ ಕಾಲದ ದೇಗುಲಗಳನ್ನು ಏಕೆ ಆಯ್ಕೆ ಮಾಡಲಾಗಿದೆ? ಅಲ್ಲಿನ ವಿಶೇಷತೆ ಏನು?

12-13 ನೇ ಶತಮಾನದಲ್ಲಿ ನಿರ್ಮಿಸಲಾದ ಹೊಯ್ಸಳರ ಶೈಲಿಯ ಶಿಲ್ಪಕಲಾ ಶೈಲಿಯ ದೇಗುಲಗಳು, ಬೇಲೂರು, ಹಳೇಬೀಡು ಮತ್ತು ಸೋಮನಾಥಪುರದ ಮೂರು ದೇವಾಲಯಗಳಿಂದ ಇಲ್ಲಿ ಪ್ರತಿನಿಧಿಸಲ್ಪಟ್ಟಿದೆ. ಇದು ಹಿಂದೆಂದೂ ನೋಡಿರದ ಶಿಲ್ಪಕಲೆಗಳನ್ನು ನಿರ್ಮಿಸಿದ ಹೊಯ್ಸಳ ಕಲಾವಿದರು ಮತ್ತು ವಾಸ್ತುಶಿಲ್ಪಿಗಳ ಸೃಜನಶೀಲತೆ ಮತ್ತು ಕೌಶಲ್ಯವನ್ನು ತೋರಿಸುತ್ತದೆ. ಹೊಯ್ಸಳ ದೇವಾಲಯಗಳು ಮೂಲಭೂತ ದ್ರಾವಿಡಿಯನ್ ರೂಪವಿಜ್ಞಾನವನ್ನು ಹೊಂದಿವೆ. ಆದರೆ ಇದು ಮಧ್ಯ ಭಾರತದಲ್ಲಿ ವ್ಯಾಪಕವಾಗಿ ಬಳಸಲಾಗುವ ಭೂಮಿಜಾ ವಿಧಾನ, ಉತ್ತರ ಮತ್ತು ಪಶ್ಚಿಮ ಭಾರತದ ನಾಗರ ಸಂಪ್ರದಾಯಗಳು ಮತ್ತು ಕಲ್ಯಾಣಿ ಚಾಲುಕ್ಯರಿಂದ ಪ್ರಭಾವಗೊಂಡದ್ದನ್ನು ತೋರಿಸುತ್ತದೆ. ಹೊಯ್ಸಳ ವಾಸ್ತುಶಿಲ್ಪಿಗಳು ಇತರ ದೇವಾಲಯದ ಮಾದರಿಗಳ ವೈಶಿಷ್ಟ್ಯಗಳ ಸಾರ ಸಂಗ್ರಹಿಸಿ, ಆಯ್ಕೆಗಳನ್ನು ಪರಿಗಣಿಸಿದರು. ಅದನ್ನು ಅವರು ಮತ್ತಷ್ಟು ಮಾರ್ಪಡಿಸಿದರು. ನಂತರ ತಮ್ಮದೇ ಆದ ನಿರ್ದಿಷ್ಟ ಆವಿಷ್ಕಾರಗಳೊಂದಿಗೆ ಈ ಶಿಲ್ಪಗಳನ್ನು ಪೂರ್ಣಗೊಳಿಸಿದರು. ಇದರ ಪರಿಣಾಮವಾಗಿ ಸಂಪೂರ್ಣವಾದ ‘ಹೊಯ್ಸಳ ದೇವಾಲಯ’ ರೂಪ ಜನ್ಮತಾಳಿತು.

ಇದನ್ನೂ ಓದಿ: ಯುನೆಸ್ಕೋದಿಂದ ಪಾರಂಪರಿಕ ಗೌರವ ಪಡೆದ ಕೊಲ್ಕತ್ತ ದುರ್ಗಾಪೂಜೆ; ಸಂತೋಷ ವ್ಯಕ್ತಪಡಿಸಿದ ಪ್ರಧಾನಿ ಮೋದಿ, ಸಿಎಂ ಮಮತಾ ಬ್ಯಾನರ್ಜಿ

ಇದನ್ನೂ ಓದಿ: ಧೋಲಾವಿರಾ ಯುನೆಸ್ಕೊನಿಂದ ವಿಶ್ವ ಪಾರಂಪರಿಕ ತಾಣದ ಸ್ಥಾನಮಾನ ಪಡೆದ ಭಾರತದ 40 ನೇ ಸ್ಥಳ, ಘೋಷಣೆಯನ್ನು ಸ್ವಾಗತಿಸಿದ ಪ್ರಧಾನಿ ಮೋದಿ

Published On - 9:44 pm, Mon, 31 January 22

‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ
ಮಾಜಿ ಪಿಎಂ ಮನಮೋಹನ್ ಸಿಂಗ್​ಗೆ ಅಂತಿಮ ನಮನ ಸಲ್ಲಿಸಿದ ಪ್ರಧಾನಿ ಮೋದಿ
ಮಾಜಿ ಪಿಎಂ ಮನಮೋಹನ್ ಸಿಂಗ್​ಗೆ ಅಂತಿಮ ನಮನ ಸಲ್ಲಿಸಿದ ಪ್ರಧಾನಿ ಮೋದಿ
ಶತಕ ಪೂರೈಸುತ್ತಿದ್ದಂತೆ ಕಣ್ಣೀರಿಟ್ಟ ನಿತೀಶ್ ಕುಮಾರ್ ರೆಡ್ಡಿ ಅವರ ತಂದೆ..!
ಶತಕ ಪೂರೈಸುತ್ತಿದ್ದಂತೆ ಕಣ್ಣೀರಿಟ್ಟ ನಿತೀಶ್ ಕುಮಾರ್ ರೆಡ್ಡಿ ಅವರ ತಂದೆ..!
ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅಂತಿಮಯಾತ್ರೆ ನೇರಪ್ರಸಾರ
ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅಂತಿಮಯಾತ್ರೆ ನೇರಪ್ರಸಾರ
ಆಸ್ಟ್ರೇಲಿಯನ್ನರ ಮುಂದೆ ಪುಷ್ಪ ಸ್ಟೈಲ್​ನಲ್ಲಿ ಸಂಭ್ರಮಿಸಿದ ನಿತೀಶ್ ಕುಮಾರ್
ಆಸ್ಟ್ರೇಲಿಯನ್ನರ ಮುಂದೆ ಪುಷ್ಪ ಸ್ಟೈಲ್​ನಲ್ಲಿ ಸಂಭ್ರಮಿಸಿದ ನಿತೀಶ್ ಕುಮಾರ್
ಎಂಟು ಮಂದಿ ನಾಮಿನೇಟ್; ಈ ಸ್ಪರ್ಧಿ ಮನೆಯಿಂದ ಔಟ್ ಆಗೋದು ಪಕ್ಕಾ?
ಎಂಟು ಮಂದಿ ನಾಮಿನೇಟ್; ಈ ಸ್ಪರ್ಧಿ ಮನೆಯಿಂದ ಔಟ್ ಆಗೋದು ಪಕ್ಕಾ?
ಕೊಹ್ಲಿ ಔಟಾದಾಗ ಸ್ಯಾಮ್​ ಕೊನ್​ಸ್ಟಾಸ್ ಸಂಭ್ರಮಿಸಿದ್ದು ಹೇಗೆ ನೋಡಿ
ಕೊಹ್ಲಿ ಔಟಾದಾಗ ಸ್ಯಾಮ್​ ಕೊನ್​ಸ್ಟಾಸ್ ಸಂಭ್ರಮಿಸಿದ್ದು ಹೇಗೆ ನೋಡಿ
Daily Devotional: ದೇವರ ನಾಮ ಜಪದ ಮಹತ್ವ ಮತ್ತು ಪ್ರಯೋಜನಗಳು ತಿಳಿಯಿರಿ
Daily Devotional: ದೇವರ ನಾಮ ಜಪದ ಮಹತ್ವ ಮತ್ತು ಪ್ರಯೋಜನಗಳು ತಿಳಿಯಿರಿ
Daily Devotional: ಈ ರಾಶಿಯವರು ಇಂದು ಆಸ್ತಿ ಖರೀದಿಸುವರು
Daily Devotional: ಈ ರಾಶಿಯವರು ಇಂದು ಆಸ್ತಿ ಖರೀದಿಸುವರು