ಧೋಲಾವಿರಾ ಯುನೆಸ್ಕೊನಿಂದ ವಿಶ್ವ ಪಾರಂಪರಿಕ ತಾಣದ ಸ್ಥಾನಮಾನ ಪಡೆದ ಭಾರತದ 40 ನೇ ಸ್ಥಳ, ಘೋಷಣೆಯನ್ನು ಸ್ವಾಗತಿಸಿದ ಪ್ರಧಾನಿ ಮೋದಿ

ಧೋಲಾವಿರಾ ಹಳೇ ಜಮಾನಾದ ನಗರವಾದರೂ, ನಾವೆಲ್ಲ ಅಚ್ಚರಿ ಪಡುವಂಥ ನೀರು ಸರಬರಾಜು ವ್ಯವಸ್ಥೆ ಮತ್ತು ಒಂದು ಅಪೂರ್ವ ಭದ್ರತಾ ವ್ಯವಸ್ಥೆ ಅಲ್ಲಿರೋದು ಬೆಳಕಿಗೆ ಬಂದಿದೆ. ಅಂದ ಹಾಗೆ, ಯುನೆಸ್ಕೊನಿಂದ ವಿಶ್ವ ಪಾರಂಪರಿಕ ತಾಣವೆಂದು ಗುರುತಿಸಿಕೊಂಡಿರುವ ಭಾರತದ 40 ನೇ ಸ್ಥಳ ಇದಾಗಿದೆ.

ಹರಪ್ಪ ನಾಗರಿಕತೆಯೊಂದಿಗೆ ಆಧುನಿಕ ಭಾರತಕ್ಕೆ ಸಂಪರ್ಕ ಕಲ್ಪಿಸುವ ಗುಜರಾತಿನ ರಣ್​ ಆಫ್ ಕಛ್​ನಲ್ಲಿರುವ ಧೋಲಾವಿರಾಗೆ ಯುನೆಸ್ಕೊನಿಂದ ವಿಶ್ವ ಪಾರಂಪರಿಕ ತಾಣದ ಸ್ಥಾನಮಾನ ಸಿಕ್ಕಿದೆ. 1968ರಲ್ಲಿ ಭಾರತೀಯ ಪುರಾತತ್ವ ಇಲಾಖೆಯಿಂದ ಪತ್ತೆಯಾದ ಧೋಲಾವಿರಾ ಒಂದು ನಡುಗಡ್ಡೆಯಾಗಿದೆ. ಹಾಗೆ ನೋಡಿದರೆ ಇದು 2014 ರಿಂದಲೇ ಯುನೆಸ್ಕೊ ಪಟ್ಟಿಯಲ್ಲಿತ್ತು ಮತ್ತು ಕಳೆದ ವರ್ಷ (2020ರಲ್ಲಿ) ವಿಶ್ವ ಪಾರಂಪರಿಕ ತಾಣವನ್ನಾಗಿ ಘೋಷಿಸುವಂತೆ ಭಾರತ ಮನವಿ ಸಲ್ಲಿಸಿತ್ತು.

ಧೋಲಾವಿರಾ ಹಳೇ ಜಮಾನಾದ ನಗರವಾದರೂ, ನಾವೆಲ್ಲ ಅಚ್ಚರಿ ಪಡುವಂಥ ನೀರು ಸರಬರಾಜು ವ್ಯವಸ್ಥೆ ಮತ್ತು ಒಂದು ಅಪೂರ್ವ ಭದ್ರತಾ ವ್ಯವಸ್ಥೆ ಅಲ್ಲಿರೋದು ಬೆಳಕಿಗೆ ಬಂದಿದೆ. ಅಂದ ಹಾಗೆ, ಯುನೆಸ್ಕೊನಿಂದ ವಿಶ್ವ ಪಾರಂಪರಿಕ ತಾಣವೆಂದು ಗುರುತಿಸಿಕೊಂಡಿರುವ ಭಾರತದ 40 ನೇ ಸ್ಥಳ ಇದಾಗಿದೆ.

ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಧೋಲಾವಿರಾಗೆ ಸಿಕ್ಕಿರುವ  ಮಾನ್ಯತೆ ಬಗ್ಗೆ ಹರ್ಷ ವ್ಯಕ್ತಪಡಿಸಿದ್ದಾರೆ. ತಮ್ಮ ಟ್ವೀಟ್​ಗಳಲ್ಲಿ ಅವರು, ಧೊಲಾವಿರಾ ಒಂದು ಬಹಮುಖ್ಯವಾದ ನಗರ ಪ್ರದೇಶವಾಗಿದೆ ಮತ್ತು ಪ್ರಾಚೀನ ಭಾರತದೊಂದಿಗೆ ಸಂಪರ್ಕ ಕಲ್ಪಿಸುವ ಒಂದು ಮಹತ್ವದ ಸ್ಥಳವಾಗಿದೆ ಎಂದು ಪ್ರಧಾನಿಗಳು ಹೇಳಿದ್ದು ಅದು ನೋಡಲೇಬೇಕಾದ ಪ್ರವಾಸಿ ತಾಣವಾಗಿದೆ ಎಂದಿದ್ದಾರೆ.

ತಮ್ಮ ಶಾಲಾದಿನಗಳಲ್ಲಿ ಧೋಲಾವಿರಾಗೆ ಭೇಟಿ ನೀಡಿರುವ ಬಗ್ಗೆಯೂ ಪ್ರಧಾನಿ ಮೋದಿ ಹೇಳಿದ್ದಾರೆ. ಗುಜರಾತನ ಮುಖ್ಯಮಂತ್ರಿಯಾಗಿದ್ದಾಗ, ಧೋಲಾವಿರಾದ ಪಾರಂಪರಿಕ ಸಂರಕ್ಷಣೆ ಮತ್ತು ಅದನ್ನು ಪುನರ್​ಸ್ಥಾಪಿಸುವ ಅವಕಾಶ ತಮಗೆ ಸಿಕ್ಕತ್ತು ಎಂದು ಸಹ ಪ್ರಧಾನಿಗಳು ಹೇಳಿದ್ದಾರೆ.

ಇದನ್ನೂ ಓದಿ: ‘ಮಿಜೋರಾಂ ಪೊಲೀಸರು ಸಮಸ್ಯೆ ಉಲ್ಬಣವಾಗುವಂತೆ ಮಾಡಿದ್ದಾರೆ’: ಗಡಿ ಸಂಘರ್ಷದ ನಡುವೆಯೇ  ವಿಡಿಯೊ ಟ್ವೀಟ್ ಮಾಡಿದ ಅಸ್ಸಾಂ ಸಿಎಂ ಹಿಮಂತ ಬಿಸ್ವ ಶರ್ಮಾ

Click on your DTH Provider to Add TV9 Kannada