ಟಿವಿ9 ಕನ್ನಡ ಡಿಜಿಟಲ್ ಹೌಜಾಟ್: ಬನ್ನಿ ಭಾರತ-ಶ್ರೀಲಂಕಾ ಎರಡನೇ ಟಿ20ಐ ಪಂದ್ಯದಲ್ಲಿ ನಿಮ್ಮ ಅನಿಸಿಕೆ ಪರಿಣಿತರ ಹಂಚಿಕೊಂಡು ಆಟದ ಭಾಗವಾಗಿ!

ಟಿವಿ9 ಕನ್ನಡ ಡಿಜಿಟಲ್ ಹೌಜಾಟ್: ಬನ್ನಿ ಭಾರತ-ಶ್ರೀಲಂಕಾ ಎರಡನೇ ಟಿ20ಐ ಪಂದ್ಯದಲ್ಲಿ ನಿಮ್ಮ ಅನಿಸಿಕೆ ಪರಿಣಿತರ ಹಂಚಿಕೊಂಡು ಆಟದ ಭಾಗವಾಗಿ!

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Jul 28, 2021 | 8:33 PM

ಪಂದ್ಯದ ರೋಚಕತೆಯನ್ನು ಹೆಚ್ಚಿಸಲು ಟಿವಿ9 ಕನ್ನಡ ಡಿಜಿಟಲ್ ಹೌಜಾಟ್! ಎಂಬ ಕಾರ್ಯಕ್ರಮ ಪ್ರಾರಂಭಿಸಿದೆ. ಇದು ಡಿಜಿಟಲ್ ಮಾಧ್ಯಮದಲ್ಲಿಯೇ ಒಂದು ಹೊಸ ಪ್ರಯೋಗ. ಮೊಟ್ಟಮೊದಲ ಲೈವ್ ಮತ್ತು ಸಂವಾದನಾತ್ಮಕ ಕ್ರಿಕೆಟ್ ಕಾರ್ಯಕ್ರಮ.

ಭಾರತ ಮತ್ತು ಶ್ರೀಲಂಕಾ ನಡುವೆ 3 ಪಂದ್ಯಗಳ ಟಿ-20ಐ ಸರಣಿಯ ಎರಡನೇ ಪಂದ್ಯ ಇಂದು ಕೊಲಂಬೊದ ಆರ್​ ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆಯುತ್ತಿದೆ. ಮೊದಲ ಪಂದ್ಯವನ್ನು ಗೆದ್ದಿರುವ ಶಿಖರ್ ಧವನ್ ಪಡೆ ಎರಡನೇ ಪಂದ್ಯವನ್ನು ಸಹ ಗೆದ್ದು ಸರಣಿ ವಶಪಡಿಸಿಕೊಳ್ಳುವ ಹವಣಿಕೆಯಲ್ಲಿದೆ. ಆದರೆ ಭಾರತೀಯ ತಂಡದ ಮೇಲೆಯೂ ಕೊವಿಡ್​-19 ತನ್ನ ವಕ್ರದೃಷ್ಟಿ ಬೀರಿದೆ. ಕೆಲ ಪ್ರಮುಖ ಆಟಗಾರರ ಅಲಭ್ಯತೆಯಿಂದ ಭಾರತಕ್ಕೆ ಕೊಂಚ ಹಿನ್ನೆಡೆಯಾಗಿದೆ.

ಪಂದ್ಯದ ರೋಚಕತೆಯನ್ನು ಹೆಚ್ಚಿಸಲು ಟಿವಿ9 ಕನ್ನಡ ಡಿಜಿಟಲ್ ಹೌಜಾಟ್! ಎಂಬ ಕಾರ್ಯಕ್ರಮ ಪ್ರಾರಂಭಿಸಿದೆ. ಇದು ಡಿಜಿಟಲ್ ಮಾಧ್ಯಮದಲ್ಲಿಯೇ ಒಂದು ಹೊಸ ಪ್ರಯೋಗ. ಮೊಟ್ಟಮೊದಲ ಲೈವ್ ಮತ್ತು ಸಂವಾದನಾತ್ಮಕ ಕ್ರಿಕೆಟ್ ಕಾರ್ಯಕ್ರಮ. ಕರ್ನಾಟಕದ ಕ್ರಿಕೆಟ್ ಅಭಿಮಾನಿಗಳಿಗೆ ಕ್ರಿಕೆಟ್ ಆಟಗಾರರು ಮತ್ತು ವೀಕ್ಷಕ ವಿವರಣೆಕಾರರೊಂದಿಗೆ ಸಂವಹನ ನಡೆಸಲು ಒಂದು ಸುವರ್ಣ ಅವಕಾಶ. ಮೈದಾನದಲ್ಲಿ ಟಿ-20 ಪಂದ್ಯ ನಡೆಯುತ್ತಿರುವಾಗ, ಟಿವಿ9 ಡಿಜಿಟಲ್​ಗೆ ಫೋನ್ ಮಾಡಿ ಪಂದ್ಯದ ಬಗ್ಗೆ ನಿಮ್ಮ ಅನಿಸಿಕೆ ವ್ಯಕ್ತಪಡಿಸಬಹುದು. ಲೈವ್ ಪ್ರೆಡಿಕ್ಷನ್​ನಲ್ಲಿ ನೀವೂ ಭಾಗವಹಿಸಿ ಮತ್ತು ಕರೆ ಮಾಡಿ ನಿಮ್ಮ ಅಭಿಪ್ರಾಯ ತಿಳಿಸಿ.

ನೀವು ಕರೆ ಮಾಡಬೇಕಾದ ದೂರವಾಣಿ ಸಂಖ್ಯೆ- 080 22360301, 080 22360305