ಟೋಯಿಂಗ್ ವೇಳೆ ವಾಹನ ಮಾಲೀಕರಿಗೆ ಕಿರುಕುಳ ವಿಚಾರ: ಸ್ಪಷ್ಟನೆ ನೀಡಿದ ಬಿಆರ್ ರವಿಕಾಂತೇಗೌಡ

ಜೆ.ಬಿ. ನಗರದಲ್ಲಿ ವ್ಯಕ್ತಿಯ ದ್ವಿಚಕ್ರ ವಾಹನ ಬಿಟ್ಟು ಕಳಿಸಲಾಗಿದೆ. 15 ಮೀಟರ್ ದೂರ ಹೋದ ಬಳಿಕ ಬೈಕ್ ಬಿಟ್ಟು ಕಳಿಸಿದ್ದಾರೆ. ದ್ವಿಚಕ್ರ ವಾಹನದ ಮಾಲೀಕನಿಗೆ ದಂಡವನ್ನು ಕೂಡ ವಿಧಿಸಿಲ್ಲ ಎಂದು ಬೆಂಗಳೂರಿನಲ್ಲಿ ಆಯುಕ್ತ ಡಾ.ಬಿ.ಆರ್. ರವಿಕಾಂತೇಗೌಡ ಹೇಳಿದ್ದಾರೆ.

ಟೋಯಿಂಗ್ ವೇಳೆ ವಾಹನ ಮಾಲೀಕರಿಗೆ ಕಿರುಕುಳ ವಿಚಾರ: ಸ್ಪಷ್ಟನೆ ನೀಡಿದ ಬಿಆರ್ ರವಿಕಾಂತೇಗೌಡ
ಸಂಚಾರಿ ಜಂಟಿ ಪೊಲೀಸ್ ಆಯುಕ್ತ ರವಿಕಾಂತೇಗೌಡ
Edited By:

Updated on: Jan 31, 2022 | 6:57 PM

ಬೆಂಗಳೂರು: ಟೋಯಿಂಗ್ ವೇಳೆ ವಾಹನ ಮಾಲೀಕರಿಗೆ ಕಿರುಕುಳ ವಿಚಾರವಾಗಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ವಿಡಿಯೋ ಬಗ್ಗೆ ಬೆಂಗಳೂರಿನಲ್ಲಿ ಸಂಚಾರ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಡಾ.ಬಿ.ಆರ್. ರವಿಕಾಂತೇಗೌಡ ಸ್ಪಷ್ಟನೆ ನೀಡಿದ್ದಾರೆ. ಟೋಯಿಂಗ್ ಮಾಡುವ ವೇಳೆ ವ್ಯಕ್ತಿ ವಾಹನದ ಹಿಂದೆ ಹೋಗಿದ್ದ. ಟೋಯಿಂಗ್ ವೇಳೆ ನಿಯಮ ಪಾಲಿಸಿಲ್ಲ ಎಂಬ ಆರೋಪವಿದೆ. ಆದರೆ ವಿಡಿಯೋ ಎಡಿಟ್ ಮಾಡಿ ಬಿಡುಗಡೆ ಮಾಡಲಾಗಿದೆ. ಜೆ.ಬಿ. ನಗರದಲ್ಲಿ ವ್ಯಕ್ತಿಯ ದ್ವಿಚಕ್ರ ವಾಹನ ಬಿಟ್ಟು ಕಳಿಸಲಾಗಿದೆ. 15 ಮೀಟರ್ ದೂರ ಹೋದ ಬಳಿಕ ಬೈಕ್ ಬಿಟ್ಟು ಕಳಿಸಿದ್ದಾರೆ. ದ್ವಿಚಕ್ರ ವಾಹನದ ಮಾಲೀಕನಿಗೆ ದಂಡವನ್ನು ಕೂಡ ವಿಧಿಸಿಲ್ಲ ಎಂದು ಬೆಂಗಳೂರಿನಲ್ಲಿ ಆಯುಕ್ತ ಡಾ.ಬಿ.ಆರ್. ರವಿಕಾಂತೇಗೌಡ ಹೇಳಿದ್ದಾರೆ.

ಟೋಯಿಂಗ್ ವೇಳೆ ವಾಹನಗಳ ಮಾಲೀಕರಿಗೆ ಕಿರುಕುಳ ವಿಚಾರವಾಗಿ ರವಿಕಾಂತೇಗೌಡ ಮಾಹಿತಿ ನೀಡಿದ್ದಾರೆ. ಬೆಂಗಳೂರಿನ ಎಸ್.ಜೆ.ಪಾರ್ಕ್ ಬಳಿ ನಡೆದ ಘಟನೆ ಬಗ್ಗೆ ಸ್ಪಷ್ಟನೆ ಕೊಟ್ಟಿದ್ದಾರೆ. ವಾಹನ ಟೋಯಿಂಗ್ ಮಾಡುವಾಗ ಮಹಿಳೆ ಕಲ್ಲು ತೂರಿದ್ದಾರೆ. ಪ್ರಕರಣ ದಾಖಲಿಸಿ, ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ. ಮಹಿಳೆ 2 ಬಾರಿ ಹಲ್ಲೆ ಮಾಡಿರುವುದಾಗಿ ಕೇಸ್ ದಾಖಲಾಗಿದೆ. ಮಹಿಳಾ ಸಿಬ್ಬಂದಿ ಮೇಲೆ ಕಲ್ಲು ತೂರಿರುವ ಆರೋಪವೂ ಇದೆ. ವೈರಲ್ ಆದ ವಿಡಿಯೋದಲ್ಲಿ ಎಎಸ್‌ಐ ಹಲ್ಲೆ ನಡೆಸಿದ್ದಾರೆ. ಮಹಿಳೆ ಮೇಲೆ ASI ಅಮಾನವೀಯವಾಗಿ ಹಲ್ಲೆ ನಡೆಸಿದ್ದಾರೆ. ಹೀಗಾಗಿ ಎಎಸ್‌ಐರನ್ನು ಕೂಡಲೇ ಅಮಾನತು ಮಾಡಲಾಗಿದೆ ಎಂದು ಹೇಳಿದ್ದಾರೆ.

ಖಂಡಿತಾ ಇದು ಖಂಡನಾರ್ಹ ಎಂದು ಡಾ.ಬಿ.ಆರ್. ರವಿಕಾಂತೇಗೌಡ ಹೇಳಿದ್ದಾರೆ. ASI ವಿರುದ್ಧ ದೂರು ದಾಖಲಿಸುವ ಬಗ್ಗೆ ಚಿಂತನೆ ನಡೆದಿದೆ. ಯಾವುದೇ ಮುಲಾಜಿಲ್ಲದೆ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ರವಿಕಾಂತೇಗೌಡ ಸ್ಪಷ್ಟನೆ ನೀಡಿದ್ದಾರೆ. ಜೆ.ಬಿ.ನಗರದ ಘಟನೆ ವಿಡಿಯೋ ಮಾಡಿರುವ ವ್ಯಕ್ತಿ ಒಂದು ಪಕ್ಷದ ಕಾರ್ಯಕರ್ತ. ವಿಡಿಯೋ ಮಾಡಿರುವ ವ್ಯಕ್ತಿಗೆ ನೋಟಿಸ್ ನೀಡಲಾಗಿದೆ. ವಿಡಿಯೋ ಉದ್ದೇಶಪೂರ್ವಕವಾಗಿ ಮಾಡಿದ್ದರೆ ಕ್ರಮಕೈಗೊಳ್ತೇವೆ ಎಂದು ರವಿಕಾಂತೇಗೌಡ ತಿಳಿಸಿದ್ದಾರೆ.

ಇದನ್ನೂ ಓದಿ: ತಾತ್ಕಾಲಿಕವಾಗಿ ಟೋಯಿಂಗ್ ನಿಲ್ಲಿಸುವಂತೆ ಸಂಚಾರಿ ಜಂಟಿ ಪೊಲೀಸ್ ಆಯುಕ್ತ ರವಿಕಾಂತೇಗೌಡ ಸೂಚನೆ

ಇದನ್ನೂ ಓದಿ: ಅಂಗಲಾಚಿದ್ದರೂ ಬೈಕ್ ಟೋಯಿಂಗ್ ಮಾಡಿದ್ದ ಪ್ರಕರಣದ ತನಿಖೆಗೆ ಆದೇಶ, 4 ಲಕ್ಷ ಮೌಲ್ಯದ ಮದ್ಯ ನಾಶಪಡಿಸಿದ ಅಬಕಾರಿ ಇಲಾಖೆ

TV9 Web

TV9 Kannada

Read More
Loading...
Unable to load recommendations.
Follow Us