ಸನ್ನಡತೆ ಅಧಾರದ ಮೇಲೆ ಜೈಲಿನಿಂದ ಬಿಡುಗಡೆಯಾದ ಒಬ್ಬೊಬ್ಬ ಕೈದಿಯ ಒಂದೊಂದು ಕಣ್ಣೀರಿನ ಕಥೆ

| Updated By: ಕಿರಣ್ ಹನುಮಂತ್​ ಮಾದಾರ್

Updated on: Jul 09, 2024 | 6:47 PM

ಯಾವುದೋ ಕಾರಣಗಳಿಂದ ಜೈಲು ಸೇರಿದ್ದ ಕೈದಿಗಳಲ್ಲಿ ಕೆಲವರನ್ನ ಸನ್ನಡತೆ ಅಧಾರದ ಮೇಲೆ ಬಿಡುಗಡೆಗೊಳಿಸಲಾಗುತ್ತದೆ. ಅದರಂತರ ಇಂದು(ಮಂಗಳವಾರ) ಹಲವಾರು ಶಿಕ್ಷಾ ಬಂಧಿಗಳನ್ನು ಬಿಡುಗಡೆ ಮಾಡಲಾಯಿತು. ಅದರಲ್ಲಿ ಜೈಲುವಾಸದಲ್ಲಿಯೇ ಇದ್ದುಕೊಂಡು ತನ್ನ ತಪ್ಪಿನ ಅರಿವಾಗಿ ‘ಕೊಲೆಗಾರನ ಪ್ರೇಮದ ಸಾಲುಗಳು’ ಕವನ ಸಂಕಲನ ರಚನೆ ಮಾಡಿದ್ದಾನೆ. ಮತ್ತೊಬ್ಬ ತಂದೆ ಕೊಲೆ ಸೇಡಿಗೆ ಜೈಲು ಸೇರಿ, ‘ಕ್ಷಣೀಕ ಕೋಪಕ್ಕೆ ನಿಮ್ಮನ್ನ ನೀವು ಬಲಿಕೊಡಬೇಡಿ ಎಂದು ಮನವಿ ಮಾಡಿದ್ದಾನೆ. ಈ ಕುರಿತು ಒಂದು ಸ್ಟೋರಿ ಇಲ್ಲಿದೆ.

ಸನ್ನಡತೆ ಅಧಾರದ ಮೇಲೆ ಜೈಲಿನಿಂದ ಬಿಡುಗಡೆಯಾದ ಒಬ್ಬೊಬ್ಬ ಕೈದಿಯ ಒಂದೊಂದು ಕಣ್ಣೀರಿನ ಕಥೆ
ಸನ್ನಡತೆ ಆಧಾರದ ಮೇಲೆ ಕೈದಿಗಳ ಬಿಡುಗಡೆ
Follow us on

ಬೆಂಗಳೂರು, ಜು.09: ಸನ್ನಡತೆ ಅಧಾರದ ಮೇಲೆ ಬಿಡುಗಡೆಯಾದ ಒಬ್ಬೊಬ್ಬ ಶಿಕ್ಷಾ ಬಂಧಿಗಳದ್ದು(Prisoners) ಒಂದೊಂದು ಕಣ್ಣೀರ ಕಥೆಯಿದೆ. ಹೌದು, ಕಮಿಷನ್ ಕೊಡಲಿಲ್ಲ ಎಂದು ತಂದೆ ಕಪಾಳಕ್ಕೆ ಹೊಡೆದ ಎಂಜಿನಿಯರ್​ ಮೇಲಿನ ಪ್ರತೀಕಾರ ತೀರಿಸಿಕೊಳ್ಳಲು ಕಾನೂನು ವ್ಯಾಸಂಗ ಮಾಡುತ್ತಿದ್ದ ಮಗ, ಎಂಜಿನಿಯರ್ ಕೈ ಕಡಿಯಲು ಸ್ಕೆಚ್ ಹಾಕಿದ್ದ. ಆದರೆ, ಕೈ ಕಡಿಯುವ ಬರದಲ್ಲಿ ತುರುವನೂರು ಸಿದ್ದಾರೂಡ ಎಂಜಿನಿಯರ್ ತಲೆಯನ್ನೇ ಕಡಿದಿದ್ದ. ಈ ಹಿನ್ನಲೆ 2003 ರಲ್ಲಿ ಜೈಲಿಗೆ ಬಂದ ಸಿದ್ದಾರೂಡ, ಬರೋಬ್ಬರಿ 21 ವರ್ಷ ಜೈಲುವಾಸದ ಬಳಿಕ ಬಿಡುಗಡೆ ಆಗಿದ್ದ.

ಪೆರೋಲ್ ಮೇಲೆ ಹೊರಬಂದು ‘ಪ್ರೀತಿ’

ಇನ್ನು 21 ವರ್ಷಗಳ ಜೈಲುವಾಸ ಅನುಭವಿಸಿ ಬಿಡುಗಡೆಯಾದ ಬಳಿಕ ಅರ್ಧಕ್ಕೆ ನಿಂತಿದ್ದ ಎಲ್ಎಲ್ ಬಿ ಪದವಿಯನ್ನು ಪೂರ್ಣ ಮಾಡಿದ. ಈ ನಡುವೆ ಪೆರೋಲ್ ಮೇಲೆ ಹೊರಗೆ ಬಂದಿದ್ದ ವೇಳೆ ಯುವತಿ ಜೊತೆ ‌ಪ್ರೇಮ ಬೆಳೆದು, ಆಕೆಯನ್ನು ಮದುವೆಯಾಗಿ ಗುಂಟೂರಿಗೆ ಎಸ್ಕೇಪ್ ಆಗಿದ್ದ. ಮೊದಲೇ ಪೆರೋಲ್ ಮೇಲೆ ಹೊರ ಹೋದ ಸಜಾ ಬಂಧಿ ಪರಾರಿ ಎಂದು ಆಗ ಮತ್ತೊಂದು ಕೇಸ್ ದಾಖಲಾಗಿ, ಮತ್ತೆ ಹತ್ತಾರು ವರ್ಷ ಜೈಲುವಾಸ ಅನುಭವಿಸಿದ್ದ.

ಇದನ್ನೂ ಓದಿ:ರದ್ದಾದ ಕಾಮಗಾರಿಗಳಿಗೂ ಬಿಲ್ ಮೊತ್ತ ಬಿಡುಗಡೆ ಮಾಡಲು ಮುಂದಾದ ಬಿಬಿಎಂಪಿ!

ಜೈಲುವಾಸದಲ್ಲಿಯೇ ‘ಕೊಲೆಗಾರನ ಪ್ರೇಮದ ಸಾಲುಗಳು’ ಕವನ ಸಂಕಲನ ರಚನೆ

ಹೌದು, ಜೈಲುವಾಸದಲ್ಲಿಯೇ ‘ಕೊಲೆಗಾರನ ಪ್ರೇಮದ ಸಾಲುಗಳು’ ಕವನ ಸಂಕಲನ ರಚನೆ ಮಾಡಿ, ತನ್ನ ಬದುಕಿನ ಪ್ರಮುಖ ಸಂಗತಿಗಳ ಜೊತೆ ಪ್ರೇಮದ ಬಗ್ಗೆ ಕವನ ಸಂಕಲನದಲ್ಲಿ ಉಲ್ಲೇಖ ಮಾಡಿದ್ದಾನೆ. ಯಾರೂ‌ ಕೂಡ ಕೋಪದ ಕೈಗೆ ಬುದ್ಧಿ ಕೊಡಬೇಡಿ. ಬೇರೆ ಯಾರದೋ ಮುಲಾಜಿಗೆ ಅಪರಾಧ ಕೃತ್ಯವೆಸಗಿ ನಿಮ್ಮ ಬದುಕು ಹಾಳು ಮಾಡಿಕೊಳ್ಳಬೇಡಿ. ಮನುಷ್ಯ ಜನ್ಮ ಒಮ್ಮೆ ಮಾತ್ರ ಸಿಗಲಿದೆ. ಅದನ್ನು ಇತರರಿಗೆ ಒಳ್ಳೆಯದು ಮಾಡಲು, ತಾವು-ತಮ್ಮ ಕುಟುಂಬ ನೆಮ್ಮದಿಯಾಗಿ ಬದುಕಲು ಬಳಸಿ ಎಂದು ಮನವಿ ಮಾಡಿದ್ದ.

ತಂದೆ ಕೊಂದವರ ಮೇಲಿನ ಪ್ರತೀಕಾರಕ್ಕೆ ಬರಿದಾದ ಜೀವನ; 20 ವರ್ಷದ ಬಳಿಕ ಬಿಡುಗಡೆ

ಇದು ಮತ್ತೊಬ್ಬ ಕೈದಿಯ ಕಥೆ. ಹೌದು, 20 ವರ್ಷದ ಜೈಲುವಾಸದ ಬಳಿಕ ಸನ್ನಡತೆ ಆಧಾರದ ಮೇಲೆ ಇಂಡಿ ತಾಲ್ಲೂಕಿನ ಆನಂದ ಎಂಬಾತ ಬಿಡುಗಡೆಗೊಂಡಿದ್ದಾನೆ. ‘ತಂದೆ ಕೊಂದವರ ಮೇಲಿನ ಪ್ರತೀಕಾರ ತೀರಿಸಿಕೊಳ್ಳಲು ಹೋಗಿ ಸೇರಿದ್ದ. ಆನಂದ್​ ತಂದೆ ಗ್ರಾಮ ಪಂಚಾಯತಿ ಅಧ್ಯಕ್ಷ. ಹೀಗಾಗಿ ಆತನ ಅಧ್ಯಕ್ಷತೆಯಲ್ಲಿ ಪಕ್ಕದ ಊರಿನಲ್ಲಿ ಅಂಬೇಡ್ಕರ್ ಜಯಂತಿ ಆಚರಣೆ ಮಾಡಲಾಗಿತ್ತು. ಅಷ್ಟಕ್ಕೆ ಕುಪಿತಗೊಂಡ ಅದೇ ಗ್ರಾಮದ ಕುಟುಂಬವೊಂದು ಆನಂದ್​ ತಂದೆಯನ್ನು ಆತನ ಕಣ್ಣಮುಂದೆಯೇ ಬರ್ಬರ ಹತ್ಯೆ ಮಾಡಲಾಗಿತ್ತು.

ಇದನ್ನೂ ಓದಿ:ಭೂ ಹಗರಣ ಪ್ರಕರಣದಲ್ಲಿ ಜಾಮೀನು ಪಡೆದು ಜೈಲಿನಿಂದ ಬಿಡುಗಡೆಯಾದ ಹೇಮಂತ್ ಸೊರೇನ್

 ತಂದೆಯ ಬರ್ಬರ ಹತ್ಯೆಗೆ ಕೆಂಡವಾದ ಮಗ

ತಂದೆಯ ಬರ್ಬರ ಹತ್ಯೆಯಿಂದ ಕೆರಳಿ ಕೆಂಡವಾದ ಮಗ, ‘ತಂದೆಯನ್ನು ಉಳಿಸಿಕೊಳ್ಳಲು ನಡೆಸಿದ ಯತ್ನ ಫಲಿಸಲಿಲ್ಲ. ಅದೇ ಕೋಪದಲ್ಲಿ ಪ್ರತೀಕಾರ ತೀರಿಸಿಕೊಳ್ಳಲು ಮಗ ಮತ್ತು ಆತನ ಸಂಗಡಿಗರು ಗ್ರಾಮಕ್ಕೆ ನುಗ್ಗಿದ್ದರು. ಅವರ ‘ದಿಢೀರ್ ದಾಳಿಗೆ ಹೆದರಿದ ತಂದೆ ಕೊಂದ ಹಲ್ಲೆಕೋರರು, ಮನೆಯೊಳಗೆ ಸೇರಿಕೊಂಡರು. ಆಕ್ರೋಶದಲ್ಲಿ ಮನೆಗೆ ಬೆಂಕಿ ಹಚ್ಚಿ ಹೊರಗಿನಿಂದ ಬಿಗ ಜಡಿದಿದ್ದಾನೆ. ಕಣ್ಣಮುಂದೆಯೇ 10 ಮಂದಿ ಸುಟ್ಟು ಕರಕಲಾಗಿದ್ದಾರೆ. ಅದೇ 10 ಮಂದಿ ಕೊಲೆ ಪ್ರಕರಣದಲ್ಲಿ 25 ಮಂದಿಗೆ ಶಿಕ್ಷೆಯಾಗಿ ಕೊನೆಯದಾಗಿ ಜೈಲಿನಿಂದ ಬಿಡುಗಡೆಗೊಂಡಿದ್ದಾನೆ. ಬಳಿಕ ಮಾತನಾಡಿ ಆತ ‘ಯಾರೂ ಕೂಡ ರೋಷಾವೇಷ, ದ್ವೇಷ ಎಂದು ಕಾನೂನು ಕೈಗೆ ತೆಗೆದುಕೊಳ್ಳಬೇಡಿ. ಒಂದು ಏಟು ಹೊಡೆದರೂ ಸುಮ್ಮನೆ ಬನ್ನಿ. ಕಾನೂನು ರೀತಿಯಲ್ಲಿ ಹೋರಾಟ ಮಾಡಿ ಎಂದು ಮನವಿ ಮಾಡಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:35 pm, Tue, 9 July 24