ಬೆಂಗಳೂರು, ಅ.03: ಇಂದು(ಅ.03) ಬೆಳಿಗ್ಗೆ ನಮ್ಮ ಮೆಟ್ರೊ (Namma Metro) ಹಸಿರು ಮಾರ್ಗದಲ್ಲಿ ರೀ ರೈಲು ಹಳಿ ತಪ್ಪಿತ್ತು. ಹೌದು, ಮೆಟ್ರೋ ರೈಲುಗಳಲ್ಲಿ ತಾಂತ್ರಿಕ ತೊಂದರೆ ಉಂಟಾದಾಗ ಅದನ್ನು ಸರಿಪಡಿಸಲು ಬಳಸುವ ರೀ ರೈಲು, ರಾಜಾಜಿನಗರ ನಿಲ್ದಾಣದ ಟ್ರ್ಯಾಕ್ನಲ್ಲಿ ಹಳಿ ತಪ್ಪಿದ್ದು, ಇದೀಗ ಹಳಿಯನ್ನು ಹೈಡ್ರಾಲಿಕ್ ಕ್ರೇನ್ ಬಳಸಿ ಸ್ಥಳಾಂತರಿಸಲಾಗಿದೆ. ಈ ಹಿನ್ನಲೆ ಮೆಟ್ರೋ ಮಾರ್ಗದ ಸುರಕ್ಷತೆಯನ್ನು ಪರಿಶೀಲಿಸಿ, ಇದೀಗ ಎಂದಿನಂತೆ ಸಂಚಾರ ಪ್ರಾರಂಭವಾಗಿದೆ ಎಂದು ಬಿಎಂಆರ್ಸಿಎಲ್ ತಿಳಿಸಿದೆ.
ಹೌದು, ನಾಲ್ಕು ಕಡೆಗೂ ಬೆಲ್ಟ್ ಹಾಕಿ ಬೃಹತ್ ಕ್ರೇನ್ ಮೂಲಕ ನಿಧಾನವಾಗಿ ಮೇಲೆತ್ತಿ, ನಂತರ ಯಶಸ್ವಿಯಾಗಿ ರೀ ರೈಲು ಕೆಳಗೆ ಇಳಿಸಲಾಗಿದೆ. ಆದ್ರೆ, ಈ ರೀತಿಯ ಸಮಸ್ಯೆ ಯಾವತ್ತೂ ಆಗಿರಲಿಲ್ಲ. ರೀ ರೈಲು ರಸ್ತೆ ಮತ್ತು ಟ್ರ್ಯಾಕ್ ಮೇಲೆ ಸಂಚರಿಸುತ್ತೆ. ನಿನ್ನೆ ಟ್ರ್ಯಾಕ್ ಮೇಲೆ ವೀಲ್ ಜಾಮ್ ಆಗಿತ್ತು. ಇದರಿಂದ ಸಮಸ್ಯೆಯಾಗಿತ್ತು. ಇನ್ನು ಘಟನೆ ಕುರಿತು ಮಾತನಾಡಿದ ‘ಆಪರೇಷನ್ ಆಂಡ್ ಮೆಂಟೇನೆನ್ಸ್ ಎಕ್ಸಿಕ್ಯೂಟಿವ್ ಡೈರೆಕ್ಟರ್ ಶಂಕರ್ ಅವರು ‘ ಇನ್ನು ಅರ್ಧ ಗಂಟೆಯಲ್ಲಿ ಮತ್ತೆ ಎಂದಿನಂತೆ ಮೆಟ್ರೋ ಸಂಚರಿಸುತ್ತೆ. ಸದ್ಯ ಎಲ್ಲಾ ಕ್ಲಿಯರ್ ಆಗಿದ್ದು, ಟ್ರ್ಯಾಕ್ ನಲ್ಲಿ ಯಾವ ಸಮಸ್ಯೆ ಇಲ್ಲ. ರೀ ರೈಲಿನ ಚಕ್ರ ಸಿಲುಕಿದ್ದರಿಂದ ಸಮಸ್ಯೆಯಾಗಿತ್ತು ಎಂದಿದ್ದರು.
ಇದನ್ನೂ ಓದಿ:ಹಸಿರು ಮಾರ್ಗದಲ್ಲಿ ಹಳಿ ತಪ್ಪಿದ ರೀ ರೈಲ್, ಮೆಟ್ರೋ ಪ್ರಯಾಣಿಕರು ಪರದಾಟ, ನಿಲ್ದಾಣದಲ್ಲಿ ಜನವೋ ಜನ
ಹೌದು, ಹಳಿ ತಪ್ಪಿದ ರೀ ರೈಲ್ ಸರಿಪಡಿಸಲು ಇಂಜಿನಿಯರ್ಗಳು ಹರಸಾಹಸ ಪಟ್ಟಿದ್ದು, ಹಳಿ ತಪ್ಪಿರುವ ರೀ ರೈಲ್ ವೆಹಿಕಲ್ ಹಳಿಗೆ ತರುವ ಬಗ್ಗೆ ಹಿರಿಯ ಇಂಜಿನಿಯರ್ ಗಳಿಂದ ಮಾಹಿತಿ ಕೂಡ ಸಂಗ್ರಹಿಸಿದ್ದರು. ಹೇಗೆ ಟ್ರ್ಯಾಕ್ ಗೆ ತರುವುದು ಎನ್ನುವುದರ ಬಗ್ಗೆ ದೆಹಲಿ ಎಕ್ಸ್ ಪರ್ಟ್ ಗಳ ಜೊತೆ ವರ್ಚುವಲ್ ಸಭೆ ನಡೆಸಿ ಸಮಾಲೋಚನೆ ನಡೆಸಲಾಗುತ್ತು. ಇದೀಗ ಯಶಸ್ವಿಯಾಗಿದ್ದು, ಎಂದಿನಂತೆ ಸಂಚಾರ ಆರಂಭವಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:56 pm, Tue, 3 October 23