ಬೆಂಗಳೂರು: ನಾಳೆ ದ್ವಿತೀಯ ಪಿಯುಸಿ ಫಲಿತಾಂಶ (Result) ಪ್ರಕಟವಾಗಲಿದೆ. ಖಾಸಗಿ ವಿದ್ಯಾರ್ಥಿಗಳು, ರಿಸಲ್ಟ್ ತಿರಸ್ಕರಿಸಿದ್ದ ಮತ್ತು ಪುನರಾವರ್ತಿತ ವಿದ್ಯಾರ್ಥಿಗಳ ಫಲಿತಾಂಶ ನಾಳೆ ಪ್ರಕಟವಾಗುತ್ತದೆ. ಶಿಕ್ಷಣ ಸಚಿವ ಬಿ.ಸಿ.ನಾಗೇಶ್ (BC Nagesh) ಫಲಿತಾಂಶವನ್ನು ಪ್ರಕಟಗೊಳಿಸುತ್ತಾರೆ. ಅಗಸ್ಟ್ ಹಾಗೂ ಸೆಪ್ಟೆಂಬರ್ 2021ರ ಪರೀಕ್ಷೆಗೆ ನೊಂದಾಯಿಸಿಕೊಂಡಿದ್ದ ವಿದ್ಯಾರ್ಥಿಗಳು, karresults.nic.in ಲಿಂಕ್ ಮೂಲಕ ಫಲಿತಾಂಶವನ್ನು ನೋಡಬಹುದು.
ಖಾಸಗಿ, ಫಲಿತಾಂಶ ತಿರಸ್ಕರಿಸಿದ್ದ ವಿದ್ಯಾರ್ಥಿಗಳು ಹಾಗೂ ಪುನರಾವರ್ತಿತ ಅಭ್ಯರ್ಥಿಗಳ ಫಲಿತಾಂಶ ಪ್ರಕಟವಾಗುತ್ತದೆ. ಒಟ್ಟು 18 ಸಾವಿರದ 414 ವಿದ್ಯಾರ್ಥಿಗಳು ಪರೀಕ್ಷೆಗೆ ನೊಂದಣಿ ಮಾಡಿಕೊಂಡಿದ್ದರು. ಇದರಲ್ಲಿ 17,469 ಖಾಸಗಿ ವಿದ್ಯಾರ್ಥಿಗಳು, 352 ರಿಪೀಟರ್ಸ್, 593 ಪ್ರೆಶರ್ಸ್ ವಿದ್ಯಾರ್ಥಿಗಳಿದ್ದಾರೆ. ಅಗಸ್ಟ್- ಸೆಪ್ಟೆಂಬರ್ನಲ್ಲಿ ಪಿಯಸಿ ಪರೀಕ್ಷೆ ನಡೆದಿತ್ತು. ರಾಜ್ಯದ 187 ಪರೀಕ್ಷೆ ಕೇಂದ್ರಗಳಲ್ಲಿ ಪರೀಕ್ಷೆ ಮಾಡಲಾಗಿತ್ತು.
ನಾಳೆ ಸಿಇಟಿ ಫಲಿತಾಂಶ ಪ್ರಕಟ
ನಾಳೆ 2020-21ನೇ ಸಾಲಿನ ಸಿಇಟಿ ಫಲಿತಾಂಶ ಪ್ರಕಟವಾಗುತ್ತದೆ. ಆಗಸ್ಟ್ 28, 29, 30ರಂದು ಸಿಇಟಿ ಪರೀಕ್ಷೆ ನಡೆದಿತ್ತು. ಸಿಇಟಿಗೆ 2,01,834 ವಿದ್ಯಾರ್ಥಿಗಳು ನೋಂದಣಿ ಮಾಡಿದ್ದರು. 1.89 ಲಕ್ಷ ವಿದ್ಯಾರ್ಥಿಗಳು ಗಣಿತ ಪರೀಕ್ಷೆ ಬರೆದಿದ್ದಾರೆ. ಜೀವಶಾಸ್ತ್ರ ಪರೀಕ್ಷೆ 1.62 ಲಕ್ಷ ವಿದ್ಯಾರ್ಥಿಗಳು, 1.93 ಲಕ್ಷ ವಿದ್ಯಾರ್ಥಿಗಳು ರಸಾಯನಶಾಸ್ತ್ರ ಪರೀಕ್ಷೆ, 1.93 ಲಕ್ಷ ವಿದ್ಯಾರ್ಥಿಗಳು ಭೌತಶಾಸ್ತ್ರ ಪರೀಕ್ಷೆ ಬರೆದಿದ್ದಾರೆ. ನಾಳೆ ಮಧ್ಯಾಹ್ನ ಉನ್ನತ ಶಿಕ್ಷಣ ಇಲಾಖೆ ಸಚಿವ ಡಾ.ಅಶ್ವತ್ಥ್ ನಾರಾಯಣ ಸುದ್ದಿಗೋಷ್ಠಿ ನಡೆಸುತ್ತಾರೆ. ಸುದ್ದಿಗೋಷ್ಠಿ ಬಳಿಕ ಸಿಇಟಿ ಫಲಿತಾಂಶ ಪ್ರಕಟವಾಗುತ್ತದೆ. kea.kar.nic.in ವೆಬ್ಸೈಟ್ನಲ್ಲಿ ಫಲಿತಾಂಶ ಪ್ರಕಟವಾಗುತ್ತದೆ.
ಇದನ್ನೂ ಓದಿ
Tv9 Impact: ಎಲೆಕ್ಟ್ರಾನಿಕ್ ಸಿಟಿ ಫ್ಲೈ ಓವರ್ ಮೇಲೆ ಮೋಜು ಮಸ್ತಿ ಮಾಡಿದ್ದವರಿಗೆ ಪೊಲೀಸರಿಂದ ಎಚ್ಚರಿಕೆ
Punjab Politics: ಇಂದು ಪಂಜಾಬ್ನಲ್ಲಿ ಮಹತ್ವದ ಕಾಂಗ್ರೆಸ್ ಸಭೆ; ಸಂಜೆಯೊಳಗೆ ನೂತನ ಸಿಎಂ ಘೋಷಣೆ ಸಾಧ್ಯತೆ
(Repeaters Second Puc result will be published on September 20)
Published On - 12:42 pm, Sun, 19 September 21