Crime News: ಬ್ಯಾಂಕ್ ಮ್ಯಾನೇಜರ್ ಎಂದು ಹೇಳಿ ವೃದ್ಧರಿಗೆ 1 ಲಕ್ಷ ವಂಚನೆ, ರೈಲಿಗೆ ಸಿಲುಕಿ ಮಹಿಳೆ ಸಾವು
ಮೊಬೈಲ್ ಮೂಲಕ ಸಂಪರ್ಕಿಸಿದ್ದ ವಂಚಕರು ಸ್ಟೇಟ್ ಬ್ಯಾಂಕ್ ಆಫ್ ಹೈದರಾಬಾದ್ನಲ್ಲಿ ಡೆಬಿಟ್ ಕಾರ್ಡ್ ಕೊಡಿಸುವುದಾಗಿ ಹೇಳಿ ಸೂಕ್ಷ್ಮ ಮಾಹಿತಿ ಸಂಗ್ರಹಿಸಿ, ಹಣ ವಿತ್ಡ್ರಾ ಮಾಡಿಕೊಂಡಿದ್ದರು.
ಮೈಸೂರು: ಬ್ಯಾಂಕ್ ಮ್ಯಾನೇಜರ್ ಎಂದು ಹೇಳಿಕೊಂಡು ₹ 1 ಲಕ್ಷ ವಂಚಿಸಿರುವ ಘಟನೆ ನಂಜನಗೂಡಿನಲ್ಲಿ ನಡೆದಿದೆ. ನಂಜನಗೂಡಿನ ಗುಜರಿ ವ್ಯಾಪಾರಿ ಬಷೀರ್ ಅಹ್ಮದ್ ಎಂಬಾತನಿಗೆ ಕರೆ ಮಾಡಿದ್ದ ವ್ಯಕ್ತಿ ತನ್ನನ್ನು ತಾನು ಬ್ಯಾಂಕ್ ಮ್ಯಾನೇಜರ್ ಎಂದು ಪರಿಚಯಿಸಿಕೊಂಡ. ಡೆಬಿಡ್ ಕಾರ್ಡ್ ಸರಿಪಡಿಸಬೇಕಿದೆ ಎಂದು ಹೇಳಿ, ಎಲ್ಲ ವಿವರ ಪಡೆದುಕೊಂಡು ₹ 99,999 ವಂಚಿಸಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಮೊದಲ ಸಲ ₹ 49,999, ಎರಡನೇ ಸಲ ₹ 50,000 ವಿತ್ಡ್ರಾ ಮಾಡಿಕೊಳ್ಳಲಾಗಿದೆ ಎಂದು ಗ್ರಾಹಕ ಬಷೀರ್ ದೂರಿದ್ದಾರೆ. ಮೈಸೂರಿನ ಸೈಬರ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಂಜನಗೂಡಿನ ನೀಲಕಂಠನಗರದಲ್ಲಿ ಗುಜರಿ ವ್ಯಾಪಾರ ಮಾಡುತ್ತಿರುವ ಬಷೀರ್ ಅಹಮದ್ ಅವರ ಪತ್ನಿ ಷಹಜಹಾನ್ ಅವರನ್ನು ಮೊಬೈಲ್ ಮೂಲಕ ಸಂಪರ್ಕಿಸಿದ್ದ ವಂಚಕರು ಸ್ಟೇಟ್ ಬ್ಯಾಂಕ್ ಆಫ್ ಹೈದರಾಬಾದ್ನಲ್ಲಿ ಡೆಬಿಟ್ ಕಾರ್ಡ್ ಕೊಡಿಸುವುದಾಗಿ ಹೇಳಿ ಸೂಕ್ಷ್ಮ ಮಾಹಿತಿ ಸಂಗ್ರಹಿಸಿ, ಹಣ ವಿತ್ಡ್ರಾ ಮಾಡಿಕೊಂಡಿದ್ದರು.
ರೈಲಿಗೆ ಸಿಲುಕಿ ಮಹಿಳೆ ಸಾವು ಶಿವಮೊಗ್ಗ: ಚಲಿಸುತ್ತಿದ್ದ ರೈಲಿಗೆ ಸಿಲುಕಿ ಮಹಿಳೆಯೊಬ್ಬರು ಮೃತಪಟ್ಟಿರುವ ಘಟನೆ ನಗರದ ಪಶುವೈದ್ಯಕೀಯ ಕಾಲೇಜು ಬಳಿ ಭಾನುವಾರ ನಡೆದಿದೆ. ಮೃತರನ್ನು ಕಾಶಿಪುರ ಬಡಾವಣೆ ನಿವಾಸಿ ನಾಗರತ್ನ ಬಾಯಿ (46) ಎಂದು ಗುರುತಿಸಲಾಗಿದೆ. ಹಳಿ ದಾಟುವ ವೇಳೆ ಮಹಿಳೆಗೆ ರೈಲು ಡಿಕ್ಕಿ ಹೊಡೆದಿತ್ತು. ಶಿವಮೊಗ್ಗ ರೈಲ್ವೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ವರದಿಯಾಗಿದೆ.
ಹೃದಯಾಘಾತ: ಎಸ್‌ಡಿಎ ಪರೀಕ್ಷೆ ಬರೆಯುತ್ತಿದ್ದ ವ್ಯಕ್ತಿ ಸಾವು ಬೆಂಗಳೂರು: ನಗರದ ಅನ್ನಪೂರ್ಣೇಶ್ವರಿ ನಗರ ಬಡಾವಣೆಯಲ್ಲಿರುವ ಎನ್ಆರ್ಐ ಕಾಲೇಜಿನಲ್ಲಿ ಪರೀಕ್ಷೆ ಬರೆಯುತ್ತಿದ್ದ ಅಭ್ಯರ್ಥಿಯೊಬ್ಬರು ಹೃದಯಾಘಾತದಿಂದ ಮೃತಪಟ್ಟಿರುವ ಘಟನೆ ಭಾನುವಾರ ವರದಿಯಾಗಿದೆ. ಮೃತರನ್ನು ಜಿ.ಸಂಪಿಗೆ ಕುಮಾರ್ (31) ಎಂದು ಗುರುತಿಸಲಾಗಿದೆ. ಪರೀಕ್ಷಾ ಕೊಠಡಿಯಲ್ಲಿ ಅಸ್ವಸ್ಥರಾಗಿ ಕುಸಿದುಬಿದ್ದ ಅವರನ್ನು ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲು ಯತ್ನಿಸಲಾಯಿತು. ಮಾರ್ಗಮಧ್ಯೆ ಅವರು ಮೃತಪಟ್ಟರು.
ಲಾರಿ ಡಿಕ್ಕಿ: ಬೈಕ್ ಸವಾರ ಸಾವು ಬೆಂಗಳೂರು: ಲಾರಿ ಡಿಕ್ಕಿಯಾಗಿ ಬೈಕ್ ಸವಾರನೊಬ್ಬ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಕೆಂಗಲ್ ಸಮೀಪದ ಕೆಂಪೋಹಳ್ಳಿ ಬಳಿ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಸಂಭವಿಸಿದೆ. ಮೃತರನ್ನು ಬಿಹಾರ ಮೂಲದ ಕೈಲಾಸ್ ಕುಮಾರ್ ಸಿಂಗ್ (38) ಎಂದು ಗುರುತಿಸಲಾಗಿದೆ.
ಇದನ್ನೂ ಓದಿ: ಆನೇಕಲ್ ಬಳಿಯ ಖಾಸಗಿ ರೆಸಾರ್ಟ್‌ನಲ್ಲಿ ರೇವ್ ಪಾರ್ಟಿ, ಡ್ರಗ್ಸ್ ನಶೆಯಲ್ಲಿದ್ದ 28 ಜನರನ್ನ ವಶಕ್ಕೆ ಪಡೆದ ಪೊಲೀಸರು
ಇದನ್ನೂ ಓದಿ: Crime News: ಪ್ರೀತಿಸಿದ ಹುಡುಗಿಯ ಮನೆಯಿಂದ ಕರೆಬಂತು ಎಂದು ಹೋದ ಯುವಕ; ಮುಂದಾಗಿದ್ದೆಲ್ಲ ದುರಂತ, ಯುವತಿ ಹೇಳಿದ್ದೇ ಬೇರೆ
(Crime News Banking Fraud in Nanjangud Women Died in Shivamogga)