ಸವಾರರೇ ಎಚ್ಚರ; ಬೈಕ್​ ಚಾಲನೆ ವೇಳೆ ನಂಬರ್​ ಪ್ಲೇಟ್​ ಮರೆಮಾಚಿದ್ರೆ ಬೀಳುತ್ತೆ ದಂಡ

| Updated By: ಕಿರಣ್ ಹನುಮಂತ್​ ಮಾದಾರ್

Updated on: Oct 18, 2023 | 9:06 PM

ಮಾಸ್ಕ್​ನಿಂದ ನಂಬರ್‌ ಪ್ಲೇಟ್ ಮರೆಮಾಚಿದ್ದ ಬಗ್ಗೆ ಬಿಟಿಪಿ ಪೇಜ್​ನಲ್ಲಿ ಫೋಟೋ ಶೇರ್ ಮಾಡಿದ್ದ  ಸಾರ್ವಜನಿಕರು ದೂರು ದಾಖಲಿಸಿದ್ದರು. ಬಳಿಕ ಎಚ್ಚೆತ್ತ ಮಹದೇವಪುರ ಸಂಚಾರಿ ಪೊಲೀಸರು, ಇದೀಗ ಬೈಕ್ ಪತ್ತೆ ಮಾಡಿ ಜಪ್ತಿ ಮಾಡಿದ್ದಾರೆ. ಜೊತೆಗೆ 15 ಸಾವಿರ ರೂ. ದಂಡ ಕೂಡ ವಿಧಿಸಿದ್ದಾರೆ.

ಸವಾರರೇ ಎಚ್ಚರ; ಬೈಕ್​ ಚಾಲನೆ ವೇಳೆ ನಂಬರ್​ ಪ್ಲೇಟ್​ ಮರೆಮಾಚಿದ್ರೆ ಬೀಳುತ್ತೆ ದಂಡ
ಬೈಕ್​ ನಂಬರ್​ ಪ್ಲೇಟ್ ಮರೆ ಮಾಚಿದ್ರೆ ಬೀಳುತ್ತೆ ದಂಡ
Follow us on

ಬೆಂಗಳೂರು, ಅ.18: ಬೈಕ್​ ಚಾಲನೆ ವೇಳೆ ನಂಬರ್​ ಪ್ಲೇಟ್(Number Plate)​ ಮರೆಮಾಚಿದ ಸವಾರನ ಮೇಲೆ ಎಫ್​ಐಆರ್​ (FIR) ದಾಖಲಾದ ಘಟನೆ ಮಹದೇವಪುರ ಸಂಚಾರಿ ಪೊಲೀಸ್​ ಠಾಣೆಯಲ್ಲಿ ನಡೆದಿದೆ. ಹೌದು, ಮಾಸ್ಕ್​ನಿಂದ ನಂಬರ್‌ ಪ್ಲೇಟ್ ಮರೆಮಾಚಿದ್ದ ಬಗ್ಗೆ ಬಿಟಿಪಿ ಪೇಜ್​ನಲ್ಲಿ ಫೋಟೋ ಶೇರ್ ಮಾಡಿದ್ದ  ಸಾರ್ವಜನಿಕರು ದೂರು ದಾಖಲಿಸಿದ್ದರು. ಬಳಿಕ ಎಚ್ಚೆತ್ತ ಮಹದೇವಪುರ ಸಂಚಾರಿ ಪೊಲೀಸರು, ಇದೀಗ ಬೈಕ್ ಪತ್ತೆ ಮಾಡಿ ಜಪ್ತಿ ಮಾಡಿದ್ದಾರೆ. ಅಷ್ಟೇ ಅಲ್ಲ, ಐಪಿಸಿ ಸೆಕ್ಷನ್ 417 ಹಾಗೂ 418ರ ಅಡಿ ಸವಾರ ಲಕ್ಷ್ಮಣ  ಎಂಬುವವರ ವಿರುದ್ಧ ಎಫ್ಐಆರ್ ದಾಖಲು ಮಾಡಿ, ಸಂಚಾರ ನಿಯಮಗಳನ್ನು ಉಲ್ಲಂಘಿಸಿದ್ದರಿಂದ ಬರೊಬ್ಬರಿ 15 ಸಾವಿರ ದಂಡ ವಿಧಿಸಿದ್ದಾರೆ.

ಕಾರಿನ ಸನ್​ರೂಫ್​ ಮೂಲಕ ನೋಡಿದ್ರೂ ಬೀಳುತ್ತೆ ದಂಡ

ಹೌದು, ಕಾರು ಸಂಚರಿಸುವಾಗ ಸನ್​ರೂಫ್​ ಮೂಲಕ ಹೊರಗಡೆ ನೋಡುವುದು ಮಕ್ಕಳಿಗೆ ಖುಷಿಯಾಗುತ್ತೆ. ಆದರೆ, ಹೀಗೆ ಚಲಿಸುವಾಗ ನೋಡುವುದು ಕಾನೂನು ಬಾಹಿರವಂತೆ ಎಂದು ಸಂಚಾರ ಮತ್ತು ರಸ್ತೆ ಸುರಕ್ಷತೆಯ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಅಲೋಕ್​ ಕುಮಾರ್​ ಹೇಳಿದ್ದರು. ಜೊತೆಗೆ ಈ ರೀತಿ ಕಾರು ಚಲಿಸುವಾಗ ಸನ್​ರೂಫ್​ನಿಂದ ನೋಡುವುದನ್ನು ನಿಷೇಧಿಸುವುದಕ್ಕೆ ಯಾವುದೇ ನಿಯಮವಿಲ್ಲ, ಆದರೆ, ಮೋಟಾರ್​ ವಾಹನ ಕಾಯ್ದೆಯಲ್ಲಿ ದಂಡ ವಿಧಿಸಲು ಅವಕಾಶವಿದೆ ಎಂದಿದ್ದರು.

ಇದನ್ನೂ ಓದಿ:1.3 ಲಕ್ಷಕ್ಕೂ ಹೆಚ್ಚಿನ ಹಳೆ ಪ್ರಕರಣಗಳಿಗೆ ಮೂರು ತಿಂಗಳಲ್ಲಿ ಮುಕ್ತಿ: ಪೊಲೀಸ್​ ಇಲಾಖೆ ದಿಟ್ಟ ಹೆಜ್ಜೆ

ಹೆಚ್ಎಸ್ಆರ್​ಪಿ ನಂಬರ್​ ಪ್ಲೇಟ್​ ಅಳವಡಿಕೆಗೆ ಡೆಡ್​ಲೈನ್​ ನೀಡಿದ್ದ ಸಾರಿಗೆ ಇಲಾಖೆ

ಇನ್ನು ಕಳೆದ ತಿಂಗಳಷ್ಟೇ  ಹಳೆಯ ವಾಹನಗಳಿಗೆ ಹೈ ಸೆಕ್ಯುರಿಟಿ ರಿಜಿಸ್ಟ್ರೇಷನ್ ನಂಬರ್ ಪ್ಲೇಟ್‌ ಅಳವಡಿಕೆಗೆ 2023ರ ನವೆಂಬರ್ 17 ಕೊನೆಯ ದಿನವಾಗಿದೆ. ಹೌದು, ಏಪ್ರಿಲ್​ 2019 ಕ್ಕಿಂತ ಮೊದಲು ನೋಂದಣಿ ಮಾಡಿಸಿಕೊಂಡ ದ್ವಿಚಕ್ರ ವಾಹನ, ತ್ರಿಚಕ್ರ ವಾಹನ, ಲಘು ಮೋಟಾರು ವಾಹನ, ಮಧ್ಯಮ ಮತ್ತು ಭಾರಿ ವಾಣಿಜ್ಯ ವಾಹನಗಳು, ಟ್ರ್ಯಾಕ್ಟರ್, ಪ್ರಯಾಣಿಕರ ಕಾರು ಸೇರಿ ಎಲ್ಲ ಹಳೆಯ ವಾಹನಗಳಿಗೆ ಈ ನಿಯಮ ಅನ್ವಯವಾಗಲಿದೆ. ಆದಷ್ಟು ಬೇಗ ಹೆಚ್​ಎಸ್​ಆರ್​​ಪಿ ನಂಬರ್ ಪ್ಲೇಟ್ (Number Plate) ಅಳವಡಿಸಿಕೊಳ್ಳದವರಿಗೆ ಸಾರಿಗೆ ಇಲಾಖೆ (Transport Department) ದಂಡ ವಿಧಿಸಲಾಗುತ್ತದೆ ಎಂದು ಸಾರಿಗೆ ಇಲಾಖೆ ಪತ್ರಿಕಾ ಪ್ರಕಟಣೆ ಹೊರಡಿಸಿತ್ತು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ