ಕೆಲಸ ಕೊಡಿಸುವುದಾಗಿ ವಂಚಿಸಿದ್ದ ಮೈಸೂರು ಸಂಚಾರಿ ಪೊಲೀಸ್ ಠಾಣೆಯ ಪಿಎಸ್ಐ ಅಶ್ವಿನಿ ಅಮಾನತು
545 ಪಿಎಸ್ಐ ನೇಮಕಾತಿ ಪರೀಕ್ಷೆಯಲ್ಲಿ ನಡೆದ ಅಕ್ರಮದಲ್ಲಿ ಭಾಗಿಯಾಗಿದ್ದ ಪಿಎಸ್ಐ ಅಶ್ವಿನಿ ಅವರನ್ನು ಮೈಸೂರು ನಗರ ಪೊಲೀಸ್ ಕಮಿಷನರ್ ಡಾ.ಚಂದ್ರಗುಪ್ತ ಅಮಾನತುಗೊಳಿಸಿದ್ದಾರೆ.
ಮೈಸೂರು: ಎಫ್ಡಿಎ (FDA) ಕೆಲಸ ಕೊಡಿಸುವುದಾಗಿ ವಂಚಿಸಿದ್ದ ಮಹಿಳಾ ಪಿಎಸ್ಐ (PSI) ಅಶ್ವಿನಿಯನ್ನು ಮೈಸೂರು (Mysore) ನಗರ ಪೊಲೀಸ್ ಕಮಿಷನರ್ ಡಾ.ಚಂದ್ರಗುಪ್ತ ಅಮಾನತುಗೊಳಿಸಿದ್ದಾರೆ. ಪಿಎಸ್ಐ ಅಶ್ವಿನಿ ಮೂಲತಃ ಜಮಖಂಡಿ ತಾಲೂಕಿನ ಆಲಗೂರು ನಿವಾಸಿಯಾಗಿದ್ದಾರೆ. ಇವರು ಮೈಸೂರಿನ ನರಸಿಂಹರಾಜ ಸಂಚಾರಿ ಪೊಲೀಸ್ ಠಾಣೆಯlಲ್ಲಿ ಪಿಎಸ್ಐ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಪಿಎಸ್ಐ ಅಶ್ವಿನಿ 2020ರಲ್ಲಿ ನಡೆದಿದ್ದ ಪರೀಕ್ಷೆ ವೇಳೆ, ಎಫ್ಡಿಎ ಕೆಲಸ ಕೊಡಿಸುವುದಾಗಿ, ಜಮಖಂಡಿ ತಾಲೂಕಿನ ಚಿಕ್ಕಲಕಿ ಗ್ರಾಮದ ಬಸವರಾಜ ಝಳಕಿ ಎಂಬುವನಿಗೆ ಹೇಳಿದ್ದರು.
ಕೆಲಸ ಕೊಡಿಸಲು ಬಸವರಾಜ ಸೋದರ ಸಂಗಮೇಶ್ ಜೊತೆಗೆ 15 ಲಕ್ಷಕ್ಕೆ ಡೀಲ್ ಮಾಡಿಕೊಂಡಿದ್ದರು. ಮುಂಗಡವಾಗಿ ಅಶ್ವಿನಿ ತಮ್ಮ ತಂದೆಯ ಅಕೌಂಟ್ ಮೂಲಕ 2 ಲಕ್ಷ ಪಡೆದಿದ್ದರು. ಈ ಸಂಬಂಧ ಹಣಕಾಸಿನ ವ್ಯವಹಾರದ ಬಗ್ಗೆ ಮಾತಾಡಿರುವ ಆಡಿಯೋ ವೈರಲ್ ಆಗಿತ್ತು. ಸದ್ಯ, ಪ್ರಕರಣದಲ್ಲಿ ಭಾಗಿಯಾಗಿದ್ದಾರೆಂದು ಪಿಎಸ್ಐ ಅಶ್ವಿನಿ ಅವರನ್ನು ಅಮಾನತುಗೊಳಿಸಿ ಮೈಸೂರು ನಗರ ಪೊಲೀಸ್ ಕಮಿಷನರ್ ಡಾ.ಚಂದ್ರಗುಪ್ತ ಆದೇಶ ಹೊರಡಿಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 3:06 pm, Mon, 19 September 22