ಬೆಂಗಳೂರಿನಲ್ಲಿ ಮಳೆ ಹಿನ್ನೆಲೆ ಫುಲ್ ಸೈಲೆಂಟ್ ಆದ ರಾಬರ್ಸ್ ಗ್ಯಾಂಗ್​! ಒಂದು ವಾರದಿಂದ ನೋ ಕೇಸ್​

ನಗರದ ವಿಭಾಗದಲ್ಲಿ ಪ್ರತಿನಿತ್ಯ 15-20 ರಾಬರಿ ಕೇಸ್ ವರದಿ ಆಗ್ತಾ ಇತ್ತು. ರಾತ್ರಿ 10 ಬಳಿಕವೇ ಒಂಟಿಯಾಗಿ ಬರೋರನ್ನು ಟಾರ್ಗೆಟ್ ಮಾಡಿ ರಾಬರಿ ಮಾಡಲಾಗುತ್ತಿತ್ತು.

ಬೆಂಗಳೂರಿನಲ್ಲಿ ಮಳೆ ಹಿನ್ನೆಲೆ ಫುಲ್ ಸೈಲೆಂಟ್ ಆದ ರಾಬರ್ಸ್ ಗ್ಯಾಂಗ್​! ಒಂದು ವಾರದಿಂದ ನೋ ಕೇಸ್​
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: ಗಂಗಾಧರ​ ಬ. ಸಾಬೋಜಿ

Updated on:Sep 11, 2022 | 11:43 AM

ಬೆಂಗಳೂರು: ನಗರದಲ್ಲಿ ಮಳೆ ಹಿನ್ನೆಲೆ ರಾಬರ್ಸ್ ಕೂಡ ಫುಲ್ ಸೈಲೆಂಟ್​ ಆಗಿರುವಂತ್ತೆ ಕಾಣುತ್ತಿದೆ. ಕಳೆದ ಒಂದು ವಾರದಲ್ಲಿ ನಗರದಲ್ಲಿ ಒಂದೂ ರಾಬರಿ ಕೇಸ್​ ರಿಪೋರ್ಟ್ ಆಗಿಲ್ಲ. ಪ್ರತಿನಿತ್ಯ ಡಿವಿಷನ್​ಗೆ ಎರಡು ಮೂರು ರಾಬರಿ ಕೇಸ್​ಗಳು ದಾಖಲಾಗುತ್ತಿತ್ತು. ಆದರೆ ವಾರದಿಂದ ಕಂಟ್ರೋಲ್ ರೂಂಗೆ ಒಂದೂ ರಾಬರಿ ಆಗಿರೋ ಮಾಹಿತಿ ಬಂದಿಲ್ಲ. ನಗರದ ವಿಭಾಗದಲ್ಲಿ ಪ್ರತಿನಿತ್ಯ 15-20 ರಾಬರಿ ಕೇಸ್ ವರದಿ ಆಗ್ತಾ ಇತ್ತು. ರಾತ್ರಿ 10 ಬಳಿಕವೇ ಒಂಟಿಯಾಗಿ ಬರೋರನ್ನು ಟಾರ್ಗೆಟ್ ಮಾಡಿ ರಾಬರಿ ಮಾಡಲಾಗುತ್ತಿತ್ತು. ಅದ್ರಲ್ಲೂ ಪ್ರಮುಖವಾಗಿ ಐಟಿ ಬಿಟಿ ಕಂಪನಿ ಹೆಚ್ಚಾಗಿರೋ ಏರಿಯಾಗಳಲ್ಲೇ ರಾಬರಿ ನಡೆಯುತ್ತಿತ್ತು. ಮಹದೇವಪುರ, ವೈಟ್ ಫೀಲ್ಡ್, ಮಾರತ್ ಹಳ್ಳಿ, ಬೆಳ್ಳಂದೂರು ಸೇರಿದಂತೆ ಹಲವು ಕಡೆಗಳಲ್ಲಿ ರಾಬರಿ ನಡೆಯುತ್ತಿತ್ತು. ಇತ್ತೀಚೆಗೆ ಈ ಬಗ್ಗೆ ಪೊಲೀಸರಿಗೆ ಸಾಕಷ್ಟು ದೂರುಗಳು ಬರ್ತಾ ಇತ್ತು. ಅದ್ರಲ್ಲೂ ಮಾಸ್ಟರ್ ಕಂಟ್ರೋಲ್​ಗೆ ಪ್ರತಿನಿತ್ಯ ದೂರುಗಳು ಬರ್ತಾ ಇತ್ತು. ಇದ್ರಿಂದ ರಾತ್ರಿ ವೇಳೆ ಪೊಲೀಸ್ ಹೊಯ್ಸಳ ಗಸ್ತನ್ನು ಹೆಚ್ಚಳ ಮಾಡಲಾಗಿತ್ತು.

ಆದರೆ ಕಳೆದ ಒಂದು ವಾರದಿಂದ ಮಳೆ ಬರುತ್ತಿದ್ದು, ಮಳೆಯಿಂದ ರಾಬರ್ಸ್ ಕೂಡ ಸೈಲೆಂಟ್ ಆಗಿದ್ದಾರೆ. ಮಳೆ ಹಿನ್ನಲೆ ಬಹುತೇಕ ಪ್ರದೇಶಗಳಲ್ಲಿ ರಾತ್ರಿವೇಳೆಯೂ  ಪೊಲೀಸರು ಬೀಡು ಬಿಟ್ಟಿದ್ದಾರೆ. ಪೊಲೀಸರ ಜೊತೆಗೆ ಸಿವಿಲ್ ಡಿಫೆನ್ಸ್, ಅಗ್ನಿಶಾಮಕ ಸಿಬ್ಬಂದಿ ಹಾಗೂ ಬಿಬಿಎಂಪಿ ಸಿಬ್ಬಂದಿ ಸಹ ರಸ್ತೆಯಲ್ಲಿ ಬೀಡು ಬಿಟ್ಟಿದ್ದಾರೆ. ಮಳೆ ಹಿನ್ನಲೆ ಜನರು ಸಹ ಯಾರೂ ಹೊರಗಡೆ ಓಡಾಟ‌ ಮಾಡ್ತಾನೂ‌ ಇರಲಿಲ್ಲ. ಇದರಿಂದ ಬೆಂಗಳೂರಲ್ಲಿ ರಾಬರಿ ಗ್ಯಾಂಗ್​ಗಳು ಫುಲ್ ಸೈಲೆಂಟ್ ಆಗಿವೆ.

ಮಲಪ್ರಭಾ ನದಿಗೆ ಹಾರಿ ವ್ಯಕ್ತಿಯೋರ್ವ ಆತ್ಮಹತ್ಯೆ

ಬಾಗಲಕೋಟೆ: ಮಲಪ್ರಭಾ ನದಿಗೆ ಹಾರಿ ವ್ಯಕ್ತಿಯೋರ್ವ ಆತ್ಮಹತ್ಯೆ ಮಾಡಿಕೊಂಡಿರುವಂತಹ ಘಟನೆ ಜಿಲ್ಲೆ ಬಾದಾಮಿ ತಾಲ್ಲೂಕಿನ ಪಟ್ಟದಕಲ್ಲು ಗ್ರಾಮದ ಬಳಿ ಮಲಪ್ರಭಾ ನದಿಯಲ್ಲಿ ನಡೆದಿದೆ. ನದಿಯಲ್ಲಿ ಮುಳುಗುತ್ತಿರುವ ವಿಡಿಯೋ ಸೆರೆ ಹಿಡಿಯಲಾಗಿದೆ. ಮುಳುಗುವ ವೇಳೆ ಈಜಾಡಿ ಮೇಲೇಳಲು ಯತ್ನಿಸಿದ್ದು, ಕೊನೆಗೆ ಮೇಲೆ ಬರಲು ಆಗದೇ ವ್ಯಕ್ತಿ ಮುಳುಗಿದ್ದಾನೆ. ಕೈ ಬಡಿಯುತ್ತಾ ನೀರಲ್ಲಿ ಈಜೋಕೆ ಯತ್ನ ವಿಫಲ. ಸೇತುವೆ ಮೇಲೆ ನಿಂತು ಜನರು ವಿಡಿಯೋ ಮಾಡಿದ್ದಾರೆ. ವ್ಯಕ್ತಿ ಯಾರೆಂದು ಇನ್ನೂ ತಿಳಿದು ಬಂದಿಲ್ಲ. ಈ ಬಗ್ಗೆ ಬಾದಾಮಿ ಠಾಣೆ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ.

ವಿದ್ಯುತ್​​ ಲೈನ್​​ ಸರಿಪಡಿಸಲು ಹೋಗಿ ಲೈನ್​​ಮ್ಯಾನ್​ ಸಾವು

ತುಮಕೂರು: ವಿದ್ಯುತ್ ವೈರ್ ಸರಿಪಡಿಸಲು ಹೋಗಿ ಲೈನ್ ಮ್ಯಾನ್ ಸಾವನ್ನಪ್ಪಿರುವಂತಹ ಘಟನೆ ಜಿಲ್ಲೆಯ ಗುಬ್ಬಿ ತಾಲ್ಲೂಕಿನ ತಿಪ್ಪೂರಿನಲ್ಲಿ ಅವಘಡ ಸಂಭವಿಸಿದೆ. ಮಹೇಶ್‌ಗೌಡ (40) ಮೃತಪಟ್ಟ ಲೈನ್ ಮ್ಯಾನ್. ಕೆರೆ ಮಧ್ಯೆ ನೀರಿನಲ್ಲಿ ಕಡಿದು ಬಿದ್ದಿದ್ದ ವಿದ್ಯುತ್ ತಂತಿ ಸರಿಪಡಿಸಲು ಹೋದಾಗ ಘಟನೆ ನಡೆದಿದೆ. ನೀರಿನಲ್ಲಿ ಈಜುತ್ತಾ ಸುಸ್ತಾಗಿ ಮುಳುಗಿ ಸಾವನ್ನಪ್ಪಿರೋ ಶಂಕೆ ವ್ಯಕ್ತವಾಗಿದೆ. ಗುಬ್ಬಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 11:34 am, Sun, 11 September 22

ನಿಯಂತ್ರಣ ಕಳೆದುಕೊಂಡು ರಸ್ತೆಯ ಬದಿಯಲ್ಲಿ ಕುಳಿತ ಐವರ ಮೇಲೆ ಹರಿದ ಕಾರು
ನಿಯಂತ್ರಣ ಕಳೆದುಕೊಂಡು ರಸ್ತೆಯ ಬದಿಯಲ್ಲಿ ಕುಳಿತ ಐವರ ಮೇಲೆ ಹರಿದ ಕಾರು
ನಾ ಡಿಸೋಜ ಅಂತಿಮ ದರ್ಶನ, ಅಂತ್ಯಕ್ರಿಯೆ ಬಗ್ಗೆ ಪುತ್ರ ನವೀನ್ ಮಾಹಿತಿ
ನಾ ಡಿಸೋಜ ಅಂತಿಮ ದರ್ಶನ, ಅಂತ್ಯಕ್ರಿಯೆ ಬಗ್ಗೆ ಪುತ್ರ ನವೀನ್ ಮಾಹಿತಿ
ನಡುರಸ್ತೆಯಲ್ಲಿ ವಿದ್ಯಾರ್ಥಿನಿಯ ಕತ್ತು ಹಿಸುಕಿ ಕೊಲೆ ಮಾಡಲು ಯತ್ನಿಸಿದ ಯುವಕ
ನಡುರಸ್ತೆಯಲ್ಲಿ ವಿದ್ಯಾರ್ಥಿನಿಯ ಕತ್ತು ಹಿಸುಕಿ ಕೊಲೆ ಮಾಡಲು ಯತ್ನಿಸಿದ ಯುವಕ
ಕುದುರೆಮುಖ ಅರಣ್ಯದಲ್ಲಿ ನಕ್ಸಲ್​ ನಾಯಕಿ ಸುಂದರಿ ವಾಸ
ಕುದುರೆಮುಖ ಅರಣ್ಯದಲ್ಲಿ ನಕ್ಸಲ್​ ನಾಯಕಿ ಸುಂದರಿ ವಾಸ
ಆಸ್ಟ್ರೇಲಿಯಾದಲ್ಲಿ RCB ದಾಂಡಿಗನ ಸಿಡಿಲಬ್ಬರ: ಸ್ಪೋಟಕ ಅರ್ಧಶತಕ
ಆಸ್ಟ್ರೇಲಿಯಾದಲ್ಲಿ RCB ದಾಂಡಿಗನ ಸಿಡಿಲಬ್ಬರ: ಸ್ಪೋಟಕ ಅರ್ಧಶತಕ
ಆಮರಣಾಂತ ಉಪವಾಸ ಸತ್ಯಾಗ್ರಹ, ಪ್ರಶಾಂತ್ ಕಿಶೋರ್ ಬಂಧನ
ಆಮರಣಾಂತ ಉಪವಾಸ ಸತ್ಯಾಗ್ರಹ, ಪ್ರಶಾಂತ್ ಕಿಶೋರ್ ಬಂಧನ
ಈ ವಾರದ ಟಾಸ್ಕ್​ ಗೆದ್ದರೆ ಸಿಗಲಿದೆ ಡೈರೆಕ್ಟ್​ ಫಿನಾಲೆಗೆ ಏರುವ ಟಿಕೆಟ್
ಈ ವಾರದ ಟಾಸ್ಕ್​ ಗೆದ್ದರೆ ಸಿಗಲಿದೆ ಡೈರೆಕ್ಟ್​ ಫಿನಾಲೆಗೆ ಏರುವ ಟಿಕೆಟ್
Daily Devotional: ಪಚ್ಚ ಕರ್ಪೂರದ ಮಹತ್ವ ಮತ್ತು ಉಪಯೋಗ ತಿಳಿಯಿರಿ
Daily Devotional: ಪಚ್ಚ ಕರ್ಪೂರದ ಮಹತ್ವ ಮತ್ತು ಉಪಯೋಗ ತಿಳಿಯಿರಿ
ಈ ರಾಶಿಯವರಿಗೆ ಇಂದು ಹಣಕಾಸಿನ ವಿಷಯದಲ್ಲಿ ಒಳ್ಳೆಯದಾಗುತ್ತೆ
ಈ ರಾಶಿಯವರಿಗೆ ಇಂದು ಹಣಕಾಸಿನ ವಿಷಯದಲ್ಲಿ ಒಳ್ಳೆಯದಾಗುತ್ತೆ
ಚೈತ್ರಾ ಕುಂದಾಪುರ ವಿಚಾರದಲ್ಲಿ ಉಲ್ಟಾ ಹೊಡೆತ ರಜತ್; ಸುದೀಪ್​ಗೂ ಇದು ಶಾಕ್
ಚೈತ್ರಾ ಕುಂದಾಪುರ ವಿಚಾರದಲ್ಲಿ ಉಲ್ಟಾ ಹೊಡೆತ ರಜತ್; ಸುದೀಪ್​ಗೂ ಇದು ಶಾಕ್