ಕುಡಿದ ಮತ್ತಿನಲ್ಲಿ ಪತ್ನಿಯ ನಂಬರ್ ಕೇಳಿದ ಸ್ನೇಹಿತನ ಮೇಲೆ ಹಲ್ಲೆ,‌ ರೌಡಿಶೀಟರ್ ಮನೆಗೆ ದಾಳಿ

ಕುಡಿದ ಮತ್ತಿನಲ್ಲಿ‌ ಆರಂಭವಾದ ಜಗಳ ರೌಡಿಶೀಟರ್​ ಮನೆ ಹಾನಿಗೊಳಿಸುವ ಹಂತಕ್ಕೆ ತಲುಪಿತು. ನಿನ್ನೆ ಪತ್ನಿಯ ನಂಬರ್ ಕೊಡು ಎಂದ ಸ್ನೇಹಿತನಿಗೆ ರೌಡಿಶೀಟರ್ ಹಲ್ಲೆ ನಡೆಸಿದ್ದಾನೆ. ಇದನ್ನು ಪ್ರಶ್ನಿಸಿ ಹಲ್ಲೆಗೊಳಗಾದ ವ್ಯಕ್ತಿ ಮತ್ತು ಸಹಚರರು ರೌಡಿಶೀಟರ್ ಮನೆಗೆ ಹೋಗಿ ಜಗಳ ನಡೆಸಿದ್ದಾರೆ. ಈ ವೇಲೆ ರೌಡಿಶೀಟರ್ ಚಾಕುವಿನಿಂದ ಹಲ್ಲೆ ನಡೆಸಿದಾಗ ರೌಡಿಶೀಟರ್ ಮನೆ ಮೇಲೆ ಗುಂಪು ದಾಳಿ ನಡೆಸಿ ಹಾನಿಗೊಳಿಸಲಾಗಿದೆ.

ಕುಡಿದ ಮತ್ತಿನಲ್ಲಿ ಪತ್ನಿಯ ನಂಬರ್ ಕೇಳಿದ ಸ್ನೇಹಿತನ ಮೇಲೆ ಹಲ್ಲೆ,‌ ರೌಡಿಶೀಟರ್ ಮನೆಗೆ ದಾಳಿ
ಕುಡಿದ ಮತ್ತಿನಲ್ಲಿ ಪತ್ನಿಯ ನಂಬರ್ ಕೇಳಿದ ಸ್ನೇಹಿತನಿಗೆ ಹಲ್ಲೆ ನಡೆಸಿದ ರೌಡಿಶೀಟರ್ ಮನೆ ಮೇಲೆ ದಾಳಿ
Updated By: Rakesh Nayak Manchi

Updated on: Sep 14, 2023 | 9:04 AM

ಬೆಂಗಳೂರು, ಸೆ.14: ಕುಡಿದ ಮತ್ತಿನಲ್ಲಿ‌ ಆರಂಭವಾದ ಜಗಳ ರೌಡಿಶೀಟರ್​ ಮನೆ ಹಾನಿಗೊಳಿಸುವ ಹಂತಕ್ಕೆ ತಲುಪಿದ ಘಟನೆ ನಗರದ (Bengaluru) ಚಂದ್ರಾಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ನಿನ್ನೆ ಪತ್ನಿಯ ನಂಬರ್ ಕೊಡು ಎಂದ ಸ್ನೇಹಿತನಿಗೆ ರೌಡಿಶೀಟರ್ ಹಲ್ಲೆ ನಡೆಸಿದ್ದಾನೆ. ಇದನ್ನು ಪ್ರಶ್ನಿಸಿ ಹಲ್ಲೆಗೊಳಗಾದ ವ್ಯಕ್ತಿ ಮತ್ತು ಸಹಚರರು ರೌಡಿಶೀಟರ್ ಮನೆಗೆ ಹೋಗಿ ಜಗಳ ನಡೆಸಿದ್ದಾರೆ. ಈ ವೇಲೆ ರೌಡಿಶೀಟರ್ ಚಾಕುವಿನಿಂದ ಹಲ್ಲೆ ನಡೆಸಿದಾಗ ರೌಡಿಶೀಟರ್ ಮನೆ ಮೇಲೆ ಗುಂಪು ದಾಳಿ ನಡೆಸಿ ಹಾನಿಗೊಳಿಸಲಾಗಿದೆ.

ರಮೇಶ್ ಮತ್ತು ರೌಡಿಶೀಟರ್ ಕೆಂಪೇಗೌಡ ಅಲಿಯಾಸ್ ಕೆಂಪ ಸ್ನೇಹಿತರು. ಅದರಂತೆ, ಬಾರ್​ಗೆ ಹೋಗಿದ್ದ ಇಬ್ಬರು ಮದ್ಯ ಸೇವನೆ ಮಾಡಿದ್ದಾರೆ. ಈ ವೇಳೆ ಕುಡಿದ ನಶೆಯಲ್ಲಿದ್ದ ರಮೇಶ್, ನಿನ್ನ ಪತ್ನಿಯ ನಂಬರ್ ಕೊಡು ಎಂದು ಕೆಂಪನಿಗೆ ಹೇಳಿದ್ದಾನೆ. ಇದರಿಂದ ಕೋಪಗೊಂಡ ಕೆಂಪ ರಸ್ತೆಯಲ್ಲೇ ಹಿಗ್ಗಾಮುಗ್ಗಾ ಥಳಿಸಿ ಮನೆಗೆ ಹೋಗಿದ್ದಾನೆ.

ಇದನ್ನೂ ಓದಿ: ಬೆಂಗಳೂರು: ಬಯಸದೇ ಬಂದ ಭಾಗ್ಯ, ಹತ್ತೇ ಸೆಕೆಂಡ್​ನಲ್ಲಿ ಲಕ್ಷಾಧಿಪತಿಯಾದ ಯುವಕ ಈಗ ಪೊಲೀಸರ ಕೈಗೆ ಸಿಕ್ಕ

ಹಲ್ಲೆಯಿಂದ ಕೆಂಪನ ಮೇಲೆ ರಮೇಶ್ ದ್ವೇಷಕ್ಕೆ ಬಿದ್ದಿದ್ದಾನೆ. ಅದರಂತೆ ತನ್ನ ಸಹಚರರಾದ ಮಂಜುನಾಥ್, ಜವರೇಗೌಡ, ಕೃಷ್ಣಮೂರ್ತಿ ಸೇರಿದಂತೆ 10ಕ್ಕೂ ಹೆಚ್ಚು ಮಂದಿಯೊಂದಿಗೆ ಹೊಯ್ಸಳ ನಗರದಲ್ಲಿರುವ ಕೆಂಪನ ಮನೆಗೆ ಹೋದ ರಮೇಶ್ ಕೆಂಪನನ್ನು ಪ್ರಶ್ನಿಸಿದ್ದಾನೆ. ಈ ವೇಳೆ ಜಗಳ ನಡೆದಿದ್ದು, ರಮೇಶ್ ಮತ್ತಿತರರ ಮೇಲೆ ಕೆಂಪ ಚಾಕುವಿನಿಂದ ಇರಿದಿದ್ದಾನೆ.

ಇದೇ ವೇಳೆ ರಮೇಶ್ ಮತ್ತು ಸಹಚರರು ಕೆಂಪನ ಮನೆ ಮೇಲೆ ಕಲ್ಲು ತೂರಾಟ ನಡೆಸಿದ್ದು, ಕಿಟಕಿ ಗಾಜುಗಳು ಪುಡಿ‌ ಮಾಡಿ, ಮನೆ ಬಾಗಿಲು ಮುರಿದು ಹಾಕಿದ್ದಾರೆ. ಘಟನೆ ಸಂಬಂಧ ಚಂದ್ರಾಲೇಔಟ್ ಠಾಣಾ ಪೊಲೀಸರು ಕೆಂಪನನ್ನು ಬಂಧಿಸಿದ್ದಾರೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:04 am, Thu, 14 September 23