ಬೆಂಗಳೂರು: ರಾಜ್ಯದಲ್ಲಿ ಅಸೆಂಬ್ಲಿ ಚುನಾವಣೆಗಳು (Karnataka Assembly Elections 2023) ಘೋಷಣೆಗೊಂಡಿವೆ. ಈ ಸಂದರ್ಭದಲ್ಲಿ ಅಧಿಕಾರಿಗಳೇ ರಾಜ್ಯದ ಚುಕ್ಕಾಣಿ ಹಿಡಿದು ಮುನ್ನಡೆಸುವುದು ಸಾಮಾನ್ಯ. ಇಂತಹ ಸಂದರ್ಭದಲ್ಲಿ ಅಧಿಕಾರಿಗಳ ಕಾರುಬಾರು ಮೇಲುಗೈ ಆಗಿರುತ್ತದೆ. ದೊಡ್ಡಮಟ್ಟದ ಐಎಎಸ್ ಅಧಿಕಾರಿಗೂ ಇದರ ಬಿಸಿ ತಟ್ಟಿದೆ. ಪ್ರಸ್ತುತ ನಗರಾಭಿವೃದ್ಧಿ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ (ACS) ಮತ್ತು ಬಿಬಿಎಂಪಿ ಆಡಳಿತಗಾರ ರಾಕೇಶ್ ಸಿಂಗ್ ಅವರು ಕೆಳಹಂತದ (RTO) ಅಧಿಕಾರಿಯೊಬ್ಬರು ಅತ್ಯುತ್ಸಾಹದಲ್ಲಿ ಕೈಗೊಂಡಿರುವ ಕ್ರಮದಿಂದ ಕಸಿವಿಸಿ ಅನುಭವಿಸಿದ್ದಾರೆ. ಅದೂ ನಡುರಸ್ತೆಯಲ್ಲಿ ಇಂತಹ ಅಧಿಕ ಪ್ರಸಂಗವೊಂದು ಒದಗಿಬಂದಿರುವುದು ಅವರಿಗೆ ಮುಜುಗುರ ತಂದಿದೆ.
ರಾಜ್ಯಾದ್ಯಂತ ಆರ್ಟಿಓ ಅಧಿಕಾರಿಗಳು ಎಲೆಕ್ಷನ್ ಡ್ಯೂಟಿಗಾಗಿ ಸರ್ಕಾರಿ ವಾಹನಗಳನ್ನು (Car) ವಶಕ್ಕೆ ಪಡೆದುಕೊಳ್ಳುತ್ತಿದ್ದಾರೆ. ಆರ್ಟಿಓ ಅಧಿಕಾರಿಗಳು ಮತ್ತು ಪೊಲೀಸರು ಈಗಾಗಲೇ ಸುಮಾರು 450 ಸರ್ಕಾರಿ ವಾಹನಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಇಂದು ಬುಧವಾರ ಕೆ.ಆರ್. ಸರ್ಕಲ್ ನಲ್ಲಿ ಮೇಲಿನ ಘಟನೆ ನಡೆದಿದೆ.
Also Read:
ಈ ವೇಳೆ ನಗರಾಭಿವೃದ್ಧಿ ಇಲಾಖೆಯ ಅಪಾರ ಮುಖ್ಯ ಕಾರ್ಯದರ್ಶಿ ಮತ್ತು ಬಿಬಿಎಂಪಿ ಆಡಳಿತಗಾರ ರಾಕೇಶ್ ಸಿಂಗ್ ಅವರು ಆರ್ಟಿಓ ಅಧಿಕಾರಿ ವಿರುದ್ಧ ಸಿಡಿಮಿಡಿಗೊಂಡಿದ್ದಾರೆ. ನನ್ನ ವಾಹನವನ್ನು ವಶಕ್ಕೆ ಪಡೆದುಕೊಳ್ಳಿ. ನಾನು ನಿಮ್ಮದೇ ಆರ್ಟಿಓ ಜೀಪ್ ನಲ್ಲಿ ಹೋಗ್ತೀನಿ ಎಂದು ರಾಕೇಶ್ ಗರಂ ಆಗಿದ್ದಾರೆ. ಇದಕ್ಕೆ ಆರ್ಟಿಓ ಅಧಿಕಾರಿ ಕೈ ಮುಗಿದು, ನಿಮ್ಮ ಕಾರು ವಶಕ್ಕೆ ಪಡೆದಿಲ್ಲ ಎಂದು ಸಮಜಾಯಿಷಿ ನೀಡತೊಡಗಿದ್ದಾರೆ. ನಿಮ್ಮ ಕಾರು ಎಂದು ನಮಗೆ ಗೊತ್ತಾಗಿಲ್ಲ ಸಾರ್. ದಯವಿಟ್ಟು ನೀವು ಹೋಗಿ ಸರ್ ಎಂದು ಆರ್ಟಿಓ ಅಧಿಕಾರಿ ಕೈ ಮುಗಿದು ಕೇಳಿಕೊಂಡಿದ್ದಾರೆ.
ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ