ಬೆಂಗಳೂರಿನಲ್ಲಿ ಅನ್ಯ ರಾಜ್ಯ ರಿಜಿಸ್ಟ್ರೇಷನ್ ಕಾರುಗಳ ವಿರುದ್ಧ ಸಮರ ಸಾರಿದ ಆರ್​ಟಿಓ

| Updated By: ರಮೇಶ್ ಬಿ. ಜವಳಗೇರಾ

Updated on: Dec 20, 2024 | 8:34 PM

ಐಷಾರಾಮಿ ಕಾರುಗಳನ್ನು ಪಾಂಡಿಚೇರಿಯಿಂದಲೇ ಖರೀದಿಸಿ ಬೆಂಗಳೂರಿಗೆ ತರುಲಾಗುತ್ತಿದ್ದು, ಇತ್ತೀಚಿಗೆ ರಾಜಧಾನಿ ಬೆಂಗಳೂರಿನಲ್ಲಿ ಐಷಾರಾಮಿ ಕಾರುಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ಇದೆ ಇದಕ್ಕೆ ಕಾರಣ ಪಾಂಡಿಚೇರಿ ಅಂತೆ. ಅರೇ ಪಾಂಡಿಚೇರಿಗೂ ಬೆಂಗಳೂರಿನಲ್ಲಿ ಐಷಾರಾಮಿ ಕಾರುಗಳ ಸಂಖ್ಯೆ ಹೆಚ್ಚಳಕ್ಕೂ ಏನ್ ಸಂಬಂಧ ಅಂತೀರಾ? ಸಂಬಂಧ ಇದ್ದು, ಪಿವೈ ರಿಜಿಸ್ಟ್ರೇಷನ್ ವಾಹನಗಳ ವಿರುದ್ಧ ಸಾರಿಗೆ ಇಲಾಖೆ ಸಮರ ಸಾರಿದ್ದಾರೆ.

ಬೆಂಗಳೂರಿನಲ್ಲಿ ಅನ್ಯ ರಾಜ್ಯ ರಿಜಿಸ್ಟ್ರೇಷನ್ ಕಾರುಗಳ ವಿರುದ್ಧ ಸಮರ ಸಾರಿದ ಆರ್​ಟಿಓ
Py Registration Car
Follow us on

ಬೆಂಗಳೂರು, (ಡಿಸೆಂಬರ್ 20): ಬೆಂಗಳೂರಲ್ಲಿ ಪ್ರತಿದಿನ ಕೋಟ್ಯಂತರ ರುಪಾಯಿ ಬೆಲೆಬಾಳುವ ಐಷಾರಾಮಿ ಟಾಪ್ ಎಂಡ್ ಹೊಸ ಕಾರುಗಳು ರೋಡಿಗಿಳಿಯುತ್ತಿವೆ. ಆದರೆ ಇದ್ಯಾವುದು ನಮ್ಮ ರಾಜ್ಯದ KA ರಿಜಿಸ್ಟ್ರೇಷನ್ ದಲ್ಲ ಬದಲಿಗೆ ಎಲ್ಲಾ ಬೇರೆ ಬೇರೆ ರಾಜ್ಯದ ಕಾರುಗಳು. ವಿಶೇಷವಾಗಿ PY ರಿಜಿಸ್ಟ್ರೇಷನ್ ಪಾಂಡಿಚೇರಿಯ ಕಾರುಗಳು. ಈ ಐಷಾರಾಮಿ ಕಾರುಗಳನ್ನು ‌ಖರೀದಿ‌ ಮಾಡಲು ನಗರದಲ್ಲಿ ಕೋಟಿ ಕುಳಗಳು ಪಾಂಡಿಚೇರಿಗೆ ಹೋಗುತ್ತಿದ್ದಾರೆ. ಅಲ್ಲಿಂದಲೇ ಏಕೆ ಕಾರು ಖರೀದಿ ಮಾಡುತ್ತಾರೆ ಎಂದರೆ ನಮ್ಮ ‌ರಾಜ್ಯದಲ್ಲಿ 20 ಲಕ್ಷ ರುಪಾಯಿ ‌ಮೇಲಿನ ಐಷಾರಾಮಿ ‌ಕಾರು ಖರೀದಿ ಮಾಡಿದ್ರೆ 20% ರಷ್ಟು ‌ಟ್ಯಾಕ್ಸ್ ಪಾವತಿ ಮಾಡಬೇಕು. ಆದರೆ ಪಾಂಡಿಚೇರಿಯಲ್ಲಿ ಕೇವಲ 5% ರಷ್ಟು ಮಾತ್ರ ಟ್ಯಾಕ್ಸ್ ಪಾವತಿ ‌ಮಾಡಬೇಕು. ಹಾಗಾಗಿ ಹಣ ಉಳಿಸಲು ಪಾಂಡಿಚೇರಿಯಿಂದ ಕಾರುಗಳನ್ನು ಖರೀದಿ ಮಾಡಿ ತಂದು ಇಲ್ಲಿ ಬಳಕೆ ಮಾಡುತ್ತಿದ್ದಾರೆ.

ಪಾಂಡಿಚೇರಿಯ ಕಾರುಗಳನ್ನು ಇಲ್ಲಿಗೆ ತರಲು ಕಿಲಾಡಿಗಳು ಅಲ್ಲಿನ ನಕಲಿ ‌ದಾಖಲೆಗಳನ್ನು ನೀಡಿ, ಕಾರು ಖರೀದಿ ಮಾಡುತ್ತಿರುವುದು ಗೊತ್ತಾಗಿದ್ಯಂತೆ. ಇನ್ನೂ ಬೆಂಗಳೂರು ನಗರದಲ್ಲೇ ಒಂದು ಸಾವಿರಕ್ಕೂ ಹೆಚ್ಚು ಪಾಂಡಿಚೇರಿಯ ಐಷಾರಾಮಿ ಕಾರುಗಳಿದ್ದು, ಇದರಿಂದ ಸಾರಿಗೆ ಇಲಾಖೆಗೆ ಸಾವಿರಾರು ಕೋಟಿ ರುಪಾಯಿ ತೆರಿಗೆ ವಂಚನೆ ಆಗ್ತಿದ್ಯಂತೆ. ಇದು ಆರ್​ಟಿಓ ನಿಯಮಗಳ ಪ್ರಕಾರ ತಪ್ಪು. ಹಾಗಾಗಿ ಇಂದಿನಿಂದ ಅಂತಹ ಕಾರುಗಳನ್ನು ಸೀಜ್ ಮಾಡಿ ಟ್ಯಾಕ್ಸ್ ‌ಪಾವತಿ ಮಾಡಿಸುತ್ತೇವೆ ಎಂದು ಅಡಿಷನಲ್ ಕಮೀಷನರ್‌ ಹೇಳಿದ್ದಾರೆ.

ಇದನ್ನೂ ಓದಿ: ಫ್ಯಾನ್ಸಿ ನಂಬರ್ ಹರಾಜಿನಿಂದ ಸರ್ಕಾರಕ್ಕೆ ಬರೋಬ್ಬರಿ 80 ಲಕ್ಷ ರೂಪಾಯಿ ಆದಾಯ: 0001 ನಂಬರ್ 4.35 ಲಕ್ಷಕ್ಕೆ ಹರಾಜು

ಇನ್ನೂ ಇಂದು ಬೆಳಗ್ಗೆಯಿಂದಲೇ PY ರಿಜಿಸ್ಟ್ರೇಷನ್ ಅನಧಿಕೃತ ಕಾರುಗಳ ವಿರುದ್ಧ ಆರ್​ಟಿಓ ಅಧಿಕಾರಿಗಳು ಕಾರ್ಯಾಚರಣೆ ಆರಂಭ ಮಾಡಿದ್ದು, ನೂರಾರು ಕಾರುಗಳನ್ನು ತಪಾಸಣೆ ಮಾಡಿದ್ರು. ಈ ವೇಳೆ ಬೇರೆ ಬೇರೆ ರಾಜ್ಯದ ಕಾರುಗಳು  ಟ್ಯಾಕ್ಸ್ ಪಾವತಿ ಮಾಡದೆ ಬೆಂಗಳೂರಿನಲ್ಲಿ ಸಂಚಾರ ಮಾಡುತ್ತಿದ್ದ ಸಾಕಷ್ಟು ಕಾರುಗಳನ್ನು ಸೀಜ್ ಮಾಡಿ ಲಕ್ಷಾಂತರ ‌ರುಪಾತಿ ದಂಡ ಹಾಕಿದ್ದಾರೆ.

ಈ ವೇಳೆ ಮಾತನಾಡಿದ ಕಾರು ಮಾಲೀಕರು, ಪಾಂಡಿಚೇರಿಯಿಂದ ಕಾರು ಖರೀದಿ ಮಾಡುವ ಮೂಲಕ ರಾಜ್ಯದ ಬೊಕ್ಕಸಕ್ಕೆ ಕೋಟ್ಯಂತರ ರುಪಾಯಿ ನಷ್ಟ ಉಂಟು ಮಾಡುತ್ತಿದ್ದರು. ಇಂತಹ ಕಾರು ಮಾಲೀಕರ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕು ಎಂದಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ