ಇನ್ಮುಂದೆ ಬೆಂಗಳೂರು ಟ್ರಾಫಿಕ್ ಬಗ್ಗೆ ಮೊಬೈಲ್ನಲ್ಲೇ ತಿಳಿಯಿರಿ: ಹೇಗೆ ಗೊತ್ತಾ?
ಬೆಂಗಳೂರು ನಗರ ಸಂಚಾರ ಪೊಲೀಸ್ ಇಲಾಖೆ ಸಾರ್ವಜನಿಕರಿಗೆ ಹಳೆ ವೆಬ್‌ಸೈಟ್ ಅನ್ನು ಹೊಸದಾಗಿ ಲೋಂಚ್ ಮಾಡಿದೆ. ಈ ವೆಬ್‌ಸೈಟ್ ಮೂಲಕ ಸಂಚಾರ ಉಲ್ಲಂಘನೆಗಳನ್ನು ವರದಿ ಮಾಡುವುದು, ದೂರುಗಳನ್ನು ದಾಖಲಿಸುವುದು ಮತ್ತು ನೈಜ ಸಮಯದ ಅಪ್‌ಡೇಟ್‌ಗಳನ್ನು ಪಡೆಯುವುದು ಸುಲಭವಾಗಿದೆ. ಸ್ಮಾರ್ಟ್ ವೈಶಿಷ್ಟ್ಯಗಳನ್ನು ಹೊಂದಿರುವ ಈ ವೆಬ್‌ಸೈಟ್ ಸಂಚಾರ ನಿರ್ವಹಣೆ, ನಿಯಮ ಜಾರಿ ಮತ್ತು ರಸ್ತೆ ಸುರಕ್ಷತೆಗೆ ಸಹಾಯ ಮಾಡುತ್ತದೆ.
ಬೆಂಗಳೂರು, ಡಿಸೆಂಬರ್ 20: ಬೆಂಗಳೂರು ನಗರ ಸಂಚಾರ ಪೊಲೀಸ್ ಇಲಾಖೆ (Bengaluru Traffic Police), ಸಾರ್ವಜನಿಕರ ಪ್ರಯಾಣವನ್ನು ಮತ್ತಷ್ಟು ಸುಗಮಗೊಳಿಸುವ ನಿಟ್ಟಿನಲ್ಲಿ ನೂತನ ವೆಬ್ಸೈಟ್ನ್ನು ಸಿದ್ಧಪಡಿಸಿದೆ. ಆ ಮೂಲಕ ಬೆರಳ ತುದಿಯಲ್ಲಿ ಒಂದೇ ಕ್ಲಿಕ್‌ನಲ್ಲಿ ಸಂಚಾರ ಉಲ್ಲಂಘನೆಗಳನ್ನು ವರದಿ ಮಾಡಿ, ದೂರನ್ನು ದಾಖಲಿಸಿ ಮತ್ತು ನೈಜ-ಸಮಯದಲ್ಲಿ ಟ್ರಾಫಿಕ್ ಕುರಿತಾದ ಅಪ್ ಡೇಟ್ಗಳನ್ನು ಪಡೆಯಬಹುದಾಗಿದೆ. ಸ್ಮಾರ್ಟ್ ವೈಶಿಷ್ಟ್ಯಗಳನ್ನು ಹೊಂದಿರುವ ನೂತನ ವೆಬ್‌ಸೈಟ್, ಸಂಚಾರ ನಿರ್ವಹಣೆ, ನಿಯಮ ಜಾರಿ ಮತ್ತು ರಸ್ತೆ ಸುರಕ್ಷತೆ ವಿಭಾಗಗಳನ್ನು ಹೊಂದಿದೆ. ಜೊತೆಗೆ ಸಂಚಾರ ಉಲ್ಲಂಘನೆ ವರದಿ, ಸಂಚಾರಕ್ಕೆ ಸಂಬಂಧಿಸಿದ ದೂರು, ಸಂಚಾರ ಸಲಹೆ ಮತ್ತು ಸಂಚಾರ ದಂಡ ಪಾವತಿಯನ್ನು ಸುಲಭವಾಗಿ ಹುಡುಕಲು ಅನುಕೂಲಕರವಾಗುವಂತೆ ಸಿದ್ಧಪಡಿಸಲಾಗಿದೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Latest Videos