ಹಾಲನೂರು ಲೇಪಾಕ್ಷಿ ನೇತೃತ್ವದಲ್ಲಿ ಸುದ್ದಿಗೋಷ್ಠಿ; ಸಿಎಂಗೆ ಗೌರವಕೊಟ್ಟು ಶಾಲೆ ತೆರೆಯಲು ಮತ್ತಷ್ಟು ಕಾಲಾವಕಾಶ ನೀಡಲು ರುಪ್ಸಾ ನಿರ್ಧಾರ

| Updated By: ಆಯೇಷಾ ಬಾನು

Updated on: Aug 01, 2021 | 2:39 PM

ಶಾಲೆ(School) ಆರಂಭಿಸುವಂತೆ ಜುಲೈ 21ರವರೆಗೆ ರೂಪ್ಸಾ(RUPSA) ಡೆಡ್ ಲೈನ್ ನೀಡಿತ್ತು. ಆದ್ರೆ ಡೆಡ್ ಲೈನ್ ಮುಗಿದರು ಶಿಕ್ಷಣ ಇಲಾಖೆ ಶಾಲೆ ಆರಂಭಕ್ಕೆ ಅನುಮತಿ ನೀಡಲಿಲ್ಲ. ಈ ಹಿನ್ನೆಲೆಯಲ್ಲಿ ನಾಳೆಯಿಂದ ಶಾಲೆಗಳು ಆರಂಭದ ಕುರಿತು ರೂಪ್ಸಾ ಅಧ್ಯಕ್ಷ ಹಾಲನೂರು ಲೇಪಾಕ್ಷಿ ನೇತೃತ್ವದಲ್ಲಿ ಪತ್ರಿಕಾಗೋಷ್ಠಿ ನಡೆದಿದೆ.

ಹಾಲನೂರು ಲೇಪಾಕ್ಷಿ ನೇತೃತ್ವದಲ್ಲಿ ಸುದ್ದಿಗೋಷ್ಠಿ; ಸಿಎಂಗೆ ಗೌರವಕೊಟ್ಟು ಶಾಲೆ ತೆರೆಯಲು ಮತ್ತಷ್ಟು ಕಾಲಾವಕಾಶ ನೀಡಲು ರುಪ್ಸಾ ನಿರ್ಧಾರ
ಸಂಗ್ರಹ ಚಿತ್ರ
Follow us on

ಬೆಂಗಳೂರು: ಶಾಲೆಗಳನ್ನು ಆರಂಭಿಸಲು ಸರ್ಕಾರ ಅನುಮತಿ ನೀಡದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದ ವಿರುದ್ಧ ಖಾಸಗಿ ಶಿಕ್ಷಣ ಸಂಸ್ಥೆಗಳು ಸಿಡಿದೆದ್ದಿವೆ. ರುಪ್ಸಾ ಅಧ್ಯಕ್ಷ ಹಾಲನೂರು ಲೇಪಾಕ್ಷಿ ನೇತೃತ್ವದಲ್ಲಿ ನಗರದ ಪ್ರೆಸ್ ಕ್ಲಬ್ನಲ್ಲಿ ಸುದ್ದಿಗೋಷ್ಠಿ ನಡೆಸಿದೆ.

ಶಾಲೆ(School) ಆರಂಭಿಸುವಂತೆ ಜುಲೈ 21ರವರೆಗೆ ರೂಪ್ಸಾ(RUPSA) ಡೆಡ್ ಲೈನ್ ನೀಡಿತ್ತು. ಆದ್ರೆ ಡೆಡ್ ಲೈನ್ ಮುಗಿದರು ಶಿಕ್ಷಣ ಇಲಾಖೆ ಶಾಲೆ ಆರಂಭಕ್ಕೆ ಅನುಮತಿ ನೀಡಲಿಲ್ಲ. ಈ ಹಿನ್ನೆಲೆಯಲ್ಲಿ ನಾಳೆಯಿಂದ ಶಾಲೆಗಳು ಆರಂಭದ ಕುರಿತು ರೂಪ್ಸಾ ಅಧ್ಯಕ್ಷ ಹಾಲನೂರು ಲೇಪಾಕ್ಷಿ ನೇತೃತ್ವದಲ್ಲಿ ಪತ್ರಿಕಾಗೋಷ್ಠಿ ನಡೆದಿದೆ. ಖಾಸಗಿ ಶಿಕ್ಷಣ ಸಂಸ್ಥೆಗಳು ರಾಜ್ಯದಲ್ಲಿ ಶಾಲೆಗಳ ಆರಂಭಕ್ಕೆ ಮುಂದಾಗಿವೆ.

ಪರ್ಯಾಯ ಮಾರ್ಗದಿಂದಾದರೂ ಶಾಲೆ ಆರಂಭ ಮಾಡಬೇಕಿದೆ. ಶಿಕ್ಷಕರಿಗೆ ಲಸಿಕೆ ನೀಡಿದ್ದೀವಿ. ವಿದ್ಯಾಗಮ ಹಾಗೂ ಪಾಳಿ ಪದ್ದತಿಯಲ್ಲಿ ಶಾಲೆ ಆರಂಭ ಮಾಡುವಂತೆ ಮನವಿ ಇಟ್ಟಿದ್ದೀವಿ ಎಂದು ರೂಪ್ಸಾ ಅಧ್ಯಕ್ಷ ಹಾಲನೂರು ಲೇಪಾಕ್ಷಿ ಹೇಳಿಕೆ ನೀಡಿದ್ದಾರೆ.

ರುಪ್ಸಾ-ರಾಜ್ಯ ಅನುದಾನರಹಿತ ಖಾಸಗಿ ಶಾಲೆಗಳ ಒಕ್ಕೂಟ ಹಲವು ರಾಜ್ಯಗಳಲ್ಲಿ ಈಗಾಗಲೇ ಶಾಲೆ ಆರಂಭಿಸಲು ನಿರ್ಧಾರ ಮಾಡಿದೆ. ನಮ್ಮ ಸರ್ಕಾರ ಮಾತ್ರ ಶಾಲೆ ಆರಂಭಕ್ಕೆ ನಿರ್ಧಾರ ಮಾಡ್ತಿಲ್ಲ. ಸಿಎಂ ಕರೆ ಮಾಡಿ ಸಭೆ ನಡೆಸಿ ಚರ್ಚಿಸಲು ಮನವಿ ಮಾಡಿದ್ದಾರೆ. ನಾಳೆಯಿಂದ ಶಾಲೆ ಆರಂಭ ಮಾಡಲು ನಿರ್ಧಾರ ಮಾಡಲಾಗಿತ್ತು. ಶಾಲಾ ಆರಂಭದ ಬಗ್ಗೆ ಚರ್ಚಿಸಲು ಸಿಎಂ ಕರೆ ನೀಡಿದ್ದಾರೆ. ಸಿಎಂ ಭೇಟಿ ಮಾಡಿ ಶಾಲೆ ಆರಂಭದ ಬಗ್ಗೆ ಚರ್ಚೆ ಮಾಡುತ್ತೇವೆ. ಶಾಲೆಗಳ ಆರಂಭದ ಬಗ್ಗೆ ದುಡುಕಿನ ನಿರ್ಧಾರ ಬೇಡ ಅಂತಿದ್ದಾರೆ. ಸಿಎಂಗೆ ಗೌರವಕೊಟ್ಟು ಮತ್ತಷ್ಟು ಕಾಲಾವಕಾಶ ನೀಡಲು ನಿರ್ಧಾರ ಮಾಡಿದ್ದೇವೆ ಎಂದು ಸುದ್ದಿಗೋಷ್ಠಿಯಲ್ಲಿ ರುಪ್ಸಾ ಅಧ್ಯಕ್ಷ ಹಾಲನೂರು ಲೇಪಾಕ್ಷಿ ಹೇಳಿದ್ರು.

ಇದನ್ನೂ ಓದಿ: ಸರ್ಕಾರದ ವಿರುದ್ಧ ಸಿಡಿದೆದ್ದ ಖಾಸಗಿ ಶಿಕ್ಷಣ ಸಂಸ್ಥೆಗಳು; ಅನುಮತಿ ಇಲ್ಲದಿದ್ದರೂ ಆಗಸ್ಟ್ 2ರಿಂದ ಶಾಲೆ ತೆರೆಯಲು ಮುಂದಾದ ರುಪ್ಸಾ