ಸರ್ಕಾರದ ವಿರುದ್ಧ ಸಿಡಿದೆದ್ದ ಖಾಸಗಿ ಶಿಕ್ಷಣ ಸಂಸ್ಥೆಗಳು; ಅನುಮತಿ ಇಲ್ಲದಿದ್ದರೂ ಆಗಸ್ಟ್ 2ರಿಂದ ಶಾಲೆ ತೆರೆಯಲು ಮುಂದಾದ ರುಪ್ಸಾ

ಸರ್ಕಾರದ ವಿರುದ್ಧ ಸಿಡಿದೆದ್ದ ಖಾಸಗಿ ಶಿಕ್ಷಣ ಸಂಸ್ಥೆಗಳು; ಅನುಮತಿ ಇಲ್ಲದಿದ್ದರೂ ಆಗಸ್ಟ್ 2ರಿಂದ ಶಾಲೆ ತೆರೆಯಲು ಮುಂದಾದ ರುಪ್ಸಾ
ಸಾಂದರ್ಭಿಕ ಚಿತ್ರ

ಶಾಲೆಗಳನ್ನು ತೆರೆಯಲು ರಾಜ್ಯ ಸರ್ಕಾರ ಸೂಚಿಸಿಲ್ಲವೆಂದು ಖಾಸಗಿ ಶಿಕ್ಷಣ ಸಂಸ್ಥೆಗಳು ಸರ್ಕಾರದ ವಿರುದ್ಧ ಸಿಡಿದೆದ್ದಿದೆ. ಸರ್ಕಾರ ಅನುಮತಿ ನೀಡದಿದ್ದರೂ ಖಾಸಗಿ ಶಾಲೆಗಳ ಒಕ್ಕೂಟ ಶಾಲೆ ಆರಂಭಕ್ಕೆ ಮುಂದಾಗಿದೆ.

TV9kannada Web Team

| Edited By: sandhya thejappa

Aug 01, 2021 | 8:43 AM

ಬೆಂಗಳೂರು: ಕೊರೊನಾ (Coronavirus) ಎರಡನೇ ಅಲೆಯನ್ನು ನಿಯಂತ್ರಿಸಲು ಶಾಲೆಗಳನ್ನು (School) ಬಂದ್ ಮಾಡಲಾಗಿತ್ತು. ಮಕ್ಕಳ ಆರೋಗ್ಯ ಹಿತಾದೃಷ್ಟಿಯಿಂದ ಬಂದ್ ಮಾಡಲಾಗಿದ್ದ ಶಾಲೆಗಳನ್ನು ಇನ್ನು ತೆರೆದಿಲ್ಲ. ಆದರೆ ಶಾಲೆಗಳನ್ನು ತೆರೆಯಬೇಕೆಂದು ಖಾಸಗಿ ಶಿಕ್ಷಣ ಸಂಸ್ಥೆಗಳು ರಾಜ್ಯ ಸರ್ಕಾರಕ್ಕೆ ಒತ್ತಾಯಿಸುತ್ತಿವೆ. ಶಾಲೆಗಳನ್ನು ತೆರೆಯುವ ಬಗ್ಗೆ ಜುಲೈ 31ರ ವೊಳಗೆ ಸರ್ಕಾರ ನಿರ್ಧರಿಸಬೇಕು, ಇಲ್ಲದಿದ್ದರೆ ಆಗಸ್ಟ್ 2ರಿಂದ ನಾವೇ ಶಾಲೆಗಳನ್ನು ತೆರೆಯುತ್ತೇವೆ ಎಂದು ಖಾಸಗಿ ಶಿಕ್ಷಣ ಸಂಸ್ಥೆಗಳು ತಿಳಿಸಿತ್ತು. ಅದರಂತೆ ನಾಳೆಯಿಂದ ಶಾಲೆಗಳನ್ನು ತೆರೆಯಲು ರುಪ್ಸಾ (RUPSA) ಸಂಘಟನೆ ನಿರ್ಧರಿಸಿದೆ.

ಶಾಲೆಗಳನ್ನು ತೆರೆಯಲು ರಾಜ್ಯ ಸರ್ಕಾರ ಸೂಚಿಸಿಲ್ಲವೆಂದು ಖಾಸಗಿ ಶಿಕ್ಷಣ ಸಂಸ್ಥೆಗಳು ಸರ್ಕಾರದ ವಿರುದ್ಧ ಸಿಡಿದೆದ್ದಿದೆ. ಸರ್ಕಾರ ಅನುಮತಿ ನೀಡದಿದ್ದರೂ ಖಾಸಗಿ ಶಾಲೆಗಳ ಒಕ್ಕೂಟ ಶಾಲೆ ಆರಂಭಕ್ಕೆ ಮುಂದಾಗಿದೆ. ಶಾಲೆ ಆರಂಭಿಸಲು ರುಪ್ಸಾ ಸಂಘಟನೆ ಶಿಕ್ಷಣ ಇಲಾಖೆಗೆ ಜುಲೈ 31ರ ವರೆಗೆ ಡೆಡ್ ಲೈನ್ ನೀಡಿತ್ತು. ರುಪ್ಸಾ ಅಧ್ಯಕ್ಷ ಹಾಲನೂರು ಲೇಪಾಕ್ಷಿಯಿಂದ ಡೆಡ್ ಲೈನ್ ನೀಡಲಾಗಿತ್ತು. ಆದರೆ ಸರ್ಕಾರದಿಂದ ಶಾಲೆ ಆರಂಭಕ್ಕೆ ಯಾವುದೇ ಗ್ರೀನ್ ಸಿಗ್ನಲ್ ಸಿಕ್ಕಿಲ್ಲ. ಹೀಗಾಗಿ ನಾಳೆಯಿಂದ ಶಾಲೆ ಆರಂಭಕ್ಕೆ ರುಪ್ಸಾ ಸಂಘಟನೆ ಮುಂದಾಗಿದೆ.

ಮಹತ್ವದ ಸುದ್ದಿಗೋಷ್ಠಿ ರುಪ್ಸಾ ಸಂಘಟನೆಯಿಂದ ಶಾಲೆ ಆರಂಭದ ಬಗ್ಗೆ ಇಂದು (ಆಗಸ್ಟ್ 1) ಮಹತ್ವದ ಸುದ್ದಿಗೋಷ್ಠಿ ನಡೆಯಲಿದೆ. ರುಪ್ಸಾ ಅಧ್ಯಕ್ಷ ಹಾಲನೂರು ಲೇಪಾಕ್ಷಿ ಸುದ್ದಿಗೋಷ್ಠಿ ನಡೆಸುತ್ತಾರೆ. ನಗರದ ಪ್ರೆಸ್ ಕ್ಲಬ್ನಲ್ಲಿ ಸುಮಾರು 12 ಗಂಟೆಗೆ ಸುದ್ದಿಗೋಷ್ಠಿ ನಡೆಸಲಿದ್ದಾರೆ.

ಇದನ್ನೂ ಓದಿ

ಕನ್ನಡ ಶಾಲೆಗಾಗಿ ಮತ್ತೊಂದು ಮಹತ್ವದ ಕಾರ್ಯ ಕೈಗೊಂಡ ಕಿಚ್ಚ ಸುದೀಪ್​ ಚಾರಿಟೇಬಲ್​ ಟ್ರಸ್ಟ್​

ಸರ್ಕಾರ ಶಾಲೆ ಆರಂಭಕ್ಕೆ ಸೂಚಿಸದಿದ್ದರೆ ನಾವೇ ಆರಂಭಿಸ್ತೇವೆ: ನೂತನ ಸಿಎಂ ಬೊಮ್ಮಾಯಿಗೆ ಖಾಸಗಿ ಶಾಲೆಗಳ ಡೆಡ್​ಲೈನ್​

(RUPSA organization has decided to open schools from August 2)

Follow us on

Related Stories

Most Read Stories

Click on your DTH Provider to Add TV9 Kannada