ದ್ವಿತೀಯ ದರ್ಜೆ ಲೆಕ್ಕ ಸಹಾಯಕರ ನೇರ ನೇಮಕಾತಿಗೆ ತಡೆ ನೀಡಿದ ಗ್ರಾಮೀಣಾಭಿವೃದ್ಧಿ ಇಲಾಖೆ
ನೇಮಕಾತಿಗೆ ತಡೆ ನೀಡುವಂತೆ ಈ ಹಿಂದೆ ಗ್ರಾಮೀಣಾಭಿವೃದ್ಧಿ ಇಲಾಖೆ ಎಸಿಎಸ್ ಗೆ ಗ್ರಾಮ ಪಂಚಾಯತ್ ನೌಕರರ ಸಂಘ ಮನವಿ ಮಾಡಿತ್ತು. ನೇಮಕಾತಿ ಬಗ್ಗೆ ಏಕರೂಪ ಮಾರ್ಗಸೂಚಿ ಹೊರಡಿಸುವ ಬಗ್ಗೆ ಸರ್ಕಾರದ ಹಂತದಲ್ಲಿ ಪರಿಶೀಲನೆಯಲ್ಲಿರುವುದರಿಂದ ತಾತ್ಕಾಲಿಕ ತಡೆ ನೀಡಲಾಗಿದೆ.
ಬೆಂಗಳೂರು: ಗ್ರಾಮ ಪಂಚಾಯತ್ ಕಾರ್ಯದರ್ಶಿ ಮತ್ತು ಗ್ರಾಮೀಣಾಭಿವೃದ್ಧಿ ಸಹಾಯಕ(ಗ್ರೇಡ್-2) ಹಾಗೂ ದ್ವಿತೀಯ ದರ್ಜೆ ಲೆಕ್ಕ ಸಹಾಯಕರ ವೃಂದಕ್ಕೆ ಸೇವೆಯೊಳಗಿನ ನೇರ ನೇಮಕಾತಿಗೆ ತಡೆ ನೀಡಲಾಗಿದೆ. ನೇಮಕಾತಿಗೆ ತಾತ್ಕಾಲಿಕವಾಗಿ ತಡೆ ನೀಡುವಂತೆ ಗ್ರಾಮೀಣಾಭಿವೃದ್ಧಿ ಇಲಾಖೆ ಎಲ್ಲಾ ಜಿ.ಪಂ. ಸಿಇಒಗಳಿಗೆ ಸೂಚನೆ ನೀಡಿದೆ.
ನೇಮಕಾತಿಗೆ ತಡೆ ನೀಡುವಂತೆ ಈ ಹಿಂದೆ ಗ್ರಾಮೀಣಾಭಿವೃದ್ಧಿ ಇಲಾಖೆ ಎಸಿಎಸ್ ಗೆ ಗ್ರಾಮ ಪಂಚಾಯತ್ ನೌಕರರ ಸಂಘ ಮನವಿ ಮಾಡಿತ್ತು. ನೇಮಕಾತಿ ಬಗ್ಗೆ ಏಕರೂಪ ಮಾರ್ಗಸೂಚಿ ಹೊರಡಿಸುವ ಬಗ್ಗೆ ಸರ್ಕಾರದ ಹಂತದಲ್ಲಿ ಪರಿಶೀಲನೆಯಲ್ಲಿರುವುದರಿಂದ ತಾತ್ಕಾಲಿಕ ತಡೆ ನೀಡಲಾಗಿದೆ. ಈಗಾಗಲೇ ನೇಮಕಾತಿ ಮಾಡಿರುವ ಜಿಲ್ಲೆಗಳನ್ನು ಹೊರತುಪಡಿಸಿ ಇನ್ನುಳಿದ ಜಿಲ್ಲೆಗಳಲ್ಲಿ ನೇಮಕಾತಿ ತಾತ್ಕಾಲಿಕ ತಡೆಗೆ ಸೂಚಿಸಲಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
ನಡೆತೆ ವಿಚಾರದಲ್ಲಿ ಕಡಿಮೆ ಅಂಕ ನೀಡಿದ್ದಕ್ಕೆ ಪ್ರತಿಭಟನೆ
ಯಾದಗಿರಿ: ಅರಣ್ಯ ಇಲಾಖೆ ಸಿಬ್ಬಂದಿಯಿಂದ ತಮ್ಮದೆ ಇಲಾಖೆ ಅಧಿಕಾರಿ ವಿರುದ್ಧ ಪ್ರತಿಭಟನೆ ನಡೆಸಲಾಗುತ್ತಿರುವ ಘಟನೆ ಯಾದಗಿರಿ ವಲಯ ಅರಣ್ಯಾಧಿಕಾರಿ ಕಚೇರಿ ಮುಂದೆ ನಡೆದಿದೆ. ನಡೆತೆ ವಿಚಾರದಲ್ಲಿ ಕಡಿಮೆ ಅಂಕ ನೀಡಿದ್ದಕ್ಕೆ ಅರಣ್ಯ ಇಲಾಖೆ ಆರ್‌ಎಫ್‌ಒ ಜಯವರ್ಧನೆ ವಿರುದ್ಧ ಪ್ರತಿಭಟನೆ ನಡೆಸಲಾಗುತ್ತಿದೆ. ವೈಯಕ್ತಿಕ ದ್ವೇಷದಿಂದ ಕಡಿಮೆ ಅಂಕ ನೀಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಕಡಿಮೆ ಅಂಕ ನೀಡಿದ್ದಕೆ ವರ್ಗಾವಣೆ ಆಗ್ತಾಯಿಲ್ಲ. ಇಲಾಖೆ ನಿಯಮ ಪ್ರಕಾರ ಕಡಿಮೆ ಅಂಕ ಕೊಡಲು ಬರೋದಿಲ್ಲ. ಕೆಲಸ ಮಾಡಿದ್ರು ಕಡಿಮೆ ಅಂಕ ನೀಡಿ ಅವಮಾನ ಮಾಡಿದ್ದಾರೆ ಎಂದು ಆಕ್ರೋಶ ಹೊರ ಹಾಕಿದ್ದಾರೆ.
ಐದು ವರ್ಷ ಸತತ ಒಂದೆ ಕಡೆ ಸೇವೆ ಸಲ್ಲಿಸಿದ ಬಳಿಕ ಸಿಬ್ಬಂದಿ ವರ್ಗಾವಣೆಗೆ ಮುಂದಾಗಿದ್ದರು. ವರ್ಗಾವಣೆ ವೇಳೆ ನಡತೆ ಸರ್ಟಿಫಿಕೇಟ್ ತೆಗೆದುಕೊಂಡು ಹೋಗಬೇಕಿತ್ತು. ಆದ್ರೆ ಸರ್ಟಿಫಿಕೇಟ್ ನಲ್ಲಿ ಕಡಿಮೆ ಅಂಕ ನೀಡಿ ವರ್ಗಾವಣೆ ಆಗದಂತೆ ನೋಡಿಕೊಂಡಿದ್ದಾರೆ. ಹೀಗಾಗಿ ನ್ಯಾಯ ಸಿಗುವವರೆಗೆ ಪ್ರತಿಭಟನೆ ನಡೆಸೋದಾಗಿ ಅರಣ್ಯ ರಕ್ಷಕ,ಉಪ ಅರಣ್ಯ ವಲಯ ಅಧಿಕಾರಿಗಳಿಂದ ಪ್ರತಿಭಟನೆ ನಡೆಸಲಾಗುತ್ತಿದೆ.
Published On - 3:19 pm, Thu, 18 August 22