ವೀಕೆಂಡ್ ಕರ್ಫ್ಯೂ ರದ್ದು ಹಿನ್ನೆಲೆ ಶನಿವಾರ ಕೂಡ ತರಗತಿ ನಡೆಸಲು ಸೂಚನೆ

ವೀಕೆಂಡ್ ಕರ್ಫ್ಯೂ ರದ್ದು ಹಿನ್ನೆಲೆ ಶನಿವಾರ ಕೂಡ ತರಗತಿ ನಡೆಸಲು ಸೂಚನೆ
ಪ್ರಾತಿನಿಧಿಕ ಚಿತ್ರ

ಸರ್ಕಾರಿ, ಅನುದಾನಿತ ಶಾಲೆಗಳಿಗೆ ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿ ಸೂಚನೆ ಕೊಟ್ಟಿದೆ. ವೀಕೆಂಡ್ ಕರ್ಫ್ಯೂ ಹಿನ್ನೆಲೆ ಶನಿವಾರ ಶಾಲೆ ಬಂದ್ ಮಾಡಲಾಗಿತ್ತು. ಆದರೆ, ಈಗ ಹೊಸ ಕೊರೊನಾ ಮಾರ್ಗಸೂಚಿಯಂತೆ ಆದೇಶ ನೀಡಲಾಗಿದೆ.

TV9kannada Web Team

| Edited By: ganapathi bhat

Jan 29, 2022 | 7:24 PM

ಬೆಂಗಳೂರು: ವೀಕೆಂಡ್​ ಕರ್ಫ್ಯೂ ರದ್ದು ಹಿನ್ನೆಲೆ ಶನಿವಾರ ಕೂಡ ತರಗತಿ ನಡೆಸಲು ಸೂಚಿಸಿ ಸುತ್ತೋಲೆ ಹೊರಡಿಸಲಾಗಿದೆ. ಕರ್ನಾಟಕ ರಾಜ್ಯಾದ್ಯಂತ ಶನಿವಾರದಂದು ತರಗತಿ ನಡೆಸುವಂತೆ ಸುತ್ತೋಲೆ ಹೊರಡಿಸಲಾಗಿದೆ. ಸರ್ಕಾರಿ, ಅನುದಾನಿತ ಶಾಲೆಗಳಿಗೆ ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿ ಸೂಚನೆ ಕೊಟ್ಟಿದೆ. ವೀಕೆಂಡ್ ಕರ್ಫ್ಯೂ ಹಿನ್ನೆಲೆ ಶನಿವಾರ ಶಾಲೆ ಬಂದ್ ಮಾಡಲಾಗಿತ್ತು. ಆದರೆ, ಈಗ ಹೊಸ ಕೊರೊನಾ ಮಾರ್ಗಸೂಚಿಯಂತೆ ಆದೇಶ ನೀಡಲಾಗಿದೆ.

ಕರ್ನಾಟಕ ರಾಜ್ಯ ಸರ್ಕಾರದಿಂದ ಪರಿಷ್ಕೃತ ಕೊವಿಡ್19 ಮಾರ್ಗಸೂಚಿ ಬಿಡುಗಡೆ ಮಾಡಲಾಗಿದೆ. ಫೆಬ್ರವರಿ 15ರ ವರೆಗೆ ಜಾರಿಯಲ್ಲಿರುವಂತೆ ಪರಿಷ್ಕೃತ ಮಾರ್ಗಸೂಚಿ ಬಿಡುಗಡೆಗೊಳಿಸಲಾಗಿದೆ. ಅದರಂತೆ, ಕರ್ನಾಟಕ ರಾಜ್ಯದಲ್ಲಿ ಜನವರಿ 31 ರಿಂದ ನೈಟ್ ಕರ್ಫ್ಯೂ ರದ್ದು ಮಾಡಲಾಗಿದೆ. ಸಾರ್ವಜನಿಕ ಸಾರಿಗೆಯಲ್ಲಿ ಸೀಟಿಂಗ್ ಕೆಪ್ಯಾಸಿಟಿ ಮಾತ್ರ ಭರ್ತಿ ಎಂದು ಆದೇಶ ನೀಡಲಾಗಿದೆ. ಹೋಟೆಲ್, ಪಬ್, ಬಾರ್ ಹಾಗೂ ರೆಸ್ಟೋರೆಂಟ್​ಗೆ ಅನುಮತಿ ನೀಡಲಾಗಿದೆ. ಮಲ್ಟಿಪ್ಲೆಕ್ಸ್, ಚಿತ್ರಮಂದಿರಗಳಲ್ಲಿ 50:50 ನಿಯಮ ಜಾರಿಯಲ್ಲಿ ಇರಲಿದೆ.

ಮದುವೆಗಳಿಗೆ ಒಳಾಂಗಣದಲ್ಲಿ 200 ಜನರಿಗೆ ಅವಕಾಶ, ಮದುವೆಗಳಿಗೆ ಹೊರಾಂಗಣದಲ್ಲಿ 300 ಜನರಿಗೆ ಅವಕಾಶ, ಕಚೇರಿಗಳಲ್ಲಿ ಶೇಕಡಾ 100 ರಷ್ಟು ನೌಕರರಿಗೆ ಅನುಮತಿ ನೀಡಲಾಗಿದೆ. ದೇಗುಲಗಳಲ್ಲಿ ಪೂಜೆ, ಅರ್ಚನೆ, ಸೇವಾ ಕಾರ್ಯಕ್ಕೆ ಅವಕಾಶ ನೀಡಲಾಗಿದೆ. ಆದರೆ, ಶೇಕಡಾ 50ರಷ್ಟು ಭಕ್ತರು ಸೇರಲು ಮಾತ್ರ ಅವಕಾಶ ಕೊಡಲಾಗಿದೆ. ಜಾತ್ರೆ, ಪ್ರತಿಭಟನೆ, ರಾಲಿಗಳಿಗೆ ನಿರ್ಬಂಧ ಮುಂದುವರಿಕೆ ಮಾಡಲಾಗಿದೆ.

ಜಿಮ್, ಈಜುಕೊಳದಲ್ಲಿ ಶೇಕಡಾ 50ರಷ್ಟು ಜನರಿಗೆ ಅವಕಾಶ. ಸ್ಪೋರ್ಟ್ಸ್ ಕಾಂಪ್ಲೆಕ್ಸ್​ಗಳಲ್ಲಿ ಚಟುವಟಿಕೆಗೆ ಅವಕಾಶ ನೀಡಲಾಗಿದೆ. ಗಡಿ ಪ್ರವೇಶಕ್ಕೆ RTPCR ಟೆಸ್ಟ್​ ನೆಗೆಟಿವ್ ವರದಿ ಕಡ್ಡಾಯ ಎಂದು ಹೇಳಲಾಗಿದೆ. ಬೆಂಗಳೂರಲ್ಲಿ ಸೋಮವಾರದಿಂದ ಎಲ್ಲಾ ತರಗತಿ ಪುನಾರಂಭ ಆಗಲಿದೆ. ಕೊವಿಡ್​ ನಿಯಮ ಪಾಲಿಸಿ ಶಾಲೆಗಳ ಪುನಾರಂಭಕ್ಕೆ ಅವಕಾಶ ಮಾಡಿಕೊಡಲಾಗಿದೆ. ಶೇ. 100ರಷ್ಟು ಮಕ್ಕಳು ಶಾಲೆಗೆ ಹಾಜರಾಗಲು ಅನುಮತಿ ನೀಡಲಾಗಿದೆ.

ಇದನ್ನೂ ಓದಿ: ಕ್ವಾರ್ಟರ್ ಫೈನಲ್‌ಗೂ ಮುನ್ನ ಟೀಂ ಇಂಡಿಯಾದಲ್ಲಿ ಬದಲಾವಣೆ; ಕೊರೊನಾ ಸೋಂಕಿತರು ಗುಣಮುಖ!

ಇದನ್ನೂ ಓದಿ: ಭಾರತ್ ಬಯೋಟೆಕ್​ನ ನೇಸಲ್ ಕೊವಿಡ್ ಬೂಸ್ಟರ್​ ಪ್ರಯೋಗಕ್ಕೆ ಅನುಮತಿ

Follow us on

Related Stories

Most Read Stories

Click on your DTH Provider to Add TV9 Kannada