ಭಾರತ್ ಬಯೋಟೆಕ್​ನ ನೇಸಲ್ ಕೊವಿಡ್ ಬೂಸ್ಟರ್​ ಪ್ರಯೋಗಕ್ಕೆ ಅನುಮತಿ

Bharat Biotech: ಭಾರತ್ ಬಯೋಟೆಕ್ ಭಾರತದಲ್ಲಿ ಮೂರನೇ ಡೋಸ್‌ನ 3ನೇ ಹಂತದ ಪ್ರಯೋಗಕ್ಕಾಗಿ ಅರ್ಜಿಯನ್ನು ಸಲ್ಲಿಸಿದ ಎರಡನೇ ಕಂಪನಿಯಾಗಿದೆ.

ಭಾರತ್ ಬಯೋಟೆಕ್​ನ ನೇಸಲ್ ಕೊವಿಡ್ ಬೂಸ್ಟರ್​ ಪ್ರಯೋಗಕ್ಕೆ ಅನುಮತಿ
ನಾಸಲ್ ಲಸಿಕೆ
Follow us
TV9 Web
| Updated By: ಸುಷ್ಮಾ ಚಕ್ರೆ

Updated on:Jan 28, 2022 | 3:55 PM

ನವದೆಹಲಿ: ಕೊವಿಡ್ ಲಸಿಕೆ ತಯಾರಕ ಕಂಪನಿಯಾದ ಭಾರತ್ ಬಯೋಟೆಕ್ (Bharat Biotech) ಕೋವಾಕ್ಸಿನ್‌ನ ಎರಡೂ ಡೋಸ್‌ಗಳನ್ನು ಪಡೆದ ಜನರ ಮೇಲೆ ಇಂಟ್ರಾನೇಸಲ್ ಬೂಸ್ಟರ್ ಡೋಸ್‌ನ (intranasal Covid booster dose) 3ನೇ ಹಂತದ ಕ್ಲಿನಿಕಲ್ ಪ್ರಯೋಗಗಳನ್ನು ನಡೆಸಲು ಅನುಮೋದನೆಯನ್ನು ಪಡೆದಿದೆ. ಭಾರತದ ಡ್ರಗ್ ಕಂಟ್ರೋಲರ್ ಜನರಲ್ ಇಂದು 3ನೇ ಹಂತದ ಪ್ರಯೋಗಗಳಿಗೆ ಚಾಲನೆ ನೀಡಿದೆ. ದೇಶದ 9 ಸ್ಥಳಗಳಲ್ಲಿ ಈ ಪ್ರಯೋಗಗಳನ್ನು ನಡೆಸಲಾಗುವುದು. ಬೂಸ್ಟರ್ ಆಗಿ ಇಂಟ್ರಾನೇಸಲ್ ಲಸಿಕೆಯು ಸಾಮೂಹಿಕ ಲಸಿಕಾ ಅಭಿಯಾನದಲ್ಲಿ ಕಾರ್ಯ ನಿರ್ವಹಿಸಲು ಸುಲಭವಾಗುತ್ತದೆ.

ಮೂಗಿನ ಮೂಲಕ ಹಾಕುವ ಲಸಿಕೆ BBV154, ಮೂಗಿನ ಮೂಲಕ ಪ್ರತಿರಕ್ಷಣಾ ಪ್ರತಿಕ್ರಿಯೆಗಳನ್ನು ಉತ್ತೇಜಿಸುತ್ತದೆ. ಹಾಗೇ, ಕೊವಿಡ್ ಸೋಂಕು ಹರಡುವಿಕೆಯನ್ನು ತಡೆಯುವಲ್ಲಿ ಬಹಳ ಪರಿಣಾಮಕಾರಿಯಾಗಿದೆ ಎಂದು ಭಾರತ್ ಬಯೋಟೆಕ್ ಹೇಳಿದೆ. ಹೈದರಾಬಾದ್ ಮೂಲದ ಭಾರತ್ ಬಯೋಟೆಕ್ ಸಂಸ್ಥೆ ಕೊವಿಡ್ ಲಸಿಕೆಯನ್ನು ತಯಾರಿಸುತ್ತಿದೆ. ಒಟ್ಟು 900 ವಿಷಯಗಳ ಮೇಲೆ ಪ್ರಯೋಗಗಳನ್ನು ಮಾಡಲಾಗುತ್ತದೆ.

ಭಾರತದಲ್ಲಿ ಮೊದಲ ಬಾರಿಗೆ DCGIಯ ವಿಷಯ ತಜ್ಞರ ಸಮಿತಿಯು (SEC) ತನ್ನ ಇಂಟ್ರಾನಾಸಲ್ ಕೋವಿಡ್ ಲಸಿಕೆಯ ‘3ನೇ ಹಂತದ ಬೂಸ್ಟರ್ ಡೋಸ್ ಅಧ್ಯಯನ’ಕ್ಕಾಗಿ ಭಾರತ್ ಬಯೋಟೆಕ್‌ಗೆ ‘ತಾತ್ವಿಕ’ ಅನುಮೋದನೆಯನ್ನು ನೀಡಿತ್ತು. ಹಾಗೇ, ಈ ಲಸಿಕೆಯ ಅನುಮೋದನೆಗಾಗಿ ಪ್ರೋಟೋಕಾಲ್‌ಗಳನ್ನು ಸಲ್ಲಿಸುವಂತೆ 3 ವಾರಗಳ ಹಿಂದೆ ಸೂಚಿಸಿತ್ತು.

ಭಾರತ್ ಬಯೋಟೆಕ್ ಭಾರತದಲ್ಲಿ ಮೂರನೇ ಡೋಸ್‌ನ 3ನೇ ಹಂತದ ಪ್ರಯೋಗಕ್ಕಾಗಿ ಅರ್ಜಿಯನ್ನು ಸಲ್ಲಿಸಿದ ಎರಡನೇ ಕಂಪನಿಯಾಗಿದೆ. ಒಮಿಕ್ರಾನ್‌ನಂತಹ ಹೊಸ ಕೋವಿಡ್-19 ರೂಪಾಂತರಗಳಿಗೆ ಪ್ರಸರಣವನ್ನು ತಡೆಯುವ ಸಾಮರ್ಥ್ಯವನ್ನು ಇಂಟ್ರಾನೇಸಲ್ ಲಸಿಕೆಗಳು ಹೊಂದಿವೆ ಎಂದು ವರದಿಯಾಗಿದೆ. ಈಗಾಗಲೇ ಭಾರತದಲ್ಲಿ ಲಸಿಕೆ ಹಾಕಲು ಕೋವಿಡ್‌ಶೀಲ್ಡ್, ಕೋವಾಕ್ಸಿನ್ ಮತ್ತು ಸ್ಪುಟ್ನಿಕ್ ವಿ ಲಸಿಕೆಗೆ ಅನುಮೋದನೆ ಸಿಕ್ಕಿದೆ.

ಇದನ್ನೂ ಓದಿ: ಮೂಗಿನ ಮೂಲಕವೂ ಕೊರೊನಾ ಲಸಿಕೆ ನೀಡಿಕೆ; ವೈದ್ಯಕೀಯ ಪ್ರಯೋಗಕ್ಕೆ ಸಮ್ಮತಿಸಿದ ತಜ್ಞರ ಸಮಿತಿ

Omicron Variant: ಒಮಿಕ್ರಾನ್ ವೈರಸ್ ಪ್ಲಾಸ್ಟಿಕ್ ಮೇಲೆ 8 ದಿನ, ಚರ್ಮದ ಮೇಲೆ 21 ಗಂಟೆ ಜೀವಂತವಾಗಿರಬಲ್ಲದು!

Published On - 3:07 pm, Fri, 28 January 22

ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ