ಗೋ ಶಾಲಾ ಆಧರಿತ ಆರ್ಥಿಕತೆ ಅಭಿವೃದ್ದಿಗೆ ಪ್ಲ್ಯಾನ್; ಭಾರತದ ಗೋ ಶಾಲೆಗಳ ಸ್ಥಿತಿಗತಿ ಪರಿಶೀಲನೆ

ಜಾನುವಾರುಗಳ ಆರ್ಥಿಕ ಸಾಮರ್ಥ್ಯ ಮತ್ತು ಗೋಶಾಲೆಯ ಆರ್ಥಿಕತೆಯನ್ನು ಬಳಸಿಕೊಳ್ಳಲು ಅಗತ್ಯವಾದ ಕ್ರಮಗಳನ್ನು ವಿವರಿಸುವ ವರದಿಯನ್ನು ಶೀಘ್ರದಲ್ಲೇ ಸಲ್ಲಿಸಲಾಗುವುದು ಎಂದು ಹಿರಿಯ ಸರ್ಕಾರಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಗೋ ಶಾಲಾ ಆಧರಿತ ಆರ್ಥಿಕತೆ ಅಭಿವೃದ್ದಿಗೆ ಪ್ಲ್ಯಾನ್; ಭಾರತದ ಗೋ ಶಾಲೆಗಳ ಸ್ಥಿತಿಗತಿ ಪರಿಶೀಲನೆ
ಗೋ ಶಾಲೆ
Follow us
S Chandramohan
| Updated By: preethi shettigar

Updated on: Jan 28, 2022 | 12:48 PM

ದೆಹಲಿ: ನೀತಿ ಆಯೋಗವು ದೇಶದ ಅಭಿವೃದ್ಧಿಗೆ ಅಗತ್ಯವಾದ ದೂರದೃಷ್ಟಿಯ ಯೋಜನೆಗಳನ್ನು ರೂಪಿಸಿ ಜಾರಿಗೊಳಿಸಬೇಕು ಎಂದು ನಿರ್ಧರಿಸಿದೆ. ಈಗ ನೀತಿ ಆಯೋಗದ ಕಣ್ಣು ನಮ್ಮ ದೇಶದ ಜಾನುವಾರಗಳ ಮೇಲೆ ಬಿದ್ದಿದೆ. ದೇಶದಲ್ಲಿ ಗೋ ಶಾಲಾ(Gou shala) ಆರ್ಥಿಕತೆಯನ್ನು ಬಲಪಡಿಸಲು ನೀತಿ ಆಯೋಗವು ಪ್ಲ್ಯಾನ್(Plan) ರೂಪಿಸುತ್ತಿದೆ.  ನೀತಿ ಆಯೋಗದ ಸದಸ್ಯರು ಈಗ ದೇಶದ ವಿವಿಧ ಗೋ ಶಾಲೆಗಳಿಗೆ ಭೇಟಿ ನೀಡಿ ಅಧ್ಯಯನ ಮಾಡುತ್ತಿದ್ದಾರೆ. ಭಾರತದ ನೀತಿ ಆಯೋಗವು ಥಿಂಕ್ ಟ್ಯಾಂಕ್ (Think tank) ಎಂದೇ ಹೆಸರಾಗಿದೆ. ಮೊದಲಿದ್ದ ಕೇಂದ್ರ ಯೋಜನಾ ಆಯೋಗವನ್ನು ರದ್ದುಪಡಿಸಿ ಮೋದಿ ಸರ್ಕಾರ ನೀತಿ ಆಯೋಗವನ್ನು ಆಸ್ತಿತ್ವಕ್ಕೆ ತಂದಿದೆ. ನೀತಿ ಆಯೋಗವು ದೇಶದ ಅಭಿವೃದ್ದಿಗೆ ಬೇಕಾದ ಯೋಜನೆಗಳನ್ನು ರೂಪಿಸಿ ರಾಜ್ಯಗಳ ಸಹಕಾರದೊಂದಿಗೆ ಜಾರಿಗೊಳಿಸುತ್ತದೆ. ಈಗ ನೀತಿ ಆಯೋಗವು ಗೋ ಆಧರಿತ ಆರ್ಥಿಕತೆಯ ಬೆಳವಣಿೆಗೆಗೆ ಯೋಜನೆ ರೂಪಿಸುತ್ತಿದೆ.

ಭಾರತ ಮತ್ತು ವಿದೇಶಗಳಲ್ಲಿ ಗೋಮೂತ್ರವನ್ನು ವಾಣಿಜ್ಯ ಬಳಕೆಗೆ ಅನುಕೂಲವಾಗುವಂತೆ ಬಳಸಲು  ಗೋಶಾಲಾ (ಗೋ ಆಶ್ರಯ) ಆರ್ಥಿಕತೆಯನ್ನು ಅಭಿವೃದ್ಧಿಪಡಿಸಲು ನೀತಿ ಆಯೋಗವು ನೀಲಿನಕಾಶೆಯನ್ನು ತಯಾರಿಸುತ್ತಿದೆ.

ನೀತಿ ಆಯೋಗದ ಸದಸ್ಯ ರಮೇಶ್ ಚಂದ್ ನೇತೃತ್ವದ ಸರ್ಕಾರಿ ಅಧಿಕಾರಿಗಳ ತಂಡವು ವೃಂದಾವನ, ರಾಜಸ್ಥಾನ ಮತ್ತು ಭಾರತದ ಇತರ ಭಾಗಗಳಲ್ಲಿನ ದೊಡ್ಡ ಗೋಶಾಲೆಗಳಿಗೆ ಭೇಟಿ ನೀಡುತ್ತಿದೆ. ಅವುಗಳ ಪರಿಸ್ಥಿತಿ ಬಗ್ಗೆ ಅಧ್ಯಯನ ಮಾಡುತ್ತಿದೆ. ಇದಾದ ಬಳಿಕ ಗೋಶಾಲಾ ಆರ್ಥಿಕತೆಗೆ ಪೂರಕವಾಗಿ ಯೋಜನೆ ರೂಪಿಸಿ ವರದಿಯನ್ನು ಸಲ್ಲಿಸಲಿದೆ.

ಜಾನುವಾರುಗಳ ಆರ್ಥಿಕ ಸಾಮರ್ಥ್ಯ ಮತ್ತು ಗೋಶಾಲೆಯ ಆರ್ಥಿಕತೆಯನ್ನು ಬಳಸಿಕೊಳ್ಳಲು ಅಗತ್ಯವಾದ ಕ್ರಮಗಳನ್ನು ವಿವರಿಸುವ ವರದಿಯನ್ನು ಶೀಘ್ರದಲ್ಲೇ ಸಲ್ಲಿಸಲಾಗುವುದು ಎಂದು ಹಿರಿಯ ಸರ್ಕಾರಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಗೋಶಾಲೆಗಳನ್ನು ಆರ್ಥಿಕವಾಗಿ ಲಾಭದಾಯಕವಾಗಿಸುವ ಆಲೋಚನೆ ಇದೆ. ನೈಸರ್ಗಿಕ ಕೃಷಿಯತ್ತ ಗಮನಹರಿಸುವುದರೊಂದಿಗೆ, ನೈಸರ್ಗಿಕ ಕೃಷಿಯಲ್ಲಿ ಗೋಮೂತ್ರ ಮತ್ತು ಸಗಣಿ ಬಳಕೆಗೆ ಅಪಾರ ಸಾಮರ್ಥ್ಯವಿದೆ ಎಂದು ಹೆಸರು ಹೇಳಲು ಬಯಸದ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಅಧಿಕಾರಿಯ ಪ್ರಕಾರ, ಹಾಲಿನ ಉತ್ಪಾದನೆ ಕಡಿಮೆಯಾದ ನಂತರ ಭಾರತೀಯ ಜಾನುವಾರುಗಳು ಅನುತ್ಪಾದಕ ಆಸ್ತಿಗಳಾಗುತ್ತವೆ. ಜಾನುವಾರುಗಳಿಂದ ಇತರ ಉತ್ಪನ್ನಗಳತ್ತ ಗಮನಹರಿಸುವುದರ ಮೂಲಕ ರೈತರು ಗೋಶಾಲೆಗಳಿಗೆ ಮತ್ತು ಇಡೀ ದೇಶಕ್ಕೆ ಆದಾಯ ಉತ್ಪಾದಕರಾಗಿ ಮುಂದುವರಿಯಬಹುದು ಎಂದು ಅಧಿಕಾರಿ ಹೇಳಿದ್ದಾರೆ.

ಗೊಬ್ಬರವಾಗಿ ಸಗಣಿಯ ಬಳಕೆಯನ್ನು ಹೊರತುಪಡಿಸಿ, ಗೋಮೂತ್ರವು ಔಷಧೀಯ ಮತ್ತು ಗಿಡಮೂಲಿಕೆ ಉತ್ಪನ್ನಗಳಂತಹ ವಲಯಗಳಲ್ಲಿ ವ್ಯಾಪಕವಾದ ಬೇಡಿಕೆಯನ್ನು ಹೊಂದಿದೆ. ಅದಲ್ಲದೆ, ಹಸುವಿನ ಸಗಣಿಯನ್ನು ಗೋಬರ್ ಗ್ಯಾಸ್ ಆಗಿ ಪರಿವರ್ತಿಸಬಹುದು ಅಥವಾ ಸ್ಮಶಾನಗಳಲ್ಲಿ ಬಳಸಬಹುದಾದ ಹಸುವಿನ ಸಗಣಿಯಿಂದ ಮಾಡಿದ ದಿಮ್ಮಿಗಳನ್ನು ಮಾಡಬಹುದು.

ಮಧ್ಯಪ್ರದೇಶವು ರೈತರನ್ನು ಜಾನುವಾರುಗಳನ್ನು ಸಾಕಲು ಮತ್ತು ನೈಸರ್ಗಿಕ ಕೃಷಿಯನ್ನು ಕೈಗೊಳ್ಳಲು ಪ್ರೋತ್ಸಾಹಿಸುವ ಮೂಲಕ ದೇಶದಲ್ಲಿ ಮುನ್ನಡೆ ಸಾಧಿಸಿದೆ. ರಾಜ್ಯವು ತನ್ನ ಜಾನುವಾರುಗಳನ್ನು ಸರಿಯಾಗಿ ನೋಡಿಕೊಳ್ಳಲು ಗೋವುಗಳ ಅಭಯಾರಣ್ಯಗಳು ಮತ್ತು ಆಶ್ರಯಗಳನ್ನು ಸ್ಥಾಪಿಸಿದೆ. ಇಂಥ ಮಾದರಿಗಳನ್ನು ಭಾರತದಾದ್ಯಂತ ಪುನರಾವರ್ತಿಸಬಹುದು.

ರಾಷ್ಟ್ರೀಯ ಡೈರಿ ಅಭಿವೃದ್ಧಿ ಮಂಡಳಿಯ ಪ್ರಕಾರ, 2019 ರಲ್ಲಿ ಭಾರತವು 19.2 ಕೋಟಿ( 192.5 ಮಿಲಿಯನ್) ಜಾನುವಾರುಗಳನ್ನು ಮತ್ತು 10.9 ಕೋಟಿ( 109.9 ಮಿಲಿಯನ್) ಎಮ್ಮೆಗಳನ್ನು ಹೊಂದಿದ್ದು, ಒಟ್ಟು ಗೋವಿನ ಸಂಖ್ಯೆಯು 30.2 ಕೋಟಿ( 302.3 ಮಿಲಿಯನ್‌) ಗೆ ತಲುಪಿದೆ. ಈ ಸಂಖ್ಯೆಯು 2021 ರಲ್ಲಿ 30.5 ಕೋಟಿ (305 ಮಿಲಿಯನ್‌) ಗಿಂತಲೂ ಹೆಚ್ಚಾಯಿತು, ಇದು ವಿಶ್ವದಲ್ಲೇ ಅತಿ ಹೆಚ್ಚು. ಜಾಗತಿಕ ಜಾನುವಾರು ಸಂಖ್ಯೆಯು 996 ಮಿಲಿಯನ್ ಆಗಿದೆ.

ಇದನ್ನೂ ಓದಿ: ಆಂಡ್ರಾಯ್ಡ್, iOS ಗೆ ಶುರುವಾಗಿದೆ ನಡುಕ: ಭಾರತೀಯ ಆಪರೇಟಿಂಗ್ ಸಿಸ್ಟಂ ಅಭಿವೃದ್ಧಿಗೆ ಕೇಂದ್ರದ ಒಲವು

ದೇಶದ ಆರ್ಥಿಕತೆಗೆ ಭವಿಷ್ಯದಲ್ಲಿ ಕರ್ನಾಟಕದ ಕೊಡುಗೆ ದೊಡ್ಡದಾಗಿರಲಿದೆ : ಸಿಎಂ ಬಸವರಾಜ ಬೊಮ್ಮಾಯಿ

ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್