Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಕ್ಕಳಿಗೆ ಕೊವಿಡ್ ಬೂಸ್ಟರ್ ಡೋಸ್ ಅಗತ್ಯವಿದೆಯೇ?: ತಜ್ಞರು ಏನಂತಾರೆ?

Booster shots ಆರೋಗ್ಯವಂತ ಮಕ್ಕಳು ಅಥವಾ ಆರೋಗ್ಯವಂತ ಹದಿಹರೆಯದವರಿಗೆ ಬೂಸ್ಟರ್‌ಗಳು ಬೇಕಾಗುತ್ತವೆ ಎಂಬುದಕ್ಕೆ ಇದೀಗ ಯಾವುದೇ ಪುರಾವೆಗಳಿಲ್ಲ" ಎಂದು ಸೌಮ್ಯ ಸ್ವಾಮಿನಾಥನ್ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ಮಕ್ಕಳಿಗೆ ಕೊವಿಡ್ ಬೂಸ್ಟರ್ ಡೋಸ್ ಅಗತ್ಯವಿದೆಯೇ?: ತಜ್ಞರು ಏನಂತಾರೆ?
ಸೌಮ್ಯ ಸ್ವಾಮಿನಾಥನ್
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on:Jan 20, 2022 | 11:55 AM

ಆರೋಗ್ಯವಂತ ಮಕ್ಕಳು ಮತ್ತು ಹದಿಹರೆಯದವರಿಗೆ ಕೊವಿಡ್-19 (Covid-19) ವಿರುದ್ಧ ಬೂಸ್ಟರ್ ಡೋಸ್ (Booster doses)ಅಗತ್ಯವಿದೆ ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ (WHO) ಮುಖ್ಯ ವಿಜ್ಞಾನಿ ಸೌಮ್ಯ ಸ್ವಾಮಿನಾಥನ್ ಹೇಳಿದ್ದಾರೆ. ಒಮಿಕ್ರಾನ್ ಗೆ ಸಂಬಂಧಿಸಿದಂತೆ, ಪ್ರತಿ ಹೊಸ ರೂಪಾಂತರಕ್ಕೆ ಹೊಸ ಲಸಿಕೆಯನ್ನು ಮಾಡುವ ಅಗತ್ಯವಿಲ್ಲ ಎಂದು ಅವರು ಸೂಚಿಸಿದರು. “ಆರೋಗ್ಯವಂತ ಮಕ್ಕಳು ಅಥವಾ ಆರೋಗ್ಯವಂತ ಹದಿಹರೆಯದವರಿಗೆ ಬೂಸ್ಟರ್‌ ಡೋಸ್ ಬೇಕಾಗುತ್ತವೆ ಎಂಬುದಕ್ಕೆ ಇದೀಗ ಯಾವುದೇ ಪುರಾವೆಗಳಿಲ್ಲ” ಎಂದು ಅವರು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು. ಯುನೈಟೆಡ್ ಸ್ಟೇಟ್ಸ್, ಜರ್ಮನಿ, ಇಸ್ರೇಲ್ ಸೇರಿದಂತೆ ಹಲವಾರು ದೇಶಗಳು ಮಕ್ಕಳಿಗಾಗಿ ಬೂಸ್ಟರ್ ಡೋಸ್‌ಗಳನ್ನು ಹೊರತಂದಿರುವ ಸಮಯದಲ್ಲಿ ಸೌಮ್ಯ ಸ್ವಾಮಿನಾಥನ್ ಅವರ ಈ ಹೇಳಿಕೆ ಬರುತ್ತದೆ. ಏತನ್ಮಧ್ಯೆ, ಭಾರತವು ಈ ತಿಂಗಳ ಆರಂಭದಲ್ಲಿ 15 ರಿಂದ 18 ವರ್ಷದೊಳಗಿನ ಹದಿಹರೆಯದವರಿಗೆ ಲಸಿಕೆ ಹಾಕಲು ಪ್ರಾರಂಭಿಸಿದೆ. ವೇಗವಾಗಿ ಹರಡುತ್ತಿರುವ ಒಮಿಕ್ರಾನ್ ವಿರುದ್ಧ ಲಸಿಕೆಗಳ ಪರಿಣಾಮವು ಕಾಲಾನಂತರದಲ್ಲಿ ಕ್ಷೀಣಿಸುತ್ತದೆ ಎಂದು ಸ್ವಾಮಿನಾಥನ್ ಗಮನಸೆಳೆದರು. ಯಾರಿಗೆ ಬೂಸ್ಟರ್ ಡೋಸ್ ಅಗತ್ಯವಿದೆ ಎಂಬುದನ್ನು ಖಚಿತಪಡಿಸಿಕೊಳ್ಳಲು ಹೆಚ್ಚಿನ ಸಂಶೋಧನೆ ಅಗತ್ಯವಿದೆ ಎಂದು ಅವರು ಹೇಳಿದರು.  ದೇಶಗಳು ತಮ್ಮ ಜನಸಂಖ್ಯೆಗೆ ಬೂಸ್ಟರ್‌ಗಳನ್ನು ನೀಡುವುದನ್ನು ಹೇಗೆ ಪರಿಗಣಿಸಬೇಕು ಎಂಬ ನಿರ್ದಿಷ್ಟ ಪ್ರಶ್ನೆಯನ್ನು ಪರಿಗಣಿಸಲು ಪ್ರಮುಖ ತಜ್ಞರು ಈ ವಾರದ ನಂತರ ಭೇಟಿಯಾಗಲಿದ್ದಾರೆ ಎಂದು ಅವರು ತಿಳಿಸಿದರು.  “ಅತ್ಯಂತ ದುರ್ಬಲರನ್ನು ರಕ್ಷಿಸುವುದು, ತೀವ್ರ ರೋಗ ಮತ್ತು ಸಾವಿನ ಹೆಚ್ಚಿನ ಅಪಾಯದಲ್ಲಿರುವವರನ್ನು ರಕ್ಷಿಸುವುದು”ಗುರಿ ಎಂದು ಅವರು ಹೇಳಿದರು. ವಯಸ್ಸಾದ ಜನರು , ರೋಗನಿರೋಧಕ ಕಡಿಮೆ ಇರುವ ಜನರು, ಆದರೆ ಆರೋಗ್ಯ ಕಾರ್ಯಕರ್ತರು ಈ ವರ್ಗಕ್ಕೆ ಸೇರುತ್ತಾರೆ.

ಒಮಿಕ್ರಾನ್ ವಿರುದ್ಧ ನಮಗೆ ಹೊಸ ಲಸಿಕೆಗಳು ಬೇಕೇ?

ಪ್ರತಿ ಹೊಸ ರೂಪಾಂತರಕ್ಕೆ ಹೊಸ ಲಸಿಕೆಯನ್ನು ಉತ್ಪಾದಿಸುವ ಅಗತ್ಯವಿಲ್ಲ ಎಂದು ವಿಶ್ವ ಆರೋಗ್ಯಸಂಸ್ಥೆಯ ಮುಖ್ಯ ವಿಜ್ಞಾನಿ ಹೇಳಿದ್ದಾರೆ. ಇದರ ಬದಲಿಗೆ ನಾವು ಎಲ್ಲಾ ಕೊರೊನೊವೈರಸ್‌ಗಳ ವಿರುದ್ಧ ರಕ್ಷಣಾತ್ಮಕ ಲಸಿಕೆಗಳಿಗಾಗಿ ರಿಸರ್ಚ್ ಆಂಡ್ ಡೆಪಲಪ್ ಮೆಂಟ್ ನಲ್ಲಿ ನಲ್ಲಿ ಹೂಡಿಕೆ ಮಾಡಬೇಕು. ವಿಶಾಲವಾಗಿ ತಟಸ್ಥಗೊಳಿಸುವ ಪ್ರತಿಕಾಯಗಳ ಮೇಲೆ ಕೆಲಸ ಮಾಡುವ ತಜ್ಞರು ಒಮ್ಮತದ ಅನುಕ್ರಮಗಳನ್ನು ಗುರುತಿಸಲು ಲಸಿಕೆ ಉತ್ಪಾದಕರೊಂದಿಗೆ ಕೆಲಸ ಮಾಡಬಹುದು ಎಂದು ಅವರು ಹೇಳಿದರು.

ಪ್ರಸ್ತುತ ಲಸಿಕೆಗಳು ಕೊವಿಡ್ ವಿರುದ್ಧ ಎಷ್ಟು ಚೆನ್ನಾಗಿ ಕೆಲಸ ಮಾಡುತ್ತಿವೆ?

“ಜಗತ್ತಿನಾದ್ಯಂತ ನಡೆಯುತ್ತಿರುವ ಎಲ್ಲಾ ಲಸಿಕೆ ಪರಿಣಾಮಕಾರಿತ್ವದ ಅಧ್ಯಯನಗಳನ್ನು ವಿಶ್ವ ಆರೋಗ್ಯ ಸಂಸ್ಥೆ ಟ್ರ್ಯಾಕ್ ಮಾಡುತ್ತಿದೆ” ಎಂದು ಸೌಮ್ಯ ಸ್ವಾಮಿನಾಥನ್ ಹೇಳಿದರು.  ಲಸಿಕೆಗಳು ತೀವ್ರವಾದ ಅನಾರೋಗ್ಯ, ಆಸ್ಪತ್ರೆಗೆ ದಾಖಲು ಮತ್ತು ಸಾವಿನ ವಿರುದ್ಧ ಜನರನ್ನು ರಕ್ಷಿಸುತ್ತಿವೆ ಎಂದು ಅವರು ಮತ್ತಷ್ಟು ಭರವಸೆ ನೀಡುತ್ತಾರೆ.

“ನಾವು ವಿವಿಧ ಲಸಿಕೆಗಳನ್ನು ಬಳಸುತ್ತಿರುವ ದೇಶಗಳನ್ನು, ವ್ಯಾಕ್ಸಿನೇಷನ್‌ನಿಂದ ವಯಸ್ಸು ಮತ್ತು ಸಮಯದ ಮೂಲಕ ಪರಿಣಾಮಕಾರಿತ್ವದ ಡೇಟಾವನ್ನು ಉತ್ಪಾದಿಸಲು ಪ್ರೋತ್ಸಾಹಿಸುತ್ತೇವೆ. ಹೆಚ್ಚಿನ ಲಸಿಕೆಗಳು ಇನ್ನೂ ತೀವ್ರವಾದ ರೋಗ ಮತ್ತು ಸಾವಿನ ವಿರುದ್ಧ ಉತ್ತಮ ರಕ್ಷಣೆ ನೀಡುತ್ತವೆಯಾದರೂ, ಕಾರ್ಯಕ್ಷಮತೆಯನ್ನು ಪತ್ತೆಹಚ್ಚುವುದು ಪರಿಣಾಮಕಾರಿಯಾಗಿದೆ ”ಎಂದು ಅವರು ಹೇಳಿದರು.

ಇದನ್ನೂ ಓದಿ: ಆ್ಯಂಟಿ ಬಯೋಟಿಕ್​ ಪ್ರತಿರೋಧಕ ಸೋಂಕುಗಳಿಂದ 2019ರಲ್ಲಿ 12 ಲಕ್ಷ ಮಂದಿ ಸಾವು; ಔಷಧಕ್ಕೂ ಬಗ್ಗದ ಸೂಪರ್​ಬಗ್ಸ್​ಗಳ ಅಪಾಯ ತೆರೆದಿಟ್ಟ ಅಧ್ಯಯನ !

Published On - 11:53 am, Thu, 20 January 22

ಪಿಲಿಭಿತ್ ಅಭಯಾರಣ್ಯದಲ್ಲಿ ಹೆಬ್ಬಾವನ್ನು ತಿಂದು ವಾಂತಿ ಮಾಡಿದ ಹುಲಿ
ಪಿಲಿಭಿತ್ ಅಭಯಾರಣ್ಯದಲ್ಲಿ ಹೆಬ್ಬಾವನ್ನು ತಿಂದು ವಾಂತಿ ಮಾಡಿದ ಹುಲಿ
ಜಿಲ್ಲೆಯಲ್ಲಿ ಬಿಜೆಪಿಗೆ ಉತ್ತಮ ಫಲಿತಾಂಶ ಕೊಡಿಸುವ ಸವಾಲು ಸ್ವೀಕಾರ: ಬಿವೈವಿ
ಜಿಲ್ಲೆಯಲ್ಲಿ ಬಿಜೆಪಿಗೆ ಉತ್ತಮ ಫಲಿತಾಂಶ ಕೊಡಿಸುವ ಸವಾಲು ಸ್ವೀಕಾರ: ಬಿವೈವಿ
ಜನಿವಾರದಿಂದ ನೇಣು ಬಿಗಿದುಕೊಂಡರೆ? ಕಾಲೇಜು ಸಿಬ್ಬಂದಿಯ ಮೂರ್ಖ ವಾದ!
ಜನಿವಾರದಿಂದ ನೇಣು ಬಿಗಿದುಕೊಂಡರೆ? ಕಾಲೇಜು ಸಿಬ್ಬಂದಿಯ ಮೂರ್ಖ ವಾದ!
ಹೊಸ ಪಕ್ಷ ಕಟ್ಟುವ ಇಚ್ಛೆ ಇದೆ ಎಂದ ಮಾಜಿ ಸಚಿವ ಸಿಎಂ ಇಬ್ರಾಹಿಂ
ಹೊಸ ಪಕ್ಷ ಕಟ್ಟುವ ಇಚ್ಛೆ ಇದೆ ಎಂದ ಮಾಜಿ ಸಚಿವ ಸಿಎಂ ಇಬ್ರಾಹಿಂ
ನಾಯಿ ಬಂಟಿಗೆ ಸಿಗುತ್ತಿದ್ದ ರಾಯಲ್ ಟ್ರೀಟ್​ಮೆಂಟ್ ಬಗ್ಗೆ ರಾಕೇಶ್ ಮಾತು
ನಾಯಿ ಬಂಟಿಗೆ ಸಿಗುತ್ತಿದ್ದ ರಾಯಲ್ ಟ್ರೀಟ್​ಮೆಂಟ್ ಬಗ್ಗೆ ರಾಕೇಶ್ ಮಾತು
ಜಾತಿ ಗಣತಿ ವರದಿ ಸಂಬಂಧಿಸಿದ ಚರ್ಚೆಗೆ ಮಾಜಿ ಸಚಿವ ಡಿಸಿಎಂ ಮನೆಗೆ ಬಂದರೇ?
ಜಾತಿ ಗಣತಿ ವರದಿ ಸಂಬಂಧಿಸಿದ ಚರ್ಚೆಗೆ ಮಾಜಿ ಸಚಿವ ಡಿಸಿಎಂ ಮನೆಗೆ ಬಂದರೇ?
‘ಈ ಸಲ ಕಪ್ ನಮ್ದೇ ಅಂತ ಮಾತ್ರ ಹೇಳಬೇಡಿ’; ಅನಿಲ್ ಕುಂಬ್ಳೆ ಮಾತು
‘ಈ ಸಲ ಕಪ್ ನಮ್ದೇ ಅಂತ ಮಾತ್ರ ಹೇಳಬೇಡಿ’; ಅನಿಲ್ ಕುಂಬ್ಳೆ ಮಾತು
ಸಂಬಂಧಪಟ್ಟ ಸಚಿವರಿಂದ ಜಾತಿ ಗಣತಿ ವರದಿಯಲ್ಲಿನ ಮಾಹಿತಿ ಸಂಗ್ರಹಿಸಬೇಕು: ಸಚಿವ
ಸಂಬಂಧಪಟ್ಟ ಸಚಿವರಿಂದ ಜಾತಿ ಗಣತಿ ವರದಿಯಲ್ಲಿನ ಮಾಹಿತಿ ಸಂಗ್ರಹಿಸಬೇಕು: ಸಚಿವ
ಯುವತಿಗೆ ಪ್ರೊಪೋಸ್​ ಮಾಡಲು ರಿಂಗ್ ಹಿಡಿದು ಫಾಲ್ಸ್ ಬಳಿ ಹೋದ ವ್ಯಕ್ತಿ
ಯುವತಿಗೆ ಪ್ರೊಪೋಸ್​ ಮಾಡಲು ರಿಂಗ್ ಹಿಡಿದು ಫಾಲ್ಸ್ ಬಳಿ ಹೋದ ವ್ಯಕ್ತಿ
ಕಾಂಗ್ರೆಸ್ ಮುಖಂಡರು ಎದುರಾದಾಗ ಮಾತಾಡದೆ ವಾಪಸ್ಸಾದ ವಿಜಯೇಂದ್ರ
ಕಾಂಗ್ರೆಸ್ ಮುಖಂಡರು ಎದುರಾದಾಗ ಮಾತಾಡದೆ ವಾಪಸ್ಸಾದ ವಿಜಯೇಂದ್ರ