ಆ್ಯಂಟಿ ಬಯೋಟಿಕ್​ ಪ್ರತಿರೋಧಕ ಸೋಂಕುಗಳಿಂದ 2019ರಲ್ಲಿ 12 ಲಕ್ಷ ಮಂದಿ ಸಾವು; ಔಷಧಕ್ಕೂ ಬಗ್ಗದ ಸೂಪರ್​ಬಗ್ಸ್​ಗಳ ಅಪಾಯ ತೆರೆದಿಟ್ಟ ಅಧ್ಯಯನ !

Anti-Biotic Resistant Superbugs: ಸೂಪರ್​ಬಗ್​​​ಗಳೆಂದರೆ ಬ್ಯಾಕ್ಟೀರಿಯಾದ ತಳಿಗಳು. ಅತಿ ಸೂಕ್ಷ್ಮ ವೈರಾಣುಗಳಾಗಿದ್ದು ರೋಗಕಾರಕಗಳಾಗಿವೆ. ರೋಗನಿರೋಧಕ ಶಕ್ತಿಯನ್ನು ಕುಗ್ಗಿಸುತ್ತವೆ ಮತ್ತು ಈ ಪ್ರತಿರೋಧಕಗಳನ್ನು ಹೆಚ್ಚಿಸಿಕೊಳ್ಳಲು ನಾವು ಯಾವುದೇ ಔಷಧ ತೆಗೆದುಕೊಂಡರೂ ಅವು ಪ್ರಭಾವ ಬೀರದಂತೆ ಮಾಡುತ್ತವೆ.

ಆ್ಯಂಟಿ ಬಯೋಟಿಕ್​ ಪ್ರತಿರೋಧಕ ಸೋಂಕುಗಳಿಂದ 2019ರಲ್ಲಿ 12 ಲಕ್ಷ ಮಂದಿ ಸಾವು; ಔಷಧಕ್ಕೂ ಬಗ್ಗದ ಸೂಪರ್​ಬಗ್ಸ್​ಗಳ ಅಪಾಯ ತೆರೆದಿಟ್ಟ ಅಧ್ಯಯನ !
ಸಾಂಕೇತಿಕ ಚಿತ್ರ
Follow us
TV9 Web
| Updated By: Lakshmi Hegde

Updated on: Jan 20, 2022 | 11:14 AM

ಆ್ಯಂಟಿ ಬಯೋಟಿಕ್​ ಪ್ರತಿರೋಧಕ ಸೋಂಕುಗಳಿಂದಾಗಿ 2019ರಲ್ಲಿ 1.2 ಮಿಲಿಯನ್  (ಅಂದಾಜು 12 ಲಕ್ಷ) ಜನರು ಮೃತಪಟ್ಟಿದ್ದಾರೆ ಎಂದು ಅಧ್ಯಯನವೊಂದು ತಿಳಿಸಿದ್ದಾಗಿ ವೈದ್ಯಕೀಯ ಮ್ಯಾಗ್​ಜಿನ್​ ದಿ ಲ್ಯಾನ್ಸೆಂಟ್​  ಜರ್ನಲ್​ ವರದಿ ಮಾಡಿದೆ.  ‘The overlooked pandemic of antimicrobial resistance ಎಂಬ ಶೀರ್ಷಿಕೆಯಲ್ಲಿ ಈ ಅಧ್ಯಯನ ವರದಿ ಪ್ರಕಟಗೊಂಡಿದೆ. ಸೂಪರ್​ಬಗ್​​ಗಳು ಎಂದು ಕರೆಯಲ್ಪಡುವ ಬ್ಯಾಕ್ಟೀರಿಯಾ ತಳಿಗಳಿಂದ ಜಾಗತಿಕವಾಗಿ ಆಗುತ್ತಿರುವ ಅಪಾಯದ ಬಗ್ಗೆ ಈ ವರದಿ ವಿಸ್ತರಿಸಿದೆ. ಸೂಪರ್​ಬಗ್​ಗಳು ಎಂದರೆ ಬ್ಯಾಕ್ಟೀರಿಯಾದ ರೂಪಾಂತರಿಗಳು. ಇವರು ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ಕುಂದಿಸುತ್ತವೆ.  ನಮ್ಮ ದೇಹದಲ್ಲಿನ ಪ್ರತಿ ಜೀವಕ (ರೋಗ ನಿರೋಧಕ) ಶಕ್ತಿಗೆ ಸೂಪರ್​ಬಗ್​ಗಳು ಮಾರಕವಾಗಿದ್ದು, ವಿವಿಧ ರೋಗಗಳಿಗೆ ಕಾರಣವಾಗುತ್ತವೆ. ಅಂಥ ಸೂಪರ್​ಬಗ್​​ಗಳ ಕಾರಣದಿಂದ 2019ರಲ್ಲಿ ಬರೋಬ್ಬರಿ 12 ಲಕ್ಷ ಮಂದಿ ಜೀವ ಕಳೆದುಕೊಂಡಿದ್ದಾರೆ ಎಂದು ಹೇಳಲಾಗಿದೆ.

ಅಂದಹಾಗೇ, ಈ ಅಧ್ಯಯನವನ್ನು ವಾಷಿಂಗ್ಟನ್ ವಿಶ್ವವಿದ್ಯಾಲಯ ಮತ್ತು ಆಕ್ಸ್‌ಫರ್ಡ್ ವಿಶ್ವವಿದ್ಯಾಲಯಗಳ ಸಂಶೋಧಕರು ನಡೆಸಿದ್ದರು. 2019ರಲ್ಲಿ ಜಾಗತಿಕವಾಗಿ ಎಚ್​ಐವಿ 6,80,000ಮಂದಿಯ ಪ್ರಾಣ ತೆಗೆದಿದ್ದರೆ, ಮಲೇರಿಯಾ 6,27,000 ಜನರ ಜೀವ ಬಲಿಪಡೆದಿದೆ. ಆದರೆ ಈ ಆ್ಯಂಟಿ ಮೈಕ್ರೋಬಿಯಲ್​ ಪ್ರತಿರೋಧ (ಎಎಂಆರ್​) ಸೋಂಕು ಇವೆರಡನ್ನೂ ಸೇರಿಸಿದರೆ ಬರುವ ಮೊತ್ತದಷ್ಟು ಅಂದರೆ 12 ಲಕ್ಷಕ್ಕೂ ಹೆಚ್ಚು ಮಂದಿಗೆ ಜೀವ ಕಳೆದಿದೆ ಎಂದು ಅಧ್ಯಯನಕಾರರು ತಿಳಿಸಿದ್ದಾರೆ.

ಹೀಗೆ ಆ್ಯಂಟಿ ಬಯೋಟಿಕ್​ ಪ್ರತಿರೋಧಕ ಸೋಂಕಿನಿಂದ ಅಂದಾಜು 7 ಲಕ್ಷ ಮಂದಿ ಸತ್ತಿರಬಹುದು ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿಕೆ ಬಿಡುಗಡೆ ಮಾಡಿತ್ತು. ಆದರೆ ಡಬ್ಲ್ಯೂಎಚ್​​ಒ ಮಾಡಿದ ಅಂದಾಜಿಗಿಂತಲೂ ಸಾವಿನ ಸಂಖ್ಯೆ ಅತ್ಯಂತ ಹೆಚ್ಚಾಗಿದೆ ಎಂದು ಅಧ್ಯಯನ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಅಷ್ಟೇ ಅಲ್ಲ, ಇಂಥ ಎಎಂಆರ್ ಸೋಂಕಿನಿಂದ ಎದುರಾಗುತ್ತಿರುವ ಪ್ರಾಣಾಪಾಯವನ್ನು ತಡೆಯಲು ಆದಷ್ಟು ಶೀಘ್ರದಲ್ಲೇ ಕ್ರಮ ಕೈಗೊಳ್ಳಬೇಕು ಎಂದು ಅಧ್ಯಯನಕಾರರು ಒತ್ತಾಯಿಸಿದ್ದಾರೆ.

ಅಧ್ಯಯನದಲ್ಲಿ ಪಾಲ್ಗೊಂಡವರಲ್ಲಿ ಒಬ್ಬರಾದ ವಾಷಿಂಗ್ಟನ್​ ಯೂನಿವರ್ಸಿಟಿಯ ಕ್ರಿಸ್​ ಮುರ್ರೇ ಅವರು ಪ್ರತಿಕ್ರಿಯೆ ನೀಡಿ, ಈ ದತ್ತಾಂಶಗಳು ಆ್ಯಂಟಿ ಮೈಕ್ರೋಬಿಯಲ್​ ರೆಸಿಸ್ಟನ್ಸ್​ ಸೋಂಕಿನ ಅಪಾಯದ ಮಟ್ಟದ ನೈಜತೆಯನ್ನು ತೋರಿಸುತ್ತಿವೆ. ವಿಶ್ವದಾದ್ಯಂತ ಈ ಸೋಂಕುಗಳು ಬೆದರಿಕೆ ಒಡ್ಡುತ್ತಿವೆ. ಅದರ ವಿರುದ್ಧ ಹೋರಾಡಲೇಬೇಕಾದ ಅನಿವಾರ್ಯತೆಯನ್ನು ಈ ಅಧ್ಯಯನ ಎತ್ತಿಹಿಡಿದಿದೆ. 2050ರ ಹೊತ್ತಿಗೆ ಸೂಪರ್​ಬಗ್​​ಗಳು ವಾರ್ಷಿಕ 10 ಮಿಲಿಯನ್​ ಜನರನ್ನು ಕೊಲ್ಲಬಹುದು ಎಂದು ಹಿಂದಿನ ಅಧ್ಯಯನಗಳು ಅಂದಾಜಿಸಿದ್ದವು. ಆದರೆ ಈಗ ಆಗುತ್ತಿರುವ ಬೆಳವಣಿಗೆ ನೋಡಿದರೆ ಆ ಸಂಖ್ಯೆಯನ್ನು ತಲುಪಲು 2050ರವರೆಗೆ ಕಾಯಬೇಕಾಗಿಲ್ಲ. ಅದಕ್ಕೂ ಮೊದಲೇ ವಾರ್ಷಿಕ 10 ಮಿಲಿಯನ್ ಜನರು ಸಾಯುವಂತೆ ಆಗಬಹುದು ಎನ್ನಿಸುತ್ತದೆ. ನಮ್ಮ ಅಧ್ಯಯನದ ದತ್ತಾಂಶ ಸುಮಾರು 204 ದೇಶಗಳು, ಪ್ರಾದೇಶಿಕ ಸ್ಥಳಗಳ ಸಾರ್ವಜನಿಕ ಆರೋಗ್ಯ ವ್ಯವಸ್ಥೆ, ಔಷಧೀಯ ಕಣ್ಗಾವಲು ಜಾಲಗಳು, ಹಿಂದಿನ ಅಧ್ಯಯನಗಳು ಸೇರಿ ಅನೇಕ ಪೂರಕ ಅಂಶಗಳ ದತ್ತಾಂಶಗಳನ್ನು ಒಳಗೊಂಡಿದೆ ಎಂದು ತಿಳಿಸಿದ್ದಾರೆ.

ಏನಿದು ಸೂಪರ್​ಬಗ್​​ಗಳು? ಸೂಪರ್​ಬಗ್​​​ಗಳೆಂದರೆ ಬ್ಯಾಕ್ಟೀರಿಯಾದ ತಳಿಗಳು. ಅತಿ ಸೂಕ್ಷ್ಮ ವೈರಾಣುಗಳಾಗಿದ್ದು ರೋಗಕಾರಕಗಳಾಗಿವೆ. ರೋಗನಿರೋಧಕ ಶಕ್ತಿಯನ್ನು ಕುಗ್ಗಿಸುತ್ತವೆ ಮತ್ತು ಈ ಪ್ರತಿರೋಧಕಗಳನ್ನು ಹೆಚ್ಚಿಸಿಕೊಳ್ಳಲು ನಾವು ಯಾವುದೇ ಔಷಧ ತೆಗೆದುಕೊಂಡರೂ ಅವು ಪ್ರಭಾವ ಬೀರದಂತೆ ಮಾಡುತ್ತವೆ. ಆ ಪ್ರತಿರೋಧಕ ಔಷಧ, ಮಾತ್ರೆಗಳನ್ನೂ ಈ ಬಗ್​​ಗಳೇ ತಿನ್ನುತ್ತವೆ. ಕಡಿಮೆ ಪ್ರಮಾಣದ ಔಷಧಿಗಳಿಗೆಲ್ಲ ಬಗ್ಗದ ಈ ಸೋಂಕು ನಿವಾರಣೆಗೆ ಕಟ್ಟಕಡೆಯದಾಗಿ ಆಯ್ಕೆ ಮಾಡಿಕೊಳ್ಳುವ ಚಿಕಿತ್ಸೆ ದುಬಾರಿಯೂ ಹೌದು, ಅದು ಸ್ವಲ್ಪಮಟ್ಟಿಗೆ ವಿಷಕಾರಿಯೂ ಆಗಿರುತ್ತದೆ. ಹೀಗಾಗಿ ಇಂಥ ರೋಗನಿರೋಧಕ ತಡೆ ಸೋಂಕುಗಳು ತಗುಲುವ ವ್ಯಕ್ತಿಗಳು ಸಾಯುತ್ತಾರೆ.

ಇದನ್ನೂ ಓದಿ: Sankashti Chaturthi 2022: ಇಷ್ಟಾರ್ಥ ಸಿದ್ಧಿ ಸಂಕಷ್ಟ ಚತುರ್ಥಿ; ಆಚರಣೆ, ಚಂದ್ರೋದಯದ ಸಮಯದ ಬಗ್ಗೆ ತಿಳಿಯಿರಿ

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್