AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪ್ರಧಾನಿ ಭದ್ರತೆ ಲೋಪವಾಗಿದ್ದಕ್ಕೆ ಪ್ರತೀಕಾರ ಇದು; ಸೋದರಳಿಯನ ಮನೆ ಮೇಲೆ ಇ.ಡಿ. ದಾಳಿ ಆಗಿದ್ದಕ್ಕೆ ಸಿಎಂ ಛನ್ನಿ ಆಕ್ರೋಶ

ಪ್ರಧಾನಿ ಮೋದಿಯವರ ಫಿರೋಜ್​ಪುರ ಭೇಟಿ ಸಂದರ್ಭವನ್ನು ಮರೆಯಬೇಡಿ ಎಂದು ಇ.ಡಿ. ದಾಳಿ ನಡೆಸಲು ಬಂದಾಗ ಹೇಳಿತ್ತು ಎಂದೂ ಸಿಎಂ ಛನ್ನಿ ಪ್ರತಿಪಾದಿಸಿದ್ದಾರೆ.

ಪ್ರಧಾನಿ ಭದ್ರತೆ ಲೋಪವಾಗಿದ್ದಕ್ಕೆ ಪ್ರತೀಕಾರ ಇದು; ಸೋದರಳಿಯನ ಮನೆ ಮೇಲೆ ಇ.ಡಿ. ದಾಳಿ ಆಗಿದ್ದಕ್ಕೆ ಸಿಎಂ ಛನ್ನಿ ಆಕ್ರೋಶ
ಚರಣ್​​ಜಿತ್ ಸಿಂಗ್ ಚನ್ನಿ
TV9 Web
| Updated By: Lakshmi Hegde|

Updated on:Jan 20, 2022 | 9:29 AM

Share

ತಮ್ಮ ಸೋದರಳಿಯನ  ಮನೆ ಮೇಲೆ ನಡೆದ ಇ.ಡಿ. ದಾಳಿಯನ್ನು ಪಂಜಾಬ್​ ಮುಖ್ಯಮಂತ್ರಿ ಚರಣಜಿತ್ ಸಿಂಗ್​ ಛನ್ನಿ(Charanjit Singh Channi), ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಭದ್ರತಾ ಲೋಪಕ್ಕೆ (PM Security Breach) ಲಿಂಕ್​ ಮಾಡಿದ್ದಾರೆ. ಅಂದರೆ ಪ್ರಧಾನಿ ನರೇಂದ್ರ ಮೋದಿಯವರು ಪಂಜಾಬ್​ಗೆ ಭೇಟಿ ಕೊಟ್ಟಿದ್ದಾಗ ಅವರ ಭದ್ರತೆಯಲ್ಲಿ ಲೋಪವುಂಟಾಗಿದ್ದಕ್ಕೆ ಪ್ರತಿಯಾಗಿ ಕೇಂದ್ರ ಸರ್ಕಾರ ಈ ಇ.ಡಿ.ದಾಳಿ ನಡೆಸಿದೆ ಎಂದು ಹೇಳಿದ್ದಾರೆ.  ಇತ್ತೀಚೆಗಷ್ಟೇ ಪಂಜಾಬ್ ಸಿಎಂ ಸೋದರಳಿಯ ಭೂಪಿಂದರ್ ಸಿಂಗ್ ಹನಿ ವಿರುದ್ಧ ಅಕ್ರಮ ಮರಳು ಗಣಿಗಾರಿಕೆ ಆರೋಪದಡಿ ಜಾರಿ ನಿರ್ದೇಶನಲಾಯದ ಅಧಿಕಾರಿಗಳು ದಾಳಿ ನಡೆಸಿದ್ದರು. ಒಟ್ಟು 10-12 ಸ್ಥಳಗಳ ಮೇಲೆ ಇ.ಡಿ. ರೇಡ್​ ಆಗಿತ್ತು. ಅದರಲ್ಲಿ ಭೂಪಿಂದರ್​ ಸಿಂಗ್​ ಹನಿಗೆ ಸೇರಿದ ಪ್ರದೇಶದ ಮೇಲೆಯೂ ನಡೆದಿತ್ತು. 

ಈ ವಿಚಾರವಾಗಿ ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದ ಛನ್ನಿ, ಜಾರಿ ನಿರ್ದೇಶನಲಾಯ, ಆದಾಯ ತೆರಿಗೆ ಇಲಾಖೆ ಮತ್ತಿತರ ತನಿಖಾ ದಳಗಳನ್ನು ಕೇಂದ್ರ ಸರ್ಕಾರ  ತಮಗೆ ಬೇಕಾದಂತೆ ಬಳಸಿಕೊಳ್ಳುತ್ತಿದೆ. ರಾಜ್ಯ ಸರ್ಕಾರಗಳ ವಿರುದ್ಧ ಪ್ರತೀಕಾರಕ್ಕೆ ಬಳಸಿಕೊಳ್ಳುತ್ತಿದೆ ಎಂದು ಹೇಳಿದ್ದಾರೆ. ಅಷ್ಟೇ ಅಲ್ಲ, ಪ್ರಧಾನಿ ಮೋದಿಯವರ ಫಿರೋಜ್​ಪುರ ಭೇಟಿ ಸಂದರ್ಭವನ್ನು ಮರೆಯಬೇಡಿ ಎಂದು ಇ.ಡಿ. ದಾಳಿ ನಡೆಸಲು ಬಂದಾಗ ಹೇಳಿತ್ತು ಎಂದೂ ಸಿಎಂ ಛನ್ನಿ ಪ್ರತಿಪಾದಿಸಿದ್ದಾರೆ. ಇದು ಪಕ್ಕಾ ಪ್ರತೀಕಾರದ ದಾಳಿಯಾಗಿದೆ. ನನ್ನನ್ನು ಸಿಕ್ಕಿಹಾಕಿಸುವ ಸಲುವಾಗಿ ನನ್ನ ಸೋದರಳಿಯನನ್ನು 24 ಗಂಟೆಗಳ ಕಾಲ ವಿಚಾರಣೆ ನಡೆಸಿದ್ದಾರೆ.

ನನ್ನ ವಿರುದ್ಧ ಇ.ಡಿ.ಗೆ ಯಾವುದೇ ಪುರಾವೆಯೂ ಸಿಕ್ಕಿಲ್ಲ. ಪಂಜಾಬ್​ ಮತ್ತು ಪಶ್ಚಿಮ ಬಂಗಾಳದಲ್ಲಿ ಕ್ರಾಂತಿ ಈಗಾಗಲೇ ಶುರುವಾಗಿದೆ. ದೆಹಲಿ ಸರ್ಕಾರ (ಕೇಂದ್ರ ಸರ್ಕಾರ) ನಮ್ಮನ್ನು ಹತ್ತಿಕ್ಕಲು ಪ್ರಯತ್ನಿಸಿತು. ಆದರೆ ನಾವು ಅದಕ್ಕೆ ಪ್ರತಿಯಾಗಿ ಹೊಡೆತ ಕೊಟ್ಟಿದ್ದೇವೆ. ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ನಮ್ಮನ್ನು ಸೋಲಿಸುವ ಪ್ರಯತ್ನ ಮಾಡುತ್ತಿರುವ ಬಿಜೆಪಿ, ನನ್ನನ್ನು ಟಾರ್ಗೆಟ್​ ಮಾಡುತ್ತಿದೆ. ಆದರೆ ಇವರು ಸಾಗುತ್ತಿರುವ ಮಾರ್ಗ ಪ್ರಜಾಪ್ರಭುತ್ವಕ್ಕೆ ಒಳ್ಳೆಯದಲ್ಲ ಎಂದಿದ್ದಾರೆ. ಅಂದಹಾಗೆ, ಭೂಪಿಂದರ್​ ಹನಿ ಅವರ ಮೊಹಾಲಿಯಲ್ಲಿರುವ ಮನೆ ಮೇಲೆ ದಾಳಿ ನಡೆಸಿದ ಇ.ಡಿ. ಅಧಿಕಾರಿಗಳು 10 ಕೋಟಿ ರೂ.ನಗದು ಮತ್ತು 21 ಲಕ್ಷ ರೂ.ಮೌಲ್ಯದ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದೆ.

ಸಿಎಂ ಛನ್ನಿ ಸೋದರಳಿಯನ ಮನೆ ಮೇಲೆ ಇ.ಡಿ.ದಾಳಿಯಾಗುತ್ತಿದ್ದಂತೆ ಕಾಂಗ್ರೆಸ್​ ಬಿಜೆಪಿ ವಿರುದ್ಧ ಆರೋಪ ಮಾಡಿತ್ತು. ಒಂದು ಹಳೇ ಪ್ರಕರಣದ ನೆಪ ಇಟ್ಟುಕೊಂಡು ಈಗ ಕೇಂದ್ರ ಸರ್ಕಾರ ಪಂಜಾಭ್​ ಮತ್ತು ಪಂಜಾಬಿಯತ್​​ಗೆ ಅವಮಾನ ಮಾಡುತ್ತಿದೆ. ಈ ರಾಜ್ಯದ ಜನರೇ ಇದಕ್ಕೆಲ್ಲ ತಕ್ಕ ಶಾಸ್ತಿ ಮಾಡುತ್ತಾರೆ. ಮುಂದಿನ ಚುನಾವಣೆಯಲ್ಲಿ ಬಿಜೆಪಿಗೆ ಸರಿಯಾದ ಪಾಠ ಕಲಿಸುತ್ತಾರೆ ಎಂದು ಹೇಳಿತ್ತು. ಆದರೆ ಪಂಜಾಬ್​​ನಲ್ಲಿ ಅಕ್ರಮ ಮರಳು ಗಣಿಗಾರಿಕೆ ಹೆಚ್ಚುತ್ತಿರುವ ಬಗ್ಗೆ ಆಮ್​ ಆದ್ಮಿ ಪಕ್ಷ ಕೂಡ ಧ್ವನಿ ಎತ್ತಿತ್ತು ಪಂಜಾಬ್​​ನಲ್ಲಿ ಅದರಲ್ಲೂ ಮುಖ್ಯಮಂತ್ರಿ ಛನ್ನಿ ಅವರ ಸ್ವಕ್ಷೇತ್ರ ಚಮಕೌರ್​ ಸಾಹಿಬ್​​ನಲ್ಲಿಯೇ  ಅಕ್ರಮ ಮರಳು ಗಣಿಗಾರಿಕೆ  ಜಾಸ್ತಿಯಾಗುತ್ತಿದೆ ಎಂದು ಆರೋಪಿಸಿತ್ತು.

ಇದನ್ನೂ ಓದಿ: ರೈತಾಪಿ ಜನರೇ ದಯವಿಟ್ಟು ರಸ್ತೆಯಲ್ಲಿ ಕಣ ಹಾಕಬೇಡಿ, ಗರ್ಭಿಣಿಯಿದ್ದ ಆ್ಯಂಬುಲೆನ್ಸ್ ರಸ್ತೆ ಮಧ್ಯೆ ಸಿಲುಕಿ ಪರದಾಟ

Published On - 9:29 am, Thu, 20 January 22

ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!