ಬೆಂಗಳೂರಿನಲ್ಲಿ ತುಂತುರು ಮಳೆ: ಬಿಸಿಲಿನಿಂದ ರೋಸಿ ಹೋಗಿದ್ದ ಸಿಲಿಕಾನ್ ಸಿಟಿ ಮಂದಿ ಖುಷ್​

| Updated By: ಕಿರಣ್ ಹನುಮಂತ್​ ಮಾದಾರ್

Updated on: Apr 20, 2024 | 3:40 PM

ರಾಜ್ಯದ ಹಲವೆಡೆ ವರುಣನ ಆಗಮನವಾಗಿದೆ. ಆದರೆ, ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಮಾತ್ರ ಮಳೆರಾಯ ಮುನಿಸಿಕೊಂಡಿದ್ದ. ಇಂದು(ಏ.20) ಬೆಂಗಳೂರಿನ ಹಲವೆಡೆ ತುಂತುರು ಮಳೆಯಾಗಿದ್ದು, ಬಿಸಿಲಿನ ಬೇಗೆಗೆ ಕಂಗೆಟ್ಟಿದ್ದ ಸಿಲಿಕಾನ್​ ಸಿಟಿ ಮಂದಿ ಫುಲ್​ ಖುಷ್​ ಆಗಿದ್ದಾರೆ.

ಬೆಂಗಳೂರಿನಲ್ಲಿ ತುಂತುರು ಮಳೆ: ಬಿಸಿಲಿನಿಂದ ರೋಸಿ ಹೋಗಿದ್ದ ಸಿಲಿಕಾನ್ ಸಿಟಿ ಮಂದಿ ಖುಷ್​
ಬೆಂಗಳೂರಿನಲ್ಲಿ ತುಂತುರು ಮಳೆ
Follow us on

ಬೆಂಗಳೂರು, ಏ.20: ಬಿಸಿಲಿನಿಂದ ರೋಸಿ ಹೋಗಿದ್ದ ಬೆಂಗಳೂರಿಗೆ ವರುಣ(Bengaluru Rain) ಆಗಮನವಾಗಿದ್ದು, ಸಿಟಿಯಲ್ಲಿ ತುಂತುರು ಮಳೆ ಆರಂಭವಾಗಿದೆ. ನಗರದ ಟೌನ್ ಹಾಲ್, ಮಾರ್ಕೆಟ್, ಕೆಆರ್ ಸರ್ಕಲ್, ವಿಧಾನಸೌಧ, ಜೆ.ಪಿ.ನಗರ, ಕಾರ್ಪೊರೇಷನ್ ಸರ್ಕಲ್, ಮೈಸೂರ್ ಬ್ಯಾಂಕ್ ಸರ್ಕಲ್ , ಸೇರಿದಂತೆ ಹಲವೆಡೆ ತುಂತುರು ಮಳೆ ಶುರುವಾಗಿದ್ದು, ಬಿಸಿಲಿನಿಂದ ಕಂಗೆಟ್ಟಿದ್ದ ಸಿಲಿಕಾನ್ ಸಿಟಿ ಮಂದಿ ಫುಲ್​ ಖುಷ್​ ಆಗಿದ್ದಾರೆ.

ಬೆಳಿಗ್ಗೆಯಿಂದ ನಗರದಲ್ಲಿ ಮೋಡ ಕವಿದ ವಾತಾವರಣ

ಮುಂಜಾನೆಯಿಂದಲೂ ಕೆಲವೆಡೆ ಮೋಡ ಕವಿದ ವಾತಾವರಣ ಹಿನ್ನಲೆ ನಗರದ ಕೆಲವೆಡೆ ಲಘು ಮಳೆಯಾಗಿದೆ. ಎರಡು ದಿನ ಕಾಲ ಬೆಂಗಳೂರಿನಲ್ಲಿ ಹಗುರ ಮಳೆ ಕುರಿತು ಹವಾಮಾನ ಇಲಾಖೆ‌ ಮೂನ್ಸುಚನೆ ನೀಡಿತ್ತು. ನಿನ್ನೆ ಕೂಡ ನಗರದ ಕೆಂಗೇರಿ, ಆರ್ ಆರ್ ನಗರದಲ್ಲಿ ಮಳೆಯಾಗಿತ್ತು. ಇವತ್ತು ಕೂಡ ನಗರದ ಹಲವೆಡೆ ಲಘು ಮಳೆಯಾಗಿದೆ.

ಇದನ್ನೂ ಓದಿ:ಕೊಪ್ಪಳ ಮತ್ತು ಸುತ್ತಮುತ್ತಲ ಏರಿಯಾಗಳಲ್ಲಿ ಜೋರು ಮಳೆ, ಬೇಸಿಗೆಯ ಧಗೆಯಿಂದ ಕಂಗೆಟ್ಟಿದ್ದ ಜನರಲ್ಲಿ ಸಂತಸ

ಹವಾಮಾನ ಇಲಾಖೆಯಿಂದ ಯಾವುದೇ ಅಲರ್ಟ್ ಘೋಷಣೆ ಇಲ್ಲ. ಇನ್ನು ನಗರದ ಉಷ್ಣತಾಮಾನದಲ್ಲಿ ಇಳಿಕೆ ಕಂಡಿದೆ. ಸುಮಾರು 2 ತಿಂಗಳ ಬಳಿಕ ನಗರದಲ್ಲಿ ತಾಪಮಾನದಲ್ಲಿ ಇಳಿಕೆಯಾಗಿದ್ದು, ಸಧ್ಯ ಬೆಂಗಳೂರಿನಲ್ಲಿ ವಾತಾವರಣ ತಂಪಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:21 pm, Sat, 20 April 24