ಹಿಂದೂ ವಿರೋಧಿ ಇದ್ದರೆ ಅದು ಸಿದ್ದರಾಮಯ್ಯ, ಈತ ರಾಯಣ್ಣನ ಹೆಸರು ಹೇಳುವುದಕ್ಕೂ ನಾಲಾಯಕ್ -ಎನ್.ರವಿಕುಮಾರ್

ಬೆಂಗಳೂರಿನಲ್ಲಿ ಬಿಜೆಪಿ ಎಂಎಲ್​ಸಿ ಎನ್.ರವಿಕುಮಾರ್ ಅವರು ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ನೀವು ಸಂಗೊಳ್ಳಿ ರಾಯಣ್ಣ ಜೊತೆ ಹೋಲಿಕೆ ಮಾಡಿಕೊಳ್ಳಬೇಡಿ. ರಾಯಣ್ಣ ಒಂದು ಎಕರೆ ಜಾಗವನ್ನೂ ತನ್ನ ಕುಟುಂಬಕ್ಕೆ ಮಾಡಿಕೊಂಡವರಲ್ಲ ಎಂದು ಕಿಡಿಕಾರಿದ್ದಾರೆ.

ಹಿಂದೂ ವಿರೋಧಿ ಇದ್ದರೆ ಅದು ಸಿದ್ದರಾಮಯ್ಯ, ಈತ ರಾಯಣ್ಣನ ಹೆಸರು ಹೇಳುವುದಕ್ಕೂ ನಾಲಾಯಕ್ -ಎನ್.ರವಿಕುಮಾರ್
ಸಿದ್ದರಾಮಯ್ಯ, ಎಂಎಲ್​ಸಿ ಎನ್.ರವಿಕುಮಾರ್
Follow us
| Updated By: ಆಯೇಷಾ ಬಾನು

Updated on: Sep 18, 2024 | 12:29 PM

ಬೆಂಗಳೂರು, ಸೆ.18: ಸಂಗೊಳ್ಳಿ ರಾಯಣ್ಣನ ಹೆಸರು ಹೇಳುವುದಕ್ಕೂ ಸಿದ್ದರಾಮಯ್ಯ (Siddaramaiah) ನಾಲಾಯಕ್. ನೀವು ಸಂಗೊಳ್ಳಿ ರಾಯಣ್ಣನ (Sangolli Rayanna) ಜೊತೆ ಹೋಲಿಕೆ ಮಾಡಿಕೊಳ್ಳಬೇಡಿ. ಸಂಗೊಳ್ಳಿ ರಾಯಣ್ಣ ನಿಮ್ಮ ಹಾಗೆ ಕುಟುಂಬಕ್ಕೆ ಆಸ್ತಿ ಮಾಡಿದವರಲ್ಲ. ನಿಮ್ಮ ಹಾಗೆ ರಾಯಣ್ಣ 14 ಸೈಟ್ ಪಡೆದವರಲ್ಲ ಎಂದು ಬೆಂಗಳೂರಿನಲ್ಲಿ ಬಿಜೆಪಿ ಎಂಎಲ್​ಸಿ ಎನ್.ರವಿಕುಮಾರ್ (N Ravi kumar) ಅವರು ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಸಂಗೊಳ್ಳಿ ರಾಯಣ್ಣನನ್ನು ಸೋಲಿಸಿದ್ದು ನಮ್ಮವರೇ, ಈಗ ನನ್ನ ಸಿಎಂ ಸ್ಥಾನದಿಂದ ಕೆಳಗಿಳಿಸಿದರೆ ಸುಮ್ಮನೆ ಇರುತ್ತೀರಾ ಎಂದು ಸಿಎಂ ಸಿದ್ದರಾಮಯ್ಯ ಭಾಷಣವೇಳೆ ಹೇಳಿದ್ದರು. ಈ ಮಾತಿಗೆ ಸಂಬಂಧಿಸಿ ಬಿಜೆಪಿ ಎಂಎಲ್​ಸಿ ಎನ್.ರವಿಕುಮಾರ್ ವಾಗ್ದಾಳಿ ನಡೆಸಿದ್ದಾರೆ. ಸಿದ್ದರಾಮಯ್ಯನವರೇ ನಿಮ್ಮ ಪಾರ್ಟಿಯಲ್ಲೇ ನಿಮ್ಮನ್ನು ಕೆಳಗಿಳಿಸುವ ಪ್ರಯತ್ನ ಮಾಡುತ್ತಿರುವುದು ಯಾರು? ನಿಮಗೆ ನಿಮ್ಮ ಪಾರ್ಟಿಯಲ್ಲಿ ಮೋಸ, ದ್ರೋಹ ಮಾಡುತ್ತಿರುವುದು ಯಾರು? ಹೆಸರು ಹೇಳಿ?

ನೀವು ಸಂಗೊಳ್ಳಿ ರಾಯಣ್ಣ ಜೊತೆ ಹೋಲಿಕೆ ಮಾಡಿಕೊಳ್ಳಬೇಡಿ. ರಾಯಣ್ಣ ಒಂದು ಎಕರೆ ಜಾಗವನ್ನೂ ತನ್ನ ಕುಟುಂಬಕ್ಕೆ ಮಾಡಿಕೊಂಡವರಲ್ಲ. ರಾಯಣ್ಣ ನಿಮ್ಮ ಹಾಗೆ ಕುಟುಂಬಕ್ಕೆ ಆಸ್ತಿ ಮಾಡಿದವರಲ್ಲ. ನಿಮ್ಮ ಹಾಗೆ ರಾಯಣ್ಣ 14 ಸೈಟ್ ಪಡೆದವರಲ್ಲ. ನೀವು ರಾಜ್ಯದ ಜನರ ಕ್ಷಮೆ ಕೇಳಬೇಕು. ರಾಯಣ್ಣನ ಹೆಸರು ಹೇಳುವುದಕ್ಕೂ ನೀವು ನಾಲಾಯಕ್. ರಾಣಿ ಚೆನ್ನಮ್ಮನ ಹೆಸರು ಹೇಳಲೂ ನೀವು ಲಾಯಕ್ ಇಲ್ಲ ಎಂದು ಆಕ್ರೋಶ ಹೊರಹಾಕಿದ್ದಾರೆ.

ಇದನ್ನೂ ಓದಿ: ಮೆಡಿಕಲ್​ಗಳಲ್ಲೂ ಸಿಂಥೆಟಿಕ್ ಡ್ರಗ್ಸ್: ಗೃಹ ಸಚಿವ ಪರಮೇಶ್ವರ್ ಹೇಳಿದ್ದೇನು ನೋಡಿ

ಇನ್ನು ಇದೇ ವೇಳೆ ನಾಗಮಂಗಲದಲ್ಲಿ ಗಣೇಶ ವಿಸರ್ಜನೆ ವೇಳೆ ಗಲಭೆ ಪ್ರಕರಣಕ್ಕೆ ಸಂಬಂಧಿಸಿ ಮಾತನಾಡಿದ ರವಿಕುಮಾರ್ ಅವರು, ಹಿಂದೂ ವಿರೋಧಿ ಇದ್ದರೆ ಅದು ಮುಖ್ಯಮಂತ್ರಿ ಸಿದ್ದರಾಮಯ್ಯ. ಅಶ್ವತ್ಥ್ ನೇತೃತ್ವದ ಸತ್ಯಶೋಧನಾ ಸಮಿತಿ ಸ್ಥಳಕ್ಕೆ ಭೇಟಿ ನೀಡಿತ್ತು. ದೇಶದ್ರೋಹಿ ಸಂಘಟನೆ ಬೆಂಬಲಿಸುವ SDPI ಸಹ ವರದಿಗೆ ಬಂದಿದೆ. ಅಬ್ದುಲ್ ಮಜೀದ್ ನೇತೃತ್ವದ ವರದಿ ನಮಗೆ ಈಗಾಗಲೇ ಗೊತ್ತಾಗಿದೆ. ಹಿಂದೂಗಳೇ ಮೆರವಣಿಗೆ ವೇಳೆ ಕಲ್ಲುತೂರಿದ್ರು ಅಂತಾ ವರದಿ ನೀಡ್ತಾರೆ. ಸಿದ್ದರಾಮಯ್ಯ ಆಡಳಿತದಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗುತ್ತಾರೆ. ಪ್ಯಾಲೆಸ್ತೇನ್ ಧ್ವಜ ಹಾರಾಟ,ರಾಮೇಶ್ವರಂ ಕೆಫೆ ಮೇಲೆ ಬಾಂಬ್ ಹಾಕಿದ್ದಾರೆ. ಕುಕ್ಕರ್ ಬ್ಲಾಸ್ಟ್ ಮಾಡುತ್ತಾರೆ. ಕರ್ನಾಟಕ ಸೇಫ್ ಅಂತ‌ ಅವರಿಗೆ ಅನ್ನಿಸಿದೆ ಎಂದು ಕಿಡಿಕಾರಿದರು.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ