ಬಿಜೆಪಿ-ಕಾಂಗ್ರೆಸ್ ನಡುವೆ ಸಮರ; ವಿಧಾನಸಭಾ ಚುನಾವಣೆಗೆ ಅಸ್ತ್ರವಾಗುತ್ತಾ ಗೋ ಹತ್ಯೆ ನಿಷೇಧ ಬಿಲ್?

| Updated By: ವಿವೇಕ ಬಿರಾದಾರ

Updated on: Dec 04, 2022 | 4:23 PM

ಇತ್ತೀಚೆಗೆ ಮಾತನಾಡಿದ್ದ ವಿಪಕ್ಷ ನಾಯಕ ಸಿದ್ದರಾಮಯ್ಯ, 2023ರಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ್ರೆ, ಗೋ ಹತ್ಯೆ ನಿಷೇಧವನ್ನ ವಾಪಸ್ ಪಡೆಯೋದಾಗಿ ಹೇಳಿದ್ದರು. ಗೋ ಹತ್ಯೆ ನಿಷೇಧ ಬಿಲ್ ಅಸ್ತ್ರವನ್ನ ಪ್ರಯೋಗಿಸಿದ್ರು.

ಬಿಜೆಪಿ-ಕಾಂಗ್ರೆಸ್ ನಡುವೆ ಸಮರ; ವಿಧಾನಸಭಾ ಚುನಾವಣೆಗೆ ಅಸ್ತ್ರವಾಗುತ್ತಾ ಗೋ ಹತ್ಯೆ ನಿಷೇಧ ಬಿಲ್?
ವಿಪಕ್ಷ ನಾಯಕ ಸಿದ್ದರಾಮಯ್ಯ
Follow us on

ಬೆಂಗಳೂರು: ಕಾಂಗ್ರೆಸ್‌ನ ಸಿದ್ರಾಮುಲ್ಲಾ ಖಾನ್‌ ಮತ್ತೆ ಅಧಿಕಾರಕ್ಕೆ ಬಂದರೆ ಹಿಂದೂ ಕಾರ್ಯಕರ್ತರ ಹತ್ಯೆಗಳು ನಡೆಯುತ್ತವೆ ಎಂದು ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕರ್ಯದರ್ಶಿ ಸಿ. ಟಿ ರವಿ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಈ  ನಡುವೆ ಮತ್ತೊಂದು ಮಾತಿನ ಯುದ್ಧ ಶುರುವಾಗಿದೆ. 2023ರ ಚುನಾವಣೆ ಮೇಲೆ ಕಣ್ಣಿಟ್ಟಿರೋ ಕಾಂಗ್ರೆಸ್, ಅಧಿಕಾರಕ್ಕೆ ಬಂದ್ರೆ ಗೋ ಹತ್ಯೆ ನಿಷೇಧ ಕಾಯ್ದೆ ವಾಪಸ್ ಪಡೀತಿವಿ ಎಂದಿದ್ದ ಸಿದ್ದರಾಮಯ್ಯಗೆ(Siddaramaiah) ಬಿಜೆಪಿ ತಿರುಗೇಟು ಕೊಟ್ಟಿದೆ. ಗೋ ಹತ್ಯೆ ನಿಷೇಧ ಅಸ್ತ್ರ(Anti-Cow Slaughter Bill) ಮಾಡಿಕೊಳ್ಳಲು ಮುಂದಾಗಿದ್ದ ಕಾಂಗ್ರೆಸ್​ ವಿರುದ್ಧ ಬಿಜೆಪಿ ಸಿಡಿದೆದ್ದಿದೆ.

ಗೋ ಹತ್ಯೆ ನಿಷೇಧ ಕಾಯ್ದೆ.. ತರಾತುರಿಯಲ್ಲಿ ಬಿಲ್‌ ಪಾಸ್ ಮಾಡಿದೆ. ಈ ಬಿಲ್‌ನಿಂದ ಪ್ರಯೋಜನವಿಲ್ಲ ಅಂತಾ ಗೋ ಹತ್ಯೆ ನಿಷೇಧ ಬಿಲ್‌ಗೆ ವಿರೋಧ ವ್ಯಕ್ತಪಡಿಸಿದ್ದ ಕಾಂಗ್ರೆಸ್, ಇದೀಗ ಚುನಾವಣಾ ಅಖಾಡದಲ್ಲಿ ಇದನ್ನೇ ಅಸ್ತ್ರ ಮಾಡಿಕೊಂಡು ಮುನ್ನಗ್ಗಲು ಕಾಂಗ್ರೆಸ್ ಅಸ್ತ್ರ ಮಾಡ್ಕೊಂಡಿದ್ಯಾ ಅನ್ನೋ ಪ್ರಶ್ನೆ ಎದ್ದಿದೆ. ಯಾಕಂದ್ರೆ, ಇತ್ತೀಚೆಗೆ ಮಾತನಾಡಿದ್ದ ವಿಪಕ್ಷ ನಾಯಕ ಸಿದ್ದರಾಮಯ್ಯ, 2023ರಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ್ರೆ, ಗೋ ಹತ್ಯೆ ನಿಷೇಧವನ್ನ ವಾಪಸ್ ಪಡೆಯೋದಾಗಿ ಹೇಳಿದ್ದರು. ಗೋ ಹತ್ಯೆ ನಿಷೇಧ ಬಿಲ್ ಅಸ್ತ್ರವನ್ನ ಪ್ರಯೋಗಿಸಿದ್ರು.

ಇದೀಗ ಸಿದ್ದರಾಮಯ್ಯ ಹೇಳಿಕೆ ಅಸ್ತ್ರವನ್ನೇ ಮುಂದುವರಿಸಿರೋ ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ, ಬಿಜೆಪಿ ವಿರುದ್ದ ಹರಿಹಾಯ್ದು, ಗೋ ಹತ್ಯೆ ನಿಷೇಧ ಬಿಲ್‌ನಿಂದ ಅದ್ಯಾರಿಗೆ ಪ್ರಯೋಜನ ಆಗಿದೆ ಅಂತಾ ಪ್ರಶ್ನಿಸಿದ್ರು. ಮತಕ್ಕಾಗಿ ತರಾತುರಿಯಲ್ಲಿ ಬಿಲ್ ಜಾರಿ ಮಾಡಿದ್ದಾರೆ ಅಂತಾ ವಾಗ್ದಾಳಿ ನಡೆಸಿದ್ರು.

ಇದನ್ನೂ ಓದಿ: ಸಿದ್ದರಾಮಯ್ಯ ಆರೋಗ್ಯ ವಿಚಾರಿಸಿದ ಮಾಜಿ ಸಿಎಂ ಎಸ್​.ಎಂ.ಕೃಷ್ಣ; ಕಾರ್ಯಕರ್ತರಿಂದ ವಿಶೇಷ ‌ಪೂಜೆ

ಗೋಹತ್ಯೆ ನಿಷೇಧದಿಂದ ನಷ್ಟ ಆಗಿಲ್ಲ ಎಂದ ಪ್ರಭು ಚೌಹಾಣ್

ಇನ್ನೂ ವಾಪಸ್ ಪಡೀತಿನಿ ಎಂದ ಸಿದ್ದು ಮಾತಿಗೆ ಮತ್ತು ಏನ್ ಪ್ರಯೋಜನ ಅಂತಾ ಪ್ರಶ್ನಿಸಿದ ಪ್ರಿಯಾಂಕ್ ಖರ್ಗೆಗೆ ಪಶುಸಂಗೋಪನ ಸಚಿವ ಪ್ರಭು ಚೌಹಾಣ್ ತಿರುಗೇಟು ಕೊಟ್ಟಿದ್ದಾರೆ. ನೀ ಯಾರಪ್ಪ ಗೋ ಹತ್ಯೆ ನಿಷೇಧ ಕಾಯ್ದೆ ತೆಗೀತಿನಿ ಅನ್ನೋಕೆ ಅಂತಾ ಪ್ರಶ್ನಿಸಿದ್ದಾರೆ.

ಗೋ ಹತ್ಯೆ ನಿಷೇಧ ಬಿಲ್ ದಂಗಲ್ ಒಂದ್ಕಡೆಯಾದ್ರೆ, ಮತ್ತೊಂದ್ಕಡೆ ರಾವಣ ಫೈಟ್ ತಾರಕಕ್ಕೇರಿದೆ. ಪ್ರಧಾನಿ ಮೋದಿಯವರನ್ನ ರಾವಣನಿಗೆ ಹೋಲಿಸಿ ಕುಟುಕಿದ್ದ ಖರ್ಗೆಗೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ತಿರುಗೇಟು ಕೊಟ್ಟಿದ್ದಾರೆ. ದಿನಕ್ಕೊಂದು ಮನಸ್ಥಿತಿ ಬದಲಿಸುವ ಕಾಂಗ್ರೆಸ್​ನವರೇ ರಾವಣ ಅಂತಾ ಪಂಚ್ ಕೊಟ್ಟಿದ್ದಾರೆ.

ನಿಮ್ಮ ಮುಖವನ್ನೇ ಎಷ್ಟು ಸಲ ನೋಡೋದು. ಕಾರ್ಪೋರೇಷನಲ್ಲಿ ನಿಮ್ಮ ಮುಖವನ್ನೇ ನೋಡೋದು. ಎಂಎಲ್‌ಎ ಎಲೆಕ್ಷನ್‌ನಲ್ಲಿ ನಿಮ್ಮ ಮುಖವನ್ನೇ ನೋಡೋದು. ಎಂಪಿ ಎಲೆಕ್ಷನ್‌ನಲ್ಲೂ ನಿಮ್ಮದೇ ಮುಖವನ್ನ ನೋಡೋದು. ನಿಮಗೇನು ರಾವಣನ ರೀತಿ 100 ಮುಖಗಳು ಇವೆಯಾ? ಎಂದಿದ್ದಾರೆ.

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 8:03 am, Sun, 4 December 22