ಕಾಂಗ್ರೆಸ್ ಮುಂಚೂಣಿ ನಾಯಕರೇ ಕ್ರಿಮಿನಲ್‌ ಹಿನ್ನೆಲೆ ಹೊಂದಿದ್ದಾರೆ; ಮಾಡೋದೆಲ್ಲ ಅನಾಚಾರ, ಮನೆ ಮುಂದೆ ಬೃಂದಾವನ -ಕಾಂಗ್ರೆಸ್ ವಿರುದ್ಧ ಬಿಜೆಪಿ ಕಿಡಿ

ಕಾಂಗ್ರೆಸ್ ನಾಯಕರು ರೌಡಿ ಶೀಟರ್‌ಗಳೊಂದಿಗೆ ಕಾಣಿಸಿಕೊಂಡಿರುವ ಫೋಟೋಗಳ ಸಮೇತ ಸರಣಿ ಟ್ವೀಟ್ ಮಾಡುವ ಮೂಲಕ ಬಿಜೆಪಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದೆ.

ಕಾಂಗ್ರೆಸ್ ಮುಂಚೂಣಿ ನಾಯಕರೇ ಕ್ರಿಮಿನಲ್‌ ಹಿನ್ನೆಲೆ ಹೊಂದಿದ್ದಾರೆ; ಮಾಡೋದೆಲ್ಲ ಅನಾಚಾರ, ಮನೆ ಮುಂದೆ ಬೃಂದಾವನ -ಕಾಂಗ್ರೆಸ್ ವಿರುದ್ಧ ಬಿಜೆಪಿ ಕಿಡಿ
ಸಾಂದರ್ಭಿಕ ಚಿತ್ರ
Follow us
TV9 Web
| Updated By: ಆಯೇಷಾ ಬಾನು

Updated on:Dec 04, 2022 | 2:25 PM

ಬೆಂಗಳೂರು: ರಕ್ತ ಹರಿಸಿದವರೆಲ್ಲ ಕೇಸರಿ ಶಾಲು ಹಾಕಿಕೊಳ್ಳಲು ಮುಗಿಬೀಳ್ತಿದ್ದಾರೆ. ಇದರ ಜೊತೆಗೆ ರಾಜಕೀಯ ನಾಯಕರು ರೌಡಿಶೀಟರ್​ಗಳೊಂದಿಗೆ ಕಾಣಿಸಿಕೊಳ್ಳುತ್ತಿರುವುದು ಸದ್ಯ ಕಾಂಗ್ರೆಸ್-ಬಿಜೆಪಿ ನಡುವೆ ಕೆಸರೆರಚಾಟಕ್ಕೆ ಕಾರಣವಾಗಿದೆ. ಕಾಂಗ್ರೆಸ್ ನಾಯಕರು ರೌಡಿ ಶೀಟರ್‌ಗಳೊಂದಿಗೆ ಕಾಣಿಸಿಕೊಂಡಿರುವ ಫೋಟೋಗಳ ಸಮೇತ ಸರಣಿ ಟ್ವೀಟ್ ಮಾಡುವ ಮೂಲಕ ಬಿಜೆಪಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದೆ.

ಪಕ್ಷದ ತುಂಬಾ ಗೂಂಡಾಗಳನ್ನು ತುಂಬಿಸಿಕೊಂಡಿರುವ ಕಾಂಗ್ರೆಸ್, ಬಿಜೆಪಿಯ ನೈತಿಕತೆ ಬಗ್ಗೆ ಮಾತನಾಡುವ ಯಾವುದೇ ಹಕ್ಕಿಲ್ಲ. ಕಾಂಗ್ರೆಸ್ ಮುಂಚೂಣಿ ನಾಯಕರೇ ಕ್ರಿಮಿನಲ್‌ ಹಿನ್ನೆಲೆ ಹೊಂದಿದ್ದಾರೆ. ಮಾಡೋದೆಲ್ಲ ಅನಾಚಾರ, ಮನೆ ಮುಂದೆ ಬೃಂದಾವನ ಎಂಬಂತಾಗಿದೆ ಎಂದು ಟ್ವೀಟ್ ಮೂಲಕ ಕಾಂಗ್ರೆಸ್​ ವಿರುದ್ಧ ರಾಜ್ಯ ಬಿಜೆಪಿ ಕಿಡಿಕಾರಿದೆ.

ಡಿಕೆ ಶಿವಕುಮಾರ್ ವಿರುದ್ಧ ಬಿಜೆಪಿ ವಾಗ್ದಾಳಿ

ರೌಡಿಗಳ ಕಿಂಗ್ ಕೊತ್ವಾಲನ ಚಹಾ ಲೋಟ ಎತ್ತುತ್ತಿದ್ದ ಪುಡಿ ರೌಡಿ ಡಿಕೆ ಶಿವಕುಮಾರ್​ ನ ರಾಜ್ಯಾಧ್ಯಕ್ಷನನ್ನಾಗಿ ಮಾಡಿದ ಕಾಂಗ್ರೆಸ್‌ಗೆ ಬಿಜೆಪಿಯ ಬಗ್ಗೆ ಮಾತಾಡೋ ನೈತಿಕೆಯಿದೆಯಾ ಎಂದು ಪ್ರಶ್ನಿಸಿಕೊಳ್ಳಲಿ. ಅಧ್ಯಕ್ಷರಿಂದ ಆರಂಭವಾಗುವ ಇವರ ಕ್ರೂರ ನಾಯಕರ ಪಟ್ಟಿ ಮೊನ್ನೆ ಮೊನ್ನೆ ಬಾರಲ್ಲಿ ಅಮಾಯಕರಿಗೆ‌ ಹೊಡೆದ ಮರಿರೌಡಿ ನಲಪಾಡ್​ ವರೆಗೂ ಇದೆ ಎಂದಿದೆ.

ರೌಡಿ ಪಾಲಿಟಿಕ್ಸ್ ವಿಚಾರದಲ್ಲಿ ಎಚ್ಚರಿಕೆ​ ನೀಡುವಾಗ ಬಿಜೆಪಿ ಎಡವಟ್ಟು

ರೌಡಿ ಪಾಲಿಟಿಕ್ಸ್ ವಿಚಾರವಾಗಿ ಕಾಂಗ್ರೆಸ್ ವಿರುದ್ಧದ ಸೋಶಿಯಲ್ ಮೀಡಿಯಾ ವಾರ್ನಲ್ಲಿ ಬಿಜೆಪಿ ಎಡವಟ್ಟು ಮಾಡಿಕೊಂಡಿದೆ. ಜಯನಗರದ ಕಾಂಗ್ರೆಸ್ ಕಾರ್ಯಕರ್ತನನ್ನು ರೌಡಿ ಎಂಬಂತೆ ಬಿಂಬಿಸಿ ಬಿಜೆಪಿ ಟ್ವೀಟ್ ಮಾಡಿದೆ. ಕಾಂಗ್ರೆಸ್ ನಾಯಕರ ಜೊತೆಗಿನ ಜಯನಗರದ ಕಾಂಗ್ರೆಸ್ ಕಾರ್ಯಕರ್ತ ಚೇತನ್ ಫೋಟೋ ಟ್ವೀಟ್ ಮಾಡಿ ಇವರು ಯಾರು ಉತ್ತರಿಸಲಿ ಎಂದು ಬಿಜೆಪಿ ಪ್ರಶ್ನಿಸಿತ್ತು. ಬಿಜೆಪಿ ಟ್ವೀಟ್ ಗೆ ಚೇತನ್ ಕಾನೂನು ಕ್ರಮದ ಎಚ್ಚರಿಕೆ ನೀಡಿದ್ದಾರೆ. ಟ್ವೀಟ್​ನಿಂದ ಪೋಟೋ ತೆಗೆದು ಹಾಕಿ ಕ್ಷಮೆ ಕೇಳದಿದ್ದರೆ ಕಾನೂನು ಕ್ರಮ ಕೈಗೊಳುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ. ಚೇತನ್ ಎಚ್ಚರಿಕೆ ಬಳಿಕ ಬಿಜೆಪಿ ಟ್ವೀಟ್ ಡಿಲೀಟ್ ಮಾಡಿದೆ.

Published On - 2:25 pm, Sun, 4 December 22