SIR ಎಫೆಕ್ಟ್: ಬೆಂಗಳೂರಿನ 25 ವಿಧಾನಸಭಾ ಕ್ಷೇತ್ರಗಳು ಡೇಂಜರ್ ಝೋನ್​ನಲ್ಲಿ! 5 ಕ್ಷೇತ್ರಗಳ ಸೆ 50 ಮತದಾರರ ಹೆಸರು ಡಿಲೀಟ್ ಸಾಧ್ಯತೆ

ಬೆಂಗಳೂರಿನ 25 ವಿಧಾನಸಭಾ ಕ್ಷೇತ್ರಗಳು SIR ಪ್ರಕ್ರಿಯೆಯಲ್ಲಿ ಡೇಂಜರ್ ಝೋನ್‌ನಲ್ಲಿವೆ ಎನ್ನಲಾಗಿದೆ. ಈ ಕ್ಷೇತ್ರಗಳಲ್ಲಿ ಶೇ 40ರಿಂದ 50ಕ್ಕಿಂತ ಹೆಚ್ಚು ಮತದಾರರ ಹೆಸರುಗಳು ಡಿಲೀಟ್ ಆಗುವ ಸಾಧ್ಯತೆ ಇದೆ. ಐದು ಕ್ಷೇತ್ರಗಳಲ್ಲಿ ಶೇ 50ಕ್ಕಿಂತಲೂ ಹೆಚ್ಚು ಮತದಾರರ ಹೆಸರುಗಳು ಪಟ್ಟಿಯಿಂದ ಹೊರಗುಳಿಯುವ ಸಾಧ್ಯತೆ ಇದೆ ಎಂದು ವರದಿಯಾಗಿದೆ. ಆ ಕ್ಷೇತ್ರಗಳ ವಿವರ ಇಲ್ಲಿದೆ.

SIR ಎಫೆಕ್ಟ್: ಬೆಂಗಳೂರಿನ 25 ವಿಧಾನಸಭಾ ಕ್ಷೇತ್ರಗಳು ಡೇಂಜರ್ ಝೋನ್​ನಲ್ಲಿ! 5 ಕ್ಷೇತ್ರಗಳ ಸೆ 50 ಮತದಾರರ ಹೆಸರು ಡಿಲೀಟ್ ಸಾಧ್ಯತೆ
ಬೆಂಗಳೂರಿನ 25 ವಿಧಾನಸಭಾ ಕ್ಷೇತ್ರಗಳು ಡೇಂಜರ್ ಝೋನ್​ನಲ್ಲಿ!
Image Credit source: tv9
Edited By:

Updated on: Aug 18, 2026 | 3:02 PM

ಮುಖ್ಯಾಂಶಗಳು

  • ಬೆಂಗಳೂರಿನ 25 ಕ್ಷೇತ್ರಗಳು SIR ಡೇಂಜರ್ ಝೋನ್
  • ಐದು ಕ್ಷೇತ್ರಗಳಲ್ಲಿ ಶೇ 50ಕ್ಕೂ ಹೆಚ್ಚು ಹೆಸರು ಡಿಲೀಟ್ ಸಾಧ್ಯತೆ
  • 20 ಕ್ಷೇತ್ರಗಳಲ್ಲಿ ಶೇ 40ಕ್ಕೂ ಹೆಚ್ಚು ಹೆಸರು ಡಿಲೀಟ್ ಸಾಧ್ಯತೆ

ಬೆಂಗಳೂರು, ಆಗಸ್ಟ್ 18: ಬೆಂಗಳೂರಿನಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿ ಸಮಗ್ರ ಪರಿಷ್ಕರಣೆ (SIR / Special Intensive Revision) ಪ್ರಕ್ರಿಯೆ ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಬೆಂಗಳೂರಿನ ಒಟ್ಟು 25 ವಿಧಾನಸಭಾ ಕ್ಷೇತ್ರಗಳಲ್ಲಿ ದೊಡ್ಡ ಪ್ರಮಾಣದ ಮತದಾರರ ಹೆಸರುಗಳು ಡಿಲೀಟ್ ಆಗುವ ಸಾಧ್ಯತೆ ಇದ್ದು, ಈ ಕ್ಷೇತ್ರಗಳು ಸದ್ಯ ‘ಡೇಂಜರ್ ಝೋನ್’ನಲ್ಲಿವೆ ಎನ್ನಲಾಗಿದೆ. ಈ 25 ಕ್ಷೇತ್ರಗಳ ಪೈಕಿ 20 ವಿಧಾನಸಭಾ ಕ್ಷೇತ್ರಗಳಲ್ಲಿ ಶೇ 40ರಿಂದ 49ರಷ್ಟು ಮತದಾರರ ಹೆಸರುಗಳು ಡಿಲೀಟ್ ಆಗುವ ಸಾಧ್ಯತೆ ಇದೆ ಎಂದು ಅಂಕಿ-ಅಂಶಗಳು ಸೂಚಿಸುತ್ತವೆ. ಮತ್ತೊಂದೆಡೆ, ಐದು ಕ್ಷೇತ್ರಗಳಲ್ಲಿ ಶೇ 50ಕ್ಕಿಂತ ಹೆಚ್ಚು ಮತದಾರರ ಹೆಸರುಗಳು ಪಟ್ಟಿಯಿಂದ ಹೊರಗುಳಿಯುವ ಸಾಧ್ಯತೆ ಇದೆ.

ಐದು ಕ್ಷೇತ್ರಗಳಲ್ಲಿ ಶೇ50ಕ್ಕಿಂತ ಹೆಚ್ಚು ಹೆಸರು ಡಿಲೀಟ್ ಸಾಧ್ಯತೆ

ಶೇ 50ಕ್ಕಿಂತ ಹೆಚ್ಚು ಮತದಾರರ ಹೆಸರುಗಳು ಡಿಲೀಟ್ ಆಗುವ ಸಾಧ್ಯತೆ ಇರುವ ಐದು ಕ್ಷೇತ್ರಗಳ ವಿವರ ಹೀಗಿದೆ;

  • ದಾಸರಹಳ್ಳಿ: ಒಟ್ಟು ಮತದಾರರು – 4,71,922; ಡಿಲೀಟ್ ಲಿಸ್ಟ್ – 2,46,790 – 52.88%
  • ಸಿವಿ ರಾಮನ್ ನಗರ: ಒಟ್ಟು ಮತದಾರರು – 2,74,142; ಡಿಲೀಟ್ ಲಿಸ್ಟ್ – 1,40,801 – 51.36%
  • ಬೊಮ್ಮನಹಳ್ಳಿ: ಒಟ್ಟು ಮತದಾರರು – 4,84,973; ಡಿಲೀಟ್ ಲಿಸ್ಟ್ – 2,67,014 – 55.06%
  • ಬಿಟಿಎಂ ಲೇಔಟ್: ಒಟ್ಟು ಮತದಾರರು – 2,82,035; ಡಿಲೀಟ್ ಲಿಸ್ಟ್ – 1,46,273 – 51.86%
  • ವಿಜಯನಗರ: ಒಟ್ಟು ಮತದಾರರು – 3,20,773; ಡಿಲೀಟ್ ಲಿಸ್ಟ್ – 1,65,058 – 51.45%

ಈ ಐದು ಕ್ಷೇತ್ರಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮತದಾರರ ಹೆಸರುಗಳು ಪಟ್ಟಿಯಿಂದ ಹೊರಗುಳಿಯುವ ಸಾಧ್ಯತೆ ಇರುವುದರಿಂದ, ಸಂಬಂಧಿಸಿದ ಕ್ಷೇತ್ರಗಳ ರಾಜಕೀಯ ನಾಯಕರಿಗೂ ಇದು ಮಹತ್ವದ ಬೆಳವಣಿಗೆಯಾಗಿದೆ.

ಯಾವ ಶಾಸಕರ ಕ್ಷೇತ್ರಗಳಲ್ಲಿ ಶೇ 50ರಷ್ಟು ಹೆಸರು ಡಿಲೀಟ್?

Karnataka SIR: Bengaluru’s 25 Constituencies In Danger Zone? 50% Voters’ Names At Risk Of Deletion
ಮಾಹಿತಿ ಪ್ರಕಾರ, ಶೇ 50ಕ್ಕಿಂತ ಹೆಚ್ಚು ಮತದಾರರ ಹೆಸರು ಡಿಲೀಟ್ ಆಗುವ ಸಾಧ್ಯತೆ ಇರುವ ಐದು ಕ್ಷೇತ್ರಗಳಲ್ಲಿ ರಾಮಲಿಂಗಾರೆಡ್ಡಿ, ಸತೀಶ್ ರೆಡ್ಡಿ, ಮುನಿರಾಜು, ಕೃಷ್ಣಪ್ಪ ಹಾಗೂ ಎಸ್. ರಘು ಅವರ ಕ್ಷೇತ್ರಗಳು ಸೇರಿವೆ.

20 ಕ್ಷೇತ್ರಗಳಲ್ಲಿ ಶೇ 40ರಿಂದ 49ರಷ್ಟು ಹೆಸರು ಡಿಲೀಟ್ ಸಾಧ್ಯತೆ

ಬೆಂಗಳೂರಿನ ಇನ್ನೂ 20 ವಿಧಾನಸಭಾ ಕ್ಷೇತ್ರಗಳಲ್ಲಿ ಶೇ 40ರಿಂದ 49ರಷ್ಟು ಮತದಾರರ ಹೆಸರುಗಳು ಡಿಲೀಟ್ ಆಗುವ ಸಾಧ್ಯತೆ ಇದೆ ಎಂದು ವರದಿಯಾಗಿದೆ. ಈ ಪೈಕಿ ಕೆಲವು ಪ್ರಮುಖ ಕ್ಷೇತ್ರಗಳ ಅಂಕಿ-ಅಂಶಗಳು ಗಮನ ಸೆಳೆಯುತ್ತಿವೆ.

  • ಗೋವಿಂದರಾಜನಗರ ಕ್ಷೇತ್ರ: ಒಟ್ಟು 3,06,486 ಮತದಾರರ ಪೈಕಿ 1,49,707 ಮತದಾರರ ಹೆಸರುಗಳು ಡಿಲೀಟ್ ಲಿಸ್ಟ್‌ನಲ್ಲಿದ್ದು, 48.85% ಪ್ರಮಾಣ ದಾಖಲಾಗಿದೆ.
  • ಬಸವನಗುಡಿ ಕ್ಷೇತ್ರ: ಒಟ್ಟು 2,37,161 ಮತದಾರರ ಪೈಕಿ 1,14,013 ಹೆಸರುಗಳು ಡಿಲೀಟ್ ಲಿಸ್ಟ್‌ನಲ್ಲಿದ್ದು, 48.07% ಪ್ರಮಾಣವಾಗಿದೆ.
  • ಪದ್ಮನಾಭನಗರ ಕ್ಷೇತ್ರ: ಒಟ್ಟು 2,93,149 ಮತದಾರರ ಪೈಕಿ 1,27,647 ಹೆಸರುಗಳು ಡಿಲೀಟ್ ಆಗುವ ಸಾಧ್ಯತೆ ಇದ್ದು, 43.54% ಪ್ರಮಾಣವಾಗಿದೆ. ಈ ಕ್ಷೇತ್ರವನ್ನು ಬಿಜೆಪಿ ನಾಯಕ ಆರ್. ಅಶೋಕ್ ಪ್ರತಿನಿಧಿಸುತ್ತಿದ್ದಾರೆ.

SIR ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಕರಡು ಮತದಾರರ ಪಟ್ಟಿಯಲ್ಲಿ ಹೆಸರುಗಳ ಸ್ಥಿತಿ ಸ್ಪಷ್ಟವಾಗಲಿದೆ. ಹೆಸರು ಕೈಬಿಡುವ ಸಾಧ್ಯತೆ ಇರುವ ಮತದಾರರಿಗೆ ನಿಯಮಾನುಸಾರ ಆಕ್ಷೇಪಣೆ ಸಲ್ಲಿಸಲು ಹಾಗೂ ಅಗತ್ಯ ದಾಖಲೆಗಳನ್ನು ನೀಡಲು ಅವಕಾಶ ಇರಲಿದೆ.

ಇದನ್ನೂ ಓದಿ: ರಾಜ್ಯದಲ್ಲಿ 1.08 ಕೋಟಿ ಮತದಾರರಿಗೆ ಕೊಕ್? SIR ಮೊದಲ ಕರಡು ಪಟ್ಟಿಯಿಂದ ಹೆಸರು ಕೈಬಿಡುವ ಸಾಧ್ಯತೆ

ಈ ಹಿನ್ನೆಲೆಯಲ್ಲಿ ಬೆಂಗಳೂರಿನ 25 ವಿಧಾನಸಭಾ ಕ್ಷೇತ್ರಗಳಲ್ಲಿನ SIR ಅಂಕಿ-ಅಂಶಗಳು ಮುಂದಿನ ದಿನಗಳಲ್ಲಿ ರಾಜಕೀಯವಾಗಿ ಹಾಗೂ ಚುನಾವಣಾ ದೃಷ್ಟಿಯಿಂದ ಮಹತ್ವದ ಚರ್ಚೆಗೆ ಕಾರಣವಾಗುವ ಸಾಧ್ಯತೆ ಇದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 2:29 pm, Tue, 18 August 26

Loading...
Unable to load recommendations.
Follow Us