ಚೆಕ್ ಬೌನ್ಸ್​​ ಸಮನ್ಸ್ ಗೆ ಪ್ರತಿಕ್ರಿಯಿಸದ ಬೇಳೂರು ರಾಘವೇಂದ್ರ ಶೆಟ್ಟಿ, ಕರ್ನಾಟಕ ಕರಕುಶಲ ನಿಗಮದ ಕಚೇರಿ ಬಾಗಿಲಿಗೆ ನೋಟಿಸ್ ಅಂಟಿಸಿದ ಶಿರಸಿ ಪೊಲೀಸರು

| Updated By: ಡಾ. ಭಾಸ್ಕರ ಹೆಗಡೆ

Updated on: May 26, 2022 | 3:25 PM

ಅಧ್ಯಕ್ಷ ಬೇಳೂರು ರಾಘವೇಂದ್ರ ಶೆಟ್ಟಿ ವಿರುದ್ಧ ಶಿರಸಿ ಕೋರ್ಟ್ ನಿಂದಾ ಚೆಕ್ ಬೌನ್ಸ್ ಕೇಸ್ ದಾಖಲಾಗಿ, ಕೋರ್ಟ್ ನಲ್ಲಿ ಸಿಸಿ ನಂಬರ್ ಬಂದು, 4 ಬಾರಿ ಸಮನ್ಸ್ ಜಾರಿಯಾಗಿದೆ. ಕೋರ್ಟ್ಗೆ ಹಾಜರಾಗದ ಕಾರಣ ಶಿರಸಿ ಪೊಲೀಸರು ಬೇಳೂರು ರಾಘವೇಂದ್ರ ಶೆಟ್ಟಿ ಅವರ ಸರ್ಕಾರಿ ಕಚೇರಿ ಮುಂದೆ ನೋಟಿಸ್ ಅಂಟಿಸಿದ್ದಾರೆ.

ಚೆಕ್ ಬೌನ್ಸ್​​ ಸಮನ್ಸ್ ಗೆ ಪ್ರತಿಕ್ರಿಯಿಸದ ಬೇಳೂರು ರಾಘವೇಂದ್ರ ಶೆಟ್ಟಿ, ಕರ್ನಾಟಕ ಕರಕುಶಲ ನಿಗಮದ ಕಚೇರಿ ಬಾಗಿಲಿಗೆ ನೋಟಿಸ್ ಅಂಟಿಸಿದ ಶಿರಸಿ ಪೊಲೀಸರು
ಕರಕುಶಲ ಅಭಿವೃದ್ಧಿ ನಿಗಮದ ಅಧ್ಯಕ್ಷ ಬೇಳೂರು ರಾಘವೇಂದ್ರ ಶೆಟ್ಟಿ
Follow us on

ಬೆಂಗಳೂರು: ಕರ್ನಾಟಕ ಕರಕುಶಲ ನಿಗಮ ಅಧ್ಯಕ್ಷ ಬೇಳೂರು ರಾಘವೇಂದ್ರ ಶೆಟ್ಟಿ ವಿರುದ್ಧ ಚೆಕ್ ಬೌನ್ಸ್ ಕೇಸ್ ದಾಖಲಾಗಿದ್ದು 4 ಬಾರಿ ಸಮನ್ಸ್ ಜಾರಿಯಾದರೂ ಕೋರ್ಟ್ಗೆ ಹಾಜರಾಗದ ಕಾರಣ ಶಿರಸಿ ಪೊಲೀಸರು ಬೇಳೂರು ರಾಘವೇಂದ್ರ ಶೆಟ್ಟಿ ಅವರ ಸರ್ಕಾರಿ ಕಚೇರಿ ಮುಂದೆ ನೋಟಿಸ್ ಅಂಟಿಸಿದ್ದಾರೆ.

ಅಧ್ಯಕ್ಷ ಬೇಳೂರು ರಾಘವೇಂದ್ರ ಶೆಟ್ಟಿ ವಿರುದ್ಧ ಶಿರಸಿ ಕೋರ್ಟ್ನಿಂದಾ ಚೆಕ್ ಬೌನ್ಸ್ ಕೇಸ್ ದಾಖಲಾಗಿ, ಕೋರ್ಟ್ ನಲ್ಲಿ ಸಿಸಿ ನಂಬರ್ ಬಂದು, 4 ಬಾರಿ ಸಮನ್ಸ್ ಜಾರಿಯಾಗಿದೆ. ಆದ್ರೆ ಅದನ್ನು ತೆಗೆದುಕೊಳ್ಳದೆ ಇದ್ದದ್ದರಿಂದ ಶಿರಸಿ ಪೊಲೀಸರು ನೆನ್ನೆ ಸರ್ಕಾರಿ ಕಚೇರಿಯ, ಅಂದರೆ ನಿಗಮದ ಬೇಳೂರು ರಾಘವೇಂದ್ರ ಶೆಟ್ಟಿ ಅವರ ಚೇಂಬರ್ ಮುಂದೆ ನೋಟಿಸ್ ಅಂಟಿಸಿ ಮಹಜರು ಮಾಡಿಕೊಂಡು ಹೋಗಿದ್ದಾರೆ. ಬೇಳೂರು ರಾಘವೇಂದ್ರ ಶೆಟ್ಟಿ ಅವರ ವೈಯಕ್ತಿಕ ಕೆಲಸದ ಪ್ರಭಾವ ಸರ್ಕಾರಿ ಕಚೇರಿಯ ಮೇಲೆ ಕೆಟ್ಟದಾಗಿ ಚಿತ್ರಿಸಿದೆ ಎಂದು ಕೆಲ ಅಧಿಕಾರಿಗಳು ಅಸಮಾಧಾನ ಹೊರ ಹಾಕಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ಕರ್ನಾಟಕ ಕರಕುಶಲ ನಿಗಮದ ಕಚೇರಿ ಬಾಗಿಲಿಗೆ ನೋಟಿಸ್ ಅಂಟಿಸಿದ ಶಿರಸಿ ಪೊಲೀಸರು

ಇನ್ನು ಮತ್ತೊಂದು ಕಡೆ ಪಿಎಸ್ಐ ಪ್ರಕರಣ ಆರೋಪದಲ್ಲಿ ಬಾಗಲಕೋಟೆ ಶ್ರೀಕಾಂತ್ ಚೌರಿಯನ್ನು ಸಿಐಡಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬಂಧಿತ ಶ್ರೀಕಾಂತ್ ಚೌರಿ, ಬೇಳೂರು ರಾಘವೇಂದ್ರ ಶೆಟ್ಟಿ ಅವರ ಪಿಎ. ಹೀಗಾಗಿ ಬೇಳೂರು ರಾಘವೇಂದ್ರ ಶೆಟ್ಟಿ ಅವರಿಗೆ ಸಂಕಷ್ಟ ಎದುರಾಗಲಿದೆ.

ತಮ್ಮ ಬಂಧಿತ ಪಿಎ ಬಗ್ಗೆ ಬೇಳೂರು ರಾಘವೇಂದ್ರ ಶೆಟ್ಟಿ ಹೇಳಿದ್ದೇನು?
ಶ್ರೀಕಾಂತ್ ಚೌರಿ ನಮ್ಮ ಜೊತೆ ಮೂರರಿಂದ ನಾಲ್ಕು ತಿಂಗಳು ಪಿಎ ಅಂತ ಕೆಲಸ‌ ಮಾಡಿದ್ದಾನೆ. ಆಪ್ತ ಕಾರ್ಯದರ್ಶಿ ಅಂತ ಆತನಿಗೆ ಪೋಸ್ಟ್ ಕೊಟ್ಟೇ ಇಲ್ಲ. ಆತನ ಆ್ಯಕ್ಟಿವಿಟಿ ನಮಗೆ ಸರಿ ಕಾಣಲಿಲ್ಲ. ಆತ ಹಣ ಪಡೆದು ಅಧಿಕಾರಿಗಳ ಟ್ರಾನ್ಸವರ್ ಮಾಡಿಸುವ ಕೆಲಸ ಮಾಡ್ತಿದಾನೆ ಎಂದು ಕೆಲವರು ಮಾಹಿತಿ ನೀಡಿದ್ದರು. ಎರಡು ತಿಂಗಳ ಹಿಂದೆ ಆತನನ್ನು ಕೆಲಸದಿಂದ ತೆಗೆದಿದ್ದೇವೆ. ಪಿಎ ಆಗಿ ವಿಜಿಟಿಂಗ್ ಕಾರ್ಡ್ ಮಾಡಿಸಬಾರದು. ಆದ್ರೆ ಆತ ವಿಜಿಟಿಂಗ್ ಕಾರ್ಡ್ ಕೂಡ ಮಾಡಿಸಿದ್ದ. ಇದೆಲ್ಲ ಸರಿ ಹೋಗಲ್ಲ ಎಂದು ಹೇಳಿದ್ದೆ. ಇವೆಲ್ಲ ವರ್ತನೆಯಿಂದ ಆತನನ್ನು ತೆಗೆದಿದ್ದೇವೆ ಎಂದು ರಾಘವೇಂದ್ರ ಶೆಟ್ಟಿ ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: PSI Recruimtnet Scam: ಶಾಂತಕುಮಾರ್​ ಬಂಧನ ಬೆನ್ನಲ್ಲೇ ಅಮೃತ್​ ಪೌಲ್​​ ವಿರುದ್ಧ ಗಂಭೀರ ಆರೋಪ: ಸಿಐಡಿ ವಿಚಾರಣೆ

ಆತನ ಮದುವೆಗೂ ನನಗೆ ಬರೋದಕ್ಕೆ ಬಹಳ ಒತ್ತಾಯ ಮಾಡಿದ್ದ. ನಾನು ಮದುವೆಗೂ ಹೋಗಿಲ್ಲ. ಆತನನ್ನು ಕೆಲಸದಿಂದ ತೆಗೆದಿರೋದನ್ನು ನಿಮಗಕ್ಕೆ ಅಪ್ಡೇಟ್ ಮಾಡಿಲ್ಲ. ಆದ ಕಾರಣ ನಮ್ಮ ಚಂದ್ರಶೇಖರ್ ಎಂಬ ಹೊಸ ಪಿಎಯ ಸಂಬಳ ಶ್ರೀಕಾಂತ್ ಚೌರಿ ಖಾತೆಗೆ ಹೋಗಿದೆ. ಎರಡು ತಿಂಗಳ ಸಂಬಳ ಹೋಗಿದೆ. ಅದನ್ನು ಚಂದ್ರಶೇಖರ್ ಖಾತೆಗೆ ಶ್ರೀಕಾಂತ್ ವಾಪಸ್ ಹಾಕಿದ್ದ. ಇಂತಹ ಪ್ರಾಡ್ ವ್ಯಕ್ತಿ ಮದುವೆಗೆ ಹೇಗೆ ಹೋಗೋದು. ಯಾರೊ ಬರ್ತಾರೆ ಅವರನ್ನು 24 ತಾಸು ಕಾಯೋಕೆ ಆಗಬೇಕಲ್ವಾ? ತಪ್ಪು ಮಾಡಿದರೆ ಶಿಕ್ಷೆ ಆಗಲೇಬೇಕಲ್ವಾ? ತಪ್ಪು ಮಾಡಿದ್ದಕ್ಕೆ ದಾಖಲೆಗಳು ಇದ್ದೆ ಇರುತ್ತವೆ ಎಂದಿದ್ದಾರೆ.

Published On - 2:49 pm, Thu, 26 May 22