Bengaluru: ಮೈದಾನದಲ್ಲಿ ಕುಳಿತುಕೊಂಡೆ ಬೆಟ್ಟಿಂಗ್ ದಂಧೆ; ಕೇವಲ 10 ಸೆಕೆಂಡ್ ಅಂತರದಲ್ಲಿ ಸಾವಿರ ಸಾವಿರ ಹಣ, ಇದೀಗ ಪೊಲೀಸ್ ಬಲೆಗೆ
ಐಪಿಎಲ್ ಶುರುವಾಗುತಿದ್ದಂತೆ ಬೆಟ್ಟಿಂಗ್ ದಂಧೆ ಬಲು ಜೋರಾಗಿ ನಡೆಯುತ್ತಿದೆ. ಕೇವಲ 10 ಸೆಕೆಂಡ್ ಅಂತರದಲ್ಲಿ ಸಾವಿರ ಸಾವಿರ ಜೇಬಿಗೆ ಹಾಕಿಕೊಳ್ಳುತಿದ್ದ ಖತರ್ನಾಕ್ ಗ್ಯಾಂಗ್ನ್ನ ಇದೀಗ ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರು: ಐಪಿಎಲ್(IPL) ಶುರುವಾಗುತಿದ್ದಂತೆ ಬೆಟ್ಟಿಂಗ್ ದಂಧೆ ಬಲು ಜೋರಾಗಿ ನಡೆಯುತ್ತಿದೆ. ಕೇವಲ 10 ಸೆಕೆಂಡ್ ಅಂತರದಲ್ಲಿ ಸಾವಿರ ಸಾವಿರ ಜೇಬಿಗೆ ಹಾಕಿಕೊಳ್ಳುತಿದ್ದ ಖತರ್ನಾಕ್ ಗ್ಯಾಂಗ್ನ್ನ ಇದೀಗ ಪೊಲೀಸರು ಬಂಧಿಸಿದ್ದಾರೆ. ಹೌದು ದೇಶದಲ್ಲಿ ಎಲ್ಲಿಯೇ ಮ್ಯಾಚ್ ನಡೆದರೂ ಅಲ್ಲಿಗೆ ಎಂಟ್ರಿ ಕೊಟ್ಟು, ಮೈದಾನದಲ್ಲಿ ಕುಳಿತುಕೊಂಡೆ ಬೆಟ್ಟಿಂಗ್ ದಂಧೆ ನಡೆಸಿ, ಮ್ಯಾಚ್ ಶುರುವಾಗಿ ಮುಗಿಯೋ ವೇಳೆಗೆ ಕೋಟಿ ಸಂಪಾದಿಸುತಿದ್ದ ಹರಿಯಾಣ ಮೂಲದ ಮೂವರು ಕಬ್ಬನ್ ಪಾರ್ಕ್ ಪೊಲೀಸರ ಬಲೆಗೆ ಬಿದ್ದಿದ್ದಾರೆ.
ಗ್ರೌಂಡ್ನ ಲೈವ್ ಮ್ಯಾಚ್ಗೂ ಟಿವಿಯ ಲೈವ್ ಮ್ಯಾಚ್ಗೂ 10 ಸೆಕೆಂಡ್ ಅಂತರ; ಇದೇ ಈ ಗ್ಯಾಂಗ್ನ ಬೆಟ್ಟಿಂಗ್ ಅಸ್ತ್ರ
ಈ ಬೆಟ್ಟಿಂಗ್ ಗ್ಯಾಂಗ್ ಬಂಧಿತರನ್ನ ಬಂಧಿಸಿ ವಿಚಾರಣೆ ನಡೆಸಿದ ಬಳಿಕ ಪೊಲೀಸರಿಗೆ ಶಾಕಿಂಗ್ ಮಾಹಿತಿ ಗೊತ್ತಾಗಿದೆ. ದೇಶದ ವಿವಿಧ ಕಡೆ ತಮ್ಮ ಸದಸ್ಯರನ್ನ ಹೊಂದಿರುವ ಇವರು, ಐಪಿಎಲ್ ಮ್ಯಾಚ್ ಸಂದರ್ಭದಲ್ಲಿ ಇವರ ಸಹಚರರು ಮೈದಾನಕ್ಕೆ ಹೋಗಿ, ಪ್ರತಿ ಬಾಲ್ ಕುರಿತು ಮೆಸೇಜ್ ಮೂಲಕ ತಮ್ಮ ಗ್ಯಾಂಗ್ನ ಇತರರಿಗೆ ಮಾಹಿತಿ ನೀಡುತ್ತಾರೆ. ಬಳಿಕ ಅವರ ಮಾಹಿತಿ ಆಧರಿಸಿ ಟಿವಿ ನೋಡಿಕೊಂಡು ಬೆಟ್ಟಿಂಗ್ ಆಡುತ್ತಿರುವವರನ್ನ ಸಂಪರ್ಕಿಸಿ ಬೆಟ್ಟಿಂಗ್ ಮಾಡುತ್ತಾರೆ. ಅದರಲ್ಲಿ ಎನಿದೆ? ಅಂತ ನೀವು ಕೇಳಬಹುದು ಅಲ್ಲಿಯೇ ಇರುವುದು ಟ್ವಿಸ್ಟ್, ಹೌದು ಗ್ರೌಂಡ್ನ ಲೈವ್ ಮ್ಯಾಚ್ಗೂ ಟಿವಿಯ ಲೈವ್ ಮ್ಯಾಚ್ಗೂ 10 ಸೆಕೆಂಡ್ ಅಂತರವಿದೆ. ಇದನ್ನೇ ಬಳಸಿಕೊಂಡಿರುವ ಈ ಗ್ಯಾಂಗ್ ಹಲವು ಕಡೆ ವಂಚನೆ ಮಾಡುತ್ತಿದ್ದರು.
ಇದನ್ನೂ ಓದಿ:Bangalore: ಬೆಟ್ಟಿಂಗ್ ಅಡ್ಡೆ ಮೇಲೆ ಪೊಲೀಸ್ ದಾಳಿ; ಸೂಕ್ತ ತನಿಖೆ ನಡೆಸದ ಪಿಎಸ್ಐ ಸೇರಿ ಐವರು ಅಮಾನತು
ಹೌದು ಈ ಅಂತರವನ್ನೇ ಎನ್ಕ್ಯಾಶ್ ಮಾಡಿಕೊಂಡು ದೇಶದ ಹಲವು ಕಡೆಗಳಲ್ಲಿ ಬೆಟ್ಟಿಂಗ್ ಕಳ್ಳಾಟ ತಿಳಿಯದೇ ಹಣ ಹೂಡಿದ ಜನರಿಗೆ ನಾಮ ಹಾಕುತಿದ್ದರು. ಸದ್ಯ ಗ್ಯಾಂಗ್ನ ಮೂವರು ಸದಸ್ಯರನ್ನ ಇದೀಗ ಪೊಲೀಸರು ಬಂಧಿಸಿದ್ದಾರೆ. ಇನ್ನು ಈ ಪ್ರಕರಣದ ಕುರಿತು ಮತ್ತಷ್ಟು ಆರೋಪಿಗಳಿಗಾಗಿ ಹುಡುಕಾಟ ನಡೆಸಿದ್ದಾರೆ. ಬೆಟ್ಟಿಂಗ್ ಕಳ್ಳಾಟಕ್ಕೆ ದೆಹಲಿ ಲಿಂಕ್ ಇದ್ದು, ಕಬ್ಬನ್ ಪಾರ್ಕ್ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
ಇನ್ನಷ್ಟು ಅಪರಾಧ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ