ಈ ಅವ್ಯವಸ್ಥೆಗೆ ಸರ್ಕಾರ ಮಾತ್ರ ಹೊಣೆಯಾ? ಜನರ ತಪ್ಪಿಲ್ವಾ?: SMVT ಟರ್ಮಿನಲ್ ಸ್ಥಿತಿ ನೋಡಿ

ಬೆಂಗಳೂರಿನ SMVT ರೈಲ್ವೆ ನಿಲ್ದಾಣ, ದೇಶದ ಮೊದಲ AC ಟರ್ಮಿನಲ್, ನಿರ್ವಹಣೆ ಕೊರತೆ ಮತ್ತು ಕಸದ ರಾಶಿಯಿಂದ ತನ್ನ ಗತವೈಭವ ಕಳೆದುಕೊಂಡಿದೆ. ವಿಶ್ವದರ್ಜೆಯ ಸೌಲಭ್ಯಗಳಿದ್ದರೂ ಸ್ವಚ್ಛತೆಯಿಲ್ಲ. ರೈಲ್ವೆ ಇಲಾಖೆ ಹಾಗೂ ಸಾರ್ವಜನಿಕರ ಜವಾಬ್ದಾರಿಯ ಬಗ್ಗೆ ಪ್ರಶ್ನೆಗಳು ಎದ್ದಿವೆ. ಉತ್ತಮ ಮೂಲಸೌಕರ್ಯ ಉಳಿಸಲು ಅಧಿಕಾರಿಗಳು ಕಠಿಣ ಕ್ರಮ ಹಾಗೂ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದು ಅತ್ಯಗತ್ಯ.

ಈ ಅವ್ಯವಸ್ಥೆಗೆ ಸರ್ಕಾರ ಮಾತ್ರ ಹೊಣೆಯಾ? ಜನರ ತಪ್ಪಿಲ್ವಾ?: SMVT ಟರ್ಮಿನಲ್ ಸ್ಥಿತಿ ನೋಡಿ
ವಿಡಿಯೋ

Updated on: Mar 26, 2026 | 10:59 AM

ಬೆಂಗಳೂರು, ಮಾ.26: ದೇಶದ ಮೊದಲ ಹವಾನಿಯಂತ್ರಿತ (AC) ರೈಲ್ವೆ ಟರ್ಮಿನಲ್ ಎಂಬ ಹೆಗ್ಗಳಿಕೆಯೊಂದಿಗೆ ಉದ್ಘಾಟನೆಗೊಂಡ ಬೆಂಗಳೂರಿನ ಬೈಯಪ್ಪನಹಳ್ಳಿಯ SMVT ನಿಲ್ದಾಣ, ಇಂದು ತನ್ನ ಗತವೈಭವವನ್ನು ಕಳೆದುಕೊಳ್ಳುತ್ತಿದೆ. ವಿಮಾನ ನಿಲ್ದಾಣದ ಮಾದರಿಯ ವಿನ್ಯಾಸ, ಸ್ವಚ್ಛತೆ ಮತ್ತು ಅತ್ಯಾಧುನಿಕ ಸೌಲಭ್ಯಗಳಿಗೆ ಮಾದರಿಯಾಗಿದ್ದ ಈ ನಿಲ್ದಾಣ, ಪ್ರಸ್ತುತ ನಿರ್ವಹಣೆಯ ಕೊರತೆ ಮತ್ತು ಕಸದ ರಾಶಿಯಿಂದಾಗಿ ಸುದ್ದಿಯಲ್ಲಿದೆ. ವಿಶ್ವದರ್ಜೆಯ ಸೌಲಭ್ಯಗಳನ್ನು ಕಲ್ಪಿಸುವುದು ಎಷ್ಟು ಮುಖ್ಯವೋ, ಅದನ್ನು ದಿನನಿತ್ಯ ನಿರ್ವಹಿಸುವುದು ಅಷ್ಟೇ ಮುಖ್ಯ. ಕಸದ ವಿಲೇವಾರಿ, ಸ್ವಚ್ಛತೆ ಮತ್ತು ನಿರಂತರ ಮೇಲ್ವಿಚಾರಣೆಯಲ್ಲಿ ರೈಲ್ವೆ ಇಲಾಖೆಯ ಅಧಿಕಾರಿಗಳು ವಿಫಲರಾಗಿದ್ದಾರೆ ಎಂಬ ಪ್ರಶ್ನೆ ಎದ್ದಿದೆ. ಆದರೆ ಇದರ ಜತೆಗೆ ಜನರ ಜವಾಬ್ದಾರಿ ಕೂಡ ಇದೆ ಎಂಬುದನ್ನು ಮರೆಯುವಂತಿಲ್ಲ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.

ಕೇವಲ ವ್ಯವಸ್ಥೆಯನ್ನು ದೂಷಿಸಿದರೆ ಸಾಲದು. ಸಾರ್ವಜನಿಕ ಆಸ್ತಿಯನ್ನು ತಮ್ಮ ಸ್ವಂತ ಆಸ್ತಿಯಂತೆ ಕಾಣುವ ಮನಸ್ಥಿತಿ ಜನರಲ್ಲಿ ಕಾಣಿಸುತ್ತಿಲ್ಲ. ಎಲ್ಲೆಂದರಲ್ಲಿ ಕಸ ಎಸೆಯುವುದು, ಉಗುಳುವುದು ಮತ್ತು ಸ್ವಚ್ಛತೆಯನ್ನು ಕಾಪಾಡದಿರುವುದು ಈ ಅವನತಿಗೆ ಪ್ರಮುಖ ಕಾರಣ. “ನಮಗೆ ವಿಶ್ವದರ್ಜೆಯ ಸೌಲಭ್ಯಗಳು ಬೇಕು, ಆದರೆ ಅದನ್ನು ಉಳಿಸಿಕೊಳ್ಳುವ ಜವಾಬ್ದಾರಿ ನಮ್ಮದಲ್ಲ” ಎಂಬ ಮನೋಭಾವವು ಅತ್ಯುತ್ತಮ ಮೂಲಸೌಕರ್ಯಗಳನ್ನು ಹಾಳುಮಾಡುತ್ತಿದೆ. ಈ ವಿಡಿಯೋವನ್ನು @Karnataka Portfolio ಎಂಬ ಎಕ್ಸ್​ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ.

ಇದನ್ನೂ ಓದಿ: ಕ್ಯಾಮರಾ ಹಿಡಿದ ಮಹಿಳೆ ಮೇಲೆ ಕೋಪಗೊಂಡ ದೈವ! ಮೈ ಜುಮ್ ಎನ್ನಿಸುವ ದೃಶ್ಯ

ವಿಡಿಯೋ ಇಲ್ಲಿದೆ ನೋಡಿ:

ತಕ್ಷಣವೇ ಅಧಿಕಾರಿಗಳು ಕಠಿಣ ನಿಯಮಗಳನ್ನು ಜಾರಿಗೆ ತರಬೇಕು ಮತ್ತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಬೇಕು. ದಂಡ ವಿಧಿಸುವುದು ಮತ್ತು ನಿರಂತರ ಸಿಸಿಟಿವಿ ಕಣ್ಗಾವಲು ಈ ನಿಲ್ದಾಣವನ್ನು ಮತ್ತೆ ಹಳೆಯ ಸ್ಥಿತಿಗೆ ತರಲು ಸಹಕಾರಿಯಾಗಬಹುದು. ಇದು ಕೇವಲ ಸರ್ಕಾರ ಹೊಣೆ ಮಾತ್ರವಲ್ಲ, ಜನರು ಕೂಡ ಇದಕ್ಕೆ ಜವಾಬ್ದಾರಾಗಿರುತ್ತಾರೆ. ಕಸ ಹಾಕಲು ಇಟ್ಟಿರುವ ಬಾಕ್ಸ್​​ನಲ್ಲೇ ಕಸ ಹಾಕಿದ್ರೆ ಇಂತಹ ಪರಿಸ್ಥಿತಿ ಬರುವುದಿಲ್ಲ. ಜನರು ಕೂಡ ಇದರ ಬಗ್ಗೆ ಕಾಳಜಿ ವಹಿಸಿದ್ರೆ ಈ ಕೆಲಸ ಖಂಡಿತ ಯಶಸ್ವಿಯಾಗುತ್ತದೆ ಎಂದು ಅನೇಕರು ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹೇಳಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Follow Us