AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮನೆಯಲ್ಲಿ ಪತ್ತೆಯಾದ ಹಣದ ಮೂಲ ತಿಳಿಸಿದ ಗುತ್ತಿಗೆದಾರ ಅಂಬಿಕಾಪತಿ ಪುತ್ರ ಪ್ರದೀಪ್: ಇಲ್ಲಿದೆ ವಿವರ

ಗುತ್ತಿಗೆದಾರ ಅಂಬಿಕಾಪತಿ ನಿವಾಸದ ಮೇಲೆ ಅಕ್ಟೋಬರ್ 14ರಂದು ಐಟಿ ಅಧಿಕಾರಿಗಳು ದಾಳಿ ನಡೆಸಿದ್ದರು. ಬೆಂಗಳೂರಿನ ಮಾನ್ಯತಾ ಟೆಕ್​ಪಾರ್ಕ್‌ನಲ್ಲಿರುವ ನಿವಾಸದಲ್ಲಿ ಸುಮಾರು 42 ಗಂಟೆ ಕಾಲ ಐಟಿ ಅಧಿಕಾರಿಗಳು ಶೋಧ ಕಾರ್ಯ ನಡೆಸಿದ್ದರು. ಇದೇ ವೇಳೆ, ಬರೋಬ್ಬರಿ 40 ಕೋಟಿ ರೂಪಾಯಿಗೂ ಹೆಚ್ಚಿನ ಹಣ ಸಿಕ್ಕಿದೆ ಎನ್ನಲಾಗಿತ್ತು.

ಮನೆಯಲ್ಲಿ ಪತ್ತೆಯಾದ ಹಣದ ಮೂಲ ತಿಳಿಸಿದ ಗುತ್ತಿಗೆದಾರ ಅಂಬಿಕಾಪತಿ ಪುತ್ರ ಪ್ರದೀಪ್: ಇಲ್ಲಿದೆ ವಿವರ
ಐಟಿ ದಾಳಿ ವೇಳೆ ಗುತ್ತಿಗೆದಾರ ಅಂಬಿಕಾಪತಿ ಮನೆಯಲ್ಲಿ ಪತ್ತೆಯಾಗಿದ್ದ ಹಣ
Shivaprasad B
| Updated By: Ganapathi Sharma|

Updated on: Oct 17, 2023 | 9:01 PM

Share

ಬೆಂಗಳೂರು, ಅಕ್ಟೋಬರ್ 17: ಬೆಂಗಳೂರಿನಲ್ಲಿ ಐಟಿ ದಾಳಿ (IT Raid) ವೇಳೆ ಕೋಟ್ಯಂತರ ರೂಪಾಯಿ ಹಣ ಪತ್ತೆ ಪ್ರಕರಣಕ್ಕೆ ಸಂಬಂಧಿಸಿ ಗುತ್ತಿಗೆದಾರ ಅಂಬಿಕಾಪತಿ ಪುತ್ರ ಪ್ರದೀಪ್ (Pradeep) ಸುದೀರ್ಘ ವಿಚಾರಣೆ ಮುಗಿಸಿ ಮಂಗಳವಾರ ರಾತ್ರಿ ಹೊರಬಂದಿದ್ದಾರೆ. ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು (IT Officials) ಅವರನ್ನು ಸುದೀರ್ಘ ವಿಚಾರಣೆಗೆ ಒಳಪಡಿಸಿದರು. ವಿಚಾರಣೆ ಮುಗಿಸಿ ಹೊರಬಂದ ಬಳಿಕ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಪ್ರದೀಪ್, ವಿಚಾರಣೆ ವೇಳೆ ಅಧಿಕಾರಿಗಳು ಕೇಳಿದ ದಾಖಲೆ ಒದಗಿಸಿದ್ದೇನೆ ಎಂದು ಹೇಳಿದರು.

ನಮ್ಮ ಮನೆಯಲ್ಲಿ ಪತ್ತೆಯಾದ ಹಣ ಜಮೀನಿಗೆ ಸಂಬಂಧಿಸಿದ್ದು. ನನಗೂ ರಾಜಕೀಯಕ್ಕೂ ಯಾವುದೇ ಸಂಬಂಧವಿಲ್ಲ. ಸ್ನೇಹಿತ ಪ್ರಮೋದ್​ಗೂ​ ಐಟಿ ಅಧಿಕಾರಿಗಳು ನೋಟಿಸ್ ನೀಡಿದ್ದಾರೆ. ಅಕ್ಟೋಬರ್ 21ರಂದು ಪ್ರಮೋದ್ ಸಹ ವಿಚಾರಣೆಗೆ ಬರ್ತಾರೆ. ಐಟಿ ದಾಳಿ ವೇಳೆ ಮನೆಯಲ್ಲಿ 20 ಕೋಟಿ 2 ಲಕ್ಷ ರೂ. ಹಣ ಸಿಕ್ಕಿದೆ ಅಕ್ಟೋಬರ್ 26ರಂದು ನನಗೆ ಮತ್ತೆ ವಿಚಾರಣೆಗೆ ಬರಲು ಸೂಚಿಸಿದ್ದಾರೆ ಎಂದು ಪ್ರದೀಪ್ ತಿಳಿಸಿದರು.

ಗುತ್ತಿಗೆದಾರ ಅಂಬಿಕಾಪತಿ ನಿವಾಸದ ಮೇಲೆ ಅಕ್ಟೋಬರ್ 14ರಂದು ಐಟಿ ಅಧಿಕಾರಿಗಳು ದಾಳಿ ನಡೆಸಿದ್ದರು. ಬೆಂಗಳೂರಿನ ಮಾನ್ಯತಾ ಟೆಕ್​ಪಾರ್ಕ್‌ನಲ್ಲಿರುವ ನಿವಾಸದಲ್ಲಿ ಸುಮಾರು 42 ಗಂಟೆ ಕಾಲ ಐಟಿ ಅಧಿಕಾರಿಗಳು ಶೋಧ ಕಾರ್ಯ ನಡೆಸಿದ್ದರು. ಇದೇ ವೇಳೆ, ಬರೋಬ್ಬರಿ 40 ಕೋಟಿ ರೂಪಾಯಿಗೂ ಹೆಚ್ಚಿನ ಹಣ ಸಿಕ್ಕಿದೆ ಎನ್ನಲಾಗಿತ್ತು. ಇಷ್ಟೇ ಅಲ್ಲದೆ, ಆಸ್ತಿಗೆ ಸಂಬಂಧಿಸಿದ ಕೆಲ ದಾಖಲೆಗಳು ಪತ್ತೆಯಾಗಿದ್ದವು. ಎಲ್ಲವನ್ನೂ ಕ್ರೋಢಿಕರಿಸಿ ಲೆಕ್ಕ ಹಾಕಿ ಜಪ್ತಿ ಮಾಡಲಾಗಿದ್ದು, ವಿಚಾರಣೆಗೆ ಹಾಜರಾಗುವಂತೆ ಮೆಟ್ರೋ ಕಾರ್ಪ್ ಕಂಪನಿ ಪಾಲುದಾರರಾಗಿರುವ ಪ್ರಮೋದ್, ಪ್ರದೀಪ್​​ಗೆ ಐಟಿ ಅಧಿಕಾರಿಗಳು ನೋಟಿಸ್ ನೀಡಿದ್ದರು. ಅದರಂತೆ ಪ್ರದೀಪ್ ಅವರು ವಿಚಾರಣೆಗೆ ಹಾಜರಾಗಿದ್ದಾರೆ.

ಇದನ್ನೂ ಓದಿ: ಬೆಂಗಳೂರು: ಗುತ್ತಿಗೆದಾರ ಅಂಬಿಕಾಪತಿ ಸೋದರನ ಮನೆ ಮೇಲೆ ಐಟಿ ದಾಳಿ: ಆರೋಪಿ ಪ್ರದೀಪ್​ನನ್ನು ವಶಕ್ಕೆ ಪಡೆದ ಅಧಿಕಾರಿಗಳು

ಬಿಲ್ಡರ್ ಸಂತೋಷ್ ಎಂಬವರ ನಿವಾಸದ ಮೇಲೂ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದರು. ದಾಳಿ ವೇಳೆ, 40 ಕೋಟಿ ರೂಪಾಯಿಗೂ ಹೆಚ್ಚು ಹಣ ಪತ್ತೆಯಾಗಿತ್ತು.

ಐಟಿ ದಾಳಿ ವಿಚಾರ ನಂತರ ರಾಜಕೀಯ ಆಯಾಮವನ್ನೂ ಪಡೆದುಕೊಂಡಿತ್ತು. ಆಡಳಿತಾರೂಢ ಕಾಂಗ್ರೆಸ್ ವಿರುದ್ಧ ಪ್ರತಿಪಕ್ಷಗಳಾದ ಬಿಜೆಪಿ ಹಾಗೂ ಜೆಡಿಎಸ್ ನಾಯಕರು ವಾಗ್ದಾಳಿ ನಡೆಸಿದ್ದರು. ಆದರೆ, ಐಟಿ ದಾಳಿ ರಾಜಕೀಯ ಪ್ರೇರಿತ ಎಂದು ಕಾಂಗ್ರೆಸ್ ನಾಯಕರು ಆರೋಪಿಸಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಕಂದಕಕ್ಕೆ ಉರುಳಿದ ವಾಹನ,ಮೂವರು ಸಿಆರ್​​ಪಿಎಫ್​ ಸಿಬ್ಬಂದಿ ಸಾವು
ಕಂದಕಕ್ಕೆ ಉರುಳಿದ ವಾಹನ,ಮೂವರು ಸಿಆರ್​​ಪಿಎಫ್​ ಸಿಬ್ಬಂದಿ ಸಾವು
VIDEO: ಕೆಣಕಿದ ದಿಗ್ವೇಶ್ ರಾಥಿಯ ಬೆಂಡೆತ್ತಿದ ಅಂಕಿತ್
VIDEO: ಕೆಣಕಿದ ದಿಗ್ವೇಶ್ ರಾಥಿಯ ಬೆಂಡೆತ್ತಿದ ಅಂಕಿತ್
ಚಿನ್ನಾಭರಣ ಖರೀದಿಗೆ ಬಂದು ಮಗುವನ್ನೇ ಮರೆತ ತಾಯಿ; ಮುಂದೇನಾಯ್ತು ಗೊತ್ತಾ?
ಚಿನ್ನಾಭರಣ ಖರೀದಿಗೆ ಬಂದು ಮಗುವನ್ನೇ ಮರೆತ ತಾಯಿ; ಮುಂದೇನಾಯ್ತು ಗೊತ್ತಾ?
ತೆಲುಗು ವೇದಿಕೆ ಮೇಲೆ ‘ಬಾವ’ ಹಾಡಿಗೆ ರಾಜ್, ಜೆಪಿ, ಶನೀಲ್ ಭರ್ಜರಿ ಸ್ಟೆಪ್
ತೆಲುಗು ವೇದಿಕೆ ಮೇಲೆ ‘ಬಾವ’ ಹಾಡಿಗೆ ರಾಜ್, ಜೆಪಿ, ಶನೀಲ್ ಭರ್ಜರಿ ಸ್ಟೆಪ್
ಪಾರ್ಕಿಂಗ್​ಗಾಗಿ ಪೂರ್ತಿ ರಸ್ತೆಯನ್ನೇ ಕಬಳಿಸಿರುವುದು ಮೂರ್ಖತನದ ಪರಮಾವಧಿ
ಪಾರ್ಕಿಂಗ್​ಗಾಗಿ ಪೂರ್ತಿ ರಸ್ತೆಯನ್ನೇ ಕಬಳಿಸಿರುವುದು ಮೂರ್ಖತನದ ಪರಮಾವಧಿ
ರಾಯಚೂರು: ಎದೆಯತ್ತರದ ನೀರಲ್ಲೇ ಮೃತದೇಹ ಹೊತ್ತು ಸಾಗಿದ ಗ್ರಾಮಸ್ಥರು; ವಿಡಿಯೋ
ರಾಯಚೂರು: ಎದೆಯತ್ತರದ ನೀರಲ್ಲೇ ಮೃತದೇಹ ಹೊತ್ತು ಸಾಗಿದ ಗ್ರಾಮಸ್ಥರು; ವಿಡಿಯೋ
ವರಮಹಾಲಕ್ಷ್ಮೀ ಹಬ್ಬ: ಕೆಆರ್ ಮಾರುಕಟ್ಟೆಯಲ್ಲಿ ಖರೀದಿಗೆ ಮುಗಿಬಿದ್ದ ಜನ
ವರಮಹಾಲಕ್ಷ್ಮೀ ಹಬ್ಬ: ಕೆಆರ್ ಮಾರುಕಟ್ಟೆಯಲ್ಲಿ ಖರೀದಿಗೆ ಮುಗಿಬಿದ್ದ ಜನ
ವಿಡಿಯೋ: ಚಿಕ್ಕಮಗಳೂರು ಶೃಂಗೇರಿ ರಾಜ್ಯ ಹೆದ್ದಾರಿಯಲ್ಲಿ ಕಾಡಾನೆಗಳ ಸಂಚಾರ
ವಿಡಿಯೋ: ಚಿಕ್ಕಮಗಳೂರು ಶೃಂಗೇರಿ ರಾಜ್ಯ ಹೆದ್ದಾರಿಯಲ್ಲಿ ಕಾಡಾನೆಗಳ ಸಂಚಾರ
ವ್ಯಾಪಾರ ಅಧಿಕವಾಗಲು ಏನು ಮಾಡಬೇಕು? ವಿಡಿಯೋ ನೋಡಿ
ವ್ಯಾಪಾರ ಅಧಿಕವಾಗಲು ಏನು ಮಾಡಬೇಕು? ವಿಡಿಯೋ ನೋಡಿ
Daily horoscope: ಇಂದಿನ ದ್ವಾದಶ ರಾಶಿಗಳ ಫಲಾಫಲಾಗಳ ಬಗ್ಗೆ ತಿಳಿಯಿರಿ
Daily horoscope: ಇಂದಿನ ದ್ವಾದಶ ರಾಶಿಗಳ ಫಲಾಫಲಾಗಳ ಬಗ್ಗೆ ತಿಳಿಯಿರಿ