ಸ್ವಾತಂತ್ರ್ಯ ದಿನಾಚರಣೆಗೆ ಬೆಂಗಳೂರು ಟು ಬೀದರ್ ನಡುವೆ ವಿಶೇಷ ರೈಲು: ಇಲ್ಲಿದೆ ವೇಳಾಪಟ್ಟಿ
Bengaluru to Bidar Special train: ಸ್ವಾತಂತ್ರ್ಯ ದಿನಾಚರಣೆ ಹಿನ್ನಲೆ ಇತ್ತೀಚೆಗೆ ನೈಋತ್ಯ ರೈಲ್ವೆ ಯಶವಂತಪುರ ಟು ತಾಳಗುಪ್ಪ ಮಧ್ಯೆ ವಿಶೇಷ ಎಕ್ಸ್ ಪ್ರೆಸ್ ರೈಲು ಸೇವೆಯನ್ನು ಆರಂಭಿಸಿತ್ತು. ಇದೀಗ ಬೆಂಗಳೂರು ಮತ್ತು ಬೀದರ್ ನಡುವೆ ವಿಶೇಷ ಎಕ್ಸ್‌ಪ್ರೆಸ್ ರೈಲು ಸೇವೆಯನ್ನು ಆರಂಭಿಸಿದೆ. ಈ ರೈಲಿನ ಸಂಪೂರ್ಣ ಮಾಹಿತಿ ಇಲ್ಲಿದೆ.

ಹುಬ್ಬಳ್ಳಿ, ಆಗಸ್ಟ್ 01: ಸ್ವಾತಂತ್ರ್ಯ ದಿನಾಚರಣೆಯ (Independence Day) ರಜೆಯ ಹಿನ್ನೆಲೆಯಲ್ಲಿ ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ನಿವಾರಿಸಲು, ನೈಋತ್ಯ ರೈಲ್ವೆಯು ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು ಮತ್ತು ಬೀದರ್ (SMVT Bengaluru and Bidar) ನಡುವೆ ಪ್ರತಿ ದಿಕ್ಕಿನಲ್ಲಿ ಒಂದು ಟ್ರಿಪ್ ವಿಶೇಷ ಎಕ್ಸ್ ಪ್ರೆಸ್ ರೈಲು ಸೇವೆಯನ್ನು ಒದಗಿಸಲಿದೆ.
ರೈಲು ಸಂಖ್ಯೆ 06519 ಎಸ್ಎಂವಿಟಿ ಬೆಂಗಳೂರು ಟು ಬೀದರ್ ವಿಶೇಷ ಎಕ್ಸ್ ಪ್ರೆಸ್ ರೈಲು ಆಗಸ್ಟ್ 14 (ಗುರುವಾರ) ರಂದು ಎಸ್ಎಂವಿಟಿ ಬೆಂಗಳೂರಿನಿಂದ ರಾತ್ರಿ 9:15ಕ್ಕೆ ಹೊರಟು, ಮರುದಿನ ಬೆಳಗ್ಗೆ 11:30ಕ್ಕೆ ಬೀದರ್ ತಲುಪಲಿದೆ.
ನೈಋತ್ಯ ರೈಲ್ವೆ ಟ್ವೀಟ್
Kindly note: To clear the extra rush of passengers in view of the Independence Day holiday, SWR to run a special express train service between SMVT Bengaluru and Bidar for one trip in each direction. ಸ್ವಾತಂತ್ರ್ಯ ದಿನಾಚರಣೆಗೆ ಬೆಂಗಳೂರು-ಬೀದರ್ ನಡುವೆ ವಿಶೇಷ ರೈಲು#SWRupdates pic.twitter.com/9KdnjkOF1V
— South Western Railway (@SWRRLY) July 31, 2025
ಮರು ಪ್ರಯಾಣದಲ್ಲಿ, ರೈಲು ಸಂಖ್ಯೆ 06520 ಬೀದರ್ ಟು ಎಸ್ಎಂವಿಟಿ ಬೆಂಗಳೂರು ವಿಶೇಷ ಎಕ್ಸ್ ಪ್ರೆಸ್ ರೈಲು ಆಗಸ್ಟ್ 15 (ಶುಕ್ರವಾರ) ರಂದು ಬೀದರ್ನಿಂದ ಮಧ್ಯಾಹ್ನ 2:30ಕ್ಕೆ ಹೊರಟು, ಮರುದಿನ ಬೆಳಗಿನ ಜಾವ 4:30ಕ್ಕೆ ಎಸ್ಎಂವಿಟಿ ಬೆಂಗಳೂರು ತಲುಪಲಿದೆ.
ಏಲ್ಲೆಲ್ಲಿ ನಿಲುಗಡೆ?
ಮಾರ್ಗದಲ್ಲಿ, ರೈಲು ಸಂಖ್ಯೆ 06519 ಎಸ್ಎಂವಿಟಿ ಬೆಂಗಳೂರು ಟು ಬೀದರ್ ವಿಶೇಷ ರೈಲು ಯಲಹಂಕ, ಹಿಂದೂಪುರ, ಧರ್ಮಾವರಂ, ಅನಂತಪುರ, ಗುಂತಕಲ್, ಆದೋನಿ, ಮಂತ್ರಾಲಯಂ ರೋಡ್, ರಾಯಚೂರು, ಕೃಷ್ಣ, ಯಾದಗಿರಿ, ವಾಡಿ, ಶಹಬಾದ್, ಕಲಬುರಗಿ, ಹುಮನಾಬಾದ್ ನಿಲ್ದಾಣಗಳಲ್ಲಿ ನಿಲುಗಡೆ ಇರಲಿದೆ. ರೈಲು ಸಂಖ್ಯೆ 06520 ಇದೇ ನಿಲ್ದಾಣಗಳಲ್ಲಿ ಹಿಮ್ಮುಖ ಕ್ರಮದಲ್ಲಿ ನಿಲ್ಲಲಿದೆ.
ಇದನ್ನೂ ಓದಿ: ರಾಜ್ಯದ ಯಾತ್ರಾರ್ಥಿಗಳಿಗೆ ಸಿಹಿ ಸುದ್ದಿ: ಕಾಶಿ ಮತ್ತು ದಕ್ಷಿಣ ಭಾರತದ ದೇವಾಲಯಗಳ ದರ್ಶನಕ್ಕೆ 2 ವಿಶೇಷ ರೈಲು, ಇಲ್ಲಿದೆ ವಿವರ
ಈ ವಿಶೇಷ ರೈಲು 20 ಸೆಕೆಂಡ್ ಕ್ಲಾಸ್ ಸ್ಲೀಪರ್ ಬೋಗಿಗಳು ಮತ್ತು 2 ಸೆಕೆಂಡ್ ಕ್ಲಾಸ್ ಲಗೇಜ್ ಕಮ್ ದಿವ್ಯಾಂಗ ಸ್ನೇಹಿ ಬೋಗಿಗಳು ಸೇರಿದಂತೆ ಒಟ್ಟು 22 ಬೋಗಿಗಳನ್ನು ಒಳಗೊಂಡಿರುತ್ತದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 7:40 am, Fri, 1 August 25







