AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಿನ್ನೆ ಚಪ್ಪಲಿಯೂ ಇಲ್ಲದೆ ಆಟೋ ಹತ್ತಿದ್ದ ಬಿಟ್​ಕಾಯಿನ್​ ಆಸಾಮಿ ಶ್ರೀಕಿಯ ಸ್ಟಾರ್​ ಜಾತಕ ಇಂದು ಟಿವಿ9 ತೆರೆದಿಡ್ತಿದೆ! ನೋಡಿ

ಹ್ಯಾಕರ್ ಶ್ರೀಕಿ ಲೈಫ್ ಸ್ಟೈಲ್ ಸಾಮಾನ್ಯ ಜನರಿಗಿಂತ ಭಿನ್ನ. ನಿನ್ನೆ ಜೈಲಿನಿಂದ ಹೊರ ಬರುವಾಗ ಕಾಲಿಗೆ ಚಪ್ಪಲಿ ಸಹ ಇಲ್ಲದೆ, ಮನೆಗೆ ಹೋಗಲು ಕಾರು ಸಹ ಇಲ್ಲದೆ, ಆಟೋ ಮೂಲಕ ಮನೆಗೆ ತೆರಳಿದ್ದ ಶ್ರೀಕಿಯ ಮತ್ತೊಂದು ಅವತಾರವಿದೆ.

ನಿನ್ನೆ ಚಪ್ಪಲಿಯೂ ಇಲ್ಲದೆ ಆಟೋ ಹತ್ತಿದ್ದ ಬಿಟ್​ಕಾಯಿನ್​ ಆಸಾಮಿ ಶ್ರೀಕಿಯ ಸ್ಟಾರ್​ ಜಾತಕ ಇಂದು ಟಿವಿ9 ತೆರೆದಿಡ್ತಿದೆ! ನೋಡಿ
ಶ್ರೀಕೃಷ್ಣ ಅಲಿಯಾಸ್ ಶ್ರೀಕಿ
TV9 Web
| Edited By: |

Updated on:Nov 11, 2021 | 3:51 PM

Share

ಬೆಂಗಳೂರು: ರಾಯಲ್ ಆರ್ಕೆಡ್ ಹೋಟೆಲ್ನಲ್ಲಿ ನಡೆದ ಗಲಾಟೆ ಸಂಬಂಧ ಅರೆಸ್ಟ್ ಆಗಿದ್ದ ಶ್ರೀಕೃಷ್ಣ ಅಲಿಯಾಸ್ ಶ್ರೀಕಿ ಡ್ರಗ್ಸ್ ಸೇವಿಸಿರೋದು ಖಚಿತವಾಗಿರುತ್ತೆ. ಹೀಗಾಗಿ ಪೊಲೀಸರು ಈತನನ್ನ ಪರಪ್ಪನ ಅಗ್ರಹಾರ ಜೈಲಿಗೆ ಕಳಿಸಿದ್ದರು. ಆದ್ರೆ ನಿನ್ನೆ ಮಧ್ಯಾಹ್ನದವೆರಗೂ ಜೈಲಿನಲ್ಲಿದ್ದ ಶ್ರೀಕಿ ಸಂಜೆ ಹೊರಗೆ ಬಂದಿದ್ದಾನೆ. ಹವಾಯಿ ಚಪ್ಪಲಿ ಇಲ್ಲದ ಆಸಾಮಿಯದ್ದು ಸ್ಟಾರ್ ಹೋಟೆಲ್ ವಾಸ್ತವ್ಯ. ಚಿಕ್ಕದೊಂದು ಬೈಕ್ ಇಲ್ಲದಿದ್ರೂ ಪ್ರೈವೇಟ್ ಜೆಟ್‌ನಲ್ಲಿ ಸಂಚಾರ ಮಾಡುವ ಶ್ರೀಕಿಯ ಇನ್ಸೈಡ್ ಸೀಕ್ರೆಟ್ ಇಲ್ಲಿದೆ.

ಹ್ಯಾಕರ್ ಶ್ರೀಕಿ ಲೈಫ್ ಸ್ಟೈಲ್ ಸಾಮಾನ್ಯ ಜನರಿಗಿಂತ ಭಿನ್ನ. ನಿನ್ನೆ ಜೈಲಿನಿಂದ ಹೊರ ಬರುವಾಗ ಕಾಲಿಗೆ ಚಪ್ಪಲಿ ಸಹ ಇಲ್ಲದೆ, ಮನೆಗೆ ಹೋಗಲು ಕಾರು ಸಹ ಇಲ್ಲದೆ, ಆಟೋ ಮೂಲಕ ಮನೆಗೆ ತೆರಳಿದ್ದ ಶ್ರೀಕಿಯ ಮತ್ತೊಂದು ಅವತಾರವಿದೆ. ನಿನ್ನೆ ಶ್ರೀಕಿ ಅವಸ್ಥೆ ನೋಡಿ ಇದೇ ಇತನ ನಿಜವಾದ ಲೈಫ್ ಅನ್ಕೊಂಡ್ರೆ ಅದು ಸುಳ್ಳು. ಜಗತ್ತಿನ ಹೈ ಎಂಡ್ ಹೋಟೆಲ್ ಹಾಗೂ ಪಾರ್ಟಿಗಳಲ್ಲಿ ಇದ್ದು ಎಂಜಾಯ್ ಮಾಡಿದ್ದ ಶ್ರೀಕಿಯ ಲೈಫ್ ಸ್ಟೈಲ್ ಬೇರೆನೇ ಇದೆ.

ಕಳೆದ ಬಾರಿ ಜೈಲಿನಿಂದ ಹೊರ ಬಂದ ಶ್ರೀಕಿ ಇದ್ದದ್ದು ಬೆಂಗಳೂರಿನ ಸ್ಟಾರ್ ಹೋಟೆಲ್ನಲ್ಲಿ. ರಾಯಲ್ ಆರ್ಕಿಡ್ ಹೋಟೆಲ್ನ ಐಶಾರಾಮಿ ರೂಮ್ ನಲ್ಲಿ. ಐಶಾರಾಮಿ ರೂಮ್ ನಲ್ಲಿ ಬರೋಬ್ಬರಿ ತೊಂಬತ್ತು ದಿನ ಕಳೆದಿದ್ದಾನೆ. ಸಾಮಾನ್ಯ ವ್ಯಕ್ತಿಗೆ ನಾಲ್ಕು ದಿನದ ಸ್ಟಾರ್ ಹೋಟೆಲ್ ಬಿಲ್ ಕಟ್ಟಲು ಸಾಧ್ಯವಾಗಲ್ಲ. ಆದ್ರೆ ಶ್ರೀಕಿ ತಿಂಗಳುಗಳ ಕಾಲ ಸ್ಟಾರ್ ಹೋಟೆಲ್ನಲ್ಲಿ ಇರ್ತಾನೆ. ಪ್ರೈವೇಟ್ ಜೆಟ್ನಲ್ಲಿ ವಿದೇಶಕ್ಕೆ ತೆರಳುತ್ತಾನೆ. ಕ್ರೂಸ್ ಗಳಲ್ಲಿ ಸಮುದ್ರದಲ್ಲೆ ಇದ್ದು ಪಾರ್ಟಿ ಮಾಡ್ತಾನೆ. ಅಲ್ಲದೆ ಶ್ರೀಕಿಗೆ ಡ್ರಗ್ಸ್, ಎಣ್ಣೆ ಬೇಕೆ ಬೇಕು. ಅದು ಶ್ರೀಕಿ ಲೈಫ್ ಸ್ಟೈಲ್ನ ಒಂದು ಅವಿಭಾಜ್ಯ ಅಂಗ.

ಶ್ರೀಕಿ ಬಳಿ ಬ್ಯಾಂಕ್ ಅಕೌಂಟೇ ಇಲ್ಲ ಆದ್ರು ನಡೆಯುತ್ತೆ ವ್ಯವಹಾರ ಇನ್ನು ಅಚ್ಚರಿ ಅಂದ್ರೆ ತಿಂಗಳ ಕಾಲ ಸ್ಟಾರ್ ಹೋಟೆಲ್ನಲ್ಲಿ ಲಕ್ಷ ಗಟ್ಟಲೆ ಬಿಲ್ ಕಟ್ಟೊ ಶ್ರೀಕಿ ಬಳಿ ಬ್ಯಾಂಕ್ ಅಕೌಂಟ್ ಇಲ್ಲ. ಶ್ರೀಕಿ ಕೈಯಲ್ಲಿ ಮೊಬೈಲ್ ಇಲ್ಲ. ಸ್ವಂತಕ್ಕೆ ಅಂತ ಒಂದು ಬೇಸಿಕ್ ಮೊಬೈಲ್ ಸಹ ಇಟ್ಟುಕೊಳ್ಳದ ಶ್ರೀಕಿ ಸದಾಕಾಲವೂ ಬೇರೆಯವರ ಮೊಬೈಲ್ ಮತ್ತು ಲ್ಯಾಪ್ ಟಾಪ್ ಮೂಲಕವೇ ಕೆಲಸ ಮಾಡ್ತಾನೆ. ಎಲ್ಲವು ಡಾರ್ಕ್ ವೆಬ್ ಮೂಲಕ ನಿರ್ವಹಿಸುವ ಶ್ರೀಕಿ ಏನಕ್ಕೂ ಸಿಸ್ಟಮ್ ಅಥವಾ ಮೊಬೈಲ್ ಎಲ್ಲಿಯು ಡೇಟಾ ಸೇವ್ ಮಾಡಲ್ಲ. ಅವಶ್ಯಕತೆ ಇರುವ ಐಡಿ ಪಾಸ್ ವರ್ಡ್ ಎಲ್ಲವೂ ಆತನ ತಲೆಯಲ್ಲೆ ಇರತ್ತೆ. ಪೊಲೀಸರು ವಿಚಾರಣೆ ನಡೆಸುವಾಗಲೂ ಹುಷಾರಾಗಿ ವಿಚಾರಣೆ ನಡೆಸಬೇಕು. ದೈಹಿಕವಾಗಿ ದಂಡಿಸಿ ವಿಚಾರಣೆ ನಡೆಸುವುದು ಶ್ರೀಕಿ ಹತ್ರ ಸಾಧ್ಯವಿಲ್ಲ.

ಡ್ರಗ್ಸ್ ಸೇವನೆ ಮಾಡಿ ಶ್ರೀಕಿ ದೇಹ ಸಂಪೂರ್ಣ ವೀಕ್ ಆಗಿದೆ. ಪೊಲೀಸರು ಶ್ರೀಕಿಗೆ ಹೆಚ್ಚು, ಹೆಚ್ಚು ಪ್ರಶ್ನೆ ಕೇಳಿದ್ರೆ ಅವನು ಉತ್ತರಿಸುವುದು ಸಾಕ್ಷಿ ಮುಂದೆ ಇಡಿ ಹಾಗೆ ಏನೇನೋ ಕೇಳಬೇಡಿ ಎನ್ನುತ್ತಾನೆ. This is irrelevant question ಎಂದು ಪೊಲೀಸರ ಮುಂದೆ ಹೇಳ್ತಾನೆ. ತನ್ನ ಸೈಬರ್ ಲೋಕದ ಅಪರಾಧಕ್ಕೆ ಸಾಕ್ಷಿ ಸಿಗದಂತೆ ಶ್ರೀಕಿ ಮಾಡ್ತಾನೆ. ಶ್ರೀಕಿ ಕೇಸ್ನಲ್ಲಿ ಆರೋಪಗಳು ಇವೆ, ಹೇಳಿಕೆಗಳು ಇವೆ ಆದ್ರೆ ಸಾಕ್ಷಿಗಳು ಮಾತ್ರ ಸರಿಯಾಗಿ ಇಲ್ಲ.

ಹಲವರು ಶ್ರೀಕಿಗೆ ಬೇಕಾದನ್ನು ಕೊಡಿಸಿ ತಮಗೆ ಬೇಕಾದ ಕೆಲಸ ಮಾಡಿಸಿಕೊಂಡಿದ್ದಾರೆ. ತಮಗೆ ಬೇಕಾದ ಟೆಂಡರ್, ತಮಗೆ ಬೇಕಾದ ಸೈಬರ್ ಭದ್ರತೆ ಹೀಗೆ ಹಲವಾರು ಕೆಲಸ ಮಾಡಿಸಿಕೊಂಡಿದ್ದಾರೆ. ಶ್ರೀಕಿ ಬಳಿ ಕ್ರಿಪ್ಟೊ ರೂಪದಲ್ಲಿ ಹಣ ಇರತ್ತೆ ಆದ್ರೆ ನಗದು ಇರಲ್ಲ. ಹ್ಯಾಕ್ ಮಾಡಿ ಬ್ಲಾಕ್ ಮೇಲ್ ಮಾಡುವುದು ಶ್ರೀಕಿಗೆ ಕಿಕ್ ಕೊಡತ್ತೆ. ಹಲವಾರು ಕಂಪನಿಗಳ ಸರ್ವರ್ ಮತ್ತು ವೆಬ್ ಸೈಟ್ ಹ್ಯಾಕ್ ಮಾಡಿದ್ದಾನೆ. ಹ್ಯಾಕ್ ಮಾಡಿ ಕಂಪನಿ ಮಾಲೀಕನಿಗೆ ಮಾಹಿತಿ ನೀಡ್ತಿದ್ದ. ಕಂಪನಿ ಮಾಲೀಕನಿಗೆ ಬ್ಲಾಕ್ ಮೇಲ್ ಮಾಡ್ತಿದ್ದ. ಬಳಿಕ ಬಿಟ್ ಕಾಯಿನ್ ಮೂಲಕ ಹಾಗು ಕ್ರಿಪ್ಟೊ ಮೂಲಕ ಹಣ ಪಡೆಯುತ್ತಿದ್ದ. ಇದು ಶ್ರೀಕಿಯ ಅಸಲಿ ಲೈಫ್ ಮತ್ತು ಅಸಲಿ ಲೈಫ್ ಸ್ಟೈಲ್.

ಇದನ್ನೂ ಓದಿ: ಶೀಘ್ರದಲ್ಲೇ ಸಿಎಂ ಬೊಮ್ಮಾಯಿ ಅಧಿಕಾರ ಹೋಗುತ್ತೆ -ಬಹಳ ಸ್ಪಷ್ಟ ಮಾಹಿತಿ ಇದೆ ಎಂದ ಕಾಂಗ್ರೆಸ್ಸಿನ ಮಾಜಿ ಸಚಿವ

Published On - 9:56 am, Thu, 11 November 21