AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶೀಘ್ರದಲ್ಲೇ ಸಿಎಂ ಬೊಮ್ಮಾಯಿ ಅಧಿಕಾರ ಹೋಗುತ್ತೆ -ಬಹಳ ಸ್ಪಷ್ಟ ಮಾಹಿತಿ ಇದೆ ಎಂದ ಕಾಂಗ್ರೆಸ್ಸಿನ ಮಾಜಿ ಸಚಿವ

Karnataka cm basavaraj bommai: ಹಾಲಿ ಮುಖ್ಯಮಂತ್ರಿ ಬದಲಾವಣೆ ನೂರಕ್ಕೆ ನೂರು ಸತ್ಯ. ಬೊಮ್ಮಾಯಿರನ್ನ ಬಿಟ್ಟು ಇನ್ನೂ ಒಬ್ಬರು ಸಿಎಂ ಆಗುತ್ತಾರೆ! ಬಿಜೆಪಿ ಹಿಂದೆ ಮೂವರನ್ನು ಮುಖ್ಯಮಂತ್ರಿ ಮಾಡಿತ್ತು. ಈ ಬಾರಿ ನಾಲ್ವರು ಮುಖ್ಯಮಂತ್ರಿ ಆಗಬಹುದು! - ಮಾಜಿ ಸಚಿವ ಶಿವರಾಜ ತಂಗಡಗಿ

ಶೀಘ್ರದಲ್ಲೇ ಸಿಎಂ ಬೊಮ್ಮಾಯಿ ಅಧಿಕಾರ ಹೋಗುತ್ತೆ -ಬಹಳ ಸ್ಪಷ್ಟ ಮಾಹಿತಿ ಇದೆ ಎಂದ ಕಾಂಗ್ರೆಸ್ಸಿನ ಮಾಜಿ ಸಚಿವ
ಶೀಘ್ರದಲ್ಲೇ ಸಿಎಂ ಬೊಮ್ಮಾಯಿ ಅಧಿಕಾರ ಹೋಗುತ್ತೆ: ಬಹಳ ಸ್ಪಷ್ಟ ಮಾಹಿತಿ ಇದೆ ಎಂದ ಮಾಜಿ ಸಚಿವ ಶಿವರಾಜ ತಂಗಡಗಿ
TV9 Web
| Updated By: ಸಾಧು ಶ್ರೀನಾಥ್​|

Updated on:Nov 11, 2021 | 9:29 AM

Share

ಕೊಪ್ಪಳ: ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇದೀಗ ದೆಹಲಿ ಪ್ರವಾಸದಲ್ಲಿದ್ದು, ಇಂದು ಪ್ರಧಾನಿ ಮೋದಿಯನ್ನು ಭೇಟಿಯಾಗಲಿದ್ದಾರೆ. ಈ ಮಧ್ಯೆ, ಸಿಎಂ ಬೊಮ್ಮಾಯಿಗೆ ಅಹಿತಕರವೆನಿಸುವ ಸುದ್ದಿಯೊಂದು ಅಪ್ಪಳಿಸಿದೆ. ಮಾಜಿ ಸಚಿವ ಶಿವರಾಜ ತಂಗಡಗಿ ಅವರು ಕೊಪ್ಪಳದಲ್ಲಿ ರಾಜಕೀಯ ಬಾಂಬ್‌ ಒಂದನ್ನು ಸಿಡಿಸಿದ್ದು, ಜನವರಿ ಅಂತ್ಯಕ್ಕೆ ಸಿಎಂ ಬೊಮ್ಮಾಯಿ (Karnataka cm basavaraj bommai) ಅಧಿಕಾರ ಹೋಗುತ್ತೆ ಎಂದಿದ್ದಾರೆ. ಜನವರಿ ಅಂತ್ಯಕ್ಕೆ ಸಿಎಂ ಬೊಮ್ಮಾಯಿ ಅಧಿಕಾರ ಹೋಗುತ್ತೆ ಎಂಬುದರ ಬಗ್ಗೆ ಬಹಳ ಸ್ಪಷ್ಟ ಮಾಹಿತಿಗಳು ನಮಗೆ ಬರುತ್ತಿವೆ ಎಂದೂ ತಂಗಡಗಿ (shivraj tangadagi) ಸೇರಿಸಿದ್ದಾರೆ.

ಕೊಪ್ಪಳದಲ್ಲಿ ಇಂತಹ ರಾಜಕೀಯ ಬಾಂಬ್‌ ಸಿಡಿಸಿರುವ ಮಾಜಿ ಸಚಿವ ಶಿವರಾಜ ತಂಗಡಗಿ ಮತ್ತೂ ಒಂದು ರಾಜಕೀಯ ಭವಿಷ್ಯ ಹೇಳಿದ್ದಾರೆ- ಇನ್ನು ಒಂದೂವರೆ ವರ್ಷದಲ್ಲಿ ರಾಜ್ಯದಲ್ಲಿ ಇಬ್ಬರು ಸಿಎಂ ಆಗುತ್ತಾರೆ ಎಂದಿದ್ದಾರೆ. ಹಾಲಿ ಮುಖ್ಯಮಂತ್ರಿ ಬದಲಾವಣೆ ನೂರಕ್ಕೆ ನೂರು ಸತ್ಯ. ಬೊಮ್ಮಾಯಿರನ್ನ ಬಿಟ್ಟು ಇನ್ನೂ ಒಬ್ಬರು ಸಿಎಂ ಆಗುತ್ತಾರೆ! ಅವರಿಗೆ ಸಿಂಗಲ್ ಆಗಿ ಆಡಳಿತ ಮಾಡೋದಕ್ಕೆ ಬರಲ್ಲ. ಬಿಜೆಪಿ ಹಿಂದೆ ಮೂವರನ್ನು ಮುಖ್ಯಮಂತ್ರಿ ಮಾಡಿತ್ತು. ಈ ಬಾರಿ ನಾಲ್ವರು ಮುಖ್ಯಮಂತ್ರಿ ಆಗಬಹುದು! ಎಂದು ಮಾಜಿ ಸಚಿವ ಶಿವರಾಜ ತಂಗಡಗಿ ಹೇಳಿದ್ದಾರೆ.

ಹಾಲಿ ಮುಖ್ಯಮಂತ್ರಿಯವರು ಆಡಳಿತ ಮಾಡೋಕೆ ಸಮರ್ಥರಿಲ್ಲ ಎಂದಿರುವ ತಂಗಡಗಿ, ಬಿಟ್ ಕಾಯಿನ್ (Bitcoin) ಹಗರಣದ ಬಗ್ಗೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅಧಿವೇಶನದಲ್ಲಿ ಮಾತಾಡ್ತಾರೆ. ದೂರು ದಾಖಲಿನ ಪ್ರತಿ ಕೊಡಿ ಎಂದು ನಾಯಕರು ಕೇಳ್ತಿದ್ದಾರೆ. ಅದರ ಬಗ್ಗೆ ಹೆದರಿಕೆ ಇರೋದಕ್ಕೆ ಬಿಜೆಪಿಯವರು ಕೊಡುತ್ತಿಲ್ಲ. ಆರೋಪಿಸುವವರೇ ಸಾಕ್ಷ್ಯ ಕೊಡಬೇಕು ಅಂದ್ರೆ ಸರ್ಕಾರವೇಕೆ? ಎಂದು ಕೊಪ್ಪಳದಲ್ಲಿ ಮಾಜಿ ಸಚಿವ ಶಿವರಾಜ ತಂಗಡಗಿ ತಮ್ಮ ಸಿಟ್ಟನ್ನು ಹೊರಹಾಕಿದ್ದಾರೆ.

ಕಾಂಗ್ರೆಸ್ ಮುಖಂಡರೇ ಬಿಟ್​​ಕಾಯಿನ್ ಪ್ರಕರಣದಲ್ಲಿ ಭಾಗಿಯಾಗಿರುವುದು ಮೇಲ್ನೋಟಕ್ಕೆ ಸ್ಪಷ್ಟ- ವಿಜಯೇಂದ್ರ

ದಾವಣಗೆರೆ: ರಾಜ್ಯದಲ್ಲಿ ಸಿಎಂ ಬೊಮ್ಮಾಯಿ ಬದಲಾವಣೆ ವಿಚಾರಕ್ಕೆ ಬಿವೈ ವಿಜಯೇಂದ್ರ ಸ್ಪಷ್ಟನೆ ನೀಡಿದ್ದು, ಸಿಎಂ ಬದಲಾವಣೆ ಮಾತು ಕಪೋಲಕಲ್ಪಿತವಾದದ್ದು. ಕಾಂಗ್ರೆಸ್ ಮುಖಂಡರೇ ಬಿಟ್​​ಕಾಯಿನ್ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎನ್ನುವುದು ಮೇಲ್ನೋಟಕ್ಕೆ ಕಾಣಿಸುತ್ತಿದೆ ಎಂದಿದ್ದಾರೆ. ಚುನಾವಣೆ ಇನ್ನು ಒಂದುವರೆ ವರ್ಷಗಳ‌ ಕಾಲ ಇದೆ. ಅಲ್ಲಿಯವರೆಗೂ ಬೊಮ್ಮಾಯಿ ಯವರೇ ಸಿಎಂ ಆಗಿ ಮುಂದುವರೆಯುತ್ತಾರೆ. ಸಿಎಂ ಬದಲಾವಣೆ ವಿಚಾರ, ಇದೆಲ್ಲ ಕಾಂಗ್ರೆಸ್ ಪಕ್ಷದ ಪಿತೂರಿ ಅಷ್ಟೇ. ಈ ರೀತಿ ಹೇಳಿಕೆ‌ ಕೊಡುವ ಮೂಲಕ ಅಡಳಿತವನ್ನು ಕುಂಠಿತ ಮಾಡುವ ಪ್ರಯತ್ನವನ್ನು ಕಾಂಗ್ರೆಸ್ ಮಾಡುತ್ತಿದೆ ಎಂದರು.

ಬಿಟ್ ಕಾಯನ್ ಬಗ್ಗೆ ಕಾಂಗ್ರೆಸ್ ಮುಖಂಡರು ಆರೋಪ ಮಾಡ್ತಾ ಇದಾರೆ. ಅ ಆರೋಪಗಳಲ್ಲಿ ಹುರುಳಿಲ್ಲ. ವಿನಾಕಾರಣ ಆರೋಪ ಮಾಡ್ತಾ ಇದಾರೆ. ವಿಚಿತ್ರ ಏನು ಅಂದ್ರೆ ಕಾಂಗ್ರೆಸ್ ಮುಖಂಡರೇ ಅದರಲ್ಲಿ ಬಾಗಿಯಾಗಿದ್ದಾರೆ ಎನ್ನುವುದು ಮೇಲ್ನೋಟಕ್ಕೆ ಕಾಣಿಸುತ್ತಿದೆ. ಮುಖ್ಯಮಂತ್ರಿ ಗಳು ಸ್ಪಷ್ಟವಾಗಿ ಹೇಳಿದ್ದಾರೆ ತನಿಖೆ ಆಗುತ್ತಿದೆ. ಇದರಲ್ಲಿ ಯಾರೇ ಪ್ರಭಾವಿಗಳು ಇದ್ದರೂ ಅವರ ಮೇಲೆ ತನಿಖೆಯಾಗುತ್ತೆ. ಅವರನ್ನು ಬಿಡುವ ಪ್ರಶ್ನೆ ಇಲ್ಲ ಎಂದು ಸಿ ಎಂ ಹೇಳಿದ್ದಾರೆ. ಕಾಂಗ್ರೆಸ್ ಮುಖಂಡರು ಬಿಜೆಪಿಯವರು ಇದರಲ್ಲಿ ಭಾಗಿಯಾಗಿದ್ದಾರೆ ಎಂದು ಹೇಳುವ ಮೂಲಕ ರಾಜ್ಯದ ಜನತೆಯ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ .

(Karnataka cm basavaraj bommai will step down from cm post says ex minister shivraj tangadagi)

Published On - 9:05 am, Thu, 11 November 21