ಬೆಂಗಳೂರು: ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ (Kempegowda International Airport) ಬೆಂಗಳೂರಲ್ಲಿ (Bengaluru) ಭದ್ರತಾ ಲೋಪವೊಂದು ಸಂಭವಿಸಿದೆ. ಶ್ರೀಲಂಕಾದ, (Srilanka) ಕೊಲಂಬೊದಿಂದ (Colombo) ಬೆಂಗಳೂರಿಗೆ ಬಂದಿದ್ದ 30 ಜನ ಪ್ರಯಾಣಿಕರನ್ನು ಅಂತರಾಷ್ಟ್ರೀಯ ಆಗಮನದ ಗೇಟ್, ಬದಲಾಗಿ ದೇಶಿ ಪ್ರಯಾಣಿಕರ ಗೇಟ್ನಲ್ಲಿ ತಪ್ಪಾಗಿ ಇಳಿಸಲಾಗಿದೆ. ಶುಕ್ರವಾರ (ಮಾ.17) ಯುಎಲ್ 173 ವಿಮಾನದ ಮೂಲಕ ಬಂದ ಶ್ರೀಲಂಕಾದ ಪ್ರಯಾಣಿಕರನ್ನು ದೇಶೀಯ ಆಗಮನದ ಬಸ್ ಗೇಟ್ನಲ್ಲಿ ಇಳಿಸಲಾಗಿದೆ ಎಂದು ಬೆಂಗಳೂರು ಇಂಟರ್ನ್ಯಾಶನಲ್ ಏರ್ಪೋರ್ಟ್ ಲಿಮಿಟೆಡ್) ವಕ್ತಾರರು ತಿಳಿಸಿದ್ದಾರೆ.
ಕೂಡಲೆ ಟರ್ಮಿನಲ್ ಕಾರ್ಯಾಚರಣೆ ತಂಡ ಸ್ಥಳಕ್ಕೆ ಧಾವಿಸಿ, ಘಟನೆ ಬಗ್ಗೆ ಸಿಐಎಸ್ಫ್ ಮತ್ತು ಇಮಿಗ್ರೇಷನ್ಗೆ ತಿಳಿಸಿದರು. ನಂತರ ಸಿಐಎಸ್ಫ್, ಇಮಿಗ್ರೇಷನ್ ಜೊತೆಗೆ ಟರ್ಮಿನಲ್ ಕಾರ್ಯಾಚರಣೆ ತಂಡಕ್ಕೆ ಸೂಚನೆ ನೀಡಲಾಯಿತು, ಪ್ರಯಾಣಿಕರನ್ನು ತಕ್ಷಣವೇ ಪ್ರವಾಸಕ್ಕೆ ಅಂತಾರಾಷ್ಟ್ರೀಯ ಆಗಮನಕ್ಕೆ ಸ್ಥಳಾಂತರಿಸಲಾಯಿತು. ನಂತರ ಪ್ರಯಾಣಿಕರು ಅಂತರಾಷ್ಟ್ರೀಯ ಬ್ಯಾಗೇಜ್ ಕ್ಲೈಮ್ ಪ್ರದೇಶಕ್ಕೆ ತೆರಳಿದರು ಎಂದು ಬಿಐಎಎಲ್ ವಕ್ತಾರರು ಹೇಳಿದರು.
ಇದನ್ನೂ ಓದಿ: ಟರ್ಮಿನಲ್ 2ರಿಂದ ವಿಸ್ತಾರ ವಿಮಾನ ಸೇವೆ; ಮಾರ್ಚ್ 26ರಿಂದ ಲಭ್ಯ
ವಿಮಾನ ನಿಲ್ದಾಣದಲ್ಲಿನ ಪರಿಸ್ಥಿತಿಗೆ ಮಾನವ ದೋಷ ಕಾರಣವಾಗಿದ್ದು ಅದು ಅಂತಿಮವಾಗಿ ಗೊಂದಲಕ್ಕೆ ಕಾರಣವಾಯಿತು. ಆದರೂ ಸರಿಪಡಿಸುವ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಬಿಐಎಎಲ್ ಹೇಳಿದೆ.
ರಾಜ್ಯದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 2:22 pm, Sat, 18 March 23