SSLC ಫಲಿತಾಂಶದ ದಿನಾಂಕ ಫಿಕ್ಸ್, ವಿದ್ಯಾರ್ಥಿಗಳ ಮೊಬೈಲಿಗೆ ಫಲಿತಾಂಶದ ಸಂದೇಶ ರವಾನೆ

ಫಲಿತಾಂಶ ಪ್ರಕಟಕ್ಕೆ SSLC ಬೋರ್ಡ್ ನಿಂದ ತಾತ್ಕಾಲಿಕ ಡೇಟ್ ನೀಡಲಾಗಿದೆ. ಮೇ 12ರಂದು SSLC ಪರೀಕ್ಷಾ ಫಲಿತಾಂಶ ಪ್ರಕಟವಾಗುವ ಸಾಧ್ಯತೆ ಇದೆ. ವಿದ್ಯಾರ್ಥಿಗಳ ಮೊಬೈಲ್ ಗೆ ಫಲಿತಾಂಶದ ಸಂದೇಶ ರವಾನಿಸಲಾಗುತ್ತೆ ಎಂದು ಟಿವಿ9 ಗೆ SSLC ಬೋರ್ಡ್ ನಿರ್ದೇಶಕ ಹೆಚ್.ಎನ್. ಗೋಪಾಲಕೃಷ್ಣ ಮಾಹಿತಿ ನೀಡಿದ್ದಾರೆ.

SSLC ಫಲಿತಾಂಶದ ದಿನಾಂಕ ಫಿಕ್ಸ್, ವಿದ್ಯಾರ್ಥಿಗಳ ಮೊಬೈಲಿಗೆ ಫಲಿತಾಂಶದ ಸಂದೇಶ ರವಾನೆ
ಪ್ರಾತಿನಿಧಿಕ ಚಿತ್ರ
Image Credit source: Representational Image. Credit: PTI Image
Updated By: ಆಯೇಷಾ ಬಾನು

Updated on: Apr 14, 2022 | 3:41 PM

ಬೆಂಗಳೂರು: ಹಿಜಾಬ್(Hijab) ಗಲಾಟೆ ನಡುವೆಯೇ ರಾಜ್ಯಾದ್ಯಂತ ಎಸ್ಎಸ್ಎಲ್ಸಿ ಪರೀಕ್ಷೆ ಸುಸೂತ್ರವಾಗಿ ನೆರವೇರಿದೆ. ಸದ್ಯ 2021-22ನೇ ಸಾಲಿನ SSLC ಫಲಿತಾಂಶದ ದಿನಾಂಕ ಫಿಕ್ಸ್? ಮಾಡಲಾಗಿದೆ. ಮೇ 12ರಂದು SSLC ಪರೀಕ್ಷಾ ಫಲಿತಾಂಶ ಪ್ರಕಟವಾಗುವ ಸಾಧ್ಯತೆ ಇದೆ.

ಫಲಿತಾಂಶ ಪ್ರಕಟಕ್ಕೆ SSLC ಬೋರ್ಡ್ ನಿಂದ ತಾತ್ಕಾಲಿಕ ಡೇಟ್ ನೀಡಲಾಗಿದೆ. ಎಲ್ಲ ಅಂದುಕೊಂಡಂತೆ ಆದ್ರೆ ಮೇ 12ರಂದೇ ಫಲಿತಾಂಶ ಘೋಷಣೆ ಮಾಡಲಾಗುತ್ತೆ. ಕೀ ಉತ್ತರಗಳು ಏ.12ರಿಂದಲೇ ವೆಬ್ ಸೈಟ್ ನಲ್ಲಿ ಪ್ರಕಟಗೊಂಡಿವೆ. ಆಕ್ಷೇಪಣೆ ಸಲ್ಲಿಸಲು 3 ದಿನಗಳ ಕಾಲಾವಕಾಶ ನೀಡಲು SSLC ಬೋರ್ಡ್ ನಿರ್ಧರಿಸಿದೆ. ಆಕ್ಷೇಪಣೆ ಬಳಿಕ ಮಾದರಿ ಉತ್ತರಗಳು ಮೌಲ್ಯಮಾಪಕರಿಗೆ ರವಾನಿಸಲಾಗುತ್ತೆ. ಏ.21ರಿಂದ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಪ್ರಕ್ರಿಯೆ ಆರಂಭವಾಗಲಿವೆ.

10 ದಿನಗಳ ಕಾಲ ಮೌಲ್ಯಮಾಪನ ಪ್ರಕ್ರಿಯೆ ನಡೆಯಲಿದೆ. ಮೌಲ್ಯಮಾಪನದ ಬಳಿಕ ವೆಬ್ ಸೈಟ್ ನಲ್ಲಿ ಅಂಕಗಳ ಅಪ್ಲೋಡ್ ಕಾರ್ಯ ನಡೆಯುತ್ತೆ. ಕಂಪ್ಯೂಟರ್ನಲ್ಲಿ ಅಂಕಗಳ ಫೈನಲೈಸ್ ಮಾಡಲಾಗುತ್ತೆ. ಈ ಕಾರ್ಯ ಮುಗಿದ ಒಂದು ವಾರದಲ್ಲೇ ಫಲಿತಾಂಶ ಪ್ರಕಟವಾಗುತ್ತೆ. ರಾಜ್ಯದ ಒಟ್ಟು 238 ಕೇಂದ್ರಗಳಲ್ಲಿ ಮೌಲ್ಯಮಾಪನ ನಡೆಯಲಿದೆ. ಪ್ರತೀ ಜಿಲ್ಲೆಯಲ್ಲೂ ವಿಷಯವಾರು ಮೌಲ್ಯಮಾಪನ ಕೇಂದ್ರಗಳಿವೆ. ವಿದ್ಯಾರ್ಥಿಗಳ ಮೊಬೈಲ್ ಗೆ ಫಲಿತಾಂಶದ ಸಂದೇಶ ರವಾನಿಸಲಾಗುತ್ತೆ ಎಂದು ಟಿವಿ9 ಗೆ SSLC ಬೋರ್ಡ್ ನಿರ್ದೇಶಕ ಹೆಚ್.ಎನ್. ಗೋಪಾಲಕೃಷ್ಣ ಮಾಹಿತಿ ನೀಡಿದ್ದಾರೆ.

ಮೊದಲ ದಿನ 20 ಸಾವಿರ, 2ನೇ ದಿನ 22 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಗೈರು
ಬೆಂಗಳೂರು: ಎರಡನೇ ದಿನದ ಎಸ್ಎಸ್ಎಲ್ಸಿ ಪರೀಕ್ಷೆಗೆ(SSLC Exam) ಸಾವಿರಾರು ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಗೈರಾಗಿದ್ದಾರೆ. ದ್ವಿತೀಯ ಭಾಷೆ ಪರೀಕ್ಷೆಗೆ 22,063 ವಿದ್ಯಾರ್ಥಿಗಳು ಗೈರಾಗಿದ್ದಾರೆ. ಮೊದಲ ದಿನಕ್ಕಿಂತ ಇಂದು ಹೆಚ್ಚು ವಿದ್ಯಾರ್ಥಿಗಳು ಪರೀಕ್ಷೆ ತಪ್ಪಿಸಿದ್ದಾರೆ. ಅನಾರೋಗ್ಯ ಹಿನ್ನೆಲೆ 195 ವಿದ್ಯಾರ್ಥಿಗಳಿಗೆ ವಿಶೇಷ ಕೊಠಡಿಯಲ್ಲಿ ಪರೀಕ್ಷೆ ಬರೆಯಲು ವ್ಯವಸ್ಥೆ ಮಾಡಲಾಗಿತ್ತು. ಬಾಕಿ ವಿದ್ಯಾರ್ಥಿಗಳು ಪರೀಕ್ಷೆಗೆ ಗೈರಾಗಿರುವ ಮಾಹಿತಿ ಸಿಕ್ಕಿದೆ. ಮೊದಲ ದಿನದ ಪರೀಕ್ಷೆಯಲ್ಲಿ 20,994 ವಿದ್ಯಾರ್ಥಿಗಳು ಗೈರಾಗಿದ್ದರು. ಇಂದು ಬರೋಬ್ಬರಿ 22,063 ವಿದ್ಯಾರ್ಥಿಗಳು ಪರೀಕ್ಷೆಗೆ ಗೈರಾಗಿದ್ದಾರೆ ಎಂದು ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯಿಂದ ಮಾಹಿತಿ ನೀಡಿದೆ.

SSLC ಎಕ್ಸಾಂಗೆ ಗೈರಾದವರು
ರಾಜ್ಯಾದ್ಯಂತ ಮಾರ್ಚ್ 28ರಂದು ನಡೆದ ಎಸ್ಎಸ್ಎಲ್ಸಿ ಪರೀಕ್ಷೆಗೆ ಮೊದಲ ದಿನವೇ 20,994 ವಿದ್ಯಾರ್ಥಿಗಳು ಗೈರಾಗಿದ್ದಾರೆ. ಬೆಂಗಳೂರು ಉತ್ತರದಲ್ಲಿ 585 ವಿದ್ಯಾರ್ಥಿಗಳು ಬೆಂಗಳೂರು ದಕ್ಷಿಣದಲ್ಲಿ 1142, ಬೆಂ.ಗ್ರಾಮಾಂತರ ಭಾಗದಲ್ಲಿ 132 ವಿದ್ಯಾರ್ಥಿಗಳು ಗೈರಾಗಿದ್ದಾರೆ. ಚಿತ್ರದುರ್ಗದಲ್ಲಿ 510, ಬೆಳಗಾವಿಯಲ್ಲಿ 430, ಬಾಗಲಕೋಟೆಯಲ್ಲಿ 522, ರಾಮನಗರ ಜಿಲ್ಲೆಯಲ್ಲಿ 303, ಹುಬ್ಬಳ್ಳಿ-ಧಾರವಾಡ ಜಿಲ್ಲೆಯಲ್ಲಿ 267 ಸ್ಟೂಡೆಂಟ್ಸ್ ಫಸ್ಟ್ ಡೇ SSLC ಪರೀಕ್ಷೆಗೆ ಬಂದಿಲ್ಲ. ಇನ್ನು, ತುಮಕೂರಲ್ಲಿ 611, ಕೋಲಾರದಲ್ಲಿ 310, ವಿಜಯಪುರದಲ್ಲಿ 702 ವಿದ್ಯಾರ್ಥಿಗಳು ಎಕ್ಸಾಂಗೆ ಹಾಜರಾಗಿಲ್ಲ. ಹಾವೇರಿಯಲ್ಲಿ 490, ದಾವಣಗೆರೆಯಲ್ಲಿ 286 ಸ್ಟೂಡೆಂಟ್ಸ್ ಗೈರಾಗಿದ್ದಾರೆ ಎನ್ನಲಾಗಿದೆ.. ಇನ್ನು, ಕಳೆದ ವರ್ಷ SSLC ಎಕ್ಸಾಂಗೆ ಕೇವಲ 3,769 ವಿದ್ಯಾರ್ಥಿಗಳಷ್ಟೇ ಗೈರಾಗಿದ್ರಂತೆ.

ಇದನ್ನೂ ಓದಿ: ಹಿಜಾಬ್ ಧರಿಸಿ ಎಸ್​ಎಸ್​ಎಲ್​ಸಿ ಪರೀಕ್ಷೆ ಬರೆಯಲು ಅವಕಾಶ; ಕೊಠಡಿ ಮೇಲ್ವಿಚಾರಕನನ್ನು ಅಮಾನತ್ತು ಮಾಡಿದ ಡಿಡಿಪಿಐ

ಮಾಜಿ ಪ್ರಿಯಕರ ರಣಬೀರ್​ ಕಪೂರ್​ ಮದುವೆ ಸಮಯದಲ್ಲಿ ಮುಂಬೈ ತೊರೆದ ದೀಪಿಕಾ; ಸಖತ್​ ಟ್ರೋಲ್​

Published On - 3:33 pm, Thu, 14 April 22