ಬಹಳಷ್ಟು ಜನ ಅಂಬೇಡ್ಕರ್ ಹೆಸರಲ್ಲಿ ಮೇಲೆ ಮೇಲೆ ಹೋಗಿದ್ದಾರೆ; ಉತ್ತಮ ಸ್ಥಾನ ಪಡೆದು, ಸಮಾಜವನ್ನ ಮರೆತಿದ್ದಾರೆ -ಬೊಮ್ಮಾಯಿ ವಿಷಾದ
Ambedkar Jayanti 2022: ಈ ದೇಶದ ರಕ್ಷಾ ಕವಚ ಸಂವಿಧಾನ. ಈ ದೇಶದ ಭವಿಷ್ಯ ಸಂವಿಧಾನ. ಸೂರ್ಯ ಚಂದ್ರ ಇರೋವರೆಗೆ ಸಂವಿಧಾನ ಇರುತ್ತದೆ. ಹಿಂದಿನ, ಈಗಿನ, ಮುಂದಿನ ಸಮಸ್ಯೆಗಳಿಗೆ ಸಂವಿಧಾನದಲ್ಲಿ ಪರಿಹಾರವಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹರ್ಷ ವ್ಯಕ್ತಪಡಿಸಿದರು.
ಬೆಂಗಳೂರು: ಇಂದು (ಏಪ್ರಿಲ್ 14) ಭಾರತದ ಸಂವಿಧಾನ ಶಿಲ್ಪಿ ಡಾ. ಬಿ.ಆರ್ ಅಂಬೇಡ್ಕರ್ ಜಯಂತಿ (ಭೀಮ್ ಜಯಂತಿ). ಇಂದು ಬಿ.ಆರ್ ಅಂಬೇಡ್ಕರ್ ಅವರ 131ನೇ ಜನುಮ ದಿನ (April 14, 1891). ಇದರ ಅಂಗವಾಗಿ ವಿಧಾನೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ಅಂಬೇಡ್ಕರ್ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯುತ್ತಿದೆ. 2018, 2019, 2020, 2021 ಮತ್ತು 2022ನೇ ಸಾಲಿ ಅಂಬೇಡ್ಕರ್ ಪ್ರಶಸ್ತಿಯನ್ನು ಎಸ್. ಸಿದ್ಧಾರ್ಥ, ಆರ್.ಎಸ್. ಸರಸ್ವತಮ್ಮ, ಡಿ. ರಾಮಾ ನಾಯ್ಕ್, ಗುರುವಪ್ಪ ಎನ್.ಟಿ. ಬಾಳೇಪುಣಿ ಮತ್ತು ಬಿ.ಎಂ. ಗಿರಿರಾಜ್ ಅವರಿಗೆ ಪ್ರದಾನ ಮಾಡಲಾಗುತ್ತಿದೆ (Ambedkar Jayanti or Bhim Jayanti). ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮತ್ತು ವಿಧಾನ ಪರಿಷತ್ ಸದಸ್ಯರಾದ ಪ್ರತಾಪ ಸಿಂಹ ನಾಯಕ್, ವೈ.ಎ. ನಾರಾಯಣಸ್ವಾಮಿ, ಅ. ದೇವೇಗೌಡ, ಮಾಜಿ ಸಚಿವೆ ಮೋಟಮ್ಮ ಸೇರಿದಂತೆ ಅನೇಕ ಗಣ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತಿರಿದ್ದಾರೆ. ಈ ವೇಳೆ ಸಭೆಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಬಹಳಷ್ಟು ಜನ ಅಂಬೇಡ್ಕರ್ ಹೆಸರಲ್ಲಿ ಮೇಲೆ ಮೇಲೆ ಹೋಗಿದ್ದಾರೆ. ಉತ್ತಮ ಸ್ಥಾನಗಳನ್ನು ಪಡೆದು, ಸಮಾಜವನ್ನೇ ಮರೆತಿದ್ದಾರೆ. ಇವರೆಲ್ಲಾ ಪಟ್ಟಭದ್ರ ಹಿತಾಸಕ್ತರು. ಈ ಪಟ್ಟಭದ್ರ ಹಿತಾಸಕ್ತಿಗಳು ದೇಶವನ್ನು ಹಾಳು ಮಾಡ್ತಿವೆ ಎಂದು ವಿಷಾದ ವ್ಯಕ್ತಪಡಿಸಿದರು (Basavaraj Bommai).
ನಮ್ಮಸರ್ಕಾರವನ್ನು ನಮ್ಮ ಕೆಲಸದಿಂದ ಅಳೆಯಿರಿ. ಎಲ್ಲಾ ಎಸ್ಸಿ ಎಸ್ಟಿ ಕುಟುಂಬಗಳಿಗೆ ಉಚಿತ ವಿದ್ಯುತ್ ಕೊಡ್ತಿದ್ದೇವೆ. 75 ಯೂನಿಟ್ ವರೆಗೆ ಉಚಿತ ವಿದ್ಯುತ್ ಕೊಡ್ತಿದ್ದೇವೆ. ಇದುವರೆಗೆ ಈ ಕೆಲಸ ಯಾರೂ ಮಾಡಿರಲಿಲ್ಲ. ರಾಜ್ಯದಲ್ಲಿ ಅಂಬೇಡ್ಕರ್ ಓಡಾಡಿದ ಸ್ಫೂರ್ತಿಯ ಸೆಲೆಗಳಾಗಿರುವ ಪ್ರದೇಶಗಳನ್ನು ಅಭಿವೃದ್ಧಿಪಡಿಸಲಾಗುವುದು ಎಂದು ಸಿ ಎಂ ಬೊಮ್ಮಾಯಿ ಹೇಳಿದರು.
ಈ ದೇಶದ ರಕ್ಷಾ ಕವಚ ಸಂವಿಧಾನ. ಈ ದೇಶದ ಭವಿಷ್ಯ ಸಂವಿಧಾನ. ಸೂರ್ಯ ಚಂದ್ರ ಇರೋವರೆಗೆ ಸಂವಿಧಾನ ಇರುತ್ತದೆ. ಹಿಂದಿನ, ಈಗಿನ, ಮುಂದಿನ ಸಮಸ್ಯೆಗಳಿಗೆ ಸಂವಿಧಾನದಲ್ಲಿ ಪರಿಹಾರವಿದೆ ಎಂದು ಅವರು ಹರ್ಷ ವ್ಯಕ್ತಪಡಿಸಿದರು.
ಸಚಿವ, ಶಾಸಕ, ಡಿಸಿಎಂ ಆಗಿದ್ದರೂ ದೇಗುಲದೊಳಗೆ ಸೇರಿಸಲ್ಲ -ಮಾಜಿ ಡಿಸಿಎಂ ಜಿ.ಪರಮೇಶ್ವರ್ ಬೇಸರ ತುಮಕೂರು: ದೇಶದಲ್ಲಿ ಸಮಾನತೆಗೆ ಸ್ಪಷ್ಟ ಭಾಷ್ಯ ಬರೆದ ಅಂದರೆ ಜಗತ್ತಿನಲ್ಲೇ ಅತ್ಯುತ್ತಮ ಸಂವಿಧಾನ ರೂಪಿಸಿ ಡಾ. ಬಿ ಆರ್ ಅಂಬೇಡ್ಕರ್ ಅವರ ಜನ್ಮ ದಿನದಂದೇ ಹಿರಿಯ ಕಾಂಗ್ರೆಸ್ ನಾಯಕ ಡಾ ಜಿ. ಪರಮೇಶ್ವರ್ ಅವರು (Former DCM Dr G Parameshwara) ಅತ್ಯಂತ ಬೇಸರದ ಸಂಗತಿಯೊಂದನ್ನು ವಿಷಾದದ ದನಿಯಲ್ಲಿ ಹೊರಹಾಕಿದ್ದಾರೆ. ಮಾಜಿ ಸಚಿವ, ಶಾಸಕ, ಉಪ ಮುಖ್ಯಮಂತ್ರಿಯೇ ಆಗಿದ್ದರೂ ದೇಗುಲದೊಳಗೆ ನನ್ನನ್ನು ಸೇರಿಸುವುದಿಲ್ಲ (Dalit) ಎಂದು ಕೊರಟಗೆರೆಯಲ್ಲಿ ಮಾಜಿ ಡಿಸಿಎಂ ಡಾ ಜಿ. ಪರಮೇಶ್ವರ್ ಬೇಸರ ವ್ತಕ್ತಪಡಿಸಿದ್ದಾರೆ.
ದಲಿತ ಎಂಬ ಕಾರಣಕ್ಕೆ ದೇವಸ್ಥಾನದೊಳಗೆ ಬಿಟ್ಟುಕೊಳ್ಳಲ್ಲ ಎಂದು ಬಹಿರಂಗವಾಗಿಯೇ ಪರಮೇಶ್ವರ್ ಅವರು ತಮ್ಮ ಅಪಾರ ಬೇಸರ ಹೊರ ಹಾಕಿದರು. ಅದೂ ಡಾ. ಅಂಬೇಡ್ಕರ್ ಜಯಂತಿಯಲ್ಲಿ ಡಾ. ಪರಮೇಶ್ವರ್ ಹೀಗೆ ವಿಷಾದ ವ್ಯಕ್ತಪಡಿಸಿದ್ದು ಪರಿಸ್ಥಿತಿಯ ವ್ಯಂಗ್ಯವಾಗಿತ್ತು. ಕೊರಟಗೆರೆ ಪಟ್ಟಣದ ಪಂಚಾಯಿತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ದೇವಸ್ಥಾನಕ್ಕೆ ಹೋದ್ರೆ ಸ್ವಲ್ಪ ಅಲ್ಲೇ ನಿಂತುಕೊಳ್ಳಿ ಅಂತಾರೆ! ಅಲ್ಲೇ ನಿಲ್ಲಿ ಎಂದು ಮಂಗಳಾರತಿ ತಟ್ಟೆ ತಂದು ಬಿಡ್ತಾರೆ. ದೇಗುಲದೊಳಗೆ ಬಂದು ಬಿಡ್ತೀನಿ ಅಂತಾ ಹೀಗೆ ಮಾಡ್ತಾರೆ. ಇಂಥ ಪರಿಸ್ಥಿತಿ ಈಗಲೂ ಸಮಾಜದಲ್ಲಿದೆ ಎಂದು ಹಿರಿಯ ನಾಯಕ ಜಿ. ಪರಮೇಶ್ವರ್ ಅವರು ಕಾರ್ಯಕ್ರಮದಲ್ಲಿ ಬೇಸರ ವ್ಯಕ್ತಪಡಿಸಿದರು.
ಇದೂ ಓದಿ: ನನ್ನ ಸಿಡಿ ತಯಾರಿಸಿದ್ದ ‘ಮಹಾನ್ ನಾಯಕನೇ’ ಸಂತೋಷ್ ಪ್ರಕರಣದಲ್ಲೂ ಭಾಗಿ: ರಮೇಶ್ ಜಾರಕಿಹೊಳಿ ಹೊಸ ಬಾಂಬ್
ಇದೂ ಓದಿ: ಈಶ್ವರಪ್ಪ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಕಾಂಗ್ರೆಸ್ ಪ್ರತಿಭಟನೆ: ಸಿಎಂ ಮನೆಗೆ ಬಿಗಿ ಭದ್ರತೆ
Published On - 1:40 pm, Thu, 14 April 22