ಸರ್ಕಾರಿ ಪಿಯು ಕಾಲೇಜುಗಳಿಗೆ ಸೇರುವ ವಿದ್ಯಾರ್ಥಿನಿಯರು ಪಾವತಿಸುವ ಶುಲ್ಕಕ್ಕೆ ವಿನಾಯಿತಿ ನೀಡಿ ರಾಜ್ಯ ಸರ್ಕಾರ ಆದೇಶ

ರಾಜ್ಯದ ಪದವಿ ಪೂರ್ವ ಕಾಲೇಜುಗಳಲ್ಲಿ ದಾಖಲಾಗುವ ವಿದ್ಯಾರ್ಥಿನಿಯರಿಗೆ ರೂ.456 ಶುಲ್ಕದಿಂದ ವಿನಾಯಿತಿ ನೀಡಿ, ಸದರಿ ಮೊತ್ತವನ್ನು ಪ್ರಾಂಶುಪಾಲರ ಖಾತೆಗೆ ಜಮೆ ಮಾಡುವ ಕುರಿತು ಸರ್ಕಾರ ಆದೇಶ ಹೊರಡಿಸಿದೆ.

ಸರ್ಕಾರಿ ಪಿಯು ಕಾಲೇಜುಗಳಿಗೆ ಸೇರುವ ವಿದ್ಯಾರ್ಥಿನಿಯರು ಪಾವತಿಸುವ ಶುಲ್ಕಕ್ಕೆ ವಿನಾಯಿತಿ ನೀಡಿ ರಾಜ್ಯ ಸರ್ಕಾರ ಆದೇಶ
ಶಿಕ್ಷಣ ಸಚಿವ ಬಿಸಿ ನಾಗೇಶ್
Updated By: ಆಯೇಷಾ ಬಾನು

Updated on: Jun 29, 2022 | 4:39 PM

ಬೆಂಗಳೂರು: ಸರ್ಕಾರಿ ಪಿಯು ಕಾಲೇಜುಗಳಿಗೆ(Government PU Colleged) ದಾಖಲಾಗುವ ‘ವಿದ್ಯಾರ್ಥಿನಿಯರು’ ಪಾವತಿಸುವ ಶುಲ್ಕಕ್ಕೆ ವಿನಾಯಿತಿ ನೀಡಿ ರಾಜ್ಯ ಸರ್ಕಾರ(State Government) ಆದೇಶ ಹೊರಡಿಸಿದೆ.

ರಾಜ್ಯದ ಪದವಿ ಪೂರ್ವ ಕಾಲೇಜುಗಳಲ್ಲಿ ದಾಖಲಾಗುವ ವಿದ್ಯಾರ್ಥಿನಿಯರಿಗೆ ರೂ.456 ಶುಲ್ಕದಿಂದ ವಿನಾಯಿತಿ ನೀಡಿ, ಸದರಿ ಮೊತ್ತವನ್ನು ಪ್ರಾಂಶುಪಾಲರ ಖಾತೆಗೆ ಜಮೆ ಮಾಡುವ ಕುರಿತು ಸರ್ಕಾರ ಆದೇಶ ಹೊರಡಿಸಿದೆ. ರಾಜ್ಯದ ಎಲ್ಲಾ ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ಪ್ರಥಮ ಹಾಗೂ ದ್ವಿತೀಯ ಪಿಯುಸಿಯಲ್ಲಿ ಪ್ರವೇಶ ಪಡೆಯುವ ಸಮಯದಲ್ಲಿ ವಿದ್ಯಾರ್ಥಿನಿಯರು 2019-2020 ಸಾಲಿನಿಂದ ರೂ.456/ ಶುಲ್ಕದಿಂದ ವಿನಾಯಿತಿ ನೀಡಿ ಪ್ರವೇಶ ನೀಡಲು ಆದೇಶಿಸಲಾಗಿತ್ತು. ಕಳೆದ ಎರಡು ವರ್ಷಗಳಿಂದ ಕೇವಲ ಆಯಾ ವರ್ಷಗಳಿಗೆ ಮಾತ್ರ ಸೀಮಿತವಾಗಿ ಶುಲ್ಕದಿಂದ ವಿನಾಯಿತಿ ನೀಡಿ ಪ್ರಾಂಶುಪಾಲರ ಖಾತೆಗೆ ಜಮೆ ಮಾಡಲು ಅನುಮತಿ ನೀಡಲಾಗುತ್ತಿತ್ತು. ಇದನ್ನೂ ಓದಿ: ಸೈಕಲ್​​ ಓಡಿಸುವಾಗ ತಲೆ ಮೇಲೆ ಸೂಟ್​​ಕೇಸ್ ಇಟ್ಟುಕೊಂಡು​​ ಬ್ಯಾಲೆನ್ಸ್​​ ಮಾಡುವ ವ್ಯಕ್ತಿ

ಆದರೆ ಸರ್ಕಾರದ ಆದೇಶದಂತೆ 2022-23ನೇ ಶೈಕ್ಷಣಿಕ ಸಾಲಿನಿಂದ ಶಾಶ್ವತವಾಗಿ ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ಪ್ರವೇಶ ಪಡೆಯುವ ಸಮಯದಲ್ಲಿ ವಿದ್ಯಾರ್ಥಿನಿಯರಿಗೆ ರೂ. 456 ಶುಲ್ಕದಿಂದ ಸಂಪೂರ್ಣ ವಿನಾಯತಿ ನೀಡಲಾಗಿರುತ್ತದೆ. ಮುಂದುವರೆದು ಶುಲ್ಕ ಮರುಪಾವತಿಗಾಗಿ ಲೆಕ್ಕಶೀರ್ಷಿಕೆ: 2202-02-001-0-010 ಉಪಶೀರ್ಷಿಕೆ 103ರಡಿಯಲ್ಲಿ ಒದಗಿಸುವ ಅನುದಾನವನ್ನು ಸಂಬಂಧಿಸಿದ ಪ್ರಾಂಶುಪಾಲರ ಖಾತೆಗೆ ಖಜಾನೆ-2 ತಂತ್ರಾಂಶದ ಮೂಲಕ ಬಿಡುಗಡೆಗೊಳಿಸಲು ಅಗತ್ಯಕ್ರಮ ಕೈಗೊಳಲು ಈ ಮೂಲಕ ಸೂಚಿಸಿದೆ ಎಂದು ಬಿ.ಸಿ. ನಾಗೇಶ್ ಆದೇಶ ಹೊರಡಿಸಿದ್ದಾರೆ.

Published On - 4:21 pm, Wed, 29 June 22