ಬೆಂಗಳೂರು ಟ್ರಾಫಿಕ್‌ ಜಾಮ್ ಸಮಸ್ಯೆ: ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಸುದ್ದಿಗೋಷ್ಠಿ

ಬೇರೆ ಸಿಟಿಗಳಿಗೆ ಹೋಲಿಸಿದ್ರೆ ಬೆಂಗಳೂರಿನಲ್ಲಿ ವಾಹನಗಳ ಸಂಖ್ಯೆ ಏರಿಕೆಯಿದೆ. ಖಾಸಗಿ ವಾಹನಗಳ ಸಂಖ್ಯೆ ಏರಿಕೆಯಾಗಿದೆ. ಪಬ್ಲಿಕ್ ಟ್ರಾನ್ಸ್‌ಪೋರ್ಟ್‌ ಬಳಕೆಗೆ ಉತ್ತೇಜನ ನೀಡುತ್ತೇವೆ.

ಬೆಂಗಳೂರು ಟ್ರಾಫಿಕ್‌ ಜಾಮ್ ಸಮಸ್ಯೆ: ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಸುದ್ದಿಗೋಷ್ಠಿ
ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್
Follow us
TV9 Web
| Updated By: ಗಂಗಾಧರ​ ಬ. ಸಾಬೋಜಿ

Updated on: Jun 29, 2022 | 12:54 PM

ಬೆಂಗಳೂರು: ನಿನ್ನೆ ನಾವು ಪೊಲೀಸ್ ಇಲಾಖೆ, ನಗರಾಭಿವೃದ್ಧಿ, ಬಿಎಂಟಿಸಿ, (BMTC) ಕೆ.ಆರ್ ಟಿಸಿ ಸೇರಿದಂತೆ ಎಲ್ಲಾ ಅಧಿಕಾರಿಗಳು ನಗರದಲ್ಲಿ ರೌಂಡ್ಸ್ ಮಾಡಿದ್ದೇವೆ. ಒಟ್ಟು ನಾಲ್ಕು ಕಡೆ ಪರಿವೀಕ್ಷಣೆ ಮಾಡಿದ್ದೇವೆ. ಸಣ್ಣ ಪುಟ್ಟ ಸಮಸ್ಯೆಗಳನ್ನ ಬಗೆಹರಿಸಿದ್ರೆ ಶೇ.30 ರಷ್ಟು ಟ್ರಾಫಿಕ್ ಸಮಸ್ಯೆ ಬಗೆಹರಿಸಬಹುದು ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಸುದ್ದಿಗೋಷ್ಠಿಯಲ್ಲಿ ಹೇಳಿದರು. ಪಾದಚಾರಿಗಳಿಗೆ ರಸ್ತೆ ದಾಟಲು ಸ್ಕೈವಾಕ್, ಲೈಟ್, ಫುಟ್ ಪಾತ್ ನಿರ್ಮಾಣ ಮಾಡುತ್ತೇವೆ. ಹೆಬ್ಬಾಳದ ಕಡೆ ಬಿಎಂಟಿಸಿ ಬಸ್​ಗಳ ನಿಲ್ದಾಣದಿಂದ ವಾಹನ ಸವಾರರಿಗೆ ಸಮಸ್ಯೆಯಾಗಿತ್ತು. ಹೆಬ್ಬಾಳದ ಬಳಿ ಮತ್ತೊಂದು ಸರ್ವಿಸ್ ಲೈನ್ ಮಾಡಿಕೊಡಲು ಪ್ಲಾನ್ ನಡಿತಾಯಿದೆ. ಏರ್ ಪೋರ್ಟ್​​ನಿಂದ ಹೆಬ್ಬಾಳದ ಕಡೆಯಿಂದ ಬರುವ ವಾಹನಗಳಿಗೆ ನೇರವಾಗಿ ಫ್ಲೈಓವರ್ ಮೇಲೆ ಹತ್ತಲು ಅನುಕೂಲವಾಗಲಿದೆ. ಅಡ್ಡವಾಗಿ ಫ್ಲೈಓವರ್ ಮೇಲೆ ಹತ್ತಲು ಅವಕಾಶ ಇರಲ್ಲ. ತಾತ್ಕಾಲಿಕವಾಗಿ ಪ್ಲಾನ್ ಮಾಡಿದ್ದೇವೆ ಎಂದು ಹೇಳಿದರು.

ಇದನ್ನೂ ಓದಿ: NEET UG 2022: NEET UG ಪರೀಕ್ಷೆಯ ಸಿಟಿ ಇಂಟಿಮೇಶನ್ ಸ್ಲಿಪ್ ಬಿಡುಗಡೆಯಾಗಿದೆ, ಇಲ್ಲಿದೆ ನೋಡಿ ಮಾಹಿತಿ

ಕೆ.ಆರ್ ಪುರಂ ಟ್ರಾಫಿಕ್ ಜಾಮ್ ಉಂಟಾಗುತ್ತಿದ್ದು, ಮೆಟ್ರೋ ಕಾಮಗಾರಿಯಿಂದ ಜಾಗ ಪಡೆದು ಬಸ್ ನಿಲ್ದಾಣ ನಿರ್ಮಾಣ ಮಾಡಲಾಗುವುದು. ರಸ್ತೆಯಲ್ಲಿ ಬಸ್ ನಿಲ್ಲದಂತೆ ಕ್ರಮಕೈಗೊಳ್ಳಲಾಗುವುದು. ಸೆಂಟ್ರಲ್ ಸಿಲ್ಕ್ ಬೋರ್ಡ್ ಜಂಕ್ಷನ್, ಸಾರಕ್ಕಿ ಜಂಕ್ಷನ್​ಗಳ ಅಭಿವೃದ್ಧಿ ಮಾಡಲಾಗುವುದು. ಬೇರೆ ಸಿಟಿಗಳಿಗೆ ಹೋಲಿಸಿದ್ರೆ ಬೆಂಗಳೂರಿನಲ್ಲಿ ವಾಹನಗಳ ಸಂಖ್ಯೆ ಏರಿಕೆಯಿದೆ. ಖಾಸಗಿ ವಾಹನಗಳ ಸಂಖ್ಯೆ ಏರಿಕೆಯಾಗಿದೆ. ಪಬ್ಲಿಕ್ ಟ್ರಾನ್ಸ್‌ಪೋರ್ಟ್‌ ಬಳಕೆಗೆ ಉತ್ತೇಜನ ನೀಡುತ್ತೇವೆ. ಪಿಣ್ಯಾ ಫ್ಲೈಓವರ್ ಮೇಲೆ ಭಾರಿ ವಾಹನಗಳ ಓಡಾಟಕ್ಕೆ ಅವಕಾಶ ನೀಡಬೇಕು. ಇಲ್ಲದಿದ್ದರೆ ಕೆಳಭಾಗದಲ್ಲಿ ಟ್ರಾಫಿಕ್ ಜಾಮ್ ಆಗುತ್ತೆ. ಎನ್‌ಹೆಚ್​ಐ ಜೊತೆ ಮಾತುಕತೆ ಮಾಡುತ್ತೇವೆ.

ಟ್ರಾಫಿಕ್ ಪೊಲೀಸರ ಜೊತೆ ಚರ್ಚಿಸಿ ಸ್ಕೈವಾಕ್ ನಿರ್ಮಾಣ ಮಾಡುತ್ತೇವೆ. ಕೋಗಿಲು ಕ್ರಾಸ್ ಹಿಂದೆ ರಾಜಕಾಲುವೆ ಮೇಲೆ ನಾಲ್ಕೈದು ಮನೆ ಕಟ್ಟಿಕೊಂಡಿದ್ದಾರೆ. ಅದನ್ನೆಲ್ಲ ತೆರವು ಮಾಡಬೇಕಿದೆ. ಪೈ ಲೇಔಟ್​ನಲ್ಲಿ ಪ್ರತಿಭಾರಿ ಮಳೆ ಬಂದಾಗ ಪ್ರವಾಹವಾಗುತ್ತದೆ. ಶೀಘ್ರದಲ್ಲೇ ಕೆಲ ಪ್ರಾಪರ್ಟಿಗಳ ತೆರವು ಮಾಡಲು ಪ್ಲಾನ್ ಮಾಡಲಾಗುವುದು ಎಂದರು. ಪೈಥಾನ್ ಯಂತ್ರಕ್ಕೆ ಒಂದು ಚದರ ಮೀಟರ್ ರಸ್ತೆ ಗುಂಡಿ ಮುಚ್ಚಲು 598 ರೂ.ಗೆ ಗುತ್ತಿಗೆ ನೀಡಲಾಗುತ್ತಿದ್ದು, ಸಾಮಾನ್ಯವಾಗಿ ಬೆಂಗಳೂರಿನಲ್ಲಿ 2.50 ಚದರ ಮೀಟರ್ ರಸ್ತೆ ಗುಂಡಿಗಳಿವೆ.

ಯಾವುದೇ ಅಡಚಣೆ ಇಲ್ಲ ಆದರೆ ಮಾಲೀಕತ್ವ ಯಾರದು ಇಲ್ಲ

ಈದ್ಗಾ ಮೈದಾನದ ವಿಚಾರವಾಗಿ ಮಾತನಾಡಿದ ತುಷಾರ್ ಗಿರಿನಾಥ್,  1965-2022 ರವರೆಗೂ ಇದೂವರೆಗೂ ವಕ್ಫ್ ಬೋರ್ಡ್ ಮೈದಾನದ ಮಾಲೀಕತ್ವ ಬಗ್ಗೆ ಸಾಬೀತು ಪಡಿಸಿಲ್ಲ. ಖಾತಾ ಮಾಡಿಸಿಕೊಂಡಿಲ್ಲ, ಆಸ್ತಿ ತೆರಿಗೆ ಕಟ್ಟಿಲ್ಲ. ಸೆಂಟ್ರಲ್ ಮುಸ್ಲಿಂ‌ ಕಮಿಟಿ ಪರವಾನಗಿ ಸ್ಥಳೀಯ ಶಾಸಕರು ಬಂದಿದ್ರು. ಆದರೆ ಸೆಂಟ್ರಲ್ ಮುಸ್ಲಿಂಗೆ ಇದು ಸಂಬಂಧವಿಲ್ಲ ಎಂದು ಹೇಳಲಾಗಿತ್ತು. ವಕ್ಫ್ ಬೋರ್ಡ್ ನವರು ಮಾಲೀಕತ್ವ ಸಾಬೀತು ಪಡಿಸಬೇಕಿತ್ತು. ಮಾಲೀಕತ್ವಕ್ಕಾಗಿ ದಾಖಲೆಗಳನ್ನ ಸಲ್ಲಿಕೆ ಮಾಡಲಿ. ಹೇಗೆ ಅವರಿಗೆ ಭೂಮಿ ಬಂತು ಅಂತಾ ದಾಖಲೆ ನೀಡಲಿ. ಪ್ರಾರ್ಥನೆ ಹಾಗೂ ಆಟವಾಡಲು ಅಡಚಣೆ ಮಾಡಬಾರದು ಅಂತಾ ಸುಪ್ರೀಂ ಕೋರ್ಟ್ ಆದೇಶವಿದೆ. ಹೀಗಾಗಿ ಯಾವುದೇ ಅಡಚಣೆ ಇಲ್ಲ ಆದರೆ ಮಾಲೀಕತ್ವ ಯಾರದು ಇಲ್ಲ ಎಂದು ಹೇಳಿದರು.

ಇದನ್ನೂ ಓದಿ: Deepak Hooda-Sanju Samson: ರೋಹಿತ್-ರಾಹುಲ್ ದಾಖಲೆ ಮುರಿದ ಹೂಡಾ-ಸ್ಯಾಮ್ಸನ್

ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ಬಿಗ್ ಬಾಸ್​ಗೆ ಬಂದಿದ್ದಕ್ಕೆ ಸಾರ್ಥಕ ಆಯ್ತು: ಸುದೀಪ್ ನೀಡಿದ ಸರ್ಪ್ರೈಸ್​
ಬಿಗ್ ಬಾಸ್​ಗೆ ಬಂದಿದ್ದಕ್ಕೆ ಸಾರ್ಥಕ ಆಯ್ತು: ಸುದೀಪ್ ನೀಡಿದ ಸರ್ಪ್ರೈಸ್​
ಸಿಖ್ಖರ ಮೆರವಣಿಗೆ ವೇಳೆ ಕಾರಿನಲ್ಲಿ ಡಿಕ್ಕಿ;ಜನರಿಂದ ಪೊಲೀಸ್ ಮಗನ ವಾಹನ ಪುಡಿ
ಸಿಖ್ಖರ ಮೆರವಣಿಗೆ ವೇಳೆ ಕಾರಿನಲ್ಲಿ ಡಿಕ್ಕಿ;ಜನರಿಂದ ಪೊಲೀಸ್ ಮಗನ ವಾಹನ ಪುಡಿ
ಬಿಜೆಪಿ ನಾಯಕರೊಂದಿಗೆ ರಾಜ್ಯದ ಪ್ರಸಕ್ತ ವಿದ್ಯಮಾನಗಳ ಬಗ್ಗೆ ನಡ್ಡಾ ಚರ್ಚೆ
ಬಿಜೆಪಿ ನಾಯಕರೊಂದಿಗೆ ರಾಜ್ಯದ ಪ್ರಸಕ್ತ ವಿದ್ಯಮಾನಗಳ ಬಗ್ಗೆ ನಡ್ಡಾ ಚರ್ಚೆ
ಸೊಸೆ ಇದೇ ರೀತಿ ಬಟ್ಟೆ ಹಾಕಬೇಕು: ಹನುಮಂತನ ತಾಯಿ ಹಾಕಿದ ಷರತ್ತು ಇದು
ಸೊಸೆ ಇದೇ ರೀತಿ ಬಟ್ಟೆ ಹಾಕಬೇಕು: ಹನುಮಂತನ ತಾಯಿ ಹಾಕಿದ ಷರತ್ತು ಇದು
ಸಚಿನ್ ಸಾವಿನ ಪ್ರಕರಣದಲ್ಲಿ ಖರ್ಗೆ ಪಾತ್ರವಿಲ್ಲ, ರಾಜೀನಾಮೆ ಯಾಕೆ? ಸುರೇಶ್
ಸಚಿನ್ ಸಾವಿನ ಪ್ರಕರಣದಲ್ಲಿ ಖರ್ಗೆ ಪಾತ್ರವಿಲ್ಲ, ರಾಜೀನಾಮೆ ಯಾಕೆ? ಸುರೇಶ್
ಚಪ್ಪಾಳೆ ಮತ್ತು ಶಿಳ್ಳೆ ಗಿಟ್ಟಿಸಲು ಸೂರಜ್ ರೇವಣ್ಣ ಮಾತಾಡಿದ್ದಾರೆ: ಶ್ರೇಯಸ್
ಚಪ್ಪಾಳೆ ಮತ್ತು ಶಿಳ್ಳೆ ಗಿಟ್ಟಿಸಲು ಸೂರಜ್ ರೇವಣ್ಣ ಮಾತಾಡಿದ್ದಾರೆ: ಶ್ರೇಯಸ್
ಕೇಂದ್ರ ಸರ್ಕಾರ ನಮಗೆ ಎಲೆಕ್ಟ್ರಿಕ್ ಬಸ್​​ಗಳನ್ನು ನೀಡುತ್ತಿಲ್ಲ: ಸಚಿವ
ಕೇಂದ್ರ ಸರ್ಕಾರ ನಮಗೆ ಎಲೆಕ್ಟ್ರಿಕ್ ಬಸ್​​ಗಳನ್ನು ನೀಡುತ್ತಿಲ್ಲ: ಸಚಿವ
ಉದಯಪುರ ಘೋಷಣೆ ಕೆಲ ರಾಜ್ಯಗಳಲ್ಲಿ ಜಾರಿಯಾಗಿಲ್ಲ: ಸತೀಶ್ ಜಾರಕಿಹೊಳಿ
ಉದಯಪುರ ಘೋಷಣೆ ಕೆಲ ರಾಜ್ಯಗಳಲ್ಲಿ ಜಾರಿಯಾಗಿಲ್ಲ: ಸತೀಶ್ ಜಾರಕಿಹೊಳಿ
ಸಿದ್ದರಾಮಯ್ಯ ಬಹಳ ಸಲ ನನ್ನ ಮನೆಗೆ ಬಂದಿದ್ದಾರೆ: ಸತೀಶ್ ಜಾರಕಿಹೊಳಿ
ಸಿದ್ದರಾಮಯ್ಯ ಬಹಳ ಸಲ ನನ್ನ ಮನೆಗೆ ಬಂದಿದ್ದಾರೆ: ಸತೀಶ್ ಜಾರಕಿಹೊಳಿ