AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭಾರತದಲ್ಲಿ ಎಲೆಕ್ಟ್ರಿಕ್ ಕಾರ್ ತಯಾರಿಸಲು ಹಲವು ದೇಶಗಳಿಂದ ಆಸಕ್ತಿ; ಆದರೆ, ಟೆಸ್ಲಾ ನಿರಾಸಕ್ತಿ: ಸಚಿವ ಕುಮಾರಸ್ವಾಮಿ

HD Kumaraswamy says Tesla not interested for manufacturing unit in India: ಇಲಾನ್ ಮಸ್ಕ್ ಮಾಲಕತ್ವದ ಟೆಸ್ಲಾ ಕಂಪನಿ ಭಾರತದಲ್ಲಿ ತನ್ನ ಕಾರುಗಳ ತಯಾರಿಕೆಗೆ ಘಟಕ ಸ್ಥಾಪಿಸಲು ಆಸಕ್ತಿ ಹೊಂದಿಲ್ಲ ಎಂದು ಸಚಿವ ಕುಮಾರಸ್ವಾಮಿ ಹೇಳಿದ್ದಾರೆ. ಹ್ಯೂಂಡಾಯ್, ವೋಸ್​​ವ್ಯಾಗನ್, ಮರ್ಸಿಡೆಸ್ ಬೆಂಜ್, ಕಿಯಾ ಇತ್ಯಾದಿ ಕಂಪನಿಗಳು ಫ್ಯಾಕ್ಟರಿ ತೆರೆಯಲು ಆಸಕ್ತಿ ತೋರುತ್ತಿವೆ ಎಂದೂ ಅವರು ತಿಳಿಸಿದ್ದಾರೆ.

ಭಾರತದಲ್ಲಿ ಎಲೆಕ್ಟ್ರಿಕ್ ಕಾರ್ ತಯಾರಿಸಲು ಹಲವು ದೇಶಗಳಿಂದ ಆಸಕ್ತಿ; ಆದರೆ, ಟೆಸ್ಲಾ ನಿರಾಸಕ್ತಿ: ಸಚಿವ ಕುಮಾರಸ್ವಾಮಿ
ಎಚ್​ಡಿ ಕುಮಾರಸ್ವಾಮಿ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jun 02, 2025 | 3:39 PM

ನವದೆಹಲಿ, ಜೂನ್ 2: ಭಾರತದ ಹೊಸ ಎಲೆಕ್ಟ್ರಿಕ್ ವಾಹನ ನೀತಿಯಿಂದಾಗಿ (New EV policy) ಹಲವು ದೇಶಗಳ ಕಂಪನಿಗಳು ಭಾರತದಲ್ಲಿ ಇವಿಗಳನ್ನು ತಯಾರಿಸಲು ಆಸಕ್ತಿ ತೋರಿಸಿವೆ. ಹ್ಯುಂಡಾಯ್, ಮರ್ಸಿಡೆಸ್ ಬೆಂಜ್, ಸ್ಕೋಡಾ ವೋಸ್​​ವ್ಯಾಗನ್, ಕಿಯಾ ಮೊದಲಾದ ಕಂಪನಿಗಳು ಭಾರತದಲ್ಲಿ ತಯಾರಿಕಾ ಘಟಕಗಳನ್ನು ಸ್ಥಾಪಿಸಲು ಆಸಕ್ತವಾಗಿವೆ ಎಂದು ಕೇಂದ್ರ ಬೃಹತ್ ಕೈಗಾರಿಕೆಗಳ ಸಚಿವ ಎಚ್.ಡಿ. ಕುಮಾರಸ್ವಾಮಿ (HD Kumaraswamy) ಹೇಳಿದ್ದಾರೆ. ಎಲೆಕ್ಟ್ರಿಕ್ ಪ್ರಯಾಣಿಕ ಕಾರುಗಳ ತಯಾರಿಕೆಗೆ ಉತ್ತೇಜಿಸುವ SPMEPCI ಯೋಜನೆ ಅಡಿ ಶೀಘ್ರದಲ್ಲಿ ಅರ್ಜಿಗಳನ್ನು ಆಹ್ವಾನಿಸಲಾಗುವುದು ಎಂದೂ ಅವರು ತಿಳಿಸಿದ್ದಾರೆ.

ಈ ಸ್ಕೀಮ್​​​ನಲ್ಲಿ ಸರ್ಕಾರವು ಕಾರ್ ತಯಾರಕ ಕಂಪನಿಗಳಿಗೆ ಕೆಲವಿಷ್ಟು ವಿನಾಯಿತಿಗಳನ್ನು ನೀಡುತ್ತದೆ. ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳ ತಯಾರಿಕೆ ಮಾಡುವ ಮತ್ತು ಹೂಡಿಕೆ ಮಾಡಲು ಒಪ್ಪುವ ಕಂಪನಿಗೆ ಈ ಸ್ಕೀಮ್​​ನ ಲಾಭ ಸಿಗುತ್ತದೆ. ಈ ಸ್ಕೀಮ್​​ನಲ್ಲಿ ಒಪ್ಪಂದ ಮಾಡಿಕೊಂಡ ಬಳಿಕ ಮೂರು ವರ್ಷದೊಳಗೆ ಕಾರು ತಯಾರಿಕೆ ಆರಂಭಿಸಬೇಕು ಎನ್ನುವ ನಿಯಮ ಇದೆ.

ಇದನ್ನೂ ಓದಿ: ಡಬ್ಲ್ಯುಟಿಒದಲ್ಲಿ ಭಾರತ ನೀಡಿದ ನೋಟೀಸ್​ಗೆ ಅಮೆರಿಕದ ನಿರ್ಲಕ್ಷ್ಯ; ಭಾರತದಿಂದ ಪ್ರತಿಸುಂಕ ವಿಧಿಸುವ ಸಾಧ್ಯತೆ

‘ಈ ಸ್ಕೀಮ್​​ನಿಂದ ಭಾರತವು ಜಾಗತಿಕ ಇವಿ ತಯಾರಿಕೆಯ ಕೇಂದ್ರವಾಗಲು ಸಾಧ್ಯವಾಗುತ್ತದೆ. ಅರ್ಜಿಗಳ ಸಲ್ಲಿಕೆಗೆ ಶೀಘ್ರದಲ್ಲೇ ಅವಕಾಶ ನೀಡಲಾಗುವುದು’ ಎಂದು ಮಾಜಿ ಕರ್ನಾಟಕ ಮುಖ್ಯಮಂತ್ರಿಯೂ ಆದ ಕುಮಾರಸ್ವಾಮಿ ತಿಳಿಸಿದ್ದಾರೆ.

ಎಕನಾಮಿಕ್ ಟೈಮ್ಸ್ ವರದಿ ಪ್ರಕಾರ ಸ್ಕೋಡಾ-ವೋಲ್ಸ್​ವ್ಯಾಗನ್ ಮತ್ತು ಮರ್ಸಿಡೆಸ್ ಬೆಂಜ್ ಸಂಸ್ಥೆಗಳು ಭಾರತದಲ್ಲಿ ಹೂಡಿಕೆ ಮಾಡುವ ನಿರ್ಧಾರವನ್ನು ಸದ್ಯದಲ್ಲೇ ಪ್ರಕಟಿಸುವ ನಿರೀಕ್ಷೆ ಇದೆ.

ಎಸ್​​ಪಿಎಂಎಪಿಸಿಐ ಸ್ಕೀಮ್ ಅಡಿಯಲ್ಲಿ ಆಸಕ್ತ ಕಂಪನಿಗಳು ಕನಿಷ್ಠ 4,150 ಕೋಟಿ ರೂ ಹೂಡಿಕೆ ಮಾಡಬೇಕು. ಎಲೆಕ್ಟ್ರಿಕ್ ಕಾರುಗಳ ಬ್ಯುಲ್ಟ್-ಇನ್ ಯುನಿಟ್​​ಗಳನ್ನು ಆಮದು ಮಾಡಿಕೊಳ್ಳಲು ಅವಕಾಶ ನೀಡಲಾಗುತ್ತದೆ. ಆದರೆ, 35,000 ಡಾಲರ್ ಕನಿಷ್ಠ ಆಮದು ಇರಬೇಕು. ವರ್ಷಕ್ಕೆ 8,000ಕ್ಕಿಂತ ಹೆಚ್ಚು ಇವಿಗಳ ಆಮದಿಗೆ ಅವಕಾಶ ಇರುವುದಿಲ್ಲ. ಹೀಗಿದ್ದಾಗ ಆಮದು ಸುಂಕವನ್ನು ಶೇ. 15ಕ್ಕೆ ಇಳಿಸಲಾಗುತ್ತದೆ.

ಇದನ್ನೂ ಓದಿ: ಬ್ರಹ್ಮಪುತ್ರ ನದಿಯನ್ನು ಚೀನಾ ತಡೆದರೆ ಭಾರತಕ್ಕೆ ಎಂಥ ಹಾನಿ? ಚೀನಾದಿಂದ ಭಾರತಕ್ಕೆ ಹರಿದುಬರುವ ಬೇರೆ ನದಿಗಳ್ಯಾವುವು?

ಟೆಸ್ಲಾ ಕಾರು ಫ್ಯಾಕ್ಟರಿ ಭಾರತದಲ್ಲಿ ಇಲ್ಲ?

ಇಲಾನ್ ಮಸ್ಕ್ ಮಾಲಕತ್ವದ ಟೆಸ್ಲಾ ಸಂಸ್ಥೆ ಭಾರತದಲ್ಲಿ ತಯಾರಿಕಾ ಘಟಕ ಸ್ಥಾಪಿಸಲು ಆಸಕ್ತಿ ಹೊಂದಿಲ್ಲ ಎಂದು ಕುಮಾರಸ್ವಾಮಿ ಹೇಳಿದ್ದಾರೆ. ಆದರೆ, ಭಾರತದಲ್ಲಿ ಶೋರೋಮುಗಳನ್ನು ತೆರೆದು, ತನ್ನ ಆಮದಿಗ ಕಾರುಗಳನ್ನು ಮಾರಾಟ ಮಾಡುವ ಆಲೋಚನೆಯಲ್ಲಿದೆ ಎಂದೂ ಎಚ್​​ಡಿಕೆ ಸ್ಪಷ್ಟಪಡಿಸಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ರಸ್ತೆ ಬದಿ ನಿಂತಿದ್ದ ಆಟೋಗೆ ಅಪ್ಪಳಿಸಿದ ಲಾರಿ ಚಕ್ರಗಳು: ಭಯಾನಕ ದೃಶ್ಯ ಸೆರೆ
ರಸ್ತೆ ಬದಿ ನಿಂತಿದ್ದ ಆಟೋಗೆ ಅಪ್ಪಳಿಸಿದ ಲಾರಿ ಚಕ್ರಗಳು: ಭಯಾನಕ ದೃಶ್ಯ ಸೆರೆ
ವಸತಿ ಯೋಜನೆ ಮೀಸಲಾತಿ, ಸದನದಲ್ಲಿ ಪ್ರಶ್ನೆ ಕೇಳಲಿ, ಉತ್ತರಿಸುವೆ: ಶಿವಕುಮಾರ್
ವಸತಿ ಯೋಜನೆ ಮೀಸಲಾತಿ, ಸದನದಲ್ಲಿ ಪ್ರಶ್ನೆ ಕೇಳಲಿ, ಉತ್ತರಿಸುವೆ: ಶಿವಕುಮಾರ್
ದೆಹಲಿ ಮೆಟ್ರೋದೊಳಗೆ ಬಂದಿತ್ತೇ ಹಾವು?
ದೆಹಲಿ ಮೆಟ್ರೋದೊಳಗೆ ಬಂದಿತ್ತೇ ಹಾವು?
ಜಂಗಲ್​​ರಾಜ್​ಗೆ ಬಿಹಾರ ಜನತೆ ಅಂತ್ಯ ಹಾಡಿದ್ದಾರೆ: ಮೋದಿ
ಜಂಗಲ್​​ರಾಜ್​ಗೆ ಬಿಹಾರ ಜನತೆ ಅಂತ್ಯ ಹಾಡಿದ್ದಾರೆ: ಮೋದಿ
ಜನ ನನಗೆ ಬಟ್ಟೆ ಕೊಡುತ್ತಾರೆ, ಪಾಪದ ಹಣದ ಬಟ್ಟೆ ಯಾರಿಗೆ ಬೇಕು? ಕುಮಾರಸ್ವಾಮಿ
ಜನ ನನಗೆ ಬಟ್ಟೆ ಕೊಡುತ್ತಾರೆ, ಪಾಪದ ಹಣದ ಬಟ್ಟೆ ಯಾರಿಗೆ ಬೇಕು? ಕುಮಾರಸ್ವಾಮಿ
ಉಡುಪಿ ಜನ ಶಾಂತಿಪ್ರಿಯರು, ಅದನ್ನು ಕದಡುವ ಪ್ರಯತ್ನ ಬೇಡ: ಹೆಬ್ಬಾಳ್ಕರ್
ಉಡುಪಿ ಜನ ಶಾಂತಿಪ್ರಿಯರು, ಅದನ್ನು ಕದಡುವ ಪ್ರಯತ್ನ ಬೇಡ: ಹೆಬ್ಬಾಳ್ಕರ್
ಜಾತಿಗಣತಿಕ್ಕಿಂತ ಮೊದಲು ಸರ್ಕಾರ ಮರಗಣತಿ ಮಾಡಿಸುವುದೊಳಿತು!
ಜಾತಿಗಣತಿಕ್ಕಿಂತ ಮೊದಲು ಸರ್ಕಾರ ಮರಗಣತಿ ಮಾಡಿಸುವುದೊಳಿತು!
ಯಾವುದೇ ಕ್ಷಣದಲ್ಲಿ ಕೆಆರ್​ಎಸ್ ಡ್ಯಾಂನಿಂದ ಕಾವೇರಿ ನದಿಗೆ ನೀರು ಬಿಡುಗಡೆ
ಯಾವುದೇ ಕ್ಷಣದಲ್ಲಿ ಕೆಆರ್​ಎಸ್ ಡ್ಯಾಂನಿಂದ ಕಾವೇರಿ ನದಿಗೆ ನೀರು ಬಿಡುಗಡೆ
ಬಾಲ್ಯವಿವಾಹದಲ್ಲಿ ಭಾಗಿಯಾಗುವುದೂ ಶಿಕ್ಷಾರ್ಹ ಅಪರಾಧವಾಗಿದೆ!
ಬಾಲ್ಯವಿವಾಹದಲ್ಲಿ ಭಾಗಿಯಾಗುವುದೂ ಶಿಕ್ಷಾರ್ಹ ಅಪರಾಧವಾಗಿದೆ!
ಬ್ಯಾಚುಲರ್ಸ್ ವೇದಿಕೆ ಮೇಲೆ ಡ್ಯಾನ್ಸ್; ಎಲ್ಲರನ್ನೂ ಮೀರಿಸಿದ ರವಿಚಂದ್ರನ್
ಬ್ಯಾಚುಲರ್ಸ್ ವೇದಿಕೆ ಮೇಲೆ ಡ್ಯಾನ್ಸ್; ಎಲ್ಲರನ್ನೂ ಮೀರಿಸಿದ ರವಿಚಂದ್ರನ್