ಕೊಟ್ಟ ಸಾಲ ವಾಪಸ್ ನೀಡದಿದ್ದಕ್ಕೆ ಬಟ್ಟೆ ಬಿಚ್ಚಿ ಹಲ್ಲೆ: ಮನೆಗೆ ನುಗ್ಗಿ ಅಕ್ಕ-ತಂಗಿಯನ್ನು ಥಳಿಸಿದ್ದ ಆರೋಪಿಗಳ ಬಂಧನ
ಭಾನುವಾರ ಬೆಳಗ್ಗೆ ಏಕಾಏಕಿ ಶಾಂತಿಪ್ರಿಯ ಮನೆಗೆ ನುಗ್ಗಿದ್ದ ಸುನಿಲ್ ಕುಮಾರ್ ಹಾಗೂ ಮನೆಯವರು ಮನ ಬಂದಂತೆ ಥಳಿಸಿದ್ದಾರೆ. ಸದ್ಯ ರಾಮಕೃಷ್ಣರೆಡ್ಡಿ, ಸುನಿಲ್ ಕುಮಾರ್ನನ್ನ ಸರ್ಜಾಪುರ ಪೊಲೀಸರು ಬಂಧಿಸಿದ್ದಾರೆ.
ಆನೇಕಲ್: ಸಾಲ ವಾಪಸ್ ನೀಡದ್ದಕ್ಕೆ ಮಹಿಳೆ ಬಟ್ಟೆ ಬಿಚ್ಚಿಸಿ ಹಲ್ಲೆ (Assaulted) ಮಾಡುವ ಮೂಲಕ ಅಮಾನವೀಯವಾಗಿ ನಡೆದುಕೊಂಡಿರುವಂತಹ ದಾರುಣ ಘಟನೆ ಆನೇಕಲ್ ತಾಲೂಕಿನ ಸರ್ಜಾಪುರ ವ್ಯಾಪ್ತಿಯ ದೊಮ್ಮಸಂದ್ರದಲ್ಲೊಂದು ನಡೆದಿದೆ. ಕೊಟ್ಟ ಸಾಲ ಹಿಂತಿರುಗಿಸಲು ವಿಳಂಬವಾದ ಹಿನ್ನೆಲೆ ಮಹಿಳೆ ಬಟ್ಟೆ ಬಿಚ್ಚಿಸಿ ಹಲ್ಲೆ ಮಾಡಿ ಕಿರಾತಕರು ಅವಮಾನಿಸಿದ್ದಾರೆ. ದೊಮ್ಮಸಂದ್ರ ವ್ಯಾಪ್ತಿಯ ನೆರಿಗಾ ಗ್ರಾಮದ ಶಾಂತಿಪ್ರಿಯ ಎಂಬುವವರು ಹಲ್ಲೆಗೊಳಲಾಗ ಮಹಿಳೆ. ಸುಬ್ಬಾರೆಡ್ಡಿ ಎಂಬುವವರ ಪುತ್ರಿಯರಾದ ಶಾಂತಿಪ್ರಿಯ ಮತ್ತು ಭಾನುಪ್ರಿಯ ಎಂಬುವವರ ಮೇಲೆ ದೌರ್ಜನ್ಯ ಆರೋಪ ಮಾಡಲಾಗಿದೆ. ರಾಮಕೃಷ್ಣ ರೆಡ್ಡಿ ಇಂದ್ರಮ್ಮ ಹಾಗೂ ಸುನೀಲ್ ಕುಮಾರ್ ಎಂಬುವವರಿಂದ ಹಲ್ಲೆ ಮಾಡಿರುವುದಾಗಿ ಆರೋಪ ಮಾಡಿದ್ದಾರೆ.
ರಾಮಕೃಷ್ಣ ರೆಡ್ಡಿಯವರ ಬಳಿ ಶಾಂತಿಪ್ರಿಯ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ವರ್ಷದ ಹಿಂದೆ ಒಂದು ಲಕ್ಷ ರೂ. ಸಾಲ ಪಡೆದಿದ್ದರು. ಕಾಲ ಕಾಲಕ್ಕೆ ಸರಿಯಾಗಿ ಬಡ್ಡಿ ಕಟ್ಟುತ್ತಾ ಬಂದಿದ್ರು. ಇತ್ತೀಚಿಗೆ ಅಸಲು ನೀಡುವಂತೆ ಸುನಿಲ್ ಕುಮಾರ್ ಕುಟುಂಬದಿಂದ ಒತ್ತಡ ಹೇರಲಾಗಿದೆ. ಆದರೆ ಹಣ ಇಲ್ಲದಿದ್ದರಿಂದ ಗ್ರಾಮಸ್ಥರ ಮುಂದೆ ರಾಜಿ ನಡೆದಿತ್ತು. ಭಾನುವಾರ ಬೆಳಗ್ಗೆ ಏಕಾಏಕಿ ಶಾಂತಿಪ್ರಿಯ ಮನೆಗೆ ನುಗ್ಗಿದ್ದ ಸುನಿಲ್ ಕುಮಾರ್ ಹಾಗೂ ಮನೆಯವರು ಮನ ಬಂದಂತೆ ಥಳಿಸಿದ್ದಾರೆ. ಪ್ರಕರಣ ಕುರಿತು ಸರ್ಜಾಪುರ ಪೊಲೀಸರು ದೂರು ದಾಖಲಿಸಿಕೊಂಡು, ಸದ್ಯ ರಾಮಕೃಷ್ಣರೆಡ್ಡಿ, ಸುನಿಲ್ ಕುಮಾರ್ನನ್ನ ಬಂಧಿಸಲಾಗಿದೆ.
ಮಲ್ಲೇಣು ಗ್ರಾಮದಲ್ಲಿ ರಾತ್ರಿ ವೇಳೆ ಮತಾಂತರ ಯತ್ನ ಆರೋಪ
ಚಿತ್ರದುರ್ಗ: ಹಿರಿಯೂರು ತಾಲೂಕಿನ ಮಲ್ಲೇಣು ಗ್ರಾಮದಲ್ಲಿ ಹಿಂದುಗಳನ್ನು ಕ್ರೈಸ್ತ ಧರ್ಮಕ್ಕೆ ಮತಾಂತರ ಯತ್ನ ಆರೋಪಿಸಿ ಪ್ರಾರ್ಥನೆ ವೇಳೆ ಹಿಂದುಪರ ಸಂಘಟನೆ ಕಾರ್ಯಕರ್ತರು ದಾಳಿ ಮಾಡಿರುವಂತಹ ಘಟನೆ ನಡೆದಿದೆ. ಬೈಬಲ್ ಗ್ರಂಥದ ಪ್ರತಿ ಸುಟ್ಟು ಹಾಕಿ ಹಿಂದೂ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಜರಂಗದಳ ಕಾರ್ಯಕರ್ತರು, ಕ್ರಿಶ್ಚಿಯನ್ ಮಹಿಳೆ ಮಧ್ಯೆ ವಾಗ್ವಾದ ಉಂಟಾಗಿದ್ದು, ಹಿರಿಯೂರು ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಫಸ್ಟ್ ಕ್ಲಾಸ್ನಲ್ಲಿ ದ್ವಿತೀಯ ಪಿಯುಸಿ ಪಾಸಾದ ಹೈದರಾಬಾದ್ನ ಸಯಾಮಿ ಅವಳಿಗಳು