ಗೌರಿ ಗಣೇಶ ಹಬ್ಬದ ಮೇಲೆ ಆರೋಗ್ಯ ಇಲಾಖೆ ಕಣ್ಣು: ಕೊರೊನಾ ನಿಯಂತ್ರಣ ನಿಯಮ ಜಾರಿಗೆ ಚಿಂತನೆ
ಆರೋಗ್ಯ ಇಲಾಖೆ ನಿರ್ಧಾರದ ವಿರುದ್ಧ ಭಕ್ತರು ಅಸಮಾಧಾನಗೊಂಡಿದ್ದು, ಹಿಂದುಗಳ ಹಬ್ಬಕ್ಕೆ ಯಾಕೆ ರೂಲ್ಸ್ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಠಿಣ ಮಾರ್ಗಸೂಚಿ ಬಿಡುಗಡೆಯಾದರೆ ಪ್ರತಿಭಟನೆಯ ಎಚ್ಚರಿಕೆ ಸಹ ನೀಡಿದ್ದಾರೆ.
ಬೆಂಗಳೂರು: ದಿನೇದಿನೆ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆ ಗಣೇಶ ಚತುರ್ಥಿಗೆ (Ganesh Chaturthi) ಕಠಿಣ ನಿಯಮ ಜಾರಿಗೊಳಿಸಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ. ಜನಜಂಗುಳಿ ಸೇರದಂತೆ ಎಚ್ಚರ ವಹಿಸಲು ರಾಜ್ಯಕ್ಕೆ ಕೇಂದ್ರ ಆರೋಗ್ಯ ಇಲಾಖೆ ಸೂಚನೆ ನೀಡಿದ್ದು, ಹಾಗಾಗಿ ಕಠಿಣ ನಿಯಮಗಳನ್ನ ಜಾರಿಗೊಳಿಸಲು ಚಿಂತನೆ ನಡೆಸಲಾಗುತ್ತಿದೆ. ಈ ಕಾರಣ ರಿಸ್ಟ್ರಿಕ್ಷನ್ ತರಲು ಆರೋಗ್ಯ ಇಲಾಖೆ ಚಿಂತನೆ ನಡೆಸಿದ್ದು, ಗಣೇಶ ಹಬ್ಬಕ್ಕೆ ಪ್ರತ್ಯೇಕ ಮಾರ್ಗಸೂಚಿ ಬಿಡುಗಡೆ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಕೊವಿಡ್ ಕಮ್ಮಿ ಆಯ್ತು ಅಂತ ಭರ್ಜರಿ ಗಣಪನ ಹಬ್ಬಕ್ಕೆ ತಯಾರಿ ಮಾಡಿಕೊಂಡಿದ್ದ ಭಕ್ತರಿಗೆ ಶಾಕ್ ಎದುರಾದಂತ್ತಾಗಿದೆ. ಕೊರೊನಾ ಕಾರಣ ಎರಡು ವರ್ಷಗಳಿಂದ ಗಣಪತಿ ಹಬ್ಬ ಸಿಂಪಲ್ ಆಚರಣೆ ಮಾಡಲಾಗಿತ್ತು.
ಇದನ್ನೂ ಓದಿ: Ganesha Festival: ಗಣೇಶೋತ್ಸವಕ್ಕೆ ಈ ವರ್ಷ ಸರ್ಕಾರದ ನಿರ್ಬಂಧವಿಲ್ಲ; ಆರ್ ಅಶೋಕ್
ಕೇಸ್ ಕಮ್ಮಿ ಆಯ್ತು ಅಂತ ಈ ಸಾರಿ ಭಕ್ತರು ಭರ್ಜರಿ ಹಬ್ಬದ ಪ್ಲಾನ್ ಮಾಡಿಕೊಂಡಿದ್ದರು. ಗಲ್ಲಿಗಲ್ಲಿಯಲ್ಲಿ ಗಣಪತಿ ಕೂರಿಸಲು ಭಕ್ತರ ಪ್ಲಾನ್ ಮಾಡಿದ್ದು, ಆದರೆ ಭಕ್ತರ ಉತ್ಸಾಹಕ್ಕೆ ತಣ್ಣೀರೆರಚಲು ಆರೋಗ್ಯ ಇಲಾಖೆ ಮುಂದಾಗುತ್ತಾ ಎನ್ನುವ ಪ್ರಶ್ನೆ ಉಂಟಾಗಿದೆ. ಆರೋಗ್ಯ ಇಲಾಖೆ ನಿರ್ಧಾರದ ವಿರುದ್ಧ ಭಕ್ತರು ಅಸಮಾಧಾನಗೊಂಡಿದ್ದು, ಹಿಂದುಗಳ ಹಬ್ಬಕ್ಕೆ ಯಾಕೆ ರೂಲ್ಸ್ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಠಿಣ ಮಾರ್ಗಸೂಚಿ ಬಿಡುಗಡೆಯಾದರೆ ಪ್ರತಿಭಟನೆಯ ಎಚ್ಚರಿಕೆ ಸಹ ನೀಡಿದ್ದಾರೆ.
ಗಣೇಶ ಹಬ್ಬಕ್ಕೆ ಜಾರಿಯಾಗಲಿರುವ ರೂಲ್ಸ್ ಏನು?
ಸಾರ್ವಜನಿಕ ಗಣೇಶೋತ್ಸವಕ್ಕೆ ಹೆಚ್ಚು ಜನಸಂದಣಿ ಸೇರುವಂತಿಲ್ಲ. ಸಾಮಾಜಿಕ ಅಂತರ ಪಾಲನೆಯಾಗಬೇಕು. ಮಾಸ್ಕ್ ಸ್ಯಾನಿಟೈಸ್ ಕಡ್ಡಾಯ ಧಾರಣೆ ಕಡ್ಡಾಯ ಸಾಧ್ಯತೆ. ಬೂಸ್ಟರ್ ಡೋಸ್ ಕಡ್ಡಾಯಗೊಳಿಸುವ ಸಾಧ್ಯತೆ. ಮೈದಾನದಲ್ಲಿ ಅದ್ಧೂರಿ ಗಣೇಶೋತ್ಸವ ಸಂದರ್ಭದಲ್ಲಿ ಫೀವರ್ ಚೆಕ್ ಕಡ್ಡಾಯಗೊಳಿಸುವ ಸಾಧ್ಯತೆ. ಸ್ಯಾನಿಟೈಸರ್ ಬಳಕೆಯ ಬಗ್ಗೆ ಜಾಗೃತಿ. ಹೆಚ್ಚು ಜನಸಂದಣಿ ಜಾಗದಲ್ಲಿ ಟೆಸ್ಟಿಂಗ್ ಕ್ಯಾಂಪ್ಗಳನ್ನು ಹಾಕುವ ಸಾಧ್ಯತೆ. ಸಿಮೀತ ಜನರನ್ನ ನಿಗಧಿಗೊಳಿಸುವ ಸಾಧ್ಯತೆ. ಮಾರ್ಕೇಟ್ ಹಾಗೂ ಜನದಟ್ಟಣೆ ಪ್ರದೇಶಗಳಲ್ಲಿ ಹೆಚ್ಚಿನ ಜನರಿಗೆ ನಿರ್ಭಂದಗೊಳಸುವ ಸಾಧ್ಯತೆ.
ಆರೋಗ್ಯ ಇಲಾಖೆಯ ಸಲಹೆ ಏನು?
ಈ ಕುರಿತಾಗಿ ಆರೋಗ್ಯ ಇಲಾಖೆ ಆಯುಕ್ತ ಡಾ. ರಂದಿಪ್ ಹೇಳಿಕೆ ನೀಡಿದ್ದು, ಗೌರಿ-ಗಣೇಶ ಹಬ್ಬ ಹಾಗೂ ಉತ್ಸವದ ವಿಚಾರವನ್ನ ಆರೋಗ್ಯ ಇಲಾಖೆ ಟ್ಯಾಕ್ ಮುಂದೆ ಇಡಲಾಗುವುದು. ಕೊವಿಡ್ ತಾಂತ್ರಿಕ ಸಲಹಾ ಸಮಿತಿ ಮುಂದೆ ಗಣೇಶ ಹಬ್ಬದ ವಿಚಾರ ಇಟ್ಟು ಸಲಹೆ ಪಡೆಯುತ್ತೇವೆ. ಟ್ಯಾಕ್ ಸಮಿತಿ ಕೊಡುವ ಸಲಹೆಯಂತೆ ಮಾರ್ಗಸೂಚಿ ಬಿಡುಗಡೆ ಮಾಡ್ತೀವಿ. ಗಣೇಶ ಹಬ್ಬದ ಆಚರಣೆಗೆ ನಿರ್ಬಂಧ ಬೇಕಾಗುತ್ತೆ. ಆರೋಗ್ಯ ಇಲಾಖೆ ಸಲಹೆ ಮಾಡುತ್ತೆ. ಕಂಪ್ಲೀಟ್ ಫ್ರೀ ಮಾಡೊದಕ್ಕೆ ಆಗೋದಿಲ್ಲ. ಒಂದು ವೇಳೆ ಫ್ರೀ ಬಿಟ್ರೆ ಕೊವಿಡ್ ಏರಿಕೆ ಸಾಧ್ಯತೆ ಇದೆ. ಆರೋಗ್ಯ ಇಲಾಖೆಯಿಂದ ಟ್ಯಾಕ್ಗೆ ಹಾಗೂ ಸರ್ಕಾರಕ್ಕೆ ಮನವಿ ಮಾಡ್ತೀವಿ. ಟ್ಯಾಕ್ ಸಲಹೆ ಏನು ಅಂತ ನಮ್ಗೆ ಕೊಡುತ್ತೆ. ಆ ವರದಿಯನ್ನ ನಾವು ಸರ್ಕಾರದ ಮುಂದೆ ಇಟ್ಟು ಮನವಿ ಮಾಡ್ತೀವಿ.
ಸರ್ಕಾರದ ಹಂತದಲ್ಲಿ ಸಭೆ ನಡೆಯುತ್ತೆ ಸಭೆ ಬಳಿಕ ಮಾರ್ಗಸೂಚಿ ಕೊಡ್ತೀವಿ. ಸರ್ಕಾರದ ಮಟ್ಟದಲ್ಲಿ ಈ ಬಗ್ಗೆ ನಿರ್ಧರವಾಗುತ್ತೆ. ಆರೋಗ್ಯ ಇಲಾಖೆ ರಿಜಿನಬಲ್ ನಿರ್ಬಂಧ ಇರಬೇಕು ಅಂತಾ ಮನವಿ ಮಾಡುತ್ತೆ. ಹೆಚ್ಚು ಜನದಟ್ಟಣೆಯಾಗಬಾರದು. ಹೆಚ್ಚು ಜನಸಂದಣಿ ಈ ಸಮಯದಲ್ಲಿ ಸೂಕ್ತವಲ್ಲ. ಜನರ ನಿರ್ಬಂಧ ಎಷ್ಟು ಹೇಗೆ ಅಂತಾ ಸರ್ಕಾರ ನಿಗಧಿ ಮಾಡುತ್ತೆ. ಆದರೆ ರಿಜಿನಬಲ್ ನಿರ್ಬಂಧಕ್ಕೆ ಆರೋಗ್ಯ ಇಲಾಖೆ ಸಲಹೆ ಮಾಡುತ್ತೆ ಎಂದು ಹೇಳಿದರು.
ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.