ಬೆಂಗಳೂರು: ಮಹಿಳಾ ಸಹೋದ್ಯೋಗಿಯ ವೈಯಕ್ತಿಕ ಡೇಟಾ ಕದ್ದು 2 ಲಕ್ಷ ರೂ. ಸಾಲ ಪಡೆದ ಭೂಪ

ಮಹಿಳಾ ಸಹೋದ್ಯೋಗಿಯೊಬ್ಬರ ವೈಯಕ್ತಿಕ ಡೇಟಾವನ್ನು ಕದ್ದು, ಬ್ಯಾಂಕ್‌ನಿಂದ ಅವರ ಹೆಸರಿನಲ್ಲಿ 2 ಲಕ್ಷ ರೂ. ವೈಯಕ್ತಿಕ ಸಾಲ ಪಡೆದಿರುವ ಪ್ರಕರಣ ಬೆಳಕಿಗೆ ಬಂದಿದೆ.

ಬೆಂಗಳೂರು: ಮಹಿಳಾ ಸಹೋದ್ಯೋಗಿಯ ವೈಯಕ್ತಿಕ ಡೇಟಾ ಕದ್ದು 2 ಲಕ್ಷ ರೂ. ಸಾಲ ಪಡೆದ ಭೂಪ
ಸಾಂದರ್ಭಿಕ ಚಿತ್ರ
Follow us
TV9 Web
| Updated By: ವಿವೇಕ ಬಿರಾದಾರ

Updated on:Sep 15, 2023 | 9:26 AM

ಬೆಂಗಳೂರು: ನಗರದ ಬಿಸಿನೆಸ್ ಪ್ರೊಸೆಸಿಂಗ್ ಔಟ್‌ಸೋರ್ಸಿಂಗ್ (BPO) ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ಉದ್ಯೋಗಿಯೊಬ್ಬ, ಮಹಿಳಾ ಸಹೋದ್ಯೋಗಿಯೊಬ್ಬರ (Employee) ವೈಯಕ್ತಿಕ ಡೇಟಾವನ್ನು ಕದ್ದು, ಅವರ ಹೆಸರಿನಲ್ಲಿ ಬ್ಯಾಂಕ್‌ನಿಂದ (Bank) 2 ಲಕ್ಷ ರೂ. ವೈಯಕ್ತಿಕ ಸಾಲ ಪಡೆದಿರುವ ಪ್ರಕರಣ ಬೆಳಕಿಗೆ ಬಂದಿದೆ. ಸದ್ಯ ಪೊಲೀಸರು ಆರೋಪಿ ಲೋಕೇಶ್ವರ್ ಸುಗುಮಾರನ್‌ಗಾಗಿ ಬಲೆ ಬೀಸಿದ್ದಾರೆ.

ಉದ್ಯೋಗಿಗಳು ಕಂಪನಿ ಒಳಗೆ ಹೋಗುವ ಮುನ್ನ, ಅವರ ಮೊಬೈಲ್​ ಫೋನ್​ಗಳನ್ನು ಲೋಕೇಶ್ವರ್ ಸುಗುಮಾರನ್‌ ಅವರಿಗೆ ನೀಡಬೇಕಿತ್ತು. ಲೋಕೇಶ್ವರ್ ಸುಗುಮಾರನ್‌ ಈ ಮೊಬೈಲ್​ಗಳನ್ನು ಸೇಫ್ಟಿ ಲಾಕರ್​​ನಲ್ಲಿ ಇಡುವುದು ದಿನನಿತ್ಯದ ಕೆಲಸವಾಗಿದೆ.

ಕಳೆದ ವರ್ಷ 2022ರಲ್ಲಿ ಒಂದು ದಿನ ಆರೋಪಿ ಲೋಕೇಶ್ವರ್ ಸುಗುಮಾರನ್‌, ಮಹಿಳಾ ಸಹೋದ್ಯೋಗಿ ಫೋನ್ ಅನ್​​ಲಾಕ್​ ಮಾಡುವ ಮಾದರಿಯನ್ನು ಗಮನಿಸಿದ್ದಾನೆ. ನಂತರ ಯಥಾಪ್ರಕಾರ ಮಹಿಳಾ ಉದ್ಯೋಗಿ ಈತನ ಕೈಯಲ್ಲಿ ಮೊಬೈಲ್​​ ಕೊಟ್ಟು ಕಂಪನಿ ಒಳಗಡೆ ಹೋಗಿದ್ದಾರೆ. ಈ ವೇಳೆ ಲೋಕೇಶ್ವರ್ ಸುಗುಮಾರನ್‌ ಇವರ ಮೊಬೈಲ್​ ಅನ್​ಲಾಕ್​​ ಮಾಡಿ ಅವರ ಆಧಾರ್ ಮತ್ತು ಪ್ಯಾನ್ ಮಾಹಿತಿಯನ್ನು ತಿಳಿದುಕೊಂಡಿದ್ದಾನೆ.

ಇದನ್ನೂ ಓದಿ: ಪ್ರೇಮಿಗಳ ಖಾಸಗಿ ವಿಡಿಯೊ ಇಟ್ಟುಕೊಂಡು ಬ್ಲ್ಯಾಕ್​ ಮೇಲ್, ರೂಮ್ ಕೊಟ್ಟು ಬಲೆ ಬೀಸಿದ್ದ ಹೋಟೆಲ್​ ಒಡತಿ ಅಂದರ್

ಕದ್ದ ಮಾಹಿತಿಯಿಂದ ಲೋಕೇಶ್ವರ್ ಸುಗುಮಾರನ್‌ ಮಹಿಳಾ ಉದ್ಯೋಗಿಯ ಹೆಸರಿನಲ್ಲಿ ಬ್ಯಾಂಕ್​ ಖಾತೆ ತೆರೆದಿದ್ದಾನೆ. ಬಳಿಕ ವೈಯಕ್ತಿಕ ಸಾಲಕ್ಕೆ ಅರ್ಜಿ ಸಲ್ಲಿಸಿದ್ದಾನೆ. ಈ ಬಗ್ಗೆ ಬ್ಯಾಂಕ್ ಕೂಡ ಸಂಪೂರ್ಣ ಪರಿಶೀಲನೆ ನಡೆಸದೆ 2 ಲಕ್ಷ ರೂ. ಸಾಲವನ್ನು ಮಂಜೂರು ಮಾಡಿದೆ. ಈ ಹಣ ಮಹಿಳೆಯ ಹೆಸರಿನಲ್ಲಿ ಲೋಕೇಶ್ವರ್ ಸುಗುಮಾರನ್‌ ತೆರೆದಿದ್ದ ಬ್ಯಾಂಕ್ ಖಾತೆಗೆ ಜಮಾ ಆಗಿದೆ.

ಸಾಲದ ಮಾಸಿಕ ಕಂತು ತುಂಬುವಂತೆ ಮಹಿಳಾ ಉದ್ಯೋಗಿಗೆ ಬ್ಯಾಂಕ್​ನವರು ​ಮೆಸೆಜ್​ ಮತ್ತು ಕರೆಗಳನ್ನು ಮಾಡಲು ಆರಂಭಿಸಿದ್ದಾರೆ. ಆದರೆ ಇದರ ಕಡೆ ಮಹಿಳಾ ಉದ್ಯೋಗಿ ಗಮನ ಕೊಡದೆ ಸುಮಾರು ಒಂದು ವರ್ಷದವರೆಗೆ ನಿರ್ಲಕ್ಷ್ಯವಹಿಸಿದ್ದಾರೆ. ಒಂದು ದಿನ ಮಹಿಳಾ ಉದ್ಯೋಗಿ ಈ ಬಗ್ಗೆ ಕಚೇರಿಯಲ್ಲಿ ವಿಷಯ ಪ್ರಸ್ತಾಪಿಸಿದಾಗ, ಸುಗುಮಾರನ್ ತನ್ನ ತಪ್ಪನ್ನು ಒಪ್ಪಿಕೊಂಡು ಮತ್ತು ಸಮಸ್ಯೆಯನ್ನು ಶೀಘ್ರವಾಗಿ ಪರಿಹರಿಸುವುದಾಗಿ ಭರವಸೆ ನೀಡಿದನು. ಆದರೆ ಕಂತು ತುಂಬದೆ ಆರೋಪಿ ಎಸ್ಕೆಪ್​ ಆಗಿದ್ದಾನೆ.

ಇನ್ನು ಕಂತು ತುಂಬುವಂತೆ ಮಹಿಳಾ ಉದ್ಯೋಗಿ ಸುಗುಮಾರನ್​​ಗೆ ಎಷ್ಟೇ ಕರೆ ಮಾಡಿದರೂ ಆರೋಪಿ ಸ್ವೀಕರಿಸುತ್ತಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 9:26 am, Fri, 15 September 23

ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ