ಬೆಂಗಳೂರಿನಲ್ಲಿ ವಿಚಿತ್ರ ಮಂಕಿ ಕ್ಯಾಪ್ ಕಳ್ಳರು; ಮೆಡಿಕಲ್ ಸ್ಟೋರ್​ಗಳೇ ಇವರ ಟಾರ್ಗೆಟ್

ಈ ಖತರ್ನಾಕ್​ ಕಳ್ಳರು, ಔಷಧಿ ಖರೀದಿ ನೆಪದಲ್ಲಿ ಬರುತ್ತಾರೆ. ಮೊದಲಿಗೆ ಕಡಿಮೆ ಪ್ರಮಾಣದ ವಸ್ತುವೊಂದನ್ನು ಕೊಂಡುಕೊಳ್ಳುತ್ತಾರೆ. ಖರೀದಿ ನೆಪದಲ್ಲಿ ಬಂದ ಇವರು ಫಾರ್ಮಸಿಯಲ್ಲಿ ಎಷ್ಟು ಜನ ಇದ್ದಾರೆ ಎನ್ನುವುದನ್ನು ಗಮನಿಸುತ್ತಾರೆ. ಬಳಿಕ ಏಕಾಎಕಿ ಬಂದು ದರೋಡೆ ಮಾಡುವ ಖದೀಮರು, ಕೊತ್ತನೂರು, ಹೆಚ್​ಎಸ್​ಆರ್ ಲೇಔಟ್, ಮಾರತ್ತಹಳ್ಳಿ ಅಪೊಲೋ ಫಾರ್ಮಸಿಗಳಲ್ಲಿ ತಮ್ಮ ಕೈಚಳಕ ತೋರಿಸಿದ್ದಾರೆ.

ಬೆಂಗಳೂರಿನಲ್ಲಿ ವಿಚಿತ್ರ ಮಂಕಿ ಕ್ಯಾಪ್ ಕಳ್ಳರು; ಮೆಡಿಕಲ್ ಸ್ಟೋರ್​ಗಳೇ ಇವರ ಟಾರ್ಗೆಟ್
ಬೆಂಗಳೂರಿನಲ್ಲಿ ಮಂಕಿ ಕ್ಯಾಪ್​ ಕಳ್ಳರು
Follow us
Jagadisha B
| Updated By: ಕಿರಣ್ ಹನುಮಂತ್​ ಮಾದಾರ್

Updated on: Sep 06, 2023 | 3:25 PM

ಬೆಂಗಳೂರು, ಸೆ.06: ಮಹಾನಗರದಲ್ಲಿ ಕಳ್ಳತನ ಹೆಚ್ಚಾಗಿದ್ದು, ಪೊಲೀಸರು ಖದೀಮರಿಗೆ ಬ್ರೇಕ್ ಹಾಕಲು ಹರಸಾಹಸ ಪಡುತ್ತಿದ್ದಾರೆ. ಅದರಂತೆ ಇದೀಗ ಅಪೋಲೋ ಫಾರ್ಮಸಿಗಳನ್ನೆ ರಾಬರಿಕೋರರು ಟಾರ್ಗೇಟ್ ಮಾಡುತ್ತಿದ್ದಾರೆ. ಕಳೆದ ಹದಿನೈದು ದಿನಗಳಲ್ಲಿ ಮೂರು ಕಡೆ ಅಪೋಲೋ ಫಾರ್ಮಸಿಗಳಲ್ಲಿ ಕಳ್ಳತನ ನಡೆದಿದೆ. ಕೊತ್ತನೂರು, ಹೆಚ್​ಎಸ್​ಆರ್ ಲೇಔಟ್, ಮಾರತ್ತಹಳ್ಳಿ ಅಪೊಲೋ ಫಾರ್ಮಸಿಗಳಲ್ಲಿ ಖದೀಮರು ಕೈಚಳಕ ತೋರಿಸಿದ್ದಾರೆ.

ಖದೀಮರು ಮಾಡಿದ ಪ್ಲ್ಯಾನ್​ ಹೀಗಿದೆ

ಈ ಖತರ್ನಾಕ್​ ಕಳ್ಳರು, ಔಷಧಿ ಖರೀದಿ ನೆಪದಲ್ಲಿ ಬರುತ್ತಾರೆ. ಮೊದಲಿಗೆ ಕಡಿಮೆ ಪ್ರಮಾಣದ ವಸ್ತುವೊಂದನ್ನು ಕೊಂಡುಕೊಳ್ಳುತ್ತಾರೆ. ಖರೀದಿ ನೆಪದಲ್ಲಿ ಬಂದ ಇವರು ಫಾರ್ಮಸಿಯಲ್ಲಿ ಎಷ್ಟು ಜನ ಇದ್ದಾರೆ ಎನ್ನುವುದನ್ನು ಗಮನಿಸುತ್ತಾರೆ. ಒಬ್ಬರೇ ಇದ್ದಲ್ಲಿ ಹತ್ತು ನಿಮಿಷದಲ್ಲಿ ಮತ್ತೆ ವಾಪಸ್ ಬರುವ ಕಳ್ಳರು, ಮೊದಲು ಖರೀದಿ ಮಾಡಿದ ವಸ್ತು ಬೇಡವೆಂದು ಹಣ ವಾಪಸ್ ಕೇಳುತ್ತಾರೆ. ಬಳಿಕ ಗಲ್ಲಾಪೆಟ್ಟಿಗೆ ಓಪನ್ ಮಾಡ್ತಿದ್ದಂತೆ ಚಾಕು ತೋರಿಸಿ ರಾಬರಿಗೆ ಇಳಿಯುವ ಖರ್ತನಾಕ್ ಕಳ್ಳರ ಮೇಲೆ ಇದೀಗ ಮಾರತ್ತಹಳ್ಳಿ, HSR ಲೇಔಟ್, ಕೊತ್ತನೂರು ಠಾಣೆಗಳಲ್ಲಿ ಪ್ರತ್ಯೇಕ ದೂರು ದಾಖಲಾಗಿದೆ.

ಇದನ್ನೂ ಓದಿ:ಪೊಲೀಸರೆಂದು ಹೇಳಿ ಮನೆಗೆ ನುಗ್ಗಿದ ಖದೀಮರು; ಚಾಕು ತೋರಿಸಿ ಕೈಯಲ್ಲಿದ್ದ ಉಂಗುರ, ಇತರೆ ವಸ್ತುಗಳನ್ನು ದೋಚಿದ ಕಳ್ಳರು

ಮಾರತ್ತಹಳ್ಳಿ ಬಳಿ ಫಾರ್ಮಸಿ ಸಿಬ್ಬಂದಿಗೆ ‍‍ಚಾಕು ಇರಿದು ಹಣ ಕಸಿದಿರೋ ರಾಬರಿಕೋರರು

ಮೆಡಿಕಲ್ ಸ್ಟೋರ್​ಗಳಿಗೆ ಟಾರ್ಗೆಟ್ ಇವರು ಮಂಕಿ ಕ್ಯಾಪ್ ಹಾಕಿಕೊಂಡು ಮೆಡಿಕಲ್ ಸಿಬ್ಬಂದಿ ಒಳಗಿದ್ದಾಗಲೇ ಶೆಟರ್ ಮುರಿದು ಒಳಗೆ ಎಂಟ್ರಿ ಕೊಟ್ಟು, ಒಬ್ಬ ರೋಡ್​ನಲ್ಲಿ ಅಬ್ಸರ್ವ್ ಮಾಡುತ್ತಾನೆ. ಮತ್ತೊಬ್ಬ ಶೆಟರ್ ಮುರಿದು, ದರೋಡೆ ಮಾಡುತ್ತಾರೆ. ಇದಕ್ಕೆ ನಿರಾಕರಿಸಿದ ಹಿನ್ನಲೆ ಮಾರತ್ತಹಳ್ಳಿ ಬಳಿ ಫಾರ್ಮಸಿ ಸಿಬ್ಬಂದಿಗೆ ‍‍ಚಾಕು ಇರಿದು ರಾಬರಿಕೋರರು ಹಣ ಕಸಿದು ಸಿನಿಮೀಯ ರೀತಿಯಲ್ಲಿ ಪರಾರಿಯಾಗಿದ್ದಾರೆ. ಆರೋಪಿಯ ಸಂಪೂರ್ಣ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಮತ್ತಷ್ಟು ರಾಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ