ಮೆಟ್ರೋ ಟ್ರ್ಯಾಕ್​ ಮೇಲೆ ಜಿಗಿದು ವಿದ್ಯಾರ್ಥಿ ಆತ್ಮಹತ್ಯೆ; ಯುಡಿಆರ್ ಪ್ರಕರಣ ದಾಖಲು

ಬೆಂಗಳೂರಿನ ಅತ್ತಿಗುಪ್ಪೆ ಮೆಟ್ರೋ ನಿಲ್ದಾಣದಲ್ಲಿ ಇಂದು(ಮಾ.21) ಮಧ್ಯಾಹ್ನ ವಿದ್ಯಾರ್ಥಿ(Student) ಧ್ರುವ್ ಎಂಬಾತ ಮೆಟ್ರೋ ಟ್ರ್ಯಾಕ್ ಮೇಲೆ ಜಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿತ್ತು. ಈ ಘಟನೆಗೆ ಸಂಬಂಧಿಸಿದಂತೆ ಚಂದ್ರಾಲೇಔಟ್ ಠಾಣೆಯಲ್ಲಿ ಯುಡಿಆರ್ (ಅಸಹಜ ಸಾವು) ಪ್ರಕರಣ ದಾಖಲು ಮಾಡಲಾಗಿದೆ.

ಮೆಟ್ರೋ ಟ್ರ್ಯಾಕ್​ ಮೇಲೆ ಜಿಗಿದು ವಿದ್ಯಾರ್ಥಿ ಆತ್ಮಹತ್ಯೆ; ಯುಡಿಆರ್ ಪ್ರಕರಣ ದಾಖಲು
ಮೆಟ್ರೋ ಟ್ರ್ಯಾಕ್​ ಮೇಲೆ ಜಿಗಿದು ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ
Updated By: ಕಿರಣ್ ಹನುಮಂತ್​ ಮಾದಾರ್

Updated on: Mar 21, 2024 | 9:03 PM

ಬೆಂಗಳೂರು, ಮಾ.21: ನಮ್ಮ ಮೆಟ್ರೋ(Namma Metro) ಟ್ರ್ಯಾಕ್ ಮೇಲೆ ಜಿಗಿದು ವಿದ್ಯಾರ್ಥಿ(Student) ಧ್ರುವ್ ಎಂಬಾತ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಂಗಳೂರಿನ ಅತ್ತಿಗುಪ್ಪೆ ಮೆಟ್ರೋ ನಿಲ್ದಾಣದಲ್ಲಿ ಇಂದು(ಮಾ.21) ಮಧ್ಯಾಹ್ನ ನಡೆದಿತ್ತು. ಈ ಘಟನೆಗೆ ಸಂಬಂಧಪಟ್ಟಂತೆ ನ್ಯಾಷನಲ್ ಲಾ ಕಾಲೇಜ್ ಅಫ್ ಇಂಡಿಯಾ ಯುನಿವರ್ಸಿಟಿ ಹಾಸ್ಟೆಲ್ ಉಸ್ತುವಾರಿ ಚಂದ್ರಾಲೇಔಟ್ ಠಾಣೆಗೆ ದೂರು ನೀಡಿದ್ದು, ಯುಡಿಆರ್(ಅಸಹಜ ಸಾವು) ಪ್ರಕರಣ ದಾಖಲು ಮಾಡಲಾಗಿದೆ.

ಮಾನಸಿಕ ಖಿನ್ನತೆಯಿಂದ ಬಳಲುತ್ತಿರುವ ಶಂಕೆ‌‌

ಕ್ಲಾಸ್ ಮೇಟ್​​ಗೆ ಹೇಳಿ ಹಾಸ್ಟೆಲ್​ನಿಂದ ಹೊರಗೆ ಬಂದಿದ್ದ ಧ್ರುವ್, ಮಾನಸಿಕ ಖಿನ್ನತೆಯಿಂದ ಬಳಲುತ್ತಿರುವ ಶಂಕೆ‌‌ ವ್ಯಕ್ತವಾಗಿದೆ. ಜೊತೆಗೆ ಅದಕ್ಕಾಗಿಯೇ 3 ತಿಂಗಳಿಂದ ಮಾತ್ರೆ ತೆಗೆದುಕೊಳ್ಳುತ್ತಿದ್ದ ಬಗ್ಗೆ ಮಾಹಿತಿ ಸಿಕ್ಕಿದೆ. ನಾಳೆ(ಮಾ.22) ಪೋಷಕರಿಂದ ಮಾಹಿತಿ ಪಡೆಯಲು ಪೊಲೀಸರು ಮುಂದಾಗಿದ್ದಾರೆ. ಜೊತೆಗೆ ಘಟನೆ ಕುರಿತು ವಿದ್ಯಾರ್ಥಿಗಳು, ಆತನ ಸ್ನೇಹಿತರ ಬಳಿಯೂ ಮಾಹಿತಿ ಪಡೆಯುತ್ತಿದ್ದಾರೆ.

ಇದನ್ನೂ ಓದಿ:ನಮ್ಮ ಮೆಟ್ರೋಗೆ ಬಲಿಯಾದ ಯುವಕ ಯಾರು? ಬೆಂಗಳೂರು ಪಶ್ಚಿಮ ವಿಭಾಗದ ಡಿಸಿಪಿ ಹೇಳಿದ್ದಿಷ್ಟು

ಈ ರೀತಿ ಮೆಟ್ರೋ ರೈಲಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡು ಸಾವಿನ್ನಪ್ಪಿದ ಮೊದಲ ಪ್ರಕರಣ ಇದಾಗಿದೆ. ಇನ್ನು ಈ ಕುರಿತು ಬೆಂಗಳೂರು ಪಶ್ಚಿಮ ವಿಭಾಗದ ಡಿಸಿಪಿ ಎಸ್‌.ಗಿರೀಶ್‌ ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದ್ದರು. ಈ ವೇಳೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, 19 ರಿಂದ 20 ವರ್ಷದ ಹುಡುಗನ ಸಾವಾಗಿದೆ. ಮೃತ ಧ್ರುವ್ ಟಕ್ಕರ್ ಮಹಾರಾಷ್ಟ್ರದ ಮುಂಬೈ ಮೂಲದವನಾಗಿದ್ದು, ನ್ಯಾಷನಲ್ ಲಾ ಕಾಲೇಜ್ ಫಸ್ಟ್ ಇಯರ್ ವಿದ್ಯಾರ್ಥಿ ಎಂದು ಮಾಹಿತಿ ನೀಡಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ