ಬೆಂಗಳೂರು: ಪರೀಕ್ಷೆಗೆ ಕಾಪಿ ಚೀಟಿ ತಂದಿದ್ದಳು ಎಂದು ಶಿಕ್ಷಕಿ (teacher) ನಿಂದಿಸಿದಕ್ಕೆ ಮನನೊಂದು ವಿದ್ಯಾರ್ಥಿನಿ (Student) ಡೆತ್ನೋಟ್ ಬರೆದಿಟ್ಟು ನೇಣು ಬಿಗಿದುಕೊಂಡು ಆತ್ಮಹತ್ಯೆ (suicide) ಮಾಡಿಕೊಂಡಿರುವಂತಹ ಘಟನೆ ನಗರದ ಒಎಂಬಿಆರ್ ಲೇಔಟ್ನ ದೊಡ್ಡ ಬಾಣಸವಾಡಿಯ ಮರಿಯಂ ನಿಲಯ ಇಂಗ್ಲಿಷ್ ಸ್ಕೂಲ್ನಲ್ಲಿ ನಡೆದಿದೆ. ಅಲ್ಲಿಗೆ ಬೆಂಗಳೂರಿನಲ್ಲಿ ಮತ್ತೊಂದು ವಿದ್ಯಾರ್ಥಿನಿಯ ಆತ್ಮಹತ್ಯೆಯಾದಂತಾಗಿದೆ. ಅಮೃತಾ ನೇಣಿಗೆ ಶರಣಾದ ಎಸ್ಎಸ್ಎಲ್ಸಿ ವಿದ್ಯಾರ್ಥಿನಿ. ನವೆಂಬರ್ 2ರಂದು ಟೆಸ್ಟ್ ವೇಳೆ ಅಮೃತಾ ಕಾಪಿ ಚೀಟಿ ತಂದಿದ್ದಾಳೆ. ಇದೇ ವಿಷಯಕ್ಕೆ 4-5 ದಿನಗಳಿಂದ ಕ್ಲಾಸ್ನಲ್ಲಿ ವಿದ್ಯಾರ್ಥಿಗಳ ಮುಂದೆ ಅಮೃತಾಳನ್ನು ಶಿಕ್ಷಕಿ ಶಾಲಿನಿ ನಿಂದಿಸಿದ್ದಾರೆ. ಶಾಲೆಯಲ್ಲಿ ತನಗಾಗುತ್ತಿದ್ದ ಅವಮಾನದ ಬಗ್ಗೆ ಅಮೃತಾ ಡೆತ್ನೋಟ್ ಬರೆದಿಟ್ಟು ನೇಣಿಗೆ ಶರಣಾಗಿದ್ದಾಳೆ. ಇದ್ದ ಒಬ್ಬಳೇ ಪುತ್ರಿಯನ್ನು ಕಳೆದುಕೊಂಡು ಪೋಷಕರು ಕಣ್ಣೀರು ಹಾಕಿದ್ದಾರೆ. LKGಯಿಂದ ಇದೇ ಶಾಲೆಯಲ್ಲಿ ಅಮೃತಾ ಓದುತ್ತಿದ್ದಳು ಎನ್ನಲಾಗುತ್ತಿದೆ.
ನನ್ನ ಮಗಳ ಸಾವಿಗೆ ಶಿಕ್ಷಕಿ ಶಾಲಿನಿಯೇ ಕಾರಣ: ಅಮೃತಾ ತಾಯಿ ಆಶಾ ಆರೋಪ
ಇತ್ತ ಶಾಲಾ ಆವರಣದಲ್ಲಿ ಅಮೃತಾ ಮೃತದೇಹವಿಟ್ಟು ಪೋಷಕರು ಪ್ರತಿಭಟನೆ ಮಾಡಿದರು. ನನ್ನ ಮಗಳ ಸಾವಿಗೆ ಶಿಕ್ಷಕಿ ಶಾಲಿನಿಯೇ ಕಾರಣ ಎಂದು ತಾಯಿ ಆಶಾ ಆರೋಪ ಮಾಡಿದರು. ಕ್ಲಾಸ್ ಟೀಚರ್ ಶಾಲಿನಿ ಬರುವವರೆಗೂ ಇಲ್ಲಿಂದ ಮೃತ ದೇಹ ತೆಗೆದುಕೊಂಡು ಹೋಗಲ್ಲ ಎಂದು ಪಟ್ಟುಹಿಡಿದರು. ಘಟನಾ ಸ್ಥಳಕ್ಕೆ ಕ್ಷೇತ್ರ ಶಿಕ್ಷಣಾಧಿಕಾರಿ ಪಿ.ಜಯಪ್ರಕಾಶ್ ಭೇಟಿ ನೀಡಿ ಅಮೃತಾ ತಾಯಿ ಆಶಾ ಅವರನ್ನು ಸಾಂತ್ವನ ಮಾಡಿದರು. ಅಮೃತಾ ಮೃತ ದೇಹಕ್ಕೆ ಅಂತಿಮ ನಮನ ಸಲ್ಲಿಸಿದರು.
ಅಮೃತ ಕಾಪಿ ಮಾಡಿರುವುದಕ್ಕೆ ನಮ್ಮಲ್ಲಿ ದಾಖಲೆ ಇವೆ: ಪ್ರಿನ್ಸಿಪಲ್ ಐರಿನ್
ಘಟನೆ ಕುರಿತಾಗಿ ಸ್ಕೂಲ್ ಪ್ರಿನ್ಸಿಪಲ್ ಐರಿನ್ ಮಾತನಾಡಿದ್ದು, ಅವರು ಮಕ್ಕಳಿಗೆ ಬೈಯುವವರಲ್ಲ. ನನಗೆ ಇವತ್ತು ಬೆಳಿಗ್ಗೆ ಗೊತ್ತಾಯಿತು ಆತ್ಮಹತ್ಯೆ ಮಾಡಿಕೊಂಡಿರುವುದು. ಕಾಪಿ ಮಾಡಿರುವುದಕ್ಕೆ ನಮ್ಮಲ್ಲಿ ದಾಖಲೆ ಇವೆ. ನಾನು ಪೋಷಕರ ಜೊತೆಗೆ ಮಾತಾಡಿದ್ದೇನೆ. ಕ್ಲಾಸ್ ಟೀಚರ್ ಶಾಲಿನಿ ಕೂಡ ಮೃತ ಅಮೃತ ಜೊತೆಗೆ ಮಾತಾಡಿದ್ದಾರೆ. ಮುಂದೆ ಹೀಗೆ ಮಾಡಬೇಡ ಎಂದು ಬುದ್ದಿ ಹೇಳಿದ್ದಾರೆ ಎಂದು ಹೇಳಿದರು.
ಶಾಲೆ ವಿರುದ್ಧ ಪೊಷಕರ ಆರೋಪ:
ಇನ್ನು ಇತರೆ ವಿದ್ಯಾರ್ಥಿಗಳ ಪೋಷಕರು ಪ್ರತಿಕ್ರಿಯೆ ನೀಡಿದ್ದು, ನನ್ನ ಮಗನೂ ಈ ಸ್ಕೂಲ್ನಲ್ಲಿ ಓದುತ್ತಿದ್ದ. ಅವನಿಗೂ ತುಂಬಾ ತೊಂದರೆ ಕೊಟ್ಟರು. ಅವನು ಈ ಸ್ಕೂಲ್ ಮುಗಿಸಿ ಈಗ ಕಾಲೇಜಿಗೆ ಹೋಗುತ್ತಿದ್ದಾನೆ ಎಂದು ಪೋಷಕಿ ವರಲಕ್ಷ್ಮೀ ಆರೋಪಿಸಿದರು. ನಮ್ಮ ಮಗಳು ಕ್ಲಾಸ್ ಟೀಚರ್ ಮಗಳ ಜೊತೆಗೆ ಮಾತಾಡಿಲ್ಲ ಎಂದು ತೊಂದರೆ ಕೊಟ್ಟರು. ಕ್ಲಾಸ್ ಟೀಚರ್ ನಂತರ ಪ್ರಿನ್ಸಿಪಲ್ ಕರೆದು ಸಾರಿ ಹೇಳಿದರು ಎಂದು ಶಾಲೆಯ ವಿರುದ್ಧ ಮತ್ತೊಬ್ಬ ಪೋಷಕ ಬಾಬು ಆಕ್ರೋಶ ವ್ಯಕ್ತಪಡಿಸಿದರು.
ಕಲ್ಪಳ್ಳಿ ಸಶ್ಮಾನದಲ್ಲಿ ಅಮೃತ ಅಂತ್ಯಕ್ರಿಯೆ:
ಪುಲಿಕೇಶಿ ನಗರದ ಜೀವನಹಳ್ಳಿಯಲ್ಲಿರುವ ಕಲ್ಪಳ್ಳಿ ಸಶ್ಮಾನದಲ್ಲಿ ಅಮೃತ ಅಂತ್ಯಕ್ರಿಯೆ ನಡೆಯಲಿದೆ. ಕೆಲವೇ ಕ್ಷಣದಲ್ಲಿ ಮನೆಯಿಂದ ಸ್ಮಶಾನಕ್ಕೆ ಮೃತದೇಹ ಶಿಫ್ಟ್ ಮಾಡಲಿದ್ದು, ಎಲೆಕ್ಟ್ರಿಕ್ ಬರ್ನಿಂಗ್ ಮೂಲಕ ಅಂತ್ಯಕ್ರಿಯೆ ನಡೆಯಲಿದೆ. ಆ್ಯಂಬುಲೆನ್ಸ್ ಮುಂದೆ ಧಿಕ್ಕಾರ ಕೂಗಿ ಮಹಿಳಾ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 2:58 pm, Mon, 14 November 22